ಪುಟ:Kanakadasa darshana Vol 1 Pages 561-1028.pdf/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೭೪ ಕನಕ ಸಾಹಿತ್ಯ ದರ್ಶನ-೧ ಕಿಂಡಿಯಲ್ಲಿ ನೋಡಿದ ಕವಿತೆಗಳು ೫೭೫ ಕಾವ್ಯಮಯವಾದ ಶೈಲಿಯಲ್ಲಿ ನಿರೂಪಿಸಿರುತ್ತಾರೆ. ವಸ್ತುವಿನ ದೃಷ್ಟಿಯಿಂದ ಕನ್ನಡ ಕಾವ್ಯಗಳಲ್ಲಿ ಈ ಕೃತಿಗೆ ಒಂದು ಸ್ಥಾನ ಸಲ್ಲುತ್ತದೆ.” ಈ ಕೃತಿಯಲ್ಲಿ ಸೂಚಿತವಾದ ದಿಕ್ಕು ಪೌರಾಣಿಕ ಜಗತ್ತನ್ನು ಪ್ರತಿಫಲಿಸುತ್ತಿದ್ದರೂ ಇದು ಭ್ರಮೆಯ ಸಂಗತಿಯನ್ನು ಪ್ರತಿಪಾದಿಸುತ್ತದೆ. ಕನಕದಾಸರು ಲೌಕಿಕದಿಂದ ಆಗಮಿಕದ ಕಡೆಗೆ ಈ ಮೂಲಕ ಹೋಗುತ್ತಾರೆ. ಕನ್ನಡ ಸಾಹಿತ್ಯದಲ್ಲಿ ಹದಿಮೂರನೆಯ ಶತಮಾನದಿಂದ ಹದಿನಾರನೆಯ ಶತಮಾನದವರೆಗೆ ಈ ರೀತಿಯ ಕಥನ ಕ್ರಮ ಮತ್ತು ಮರಳಿ ಮಹಾಭಾರತಕ್ಕೆ ಹೋಗುವಿಕೆಯನ್ನು ಕನ್ನಡ ಕವಿಗಳು ನೆರವೇರಿಸಿದರು. ಈ ರೀತಿಯ ಕಥನ ಕ್ರಮದಲ್ಲಿ ಮತ್ತೆ ಕೆಲವಂಶಗಳು ಮುಖ್ಯವಾಗಿವೆ : ೧. ಕನಕದಾಸರು ಮಹಾಭಾರತ ಮತ್ತು ಕೃಷ್ಣ ಕತೆಗೆ ತಮ್ಮ ಸಮಕಾಲೀನ ಸ್ಥಿತಿಯಿಂದ ಪ್ರತಿಕ್ರಿಯಿಸಿದ್ದಾರೆ. ಇದರಲ್ಲಿ ಕನಕದಾಸರ ವೈಯಕ್ತಿಕ ಗ್ರಹಿಕೆಯು ಪ್ರಧಾನವಾಗಿದೆ. ೩. ಈ ಕಾಲದಲ್ಲಿ ಒಟ್ಟು ಪೌರಾಣಿಕ ಪ್ರಪಂಚದ ಧಾಟಿಯಿದೆ. - ಬಹುಶಃ ಆ ಕಾಲ ಸಮಾಜದಲ್ಲಿ ಅಂತಸ್ಥವಾಗಿದ್ದ ಅವಿಶ್ರಾಂತ ಸ್ಥಿತಿಯೂ ಇದಕ್ಕೆ ಕಾರಣವಾಗಿರಬಹುದು. ಯಾಕೆಂದರೆ, ಈ ಕಾವ್ಯಗಳ ಮುಖ್ಯ ಗುಣವೆಂದರೆ 'ನೈತಿಕ ಪ್ರಸರಣ'. ೪. ಮಹಾಭಾರತ ಮತ್ತು ಪೌರಾಣಿಕ ಕತೆಗಳ ಅನುಕರಣೆಯು ಲೌಕಿಕವಾದ ಒಟ್ಟು ಸ್ಥಿತಿಗೆ ಉತ್ತರ ರೂಪವಾಗಿ ಸಿದ್ಧವಾದುದು. ಕನಕದಾಸರ 'ನಳಚರಿತ್ರೆ' ಮತ್ತು 'ಮೋಹನ ತರಂಗಿಣಿ' ಎರಡೂ ಕೃತಿಯನ್ನು ಅನ್ವಯಿಸಿಕೊಂಡು ಕೆಲವು ಮಾತುಗಳನ್ನು ಮುಂದುವರಿಸ ಬಹುದಾಗಿದೆ. ಈ ಎರಡೂ ಕೃತಿಗಳಲ್ಲಿ ವೈಯಕ್ತಿಕ ಮತ್ತು ಸಾಮಾಜಿಕ ಪ್ರಕ್ರಿಯೆಗಳಿವೆ. ಉದಾಹರಣೆಗೆ, 'ನಳಚರಿತ್ರೆ' ಕೃತಿಯಲ್ಲಿ ಕನಕದಾಸರು ವ್ಯವಸ್ಥಿತ ಸಾಮ್ರಾಜ್ಯವೊಂದರ ಸ್ಥಿತಿಯಿಂದ ಕತೆಯನ್ನು ಹೇಳಲು ತೊಡಗುತ್ತಾರೆ.12 ಹೀಗೆ ಪ್ರಾರಂಭವಾಗುವ ಕತೆಯಲ್ಲಿ ವ್ಯಕ್ತಿಯೊಬ್ಬನು ಪಡೆಯುವ ಅನೇಕ ಆಯಾಮಗಳೂ ಬರುತ್ತವೆ. ಅನಂತರದಲ್ಲಿ ಈ ಕಥಾನಕವು ಮತ್ತೆ ಅರಸನು ಸುಖವಾಗಿ ರಾಜ್ಯವಾಳುವ ಸ್ಥಿತಿಗೆ ಮುಕ್ತಾಯವಾಗುತ್ತದೆ13, ಈ ಮಧ್ಯೆ ಜರುಗುವ ಕ್ರಿಯೆಗಳೆಲ್ಲವೂ ಒಂದು ಉದ್ದೇಶಕ್ಕಾಗಿ ದುಡಿಯುತ್ತವೆ. ಈ ಉದ್ದೇಶ ಒಂದು ಜೀವನ ಸ್ಥಿತಿಯನ್ನು ಸೂಚಿಸುವಂತಹುದು. ಈ ರೀತಿಯ ಆಕೃತಿಯನ್ನು ಹೀಗೆ ನಿರ್ದೆಶಿಸಬಹುದು ; ಕನಕದಾಸರು ಹಳೆಯ ಕತೆಗಳಿಗೆ ಹೊಸದಾದ ಆಕೃತಿಯನ್ನು ಕೊಡುವುದರಿಂದ ಹಳೆಯ ಕತೆಯ ಮೂಲ ಸಂಗತಿಗಳು ಬದಲಾಗುವುದಿಲ್ಲ. 'ನಳಚರಿತ್ರೆಯನ್ನು ಅನ್ವಯಿಸಿಕೊಂಡು ಮಾತನ್ನು ಮುಂದುವರಿಸಬಹುದು. 'ನಳಚರಿತ್ರೆಯಲ್ಲಿ ನಾಯಕ ಕೇಂದ್ರಿತ ಗುಣವಿದೆ. ಅಷ್ಟೇ ಅಲ್ಲ, ವಿವರಣಾತ್ಮಕವಾದ ಚಿತ್ರವಿದೆ. ನಳನಿಗೆ ಮತ್ತು ದಮಯಂತಿಗೆ ಆಗುವ ಬವಣೆಯನ್ನು ಕುರಿತು ಕತೆಯ ಚೌಕಟ್ಟಿನಲ್ಲಿ ಎರಡು-ಮೂರು ಕಡೆ ಸಮಸ್ಯೆಯು ಪುನರಾವರ್ತಿತವಾಗುತ್ತದೆ. ಹೀಗಾಗಿ, ಕತೆಯ ಚೌಕಟ್ಟಿನಲ್ಲಿ ಈ ಕತೆಯ ಸ್ವರೂಪವು ತೀರಾ ಐಕ್ಯದ ಗುಣವನ್ನು ಹೊಂದಿರದ ಪುನರಾವರ್ತನೆಯನ್ನು ಒಳಗೊಂಡು ಬೆಳೆಯುತ್ತದೆ. ಈ ರೀತಿಯ ಕತೆಗಳನ್ನು ಕುರಿತು 'ಪ್ರಾಫ್' ಕೆಲವಂಶಗಳನ್ನು ಸೂಚಿಸುತ್ತಾನೆ : ೧. ಈ ರೀತಿಯ ಕತೆಗಳಲ್ಲಿ ಪಾತ್ರಗಳು ಅಚಲವಾದ ಗುಣವನ್ನು ಹೊಂದಿರುತ್ತವೆ. ಪಾತ್ರಗಳು ಕತೆಯಲ್ಲಿ ಮುಖ್ಯ ಅಂಶಗಳನ್ನು ಒಳ ಗೊಂಡಿದ್ದು ಅದರ ಮೂಲಕ ಕತೆಯಲ್ಲಿ ಅನಿವಾರ ಘಟಕಗಳಾಗಿರುತ್ತವೆ. 'ನಳಚರಿತ್ರೆಯಲ್ಲಿ 'ನಳ ಮತ್ತು ದಮಯಂತಿ' ಪಾತ್ರದ ಕೆತ್ತನೆಯು ಈ ರೀತಿಯದು. ಈ ಪಾತ್ರಗಳು ನಿರ್ದೇಶಿಸುವ ಗುಣವನ್ನು ಪರಿಶೀಲಿಸಬಹುದು : ನಳನದು ಸಾತ್ತಿ ಕವಾದ ಗುಣ. ಆದರೆ ಸತ್ಯಕ್ಕಾಗಿ ದುಡಿಯುವ ಚೈತನ್ಯಶೀಲವಾದ ಈ ಪಾತ್ರಕ್ಕೆ ಆದರ್ಶದ ಗುಣವಿದೆ. ಹಾಗೆಯೇ ದಮಯಂತಿಯದು ಪಾತಿವ್ರತ್ಯದ ಮಹಿಮೆಯನ್ನು ಬಿತ್ತರಿಸುವಂತಹುದು. ಈ ಪಾತ್ರವು ಎದುರಿಸುವ ಸಮಸ್ಯೆಗಳಿಂದ ಈ ಗುಣಗಳು ವಿಜೃಂಭಿಸುತ್ತವೆ. ಭಾರತೀಯ ಸಂಸ್ಕೃತಿಯು ಈ ಮೌಲ್ಯಗಳನ್ನು ನಂಬುತ್ತದೆ. ಕನಕದಾಸರ ಪುನರ್‌-ನಿರಾಣದ ಹಿಂದಿನ ತಾತ್ತಿಕತೆಯೂ ಕೂಡಾ ಈ ಗುಣಗಳನ್ನು ಎತ್ತಿ ಹೇಳುವುದಾಗಿದೆ. ಈ ರೀತಿಂರು ತಾತ್ತಿ ಕ ನ೦ಬಿಕೆ ೧ ಸ ವರಾಜ ದಲ್ಲಿ ಗೈರುಹಾಜರಿಯಾದಾಗ ಅಥವಾ ಸಮಾಜವೊಂದು ಪಲ್ಲಟಗೊಳ್ಳುವ ಸ್ಥಿತಿಯು ಕಂಡು ಬರುವಾಗ ಸಾಮಾನ್ಯವಾಗಿ ಈ ರೀತಿಯ ಸಾಹಿತ್ಯ ನಿರ್ಮಾಣವಾಗುತ್ತದೆ. ೨. ಈ ರೀತಿಯ ಕಥಾನಕಗಳಲ್ಲಿ ಕ್ರಿಯೆಯು ತುಂಬಾ ಕಡಿಮೆ ಇರುತ್ತದೆ. ಕನಕದಾಸರ 'ಮೋಹನ ತರಂಗಿಣಿ' ಮತ್ತು 'ನಳಚರಿತ್ರೆ' ಎರಡೂ ಕೃತಿಗಳಲ್ಲಿಯೂ ಕ್ರಿಯೆಯು ಕಡಿಮೆ. ಕ್ರಿಯೆಗಳಲ್ಲಿ ವಿಭಜಿಸಿದರೆ, ಹೆಚ್ಚು ಸಂಖ್ಯೆಯ ಕ್ರಿಯೆಗಳು ಈ ಕೃತಿಗಳಲ್ಲಿ ಕಾಣಸಿಗುವುದಿಲ್ಲ.