ಪುಟ:Kanakadasa darshana Vol 1 Pages 561-1028.pdf/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೮೮ ಕನಕ ಸಾಹಿತ್ಯ ದರ್ಶನ-೧ ಸಂಗೀತ ಮತ್ತು ಕನಕದಾಸರು ೬೮೯ ಎಂದು ಪ್ರಶ್ನೆಮಾಡುತ್ತಾರೆ. ದೇವಗಣಗಳಲ್ಲಿ ತುಂಬುರು ನಾರದರಿಗೂ ಸಂಗೀತಕ್ಕೂ ಇರುವ ನಿಕಟ ಸಂಬಂಧವು ಎಲ್ಲರೂ ಬಲ್ಲ ವಿಷಯವೇ. ರಾಗದಲ್ಲಿ ಅಂದರೆ ಸಂಗೀತದಲ್ಲಿ ತುಂಬುರನೆಂತಹ ಉನ್ನತ ಸ್ಥಾನದಲ್ಲಿರುವ ವ್ಯಕ್ತಿ ಎಂಬುದರ ಸೂಚ್ಯವಾಗಿ ಇಲ್ಲಿ ಸಂಗೀತಕ್ಕೆ ಸಂಬಂಧಪಟ್ಟ ಪದವನ್ನು ಉಪಯೋಗಿಸಲಾಗಿದೆ. 'ಏನು ಮಾಡಲಯ್ಯ ಬಯಲಾಸೆ ಬಿಡದು' ಎಂದು ಪ್ರಾರಂಭವಾಗುವ ಇನ್ನೊಂದು ಕೀರ್ತನೆಯಲ್ಲಿ- 'ಧಿಮ್ಮಿಡುವ ಘಣ ಘಣಯೆಂಬ ಘಂಟೆಯ ರವಕೆ' ಎಂಬುದಾಗಿ ಘಂಟೆಯ ರವದ ಪ್ರಸ್ತಾವವಿದೆ. ಈ ಕೀರ್ತನೆಯ ಪೂರಾವಸ್ತು-ಮನುಷ್ಯನ ವಿವಿಧ ಇಂದ್ರಿಯ ಚಾಪಲ್ಯಗಳು ಮತ್ತು ಅವುಗಳನ್ನು ನಿಗ್ರಹಿಸಲು ಕರೆ ಅನಂತರ- 'ಹರಿ ನಿನ್ನ ಪದಕಮಲ ಕರುಳದಂದಲಿ ಎನಗೆ'-ಎಂದು ಪ್ರಾರಂಭವಾಗುವ ಇನ್ನೊಂದು ಕೀರ್ತನೆಯಲ್ಲಿ ಸಾರಿ ಹೊರಡುವ ಛತ್ರಿ ಭೇರಿ ತಮ್ಮಟೆಗಳು ಭೋರೆಂಬ ವಾದ್ಯಗಳು ಹರಿಯೆ ವೀರರಾಹುತ ಬಲದ ಭಾರವನು ತರಿದಹಂ ಕಾರವನು ಮುರಿದೆ ಹರಿಯೆ || ಈ ಕೀರ್ತನೆ ಕನಕದಾಸರ ಜೀವನದಲ್ಲಿ ಒಂದು ಹೊಸ ಅಧ್ಯಾಯ ಪ್ರಾರಂಭವಾದುದನ್ನು, ಜ್ಞಾನೋದಯವಾದುದನ್ನು ಸೂಚಿಸುತ್ತದೆ. ಇಲ್ಲಿ ಬರುವ ಭೇರಿ ತಮ್ಮಟ ಮುಂತಾದ ವಾದ್ಯಗಳ ಹೆಸರುಗಳು ಪ್ರಾಸಂಗಿಕವಾಗಿ ಬಂದಿವೆ. ಇನ್ನೊಂದು 'ಹ್ಯಾಂಗೆ ನೀ ದಾಸನಾದಿ ಪ್ರಾಣಿ' ಎಂಬ ಕೀರ್ತನೆಯಲಿ ಕಾಲುಗೆಜ್ಜೆಯ ಕಟ್ಟಿ ಮೇಲೆ ಕರತಾಳ ಪಿಡಿದು ಶ್ರೀಲೋಲನ ಗುಣಪೊಗಳಿ ನಟಿಸದಲೆ ಎಂಬ ಸಾಲುಗಳು ಬರುತ್ತವೆ : ಇದು ಒಂದು ರೀತಿಯಲ್ಲಿ ಸಂಗೀತಕ್ಕೆ ನೇರನೇರವಾಗಿ ಸಂಬಂಧಪಡುತ್ತದೆ, ಹರಿದಾಸರು ಕಾಲಿಗೆ ಗೆಜ್ಜೆ ಕಟ್ಟಿ ಕೈಯ್ಯಲ್ಲಿ ತಾಳವಿಡಿದು ಭಾವೋತ್ಕರ್ಷದಿಂದ ನಾಮಕೀರ್ತನೆ ಮಾಡುತ್ತಾ ತನ್ಮಯರಾಗಿ ಕುಣಿವುದನ್ನು ಸೂಚಿಸುತ್ತದೆ. ಹಾಗೆಯೇ ಇನ್ನೂ ಅನೇಕ ಕೀರ್ತನೆಗಳಲ್ಲಿ ಸಂಗೀತಕ್ಕೆ ಸಂಬಂಧಪಟ್ಟ ಶಬ್ದಗಳು ಬಹುತೇಕ ಪ್ರಾಸಂಗಿಕವಾಗಿ ಕಂಡು ಬರುತ್ತವೆ. 'ಮರೆಯದಿರು ಮರೆಯದಿರು ಎಲೆ ಮಾನವ' ಎಂಬ ಹಾಡಿನಲ್ಲಿ“ಗೀತದಲಿ ಗಂಧರ್ವನೇ ನೀನು” ; “ಮಗನೆಂದಾಡಿಸುವಳು ಮೊಗ ನೋಡಿ ನಗುವಳು'-ಎಂಬ ಕೀರ್ತನೆಯಲ್ಲಿ- 'ಹೊನ್ನ ಘಂಟೆಯು ಘಣ ಘಣರೆನಲು'; “ಎಲ್ಲಾರು ಮಾಡುವುದು ಹೊಟ್ಟೆಗಾಗಿ' ಎಂಬ ಕೀರ್ತನೆಯಲ್ಲಿ 'ತಾಳ ದಂಡಿಗೆ ಶೃತಿ ಮೇಳ ತಂಬೂರಿಗೊಂಡು ಸೂಳೆಯಂತೆ ಕುಣಿವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ' ಒಂದು ವಿಡಂಬನೆಯ ರೀತಿಯಲ್ಲಿ. ಹೀಗೆ ಇನ್ನು ಕೆಲವು ಕೀರ್ತನೆಗಳಲ್ಲಿ ಸಂಗೀತ ಸಂಬಂಧವಾದ ಶಬ್ದಗಳು ಬರುತ್ತದೆ. ಇದರಿಂದ ಕನಕದಾಸರಿಗೆ ಒಳ್ಳೆಯ ಸಂಗೀತ ಜ್ಞಾನವಿತ್ತೆಂಬ ವಿಷಯ ಸ್ಪಷ್ಟಪಡುತ್ತದೆ. ಸಂಗೀತ ಸಂಬಂಧವಾದ ಶಬ್ದಗಳು ನೇರವಾಗಿ ಬರದೆ ಉಪಮೆಯ ರೂಪದಲ್ಲಿಯೇ ಪ್ರಾಸಂಗಿಕವಾಗಿಯೇ ಬಂದರೂ, ಆ ಸಂದರ್ಭಕ್ಕೆ ಎಷ್ಟು ಉಚಿತ ರೀತಿಯಲ್ಲಿ ಬಳಸಲಾಗಿವೆ ಎಂಬುದನನು ನೋಡಿದಾಗ ಕನಕದಾಸರಿಗೆ ಇದ್ದ ಸಂಗೀತ ಜ್ಞಾನದ ಮಟ್ಟದ ಅರಿವು ನಮಗುಂಟಾಗುವುದು. ಈ ಅಂಶವು ಅವರ ಮೋಹನ ತರಂಗಿಣಿಯಲ್ಲಿ ಇನ್ನೂ ಸ್ಪಷ್ಟಗೊಳ್ಳುತ್ತದೆ. ಅಲ್ಲಿ ಸಂಗೀತಕ್ಕೆ ಸಂಬಂಧಿಸಿದ ಅನೇಕ ಶಬ್ದಗಳನ್ನು ಸಂಗೀತದ ಹಿನ್ನೆಲೆಯಲ್ಲಿಯೇ ಬಳಸಲಾಗಿದೆ. ಇದರಲ್ಲಿ ಗಾಯನ, ವಾದ್ಯ, ರಾಗ ಮುಂತಾದವುಗಳ ಪ್ರಸ್ತಾಪವಿದೆ. ಅಲ್ಲದೆ ಅವುಗಳ ಪಾತ್ರವನ್ನು ನೇರವಾಗಿ ವರ್ಣಿಸಲಾಗಿದೆ. ಮೋಹನ ತರಂಗಿಣಿಯ ೪, ೧೮, ೨೦ ಮತ್ತು ೨೨ನೇ ಸಂಧಿಗಳಲ್ಲಿ ಸಂಗೀತಕ್ಕೆ ಸಂಬಂಧಪಟ್ಟ ವರ್ಣನೆಗಳಿವೆ. ನಾಲ್ಕನೆಯ ಸಂಧಿಯಲ್ಲಿ ವಿವಿಧ ವಿದ್ಯೆಗಳನ್ನು ಪ್ರಸ್ತಾಪಿಸುವಾಗ ಪ್ರಾಸಂಗಿಕವಾಗಿ 'ವೀಣಾ ವಾದ್ಯ ತಂತಿಗೆ ಚರ್ಮ ವಾದ್ಯಕ್ಕೆ' ಎಂದು ಹೇಳಿದರೆ ಹದಿನೆಂಟನೆಯ ಸಂಧಿಯಲ್ಲಿ- 'ತರಳಾಕ್ಷಿ ತನ್ನೊಳು ಪಾಡುವರಿಲ್ಲೆಂದು ಕೊರಲೊಳಿಟ್ಟಳು ಕಂಡ ಸರವ | ಪೆರಳೊರ್ವ ವೀಣೆಗಾರ್ತಿಯರಿಲ್ಲವೆನುತವೆಡ ಬೆರಲೊಟ್ಟಳು ಮುದ್ರಿಕೆಯ | ಆಯತವಿಡುವ. ಸುಸ್ವರ ಷಡ್ಡ ಪಂಚಮ ಸ್ಥಾಯಿ ಸಂಚರ ಠಾಯ ನೇಮ | ಬಾಯಿದೆರೆಯೆ ನಾಣಿಲವುಂಟು ತಪ್ಪದ ಗೀತ ಗಾಯಕಿಗಳೊಪ್ಪಿದರು... ಹಸ್ತಿನಾವುಜ, ವೀಣೆ, ಮದ್ದಳೆ, ರಾವಣಹಸ್ತ, ಕಿನ್ನರಿ, ಜಾತ್ರೆ ಉಡುಕು ದುಸ್ತರ ಸ್ವರಮಂಡಲ...' ಎಂದು ಇನ್ನು ಸ್ವಲ್ಪ ವಿಸ್ತಾರವಾಗಿದೆ. ಇಪ್ಪತ್ತೆರಡನೆಯ ಸಂಧಿಯಲ್ಲಿ `ಪುಷ್ಪ ಸುಗಂಧ ಗಂಧಿಯರು ಬಂದರು ಬಾಣ ನುಪ್ತಡವನು ಪಾಡುವೊಡೆ | ಮೇಳವ ಮಾಡಿ ದಂಡಿಗೆ ವಿಡಿವರು ಶುದ್ಧ ಸಾಳಗ ಸಂಕೀರ್ಣ ವಿಧದಿ | ಆಳಾಪ ರಾಯೆನೇಮಗಳಿಂದೆ ನೂರೆಂಟು ತಾಳಗೀತಗಳ ಪಾಡಿದರು | ನಾರಣಿದೇಶಾಕ್ಷಿ ಗುರ್ಜರು ದೇವಗಾಂಧಾರಿ