ಪುಟ:Kanakadasa darshana Vol 1 Pages 561-1028.pdf/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೯೪ ಕನಕ ಸಾಹಿತ್ಯ ದರ್ಶನ-೧ ಸಂಗೀತ ಮತ್ತು ಕನಕದಾಸರು ೬೯೫ ರಾಗಗಳನ್ನೂ ಜನತೆಯ ಮಧ್ಯೆ ಪ್ರಸರಿಸಲು ಕಾರಣರಾದರು. ಆದರೆ ಕನಕದಾಸರ ಸಂಚಾರ ಬಹುತೇಕ ಕರ್ನಾಟಕದಲ್ಲಿ. ಆದುದರಿಂದ ಅವರ ಕೀರ್ತನೆಗಳು ಕರ್ನಾಟಕದ ಹೊರಗೆ ಅಷ್ಟಾಗಿ ಕೇಳಿಬರುತ್ತಿಲ್ಲ. ಕನಕದಾಸರು ತಮ್ಮ ಕೀರ್ತನೆಗಳಲ್ಲಿ ಇಪ್ಪತ್ತು-ಇಪ್ಪತ್ತೈದು ರಾಗಗಳನ್ನು ಬಳಸಿದ್ದಾರೆ. ಅವೆಲ್ಲಾ ಅಚ್ಚ ಕರ್ನಾಟಕ ಸಂಪ್ರದಾಯಕ್ಕೆ ಸೇರಿದಂತಹವು. ಅದರಲ್ಲಿ ಕೆಲವು ರಾಗಗಳು ಅಂದರೆ-ಕಾಂಭೋಜ, ಮುಖಾರಿ, ಮೋಹನ, ಶಂಕರಾಭರಣ, ನಾಟ್ಯ, ಕಲ್ಯಾಣಿ ಮುಂತಾದುವು ಅವರಿಗೆ ಬಹು ಪ್ರಿಯವೆನಿಸುತ್ತದೆ. ಈ ರಾಗಗಳಲ್ಲಿ ಹೆಚ್ಚು ಸಂಖ್ಯೆಯ ಕೀರ್ತನೆಗಳು ರಚಿತವಾಗಿವೆ. ಇದಲ್ಲದೆ ಮಧ್ಯಮಾವತಿ, ಕೇದಾರಗೌಳ, ಪಂತವರಾಳಿ, ಧನ್ಯಾಸಿ, ರೇಗುಪ್ತಿ, ಸಾವೇರಿ, ನವರೋಜು, ಆರಭಿ, ಭೈರವಿ, ಶ್ರೀ ಸಾರಂಗ ಮುಂತಾದ ರಾಗಗಳಲ್ಲಿಯೂ ರಚಿತವಾಗಿವೆ. ಇವುಗಳನ್ನು ಅಳವಡಿಸಿದ ವಿಧಾನವೂ ಹೆಚ್ಚು ವ್ಯಾಪಕವಾಗುವ ರೀತಿಯಲ್ಲಿ ಎನ್ನಬಹುದು. ಉದಾಹರಣೆಗೆ ಅವರ-ಭಜಿಸಿ ಬದುಕೆಲೆ ಮಾನವ, ನೀ ಮಾಯೊಳಗೊ, ಆರು ಬದುಕಿದರಯ್ಯ ಹರಿ ನಿನ್ನ ನಂಬಿ ಕೀರ್ತನೆಗಳನ್ನು ನೋಡುವ. ಮೂರೂ ಕಾಂಬೋಧಿ ರಾಗದಲ್ಲಿ ರಚಿತವಾಗಿವೆ. ತಾಳಖಂಡಚಾಪಿನ ಚೌಕಟ್ಟು, ಮೂರರ ರಾಗಹಂದರವೂ ಒಂದೇ ರೀತಿಯದು. ಅವರ ಅನೇಕ ಕೀರ್ತನೆಗಳು ಈ ವಿಧಾನವನ್ನು ಅನುಸರಿಸಿವೆ. ಇದಕ್ಕೆ ಕಾರಣವಿಷ್ಟೇ. ಕನಕದಾಸರು ಈ ಕೀರ್ತನೆಗಳನ್ನು ರಚಿಸಿದುದು ತಮ್ಮ ಹಿರಿಮೆಯನ್ನಾಗಲೀ, ಪಾಂಡಿತ್ಯವನ್ನಾಗಲೀ ಪ್ರದರ್ಶನ ಮಾಡುವುದಕ್ಕಲ್ಲ. ಅವುಗಳನ್ನು ಎಲ್ಲರೂ ಗ್ರಹಿಸಿ ಹಾಡಲೋಸುಗ ರಚಿತವಾದವು. ಆದಕಾರಣ ಅವುಗಳ ರಾಗ ಸಂಯೋಜನೆ ಮತ್ತು ತಾಳದ ನಡೆ ಸರಳವಾಗಿವೆ. ಯಾರು ಬೇಕಾದರೂ ಸುಖವಾಗಿ ಹಿಡಿದು ಹಾಡಬಹುದು. ಒಟ್ಟಿನಲ್ಲಿ ಅದು ರಾಜಾಸ್ಥಾನಕ್ಕಾಗಿ ಅಲ್ಲ, ವಿದ್ವತ್ ಗೋಷ್ಠಿಗಲ್ಲ, ಜನತೆಗೋಸ್ಕರ. ನೆಲಕ್ಕೆ ಹತ್ತಿರವಾದ ಸಂಗೀತ, ಕ್ಷೇತ್ರವನ್ನು ಹಸನುಮಾಡಿದ ಸಂಗೀತ, ಜನತೆಯಲ್ಲಿ ಆಸಕ್ತಿ ಮತ್ತು ಅಭಿರುಚಿ ಬೆಳೆಯಿಸಿದಂತಹುದು. ಎರಡನೆಯ ಮಹಾಯುದ್ದಕ್ಕೆ ಹಿಂದಿನ ವರುಷಗಳ ಅಂದರೆ ಈ ಅರ್ಧ ಶತಮಾನದ ಹಿಂದನವರೆಗೂ ಭಜನೆಗೋಷ್ಠಿಗಳಲ್ಲಿ ಹಾಗೂ ಮನೆಗಳಲ್ಲಿ ಕೇಳಿಬರುತ್ತಿದ್ದ ಕನಕದಾಸರ ಜನಪ್ರಿಯ ಕೀರ್ತನೆಗಳಲ್ಲಿ-ಮೋಹನರಾಗದನಮ್ಮಮ್ಮ ಶಾರದೆ ಕಾಂಭೋಜಿ ರಾಗದ-ಹಿಂದೆ ಹೇಳಿದ ಮೂರು ಕೀರ್ತನೆಗಳೂ; ಮಖಾರಿ ರಾಗದ-ಹೂವ ತರುವವರ ಮನೆಗೆ ; ಅಹುದಾದರಹುದೆನ್ನಿ ; ಬಿಲಹರಿರಾಗದ-ತಲ್ಲಣಿಸದಿರು ; ಕೇದಾರಗೌಳದ ತನುನಿನ್ನದು ; ಭೂಪಾಲ ರಾಗದ-ಏಳು ನಾರಾಯಣ : ಮಧ್ಯಮಾವತಿರಾಗದ-ಕುಲ ಕುಲವೆಂದು ; ಮತ್ತು ಇನ್ನೂ ಕೆಲವು ಕೀರ್ತನೆಗಳು ನೆನಪಿಗೆ ಬರುತ್ತವೆ. ಇವುಗಳನ್ನು ಹಾಡುತ್ತಿದ್ದ ಹೆಂಗಸರಿಗಾಗಲಿ, ಭಜನೆ ಮಾಡುವವರಿಗಾಗಲೀ ಅನೇಕ ಮಂದಿ ಸಂಗೀತ ಬಲ್ಲವರಲ್ಲ. ಪರಂಪರೆಯಿಂದ ಬಂದ ಈ ಕೀರ್ತನೆಗಳನ್ನು ಕಿವಿಯಿಂದ ಕೇಳಿ ಕಲಿತವರು. ಸಂಗೀತದ ನಿಯಮ ತಿಳಿಯದಿದ್ದರೂ ಅವರು ಹಾಡುತ್ತಿದ್ದ ರಾಗಗಳ ಆಕಾರ, ಸ್ವಚ್ಛವಾಗಿರುತ್ತಿತ್ತು, ಸರಳವಾಗಿರುತ್ತಿತ್ತು. ಅದರಲ್ಲಿ ಸ್ವಲ್ಪ ಸಂಗೀತ ಪರಿಚಯವಿದ್ದವರು ಅಭಿರುಚಿಯನ್ನು ಬೆಳೆಸಿಕೊಂಡು ಕನಕದಾಸರ ಇನ್ನೂ ಸ್ವಲ್ಪ ಪ್ರೌಢವಾದ ಕೀರ್ತನೆಗಳನ್ನು ಹಾಡುತ್ತಿದ್ದರು. ಅಂತಹ ಪ್ರೌಢವಾದ ಹಾಗೂ ಬಿಕ್ಕಟ್ಟಾದ ಕೀರ್ತನೆಗಳೂ ಇವೆ. ಆ ಕೊನೆಯಲ್ಲಿ ಜಾನಪದ ಮಟ್ಟುಗಳಲ್ಲಿ ಹಾಡಬೇಕಾದವೂ ಇವೆ. ಇಲ್ಲಿ ನಾವು ನೆನೆಸಿಕೊಳ್ಳಬೇಕಾದ ಇನ್ನೊಂದು ವಿಷಯವಿದೆ. ಸಂಗೀತ ಕಲೆಯ ಬೆಳವಣಿಗೆಯಲ್ಲಿ ರಾಜಮಹಾರಾಜರುಗಳ ಮುಖ್ಯಪಾತ್ರವನ್ನು ವರ್ಣಿಸುವುದು ಒಂದು ಈಚಿನ ಸಂಪ್ರದಾಯವಾಗಿದೆ. ಸೂಕ್ಷ್ಮವಾಗಿ ಪರಿಶೀಲಿಸಿದರೆ ನಮಗೆ ಇನ್ನೊಂದು ಚಿತ್ರ ಕಾಣಬರುತ್ತದೆ. ರಾಜರುಗಳೂ ಸಂಗೀತದ ಕಲೆಗೆ ಪ್ರೋತ್ಸಾಹ ಕೊಟ್ಟದು ನಿಜ. ಆದರೆ ಅದು ದೊರೆತದ್ದು ಅವರ ಆಶ್ರಯ ಪಡೆದ ಕೆಲಮಂದಿಗೆ ಮಾತ್ರ ಕಲೆಯ ಬೆಳವಣಿಗೆಯೂ ಅರಮನೆಯ ನೆರಳಿಗೇ ಸೀಮಿತವಾಯಿತು. ಆದರೆ ನಾಡಿನಲ್ಲಿ ಎಲ್ಲಾ ಕಲೆ ಬೆಳೆದ ಬಗೆ ಹೇಗೆ ? ಹಿಂದೆ ಆಸ್ಥಾನಗಳನ್ನು ಬೆಳಗಿದ ಅನೇಕ ಸಂಗೀತ ದಿಗ್ಗಜಗಳೂ ಸಹ ಗ್ರಾಮಾಂತರಗಳಿಂದ ಬಂದುದು ಗಮನಾರ್ಹ ವಿಷಯ. ನಾಡಿನ ಎಲ್ಲ ಭಾಗದಲ್ಲಿಯೂ, ಅದರಲ್ಲಿಯೂ ಪುಣ್ಯಕ್ಷೇತ್ರಗಳು, ಪ್ರಸಿದ್ದ ದೇವಾಲಯಗಳಿದ್ದ ಊರುಗಳಲ್ಲಿ ಸಂಗೀತವು ಬದುಕಿನ ಅಂಗವಾಗಿ ಬೆಳೆದು ಮೊಳಗುತ್ತಿತ್ತು. ಹೀಗೆ ಸಂಗೀತವನ್ನು ಕಲಿತು ಸಾಧನೆಯಿಂದ ಇನ್ನೂ ಉತ್ತಮಪಡಿಸಿಕೊಂಡ ಕೆಲವರು ಸಾಹಸಿಗಳು ಕೀರ್ತಿ ಸಂಪಾದನೆಯ ದೃಷ್ಟಿಯಿಂದ ರಾಜಧಾನಿಗಳಿಗೆ ತೆರಳಿದರು. ಆದರೆ ನಾಡಿನ ವಿವಿಧ ಭಾಗಗಳಲ್ಲಿ ಬಲವಾಗಿ ಬೇರೂರಿದ್ದ ಫಲವಾಗಿ ಸಂಗೀತ ಕಲೆಯ ಬೆಳವಣಿಗೆಗೆ ಯಾವ ತೊಂದರೆಯೂ ಆಗಲಿಲ್ಲ. ಹೀಗೆ ನಾಡಿನ ನೆಲದಲ್ಲಿ ಬೇರೂರಿ ಜನತೆಯ ಮನಸ್ಸಿನಲ್ಲಿ ಸಂಗೀತ ಕಲೆಯು ನೆಲೆಸಿ ಬಹುಮುಖವಾಗಿ ಬೆಳೆಯಲು ಕಾರಣರಾದ ಕನಕದಾಸರು ಒಬ್ಬ ಸಂಗೀತ ಶಿಲ್ಪಿಗಳೆನ್ನಬಹುದು.