ಪುಟ:Kanakadasa darshana Vol 1 Pages 561-1028.pdf/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೧೮ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಕೃತಿಗಳಲ್ಲಿ ಜಾನಪದ ಅಂಶಗಳು ೭೧೯ ಇಲ್ಲಿ ಜೇನು ಸಕ್ಕರೆ ಫೇಣಿ ವಡೆಗಳ ಸಾಲಿನಲ್ಲಿ 'ಸುಖೀನುಂಡೆ'ಯನ್ನೂ ಕನಕದಾಸರು ಪ್ರಸ್ತಾಪಿಸುವುದು ಗಮನಾರ್ಹ. ಎಳ್ಳಿನಿಂದ ಮಾಡುವ ಈ ಸಿಹಿ ಪದಾರ್ಥ ಗ್ರಾಮಾಂತರ ಪ್ರದೇಶಗಳಲ್ಲಿ ಇಂದಿಗೂ ಪಿತೃಪಕ್ಷದ ವಿಶೇಷ ಖಾದ್ಯವಸ್ತು'ಚಿಕ್ಕಿನುಂಡೆ' ಎಂಬ ಹೆಸರಿನಲ್ಲಿ ಇದು ಜನಪ್ರಿಯ. ಪಿತೃಗಳಿಗೆ ಎಡೆಯಿಡುವಾಗ ಕಜ್ಜಾಯ, ವಡೆ, ಚಿಕ್ಕಿನುಂಡೆಗಳು ಕಡ್ಡಾಯ. ಇವೆಲ್ಲಾ ನಮ್ಮ ಪ್ರಾಚೀನರ ವಿಶಿಷ್ಟ ಸಿಹಿ ತಿಂಡಿಗಳು, ನಮ್ಮ ಕಾವ್ಯಗಳಲ್ಲಿ ಕಜ್ಜಾಯ ಲಡ್ಡುಗಳ ಪ್ರಸ್ತಾಪ ಬಂದರೂ 'ಸುಖೀನುಂಡೆ' 'ವಡೆ'ಗಳ ಪ್ರಸ್ತಾಪ ವಿರಳ, ಕನಕದಾಸರು ಚಿಕ್ಕಿನುಂಡೆಯಂಥ ಸವಿಕಟ್ಟಾದ ಸಿಹಿತಿನಿಸನ್ನು ದಾಖಲುಮಾಡಲು ಮರೆತಿಲ್ಲ. ಇದಲ್ಲದೆ ಒಂದು ಕಡೆ ರೊಟ್ಟಿ ಬುತ್ತಿಯನ್ನು ಅವರು ಸೂಚಿಸುತ್ತಾರೆ : ರಾಯ ನೀನಾರ ಬುತ್ತಿಗೆಚೀಟು ರೊಟ್ಟಿಯ ಕಾಯ ಕೊಯ್ದುಪೆ ಕೇಳು || (ಪು. ೧೩೮) ಶ್ರೀ ಕೃಷ್ಣನ ಭೋಜನದ ವೈಖರಿಯನ್ನು ಜಲಕ್ರೀಡೆ'ಯ ಸಂಧಿಯ ಆರಂಭದಲ್ಲಿ ವಿವರಿಸಲಾಗಿದೆ. ಊಟಕ್ಕೆ ನೀಡಲು ಬೋನಗಿತ್ತಿಯರು ನಿಯೋಜಿತರಾಗಿದ್ದಾರೆ. ಬಗೆಬಗೆಯ ಭಕ್ಷ್ಯಗಳನ್ನು ತಂದು ಪಂಕ್ತಿಯಲ್ಲಿ ಕುಳಿತ ಶ್ರೀಕೃಷ್ಣಾದಿಗಳಿಗೆ ಅವರು ನೀಡುತ್ತಾರೆ. ಆ ಭಕ್ಷಗಳ ಹೆಸರೇ ನಮ್ಮ ಬಾಯಲ್ಲಿ ನೀರೂರಿಸುವಂತಿವೆ : ಆಗಾಗಳೊಗ್ಗರಿಸಲು ಬಿಸಿವಡೆದ ಮೇ ಲೋಗರ ಪಳಿದ ಪಲ್ಯಗಳ ರಾಕೇಂದು ವದನೆಯರೆಡೆಮಾಡುವ ಸುಪ್ತ ಯೋಗವನೇನ ಬಣ್ಣಿಪೆನು || ಬಂಗಾರದ ಪಾತ್ರೆಯ ಬಾಗಿದ ಹಿಡಿಗಳನ್ನು ಹಿಡಿದು ಅವರು ಬಡಿಸುತ್ತಿದ್ದ ಒಯ್ಯಾರ ವರ್ಣನಾತೀತ. ಶುಭ್ರವಾದ ಅಕ್ಕಿಯ ಅನ್ನ, ಸೊಗಸಾದ ತುಪ್ಪ, ತೊವ್ವ, ಪಳಿದ ಪಲ್ಲೆ, ತೋಯಾನ್ನ, ಪಾಯಸ ಅದಕ್ಕೆ ಸೊಗಸಾದ ತುಪ್ಪ, ಕೆಲವರಿಗೆ ನೀರು ಮಜ್ಜಿಗೆ ಅನಂತರ ಹೊನ್ನ ಹೂಜಿಗಳಲ್ಲಿನ ಪರಿಮಳಯುಕ್ತ ನೀರು-ಹೀಗೆ ಶ್ರೀಕೃಷ್ಣನ ಅರಮನೆಯ ಅಡುಗೆಗಳ ವೈಭವವನ್ನು ಕನಕದಾಸರು ಉತ್ಸಾಹದಿಂದ ವರ್ಣಿಸಿದ್ದಾರೆ ನಮ್ಮ ಸಾಂಪ್ರದಾಯಿಕ ಅಡುಗೆ ಪದ್ಧತಿಗೆ ಇವೆಲ್ಲ ಉತ್ತಮ ಉದಾಹರಣೆಗಳು. - ಅನಿರುದ್ದನ ನಗರ ಶೋಧನೆಯ ಸಂದರ್ಭದಲ್ಲಿ ಸೂಳೆಗೇರಿಯ ಚಿತ್ರವೂ ಬರುತ್ತದೆ. ಮಧುಪಾನದ ವೈಖರಿ, ಸಂಡಿಗೆ, ಕಡಲೆಉಸಳೆ, ಕೋಳಿಯ ತತ್ತಿ, ಅವಲಕ್ಕಿ, ಹುರಿಗಡಲೆಗಳು, ನಂಚಿಕೆಗಳು, ಚಿಪ್ಪಿನಲ್ಲಿ ಮಧುವನ್ನು ಕುಡಿಯುತ್ತ ಈ ನಂಚಿಕೆಗಳ ಸವಿ ನೋಡುತ್ತ ಮೋಜು ಮಾಡುವ ಒಂದು ಅದ್ಭುತ ದೃಶ್ಯವನ್ನು ಕನಕದಾಸರು ಇಲ್ಲಿ ನೀಡುತ್ತಾರೆ : ಅಪ್ಪ ಕೊಳ್ಳೆಲೆವೊ ಅಗ್ರಜಕೊಳ್ಳೋ ಹಿಂಡಿಯ ಸೊಪ್ಪಕೋ ಸುಲಿವಣ್ಣಳಿವಕೊ ಚಿಪ್ಪಕೋ ಕುಡಿಯೆಂದು ಕುಡಿಸಿ ತಾ ಕುಡಿದು ಕೈ ಚಪ್ಪಳೆಗೊಲೆದಾಡುತಿಹರು (ಪು. ೨೭೦) ಕೇವಲ ಸಸ್ಯಾಹಾರವನ್ನು ಮಾತ್ರ ಪರಿಚಯಿಸದೆ ಮಾಂಸಾಹಾರವನ್ನೂ ಪ್ರಸ್ತಾಪಿಸಲು ಅನುಕೂಲವಾದ ಸನ್ನಿವೇಶ ಮೀನಿನ ಗರ್ಭದಲ್ಲಿ ಸೇರಿದ್ದ ಪ್ರದ್ಯುಮ್ಮನನ್ನು ಗುರುತಿಸುವಲ್ಲಿ ಬರುತ್ತದೆ. ರತಿ ತನ್ನ ಗಂಡನನ್ನು ನುಂಗಿದ್ದ ಮೀನನ್ನು ಕತ್ತರಿಸಿ ಚೂರು ಮಾಡಿದಳು, ಸಂಡಿಗೆಯನ್ನು ಮಾಡಲು ಡಬ್ಬಣದಿಂದ ಚುಚ್ಚಿ ನಿಗಿನಿಗಿ ಕೆಂಡದಲ್ಲಿ ಚೆನ್ನಾಗಿ ಸುಟ್ಟಳು. ಈ ಮಾಂಸದಿಂದ ಶಂಬರಾಸುರನನ್ನು ಅವಳು ಉಪಚರಿಸಿ ಸಂತೃಪ್ತಿ ಪಡಿಸಿದಳು. ಆ ರುಚಿಕಟ್ಟಾದ ಮೀನಿನ ಊಟವನ್ನು ಮಾಡಿದ ಶಂಬರಾಸುರ, ಅಡಬಲ್ಲ ಜಾಣೆ ನಾ ಮೆಚ್ಚಿದೆ ಅದಕ್ಕೆಂದೆ ಪಡೆದಳೆ ಪವಿತ್ರತೆ ಸ್ತ್ರೀಯ ತಡಹುವದಿಲ್ಲ ನಿನ್ನಾಲಯದೊಳಗೆ ವಿಂ ಗಡವಾಗಿ ಸುಖಿಬಾಳೆಂದ || (ಪು. ೧೫೦) ಇಷ್ಟು ಸೊಗಸಾಗಿ ಅಡುಗೆ ಮಾಡಬಲ್ಲ ಸ್ತ್ರೀಯ ತಂಟೆಗೆ ಬರುವುದಿಲ್ಲ ಎಂದು ಅವನು ನುಡಿಯುತ್ತಾನೆ. 'ಮೋಹನ ತರಂಗಿಣಿ' ಜಾನಪದದ ಒಂದು ಪುಟ್ಟ ವಿಶ್ವಕೋಶ. ವ್ಯವಸಾಯ ಪದ್ಧತಿ (ಪು. ೫೨೧, ೫೮೩), ಜನಪದ ಕಥೆಗಳಲ್ಲಿ ಬರುವ ಕಲ್ಲುಗಾಣ ಮೊದಲಾದ ಶಿಕ್ಷೆಯ ವಿಧಾನಗಳು (ಪು. ೫೦೩), ವೇಷಭೂಷಣಗಳು (೪೫೭), ಶಕ್ತಿಪೂಜೆಯ ವಿಧಾನ (೨೯೮), ಮನೆಗಳ ಬಗೆಗಳು (೨೨೩೨೨೪), ಬೇಟೆಯ ವಿಧಾನಗಳು (೨೯೭) ಜೂಜಿನ ಬಗೆಗಳು (೨೯೭), ಜನಪದ ವಸ್ತು ವಿಶೇಷಗಳು (೩೭೦, ೩೮೧), ತಾಳಮದ್ದಲೆ (೩೦೦), ಅಲಂಕಾರಗಳು (೧೮೯), ಜನಪದ ದೇವತೆಗಳು (೪೦೨)-ಹೀಗೆ ಪಟ್ಟಿ ಮಾಡುತ್ತ ಹೋದರೆ ಕನಕದಾಸರು ಜನಪದ ಜೀವನ ವಿಧಾನವನ್ನು ಸೂಕ್ಷ್ಮವಾಗಿ ಬಲ್ಲವರಾಗಿದ್ದರು ಎಂಬುದು ಖಚಿತಪಡುತ್ತದೆ. ಜನಜೀವನದ ಇಷ್ಟೊಂದು