ಪುಟ:Kanakadasa darshana Vol 1 Pages 561-1028.pdf/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೮೬ ಕನಕ ಸಾಹಿತ್ಯ ದರ್ಶನ-೧ ಸಂಗೀತ ಮತ್ತು ಕನಕದಾಸರು ೬೮೭ ಕನಕದಾಸರು ರಚಿಸಿ ಲಭ್ಯವಿರುವ ಕೀರ್ತನೆಗಳಲ್ಲಿ ಅರ್ಧಕ್ಕಿಂತ ಹೆಚ್ಚು ದೇವತಾ ಸ್ತುತಿ, ಭಕ್ತಿಗೆ, ಸುಮಾರು ಕಾಲು ಭಾಗದಷ್ಟು ನೀತಿಬೋಧೆಗೆ ಸಂಬಂಧಿಸಿವೆ. ಮಿಕ್ಕವು ಇತರ ವಿಷಯಗಳನ್ನೊಳಗೊಂಡಿವೆ. ಇದರಲ್ಲಿ ಅವರ ಒಗಟಿನ ರೀತಿಯ ಮುಂಡಿಗೆಗಳೂ ಸೇರಿವೆ. ಇದಲ್ಲದೆ ನಳಚರಿತ್ರೆ, ಹರಿಭಕ್ತಸಾರ ಇವುಗಳು ಪದ್ಯರೂಪದಲ್ಲಿದ್ದರೂ ಹಾಡಲಾಗುವಂತಹವು-ಕಾವ್ಯಗಾಯನ ಅಥವಾ ಗಮಕರೂಪದಲ್ಲಿ, ಹರಿಭಕ್ತಿಸಾರದ ಪದ್ಯಗಳಂತೂ ಎಂದೂ ಹಾಡುತ್ತಿದ್ದುವೆ ಇನ್ನು ಮೋಹನ ತರಂಗಿಣಿ ಸಾಂಗತ್ಯದಲ್ಲಿರುವ ಈ ಕಾವ್ಯ ಹಾಡಲುಚಿತವಾಗಿ ಇರುವಂತಹುದೇ. ಹೀಗೆ ನೋಡಿದರೆ ಕನಕದಾಸರ ರಚನೆಗಳಲ್ಲಿ ಸಂಗೀತವು ಹಾಸುಹೊಕ್ಕಾಗಿದೆ. ಇಷ್ಟಾದರೂ ಕನಕದಾಸರ ಗುರುಗಳಾರು ? ಅವರಿಗೆ ಸಂಗೀತ ಜ್ಞಾನವಿತ್ತೇ ಎಂಬ ಪ್ರಶ್ನೆಗಳೂ ಮೂಡಬಹುದು. ಗುರುಗಳ ಬಗೆಗೆ ಹೇಳಬೇಕಾದರೆ ಕನಕದಾಸರು ಗುರುಕುಲವಾಸ ಪದ್ಧತಿಯಂತೆ ಸಂಗೀತಾಭ್ಯಾಸ ಮಾಡಿದವರಲ್ಲ. ಇದು ಕನಕದಾಸರೊಬ್ಬರಿಗೇ ಅಲ್ಲ. ಸಂಗೀತ ಕ್ಷೇತ್ರದ ಅನೇಕ ದಿಗ್ಗಜಗಳಿಗೂ ಅನ್ವಯಿಸುವುದು. ಗುರುಕುಲ ಪದ್ಧತಿ ಒಂದು ಆದರ್ಶ, ಲಾಂಛನ, ಆದರೆ ಆ ಪದ್ಧತಿಯಂತೆ ಅದರ ನಿಯಮ, ನಿಷ್ಠೆಗಳನ್ನು ಅನುಸರಿಸಿ ವಿದ್ಯೆ ಕಲಿತವರ ಸಂಖ್ಯೆ ಬಹು ಸ್ವಲ್ಪ, ತಜ್ಞಗುರುವಿನಿಂದ ಮಾರ್ಗದರ್ಶನ ಪಡೆದೋ ಅಥವಾ ಅದರಿಂದ ಪ್ರಭಾವಿತನಾಗಿಯೋ ವಿದ್ಯೆ ಕಲಿತವರ ಸಂಖ್ಯೆಯೇ ಹೆಚ್ಚು. ಈ ಹಿನ್ನೆಲೆಯಿಂದ ಕನಕದಾಸರ ಸಂಗೀತದಲ್ಲಿ ಮೊದಲನೆಯ ಪ್ರಭಾವವೆಂದರೆ ಅವನ ಮನೆ ಎಂದು ಹೇಳಬಹುದು. ಅದರಲ್ಲಿ ಅಂತಹ ವಿಶೇಷವೂ ಏನಿಲ್ಲ. ಸುಮಾರು ೫೦-೬೦ ವರುಷಗಳನ್ನು ಹಿಂದಿನವರಿಗೂ ನಮ್ಮ ದೇಶದ ಮನೆ ಮನೆಗಳಲ್ಲಿಯೇ ಸಂಗೀತದ ರಸ ತುಂಬಿರುತ್ತಿತ್ತು. ವಿವಿಧ ವೇಳೆಯಲ್ಲಿ ವಿವಿಧ ಸಂದರ್ಭಗಳಲ್ಲಿ ಕೊನೆಗೆ ಹಾಯಾಗಿ ಕಾಲ ಕಳೆವಾಗಲೂ ರಾಗ ರಾಗವಾಗಿ ಹಾಡುಗಳ ನಾದ ಕೇಳಿ ಬರುತ್ತಿತ್ತು. ಹುಟ್ಟಿದಾಗಿನಿಂದ ಮಕ್ಕಳು ಈ ರಸದ ಮಧ್ಯೆಯೇ ಬೆಳೆಯುತ್ತಿದ್ದರು. ಆ ನಾದದ ಇಂಪು ರಾಗಗಳ ರುಚಿ ಅವರ ಮನಸ್ಸಿನಲ್ಲಿ ನೆಲೆಸುತ್ತಿತ್ತು. ಮುಂದೆ ಅವರೊಂದಿಗೇ ಬೆಳೆದು ಬದುಕಿನ ಒಂದು ಭಾಗವಾಗುತ್ತಿತ್ತು. ಹೆಚ್ಚು ಆಸಕ್ತರಾದವರು ಬಾಲ್ಯದಿಂದ ಬಂದ ಈ ಅಭಿರುಚಿಯನ್ನು ಇನ್ನೂ ಸಮೃದ್ಧವಾಗಿ ಬೆಳೆಸಿಕೊಳ್ಳುತ್ತಿದ್ದರು. ಕನಕದಾಸರೂ ಸಮಾಜದಲ್ಲಿ ಪ್ರತಿಷ್ಠಿತವಾದ ಕುಟುಂಬ. ಆದುದರಿಂದ ಮನೆಯಲ್ಲಿ ಉತ್ತಮ ಸಾಂಸ್ಕೃತಿಕ ವಾತಾವರಣವಿದ್ದು ಬಾಲ್ಯದಿಂದಲೂ ಸಂಗೀತಾಭಿರುಚಿ ಬೆಳೆದು ಬಂದುದರಲ್ಲಿ ಆಶ್ಚರ್ಯವಿಲ್ಲ. ಹೀಗೆ ಹಸನಾದ ಸಂಗೀತಾಭಿರುಚಿ ಉತ್ತಮಗೊಂಡು ಸಂಗೀತಜ್ಞಾನಕ್ಕೆ ರೂಪುಗೊಳ್ಳಲು ಕಾರಣರಾದವರು ಆತನ ಗುರುಗಳಾದ ವ್ಯಾಸರಾಜರು. ಕೃಷ್ಣದೇವರಾಯನ ಕಾಲದ ಒಂದು ಪ್ರಬಂಧದಲ್ಲಿ-'ಜಯ ಸಂಗೀತಾಗಮ ಅಭಿನವ ಭರತಂ ಮುನಿರೇ' ಎಂದು ವ್ಯಾಸರಾಯರನ್ನು ಸ್ತುತಿಸಲಾಗಿದೆ. ಸಂಗೀತ ಮತ್ತು ಭರತ ಶಾಸ್ತ್ರದಲ್ಲಿ ಉತ್ತಮ ಪಾಂಡಿತ್ಯ ಅವರದು. ಅಂತಹವರ ಸಾಮೀಪ್ಯ ಮತ್ತು ಸಹವಾಸಗಳೇ ಕಲಾಜ್ಞಾನವೃದ್ದಿಯಾಗಲು ಸ್ಫೂರ್ತಿದಾಯಕ. ಇನ್ನು ಅವರಿಂದ ಮಾರ್ಗದರ್ಶನವೂ ದೊರಕಿದ ಮೇಲೆ ? ಇನ್ನು ಕನಕದಾಸರಿಗೆ ಸಂಗೀತ ತಿಳಿದಿತ್ತೇ ಎಂಬ ಪ್ರಶ್ನೆಗೆ ಅವರು ಯಾವ ಸಂಗೀತ ಗ್ರಂಥವನ್ನೂ ಬರೆದಿಲ್ಲ ನಿಜ. ಇದು ಅನೇಕ ಸಂಗೀತ ವಿದ್ವಾಂಸರಿಗೂ ಅನ್ವಯಿಸುವುದು. ಆದರೆ ಅವರ ಸಂಗೀತದ ಜ್ಞಾನ ಏನು ಎಂಬುದನ್ನು ತಿಳಿದು ಕೊಳ್ಳಬೇಕಾದರೆ ಅವರ ಕೀರ್ತನೆಗಳನ್ನು ಪರಿಶೀಲಿಸಬಹುದು. ಹರಿದಾಸ ಪಂಥದವರ ಕೀರ್ತನೆಗಳೆಲ್ಲಾ ರಾಗ ತಾಳಬದ್ಧವಾಗಿ ಹಾಡಲೋಸುಗ ರಚಿತವಾದುದೇ. ಅವರಲ್ಲಿ ಕೆಲವರ ಕೀರ್ತನಗಳಲ್ಲಿ ಸಂಗೀತಕ್ಕೆ ಸಂಬಂಧಪಟ್ಟ ಶಬ್ದಗಳು ಕಂಡುಬರುತ್ತವೆ. ಬಹುತೇಕ ಉಪಮೆಯ ರೂಪದಲ್ಲಿ ಅಥವಾ ಸಂದರ್ಭ ವರ್ಣನೆಯಲ್ಲಿ, ಸಂಗೀತ ವಿಷಯವೇ ನೇರವಾಗಿ ಪ್ರಸ್ತಾಪಿತವಾಗುವುದಿಲ್ಲ. ಪುರಂದರದಾಸರ ಕೀರ್ತನೆಗಳಲ್ಲಿ ಮಾತ್ರ ಅಂತಹ ಪ್ರಸ್ತಾಪಬರುತ್ತದೆ. ಕನಕದಾಸರ ಕೀರ್ತನೆಗಳಲ್ಲಿಯೂ ಹೀಗೆ ಸಂದರ್ಭಾನುಸಾರ ಸಂಗೀತಕ್ಕೆ ಸಂಬಂಧಿಸಿದ ಕೆಲವು ಉಲ್ಲೇಖಗಳಿವೆ. ನಿದರ್ಶನವಾಗಿ-'ಎನ್ನ ನುಡಿ ಹುಸಿಯಲ್ಲ ಈ ಜಗದೊಳು' ಎಂಬ ಕೀರ್ತನೆಯಲ್ಲಿ-ಸ್ವರಭೇದವಿಲ್ಲದಿಹ ಸಂಗೀತವಿಂಗೀತ ಎಂದಿದ್ದಾರೆ. ಯಾವ ಯಾವ ವಸ್ತುವಿನಲ್ಲಿ ಯಾವ ಯಾವ ಅಂಶವಿದ್ದರೆ ಲಕ್ಷಣ ಎಂಬುದನ್ನು ಸ್ಪಷ್ಟಪಡಿಸುವ ಕೀರ್ತನೆ ಇದು. ಇಲ್ಲಿ ಸಂಗೀತದ ಪ್ರಸ್ತಾವದ ಹಿನ್ನೆಲೆ ಇಷ್ಟೆ, ಏಳು ಸ್ವರಗಳಾಗಿ ರೂಪುಗೊಂಡ ನಾದಭೇದದಿಂದ ಮೇಲೈಸಿದಾಗ ಮಾತ್ರ ಅದು ಸಂಗೀತವಾಗುತ್ತದೆ. ಇಲ್ಲದಿದ್ದರೆ ಬರೇ ಶಬ್ದವಾಗುತ್ತದೆ. ಅದರಂತೆ ಇನ್ನೊಂದು 'ಮರೆಯದಿರು ಮರೆಯದಿರು ಎಲೆ ಮಾನವ ಎಂದು ಪ್ರಾರಂಭವಾಗುವ ಕೀರ್ತನೆ ಇದು ಮನುಷ್ಯರು ಅಹಂಕಾರ ಬಿಡಬೇಕೆಂದು ಸೂಚಿಸುವ ನೀತಿಬೋಧೆಯ ಕೀರ್ತನೆ : ಇದರಲ್ಲಿ ಒಂದೊಂದು ಗುಣಕ್ಕೂ ಆದರ್ಶಪ್ರಾಯರೆನಿಸುವ ವ್ಯಕ್ತಿಗಳನ್ನು ಹೇಳುತ್ತಾ-ಹೀಗ್ಯಾರ ಹೋಲುವೆ ಹೇಳೆಲೊ ಮಾನವ' ಎಂದು ಕೇಳುತ್ತಾರೆ. ಇಲ್ಲಿ 'ರಾಗದಲಿ ತುಂಬುರನೊ? 3 3