ಪುಟ:Kanakadasa darshana Vol 1 Pages 561-1028.pdf/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೮೦ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಪದಗಳಲ್ಲಿ ಸಂಗೀತ ೬೮೧ ಸೇರುತ್ತದೆ; ಸಂಗೀತದಲ್ಲಿ ಕುಣಿತ ಸೇರುವುದಿಲ್ಲ. ಹರಿದಾಸರ ಕಾಲದಲ್ಲಿ ಮೂರೂ ಸೇರಿಕೊಂಡಿದ್ದಿತು. ಕನಕದಾಸರ 'ಹ್ಯಾಂಗೆ ನೀ ದಾಸನಾದಿ, ಪ್ರಾಣಿ' ಎನ್ನುವ ಪದದಲ್ಲಿ ಬರುವ ದಾಸರ ಕುಣಿತದ ವರ್ಣನೆ ನೋಡಿ : “ಕಾಲುಗೆಜ್ಜೆಯ ಕಟ್ಟಿ, ಮೇಲೆ ಕರತಾಳ ಪಿಡಿದು ಶ್ರೀಲೋಲನ ಗುಣ ಪೊಗಳಿ ನಟಿಸದೆಲೆ ಹ್ಯಾಂಗೆ ಕುಣಿದು ಹರೆಯ ಮುಂದೆ ಮಣಿದು ಸಜ್ಜನಪದಕೆ ಅಣಿಮಾದ್ಯಷ್ಟಸಿದ್ಧಿ ಕೈಗೊಳ್ಳದವನಾಗಿ ಹ್ಯಾಂಗೆ | ಆಗಿನ ಸಂಗೀತನಿರೂಪಣೆಯ ಸ್ಥಳ, ಕ್ರಮ, ಸಂದರ್ಭ, ಉದ್ದೇಶ ಎಲ್ಲವೂ ಈಗಿಗಿಂತ ಬೇರೆಯೇ, ದಾಸರು ಕೇರಿಗಳಲ್ಲಿ, ಮನೆಮನೆಗಳ ಮುಂದೆ, ದಾರಿಯಲ್ಲಿ ತಿರುಗಾಡುತ್ತ, ಊಂಛವೃತ್ತಿಯ ಸಲುವಾಗಿ ಹಾಡುತ್ತಿದ್ದರು; ಹಾಡುವಾಗ ಕಾಲಿಗೆ ಗೆಜ್ಜೆ, ಕುಣಿತಕ್ಕೆ ನೆರವಾಗಿ ಕೈಯಲ್ಲಿ ತಂಬೂರಿ, ಚಿಟಿಗೆ; ವಾದ್ಯವಾಗಿ ಹಾಡುತ್ತ, ಕುಣಿಯುತ್ತ, ನಡೆಯುತ್ತಿದ್ದರು. ಹರಿದಾಸರ ಈ ಚಿತ್ರ ಸಾಂಪ್ರದಾಯಿಕವಾದುದೂ ಹೌದಷ್ಟೆ. ಆಗ ಕುಣಿತವೆಂದರೆ ಈಗಿನ ಭರತನಾಟ್ಯದಂತೆ ಎಂದು ಭ್ರಮಿಸಬಾರದು. ಈಗಿನ ನೃತ್ಯಪದ್ಧತಿಗೆ ಈಗಿನ ಸಂಗೀತದಷ್ಟೂ ಹಳಮೆಯಿಲ್ಲ, ಶಾಸ್ತ್ರಾಧಾರವಿಲ್ಲ. ಪ್ರಚುರ ಪ್ರಯೋಗವಿಲ್ಲ. ಅದಿರಲಿ, ನೃತ್ಯವೆಂದರೆ ಭಾವಪ್ರಧಾನವಾದ ಅಭಿನಯ. ಅದಕ್ಕೆ ತಕ್ಕಷ್ಟು ತಾಳ, ಲಯ, ಇದೂ ಜಾನಪದಪ್ರಕಾರದ್ದೇ ; ಎಂದರೆ ರಾಗಭಾವದಂತೆಯೇ ಸ್ವಾತಂತ್ರ್ಯವಿದ್ದಿತು, ಕಟ್ಟುಪಾಡುಗಳಿರಲಿಲ್ಲ. ಪುರಂದರದಾಸರ ಪದಗಳಲ್ಲಿ ಕೆಲವು ನೃತ್ಯ ಪ್ರಧಾನವಾಗಿಯೇ ಇವೆಯಷ್ಟೆ ? (“ಹರಿ ಕುಣಿದ' “ಕುಣಿದಾಡೋ ಕೃಷ್ಣ' (ಆಡಿದನೋ ರಂಗ ಅದ್ಭುತದಿಂದಲಿ' 'ಆಡಿದ ರಂಗನಾಡಿದ ರೂಢಿಯೊಳಗೆ ಮಕ್ಕಳಂತೆ' 'ಆನಂದಸುಳಾದಿ' ಇತ್ಯಾದಿ) ಹಾಗೆಯೇ ಕನಕದಾಸರ ಪದಗಳಲ್ಲೂ ಕೆಲವು ನೃತ್ಯಪ್ರಧಾನವಾಗಿವೆ- “ಊರಿಗೆ ಬಂದರೆ ದಾಸಯ್ಯ ಕೇರಿಗೆ ಬಾ ಕಂಡ್ಯ ದಾಸಯ್ಯ', 'ಬೊಂಬೆಯಾಟವನಾಡಿಸಿದ', 'ಎಳ್ಳುಕಾಳಿನಷ್ಟು ಭಕುತಿಯನ್ನೊಳಿಲ್ಲ' ಮುಂತಾದವು. ಇಲ್ಲಿ ನೃತ್ಯಪ್ರಧಾನವೆಂದರೆ ಹೆಜ್ಜೆಯ ಗತಿ, ಅದಕ್ಕಿಂತ ಹೆಚ್ಚಾಗಿ ಅಭಿನಯ. ಹರಿದಾಸರಲ್ಲಿ ಆದ್ಯರಾದ ಶ್ರೀಪಾದರಾಜರು ತಮ್ಮ ಚಿಕ್ಕಂದಿನಲ್ಲಿ ಶ್ರೀರಂಗದಲ್ಲಿರುತ್ತ ಅಲ್ಲಿನ ಗುಡಿಯಲ್ಲಿ ಅರೈಯಾರರೆಂಬ ಗಾಯಕರು ತಂಬೂರಿಹಿಡಿದು, ಕಾಲಿಗೆ ಗೆಜ್ಜೆ ಕಟ್ಟಿ, ತಮಿಳು ಪಾಶುರಗಳನ್ನು ಹಾಡುತ್ತ, ಅಲ್ಲಿನ ಭಾವಗಳನ್ನು ಅಭಿನಯ ತೋರಿಸುತ್ತ ಕುಣಿಯುತ್ತಿದ್ದುದನ್ನು ಕಂಡಿದ್ದರು. ಹಾಡಿಕೆ, ಕುಣಿತ, ವಾದಯ ಮೂರೂ ಕೂಡಿದ್ದ ಈ ಪದ್ಧತಿ ನಮ್ಮ ನಾಡಿಗೂ ಬಂದಿತು. ಹರಿದಾಸರ ಪದಗಳಲ್ಲಿರುವ ಪದಬಂಧ ಲಯಕ್ಕೂ ಅಭಿನಯಕ್ಕೂ ಒಗ್ಗುವಂತಿದ್ದು ಹಾಡಿಗೆ ತಾಳದ ಕಟ್ಟುಪಾಡು ಕೂಡಿಕೊಂಡು ಅಭಿನಯಕ್ಕೂ ಕುಣಿತಕ್ಕೂ ವಾದ್ಯಕ್ಕೂ ನೆರವಾಗುತ್ತದೆ. ನಿದರ್ಶನಕ್ಕೆ ಸರಳವಾದ ಸ್ವರಸಂಚಾರಗಳೂ ಸರಳವಾದ ಲಯವೂ; ಅಭಿನಯಕ್ಕೆ ತಕ್ಕಂಥ ಭಾವವೂ ಉಳ್ಳ ಕನಕದಾಸರ 'ಈಶ ನಿನ್ನ ಚರಣ ಸೇವೆ ಆಶೆಯಿಂದ ಮಾಡುವೇನು ದೋಷರಾಶಿ ನಾಶಮಾಡೊ ಶ್ರೀಶ ಕೇಶವ' ಎಂದು ಮೊದಲಾಗುವ ಪದವನ್ನು ನೋಡಿ, ವಿಶ್ರಾಮಸ್ಥಾನದಲ್ಲಿ ರಾಗವನ್ನು ಎತ್ತಿ ತೋರಿಸಲೂ ಸಾಧ್ಯವಾಗುತ್ತದೆ. ಮತ್ತೆ “ಈತನೀಗ ವಾಸುದೇವನು ಲೋಕದೊಡೆಯ ದಾಸಗೊಲಿದು ತೇರನೇರಿ ತೇಜಿ ಪಿಡಿದು ನಡಸಿದಾತ ' ಎಂಬ ಪದದ ಮಾತುಗಳಿಗೆ ಹೆಜ್ಜೆ ಹಾಕಲು ಎಷ್ಟು ಚೆನ್ನಾಗಿ ಬರುತ್ತದೆ. ಲಯದ ಬಿಕ್ಕಟ್ಟು, ಗತಿಭೇದ ಕೆಲವೊಮ್ಮೆ ವಾದ್ಯಕ್ಕೆ ವಿಶೇಷವಾಗಿ ಹೊಂದಿಕೊಳ್ಳುತ್ತವೆ. ಅವರದ್ದೇ ಇನ್ನೊಂದು ಪದ 'ಕಂಡೆ ನಾ ತಂಡತಂಡದ ಹಿಂಡು ದೈವ ಪ್ರಚಂಡ ರಿಪು ಗಂಡ ಉದ್ದಂಡ ನರಸಿಂಹನ ಕಂಡೆನಯ್ಯಾ' ಈ ಮಾತುಗಳಿಗೆ ಜೊತೆಯಾಗಿ ಮದ್ದಳೆ, ಚಂಡೆ, ಹಳಗ ಮೊದಲಾದ ಹಳೆಯ ವಾದ್ಯಗಳಿದ್ದರೆ ಸೊಗಸು. ಮೃದಂಗದಂಥ ಪರಿಷ್ಕೃತ, ಸಭ್ಯವಾದ್ಯ ಅಷ್ಟು ಪರಿಣಾಮಕಾರಿಯಾಗಲಾರದೇನೊ | ಡೊಳ್ಳು ಕನಕದಾಸರ ಕಾಲದಲ್ಲಿ ಹೆಚ್ಚು ಬಳಕೆಯಲ್ಲಿದ್ದ ವಾದ್ಯವೇ ; ಕನಕದಾಸರು ಕುರುಬರಾದರೆ, ಅವರ ದೇವರು ಬೀರೇ ದೇವರಾದರೆ ಡೊಳ್ಳು ಅವರಿಗೆ ಪ್ರಿಯವಾದ ವಾದ್ಯವೇ ಇರಬೇಕು. ಏಕೆಂದರೆ ಡೊಳ್ಳಿಗೆ ಹೇಳಿಟ್ಟಿದ್ದು ಬೀರೇದೇವರ ಹಾಡುಗಳು, ಡೊಳ್ಳಿನ ಕುಣಿತವೂ ಹಳೆಯದೇ. ಹಾಡಿಕೆ, ವಾದ್ಯ, ಕುಣಿತ ಮೂರೂ ಇಲ್ಲಿ ಕೂಡಿಕೊಳ್ಳುತ್ತವೆ. ಕನಕದಾಸರು 'ದೇವಿ ನಮ್ಮ ದ್ಯಾವರು