ಪುಟ:Kanakadasa darshana Vol 1 Pages 561-1028.pdf/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೪೬ ಕನಕ ಸಾಹಿತ್ಯ ದರ್ಶನ-೧ ಕನಕದಾಸರಲ್ಲಿ ಬಂಡಾಯದ ದನಿ ೭೪೭ ಒಂದು ಧ್ವನಿ ಎಂತಲೂ, ವ್ಯವಸ್ಥೆ ಎಂತಲೂ ಪರಿಭಾವಿಸುತ್ತೇವೆ. ಇದಕ್ಕೆ ಕಾರಣ ನಮ್ಮ ಬಂಡಾರು ಪರಿಕಲ್ಪನೆ ವರ್ಗ ಹೋರಾಟದ ಜೊತೆಗೆ ಸೀಮಿತಗೊಂಡಿರುವುದು. ಆದುದರಿಂದಲೆ ಅದು ಬಹಳ ತಾರ್ಕಿಕವಾದ ಮತ್ತು ಶುದ್ದ ಎಡಪಂಥೀಯ ಪದವಾಗಿ ಬಂಡಾಯದ ಧ್ವನಿ ಎತ್ತುವುದು ಸಾಧ್ಯವೆ ಆಗಲಾರದು. ಎಂದ ಮಾತ್ರಕ್ಕೆ ಕನಕದಾಸರಲ್ಲಿಯ ಬಂಡಾಯವನ್ನು ಶ್ರಮಪಟ್ಟು ಸೃಷ್ಟಿಸಿ ಇಡಬೇಕೆಂದೇನೂ ಅಲ್ಲ. ಬಂಡಾಯವೆನ್ನುವುದು ಒಂದು ಪರಂಪರೆಯೊಳಗಿನ ಪ್ರತಿಭಟನೆಯ ಸ್ವರೂಪದಿಂದ ; ಆ ಸ್ವರೂಪದ ಅವಕಾಶ, ಬೇಡಿಕೆ ಮತ್ತು ನಿರೀಕ್ಷೆಯಿಂದ ಆರಂಭವಾಗುತ್ತದೆ. ಆಗ ಮಾತ್ರ ನಾವು ಕನಕದಾಸರೇ ಆದಿಯಾಗಿ ಯಾರನ್ನಾದರೂ ಸಮಸ್ಥಿತಿಯಲ್ಲಿ ಪರೀಕ್ಷಿಸಲು ಸಾಧ್ಯವಾಗುತ್ತದೆ. ತರ್ಕವನ್ನಾಗಿ ಮೇಲು ಜಾತಿ ಜೀವನಧರ್ಮವನ್ನು ಆಹ್ವಾನಿಸಿಕೊಂಡರು. ಆ ಮೂಲಕ ತಮ್ಮ ಪ್ರಗತಿಯ ಬಂಡಾಯದ ಅಪೇಕ್ಷೆ ಪ್ರಗತಿಯೆ ಆಗಿರುವುದರಿಂದ ಅದನ್ನು ನಿರೀಕ್ಷಿಸಿದರು. ಹಾಗೆಂದು ಭಾರತೀಯ ಪ್ರಗತಿಚಲನೆಗೆ ಅವರು ಅಡ್ಡಿಯಾಗಲಿಲ್ಲ. ಹಿಂಬಡ್ತಿಯಂತೂ ಅಲ್ಲವೇ ಅಲ್ಲ, ಅದು. ಯಾಕೆಂದರೆ, ಇಪ್ಪತ್ತನೆಯ ಶತಮಾನದ ಕೊನೆಯ ಘಟ್ಟದ ಉಗ್ರ ಬಂಡಾಯಗಾರ ಅಥವಾ ಎಡಪಂಥಿಯ ಎನ್ನುವವನು ಕೂಡ ಗುಟ್ಟಿನಲ್ಲಿ 'ಭಾರತದ ಬ್ರಾಹ್ಮಣ್ಯವನ್ನು ವಿರೋಧಿಸಿ ಬದುಕಲು ಸಾಧ್ಯವಿಲ್ಲ' ಎಂದು ಪಿಸುಗುಡುವ ದುರಂತದಲ್ಲಿಯೇ ಇದ್ದಾನೆ. ವಿರೋಧವಾಗಿ ಕಂಡ ಧರ್ಮವನ್ನು ಕೂಡ ಅಂತರಂಗದಲ್ಲಿ ಆಚರಿಸುತ್ತಿದ್ದಾನೆ. ಕನಕದಾಸರು ತಮ್ಮ ಪರಿಸ್ಥಿತಿಯಲ್ಲಿ ತಮ್ಮನ್ನು ತಾವೇ ವಂಚಿಸಿ ಕೊಳ್ಳುವ ಇಂಥ ಅಕೃತ್ಯವನ್ನು ಮಾಡಲಿಲ್ಲ. ಅವರಿಗೆ ತಮ್ಮ ಮೂಲಸ್ತರದ ಸಷ ನಿರಾಕರಣೆಯ ಎದುರಿಗೆ ಪರಿಹಾರ, ಪರಾಯ ಆಗಿ ಕಂಡದ್ದು ದಾಸನಾಗುವ ಧರ್ಮ. ಅವರ ಒಳಧ್ವನಿಯಲ್ಲಿ ಕಾಗಿನೆಲೆಯಾದಿಕೇಶವರಾಯನ 'ಕರೆ' ಆದದ್ದು ಹಾಗೆ. ಕುರುಬ > ತಿಮ್ಮಪ್ಪನಾಯಕ, ಕನಕ ನಾಯಕ > ಕನಕದಾಸ ಆದದ್ದು ಈ ಬಗೆಯಲ್ಲಿ ಅವರು ನಂಬಿದ ಸಾರ್ವತ್ರಿಕತೆಗಾಗಿ, ಇದಕ್ಕೆ ವಿರುದ್ಧವಾದ ಸಂಗತಿಗಳ ಬಗ್ಗೆ ಅಥವಾ ಅಡ್ಡಿಗಳ ಬಗ್ಗೆ ಕನಕದಾಸರು ಪ್ರತಿಭಟಿಸಿದ್ದು ತನ್ನ ಈ ನಂಬಿಕೆ ಮತ್ತು ನಡವಳಿಕೆಯಲ್ಲಿಯ ದೃಢತೆಗಾಗಿ, ಕನಕದಾಸರ ಬಂಡಾಯದ ಪರಿ ಇದು. ಅವರು ಬ್ರಾಹ್ಮಣ್ಯವನ್ನು ಅಲ್ಲಗಳೆಯುವುದು, ಚಿತ್ತವನ್ನು ಹೀಯಾಳಿಸುವುದು ಬಂಡಾಯ ಅಲ್ಲ. ಅವರು ದಾಸರಾಗುವ ಮತ್ತು ತನ್ನಂತೆ ನರೆದಲಗನನ್ನು ರಾಘವತ್ವದ ಕಡೆಗೆ ಕೊಂಡೊಯ್ಯುವ ಉನ್ನತೀಕರಣದ ಅಪೇಕ್ಷೆಗಾಗಿ, ೨. ೨. ಸಾಮಂತತೆಯಿಂದ ಸಾರ್ವತ್ರಿಕತೆಗೆ ಕನಕದಾಸರು ಮೊದಲಿಗೆ ಬಂಡಾಯದ ಧ್ವನಿ ಆದದ್ದು ಸಾಮಂತತೆಯಿಂದ ಸಾರ್ವತ್ರಿಕತೆಗೆ ಬಂದಾಗ, ಅಂದರೆ, ಅವರ ಸಾಮಂತಿಕೆಯ ಅಹಂಕಾರ ಮುರಿದದ್ದು, ಸಂಪತ್ತಿನ ಹಂಚಿಕೆ ಮಾಡಿದ್ದು, ಅಲ್ಲಿಂದ ತಾವೇ ಭಾವಿಸಿಕೊಂಡಂತೆ ತನ್ನ ಸಾಮಂತಿಕೆಯ “ಅಹಂಕಾರಕ್ಕೆ ಪ್ರತಿಭಟನೆಯಾದಾಗ, ಸಾಮಂತಿಕೆ ಸೋತಾಗ ಅದರ ನಂತರ ಬದುಕಲು ಸಾಧ್ಯವಿಲ್ಲವೆನಿಸಿದಾಗ, ತಕ್ಷಣದ ಬದುಕಿನ ಪರಿಹಾರ ಇಲ್ಲದಾದಾಗ, (ಭಾರತದ ಆವರಣದಲ್ಲಿ ಸುಲಭದ ಬದುಕೊಂದು, ಎಲ್ಲದರಿಂದ ಮೈಮರೆಯುವ ಬದುಕೊಂದು ತಾನೇತಾನಾಗಿ, ಪ್ರಚ್ಛನ್ನವಾಗಿ, ತೋರಿದಾಗ) ಇದು ಪ್ರಜ್ಞಾಸ್ಥಿತಿಯಲ್ಲಿ ನಡೆದ ಪ್ರತಿಭಟನೆ. ಆದರೆ ಇಲ್ಲಿ ಅವರು ಮುಂದುವರಿಯುವ ದಾರಿಯನ್ನು ಕಂಡುಕೊಳ್ಳಲಾಗಲಿಲ್ಲ. ಇದಕ್ಕೆ ಕಾರಣ ಒಂದು, ಭಾರತೀಯ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಬರುವ ಪ್ರಾಥಮಿಕ ಮತ್ತು ಮೂಲಭೂತ ಅಡ್ಡಿ. ಅದೆಂದರೆ ತಾನು ಇರುವ ಮತ್ತು ಅನುಭವಿಸಿದ ಮಾನಸಿಕ ಚಿಂತನೆಯ ಸ್ತರದಲ್ಲಿ ತನ್ನ ಪ್ರಗತಿಯನ್ನು ಕಂಡುಕೊಳ್ಳಲು ಆಗದಿರುವುದು. ಎರಡು, ಇರುವುದರ ನಿರಾಕರಣೆ ಹಾಗೂ ಇಲ್ಲದುದರ ಕಡೆಗೆಭಾವಿಸಿಕೊಳ್ಳುವ ಆರ್ತತನ. ಭಾರತೀಯ ಜೀವನ ಮೌಲ್ಯವಾಗಿ ನಿರೂಪಿತವಾಗದ, ಜೀವನ ಕ್ರಮ ಆಗದ ನಿರ್ಬಂಧಿತ ಆವರಣ ಸೃಷ್ಟಿಯಾಗಿರುವುದು. ಕನಕದಾಸರೂ ಕೂಡ ಎಲ್ಲ ಶೂದ್ರ ಬಂಡಾಯಗಾರರಿಗೆ ಇರುವ ಪರಿಮಿತಿಯಂತೆ ತಮ್ಮ ವಾಸ್ತವದ ಆಘಾತಕ್ಕೆ ಪರಿಹಾರ ಅಥವಾ ೨. ೩. ಉನ್ನತೀಕರಣ : ಕನಕ-ಕುವೆಂಪು ; ಭಾರತೀಯತೆ ನಮ್ಮ ಬ್ರಾಹ್ಮಣ್ಯ ಸುರಸಂಬಂಧಿ, ಆದ್ದರಿಂದ ಅದು ನಮ್ಮ ಎಲ್ಲ ದೈವಾಂಶಗಳಲ್ಲಿ ಆವಿರ್ಭವಿಸುತ್ತದೆ. ಭಾರತೀಯ ಉನ್ನತಿ ಮತ್ತು ಪ್ರೌಢಿಮೆಗಳೆಲ್ಲ ದೈವಸಂಬಂಧಿ ಆಗಿರುವುದರಿಂದ ಅವು ಮೊದಲು ಬ್ರಾಹ್ಮಣ್ಯದಲ್ಲಿ ಹುಟ್ಟುತ್ತವೆ, ಹಾಗೂ ಬೆಳೆಯುತ್ತವೆ. ಆದಕಾರಣವೆ ಪ್ರತಿಭೆ, ನೈಪುಣ್ಯತೆಗಳೆಲ್ಲ ಸುರ, ಭೂಸುರ, ಭೂಪತಿ ಹಾಗೂ ಭೂಒಡೆತನದಲ್ಲಿ ಕಂಡು ಬಂದು ನಂತರದ ವರ್ಗಗಳಲ್ಲಿ ಆಕಸ್ಮಿಕವೆನಿಸಿಕೊಳ್ಳುತ್ತವೆ. ಕೆಳ ಜಾತಿಯ ಯಾವ ಪ್ರತಿಭಾವಂತನಾದರೂ ಅವನು ದೈವಾಂಶ ಉಳ್ಳವನೆಂದು ಹೇಳಿಸಿಕೊಳ್ಳದಿದ್ದರೆ, ಆರೋಪಿಸಿಕೊಳ್ಳದಿದ್ದರೆ ಅಥವಾ