ಪುಟ:Kanakadasa darshana Vol 1 Pages 561-1028.pdf/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೫೪ ಕನಕ ಸಾಹಿತ್ಯ ದರ್ಶನ-೧ ಕನಕದಾಸರಲ್ಲಿ ಬಂಡಾಯದ ದನಿ ೭೫೫ ೩. ಬತ್ತ ರಾಗಿಯನ್ನು ಕುಲಹೀನ ಶೂದ್ರಾನ್ನ ಎಂದು ಕುಚೋದ್ಯ ಮಾಡುವುದರಲ್ಲಿ ಕನಕದಾಸ ಮೇಲುವರ್ಗದವರಿಂದ ಪಡೆದ ಅನುಭವವಿದೆ.' ೪.'ರಾಗಿಯ ಮೂಲಕ ಮಾತ್ರವಲ್ಲದೆ ರಾಮನ ಬಾಯಿಯಲ್ಲಿಯೂ ಬತ್ತವನ್ನು ಅಲ್ಲಗಳೆಯಿಸುವುದರ ಮೂಲಕ ತನಗೆ ಗೊತ್ತಿಲ್ಲದೆಯೇ ಒಂದು ಬಗೆಯ ಮಾನಸಿಕ ಸಮಾಧಾನವನ್ನು ಅನುಭವಿಸಿರಬಹುದು'. ೫. 'ಮಾನವೀಯತೆಯ ಪ್ರತಿಪಾದನೆ ಈ ಕತೆಯ ಪ್ರಮುಖ ಉದ್ದೇಶವಾಗಿದೆ.' ೬...ಇಲ್ಲಿನ ಸಮಸ್ಯೆ ಕೆಳಜಾತಿ ಮೇಲುಜಾತಿ ಅಥವಾ ಶೂದ್ರ ಶೂದ್ರೇತರ ಜಾತಿಗಳ ಕಲಹಕ್ಕೆ ಸಂಬಂಧಿಸಿದ್ದು, ಮತ್ತು ಅವರ ಜೊತೆ ಜೊತೆಗೇ ಬಡವ ಶ್ರೀಮಂತರ ಹೋರಾಟಕ್ಕೂ ಕೆಳವರ್ಗದವರ ಎಚ್ಚರ ಮತ್ತು ಪ್ರತಿಭಟನೆಗೂ ಸಂಬಂಧಿಸಿದ್ದು, ಆ ದೃಷ್ಟಿಯಿಂದ 'ರಾಮಧಾನ್ಯ ಚರಿತ'ದ ಕತೆ ಸೂಕ್ಷ್ಮ ವಿಶ್ಲೇಷಣೆಗೆ ಅರ್ಹವಾದುದು.' 'ರಾಗಿಯ ಸಿಡಿಲ ಗರ್ಜನೆ ಎಚ್ಚತ್ತ ಕೆಳಜನರ ಉತ್ಸಾಹ ಕೇಕೆ ; ಹೊಸದಾಗಿ ದೊರೆತ ಸ್ಥಾನಮಾನಗಳ ವಿಜಯಘೋಷವೂ ಆಗಿದೆ.' ೩. ತಮ್ಮ ಈ ಲೇಖನ-ಅಭಿಪ್ರಾಯದ ಬಗ್ಗೆ ಹೇಳುತ್ತಾರೆ ; ೧. ಬತ್ತರಾಗಿಗಳ ಜಗಳದ ಕತೆಯಲ್ಲಿ ಆಧುನಿಕ ಕಾಲದ ಸಂಗತಿಗಳನ್ನು ಆರೋಪಿಸಿ, ವಾಸ್ತವವಾಗಿ ಇಲ್ಲದ್ದನ್ನು ಹುಡುಕುವ ಪ್ರಯತ್ನವನ್ನು ನಾನು ಇಲ್ಲಿ ಮಾಡಿಲ್ಲ. ನನ್ನ ಮೇಲಿನ ವ್ಯಾಖ್ಯಾನಕ್ಕೆ, ಕೃತಿಯಲ್ಲಿಯೇ ಸ್ಪಷ್ಟ ಸೂಚನೆಗಳಿವೆ.” ೨.“ರಾಗಿಯ ವಿಜಯ ಜನಸಾಮಾನ್ಯರ ವಿಜಯವೂ ಹೌದು.” ೩.ಹೀಗಾಗಿ 'ರಾಮಧಾನ್ಯ ಚರಿತೆ' ಕನಕದಾಸರ ಪೂರ್ಣಾಭಿವ್ಯಕ್ತಿಯ ಕೃತಿಯಾಗಿದೆ”; 'ರಾಮಧಾನ್ಯ ಚರಿತ್ರೆಯ ಸಾಮಾಜಿಕ ಧ್ವನಿ' ಡಾ: ಎಂ. ಚಿದಾನಂದ ಮೂರ್ತಿ “ಸುನಂದಾಭಿನಂದನ” ಎಂಬ ಅಭಿನಂದನ ಗ್ರಂಥದಿಂದ `ಕನಕ ಕಿರಣ' ೧೯೮೨ ಕೃತಿಗೆ ಸಂ. ಕಾ.ತ. ಚಿಕ್ಕಣ್ಣ, ಪ್ರ : ಕಾಳಿದಾಸ ಸಾಂಸ್ಕೃತಿಕ ಸಂಘ, ಬೆಂಗಳೂರು ಇವರು ಆಯ್ದುಕೊಂಡಿರುವುದರಿಂದ ಉತ ಪು. ೯೧-೧೦೦. - ಡಾ. ಎಚ್. ಜೆ. ಲಕ್ಕಪ್ಪಗೌಡರು “........ಈ ಕ್ಷೇತ್ರದಲ್ಲಿ ಕೃಷಿಮಾಡಿದ ವರು ಬಹುಮಟ್ಟಿಗೆ ಸಂಪ್ರದಾಯಶೀಲರಾದ ಪರಂಪರೆಯನ್ನು ಪ್ರಶ್ನಿಸದೆ ಒಪ್ಪಿಕೊಂಡ ನೋವು ಕಾವುಗಳಿಂದ ಸ್ಪಂದಿಸದ ಬಂಡಾಯ ದೃಷ್ಟಿಯಿಲ್ಲದ ಮೇಲುವರ್ಗದ ಜನ. ಇದಕ್ಕೆ ಒಂದೇ ಅಪವಾದ ಕನಕದಾಸರು.” “ಕನಕ ಕಿರಣ", ಪು. ೧೧೪, ೧೯೮೨ ಶ್ರೀ ಜ್ಯೋತಿ ಹೊಸೂರ “ವರ್ಗ ಸಂಘರ್ಷವನ್ನು ಪ್ರತಿಪಾದಿಸುವ ವಿಷಯವನ್ನು ಆಯ್ದುಕೊಂಡು ಕಾವ್ಯ ರಚಿಸಿದ ಇನ್ನೊಬ್ಬ ಕವಿ ಹಳಗನ್ನಡ ಕಾಲದಲ್ಲಂತೂ ನಮಗೆ ಸಿಗುವುದಿಲ್ಲ.” 'ಕನಕದಾಸ ಜೀವನ ವಿಚಾರ', ಜ್ಯೋತಿ ಹೊಸೂರ, ಪು. ೧೯, ೧೯೮೩ ಕಾ. ತ. ಚಿಕ್ಕಣ್ಣ “ಈ ಸಮಾಜಕ್ಕಾಗಿ ಸಮಾಜ ನಿರ್ಮಿತ ಅಸಮಾನತೆಗಳ ನಿರ್ಮೂಲನಕ್ಕಾಗಿ ಮಾನವ ಧರ್ಮದ ಶ್ರೇಷ್ಠತೆಗಾಗಿ ಸಹಜವಾಗಿ ಸ್ಪಂದಿಸಿದ ಕೀರ್ತನಕಾರ, ಕವಿ-ಅವರು.” ಸಂಪಾದಕನ ಮಾತು “ಕನಕಕಿರಣ' ೧೯೮೨ ಡಾ. ಹಾ. ಮಾ. ನಾಯಕ “ಶಕ್ತಿಸಂಪನ್ನವಾದ ವ್ಯಕ್ತಿತ್ವ ಸಂಪ್ರದಾಯವನ್ನು ಮೀರಿ ಬೆಳೆಯುತ್ತದೆಂಬುದಕ್ಕೆ ಕನಕದಾಸರೊಂದು ಉಜ್ವಲ ಉದಾಹರಣೆ.” ಮೆಚ್ಚು ಮಾತು 'ಕನಕಕಿರಣ' ಸಂ. ಕಾ. ತ. ಚಿಕ್ಕಣ್ಣ, ೧೯೮೨ ೩. ೪. ದೇ ಜ ಗೌ-ಚಿಮೂ, ಆಚೆ-ಈಚೆ ಈ ಮೇಲಿನ ಲೇಖಕರು ಕನಕದಾಸರ ಬಂಡಾಯಕ್ಕೆ ಕಾರಣವಾದ ಅಂಶಗಳನ್ನು ಗುರುತಿಸಿದ್ದಾರೆ; ಅವರ ಬಂಡಾಯವನ್ನಲ್ಲ. ಅದನ್ನು ಸೂಕ್ಷ್ಮವಾಗಿ ವಿವೇಚಿಸ ಹೊರಟ ಪ್ರತಿ ಲೇಖಕ ತನ್ನ ಪರಿಮಿತಿಗೆ ಒಳಗಾಗಿ ಮತ್ತೇನನ್ನೋ ಹೇಳತೊಡಗುತ್ತಾನೆ. ನನಗೂ ಆ ಪರಿಮಿತಿ ಇದ್ದೇ ಇದೆ. ಡಾ. ದೇಜಗೌ ಅವರು ಕನಕದಾಸರ ಕೃತಿ ರಾಮಧಾನ್ಯ ಚರಿತೆಯನ್ನು ಬಹಳವಾಗಿ ಇಷ್ಟಪಟ್ಟಿದ್ದಾರೆ. ಆ ಕೃತಿಯ ಮತ್ತು ಕನಕದಾಸರ ಕುರಿತ ಅಭಿಪ್ರಾಯವೇ ಸಾಕ್ಷಿ. ಇನ್ನೂ ಮುಂದೆ ಹೋಗಿ ಅವರ ಬರವಣಿಗೆಯಲ್ಲಿ ಕನಕದಾಸರ ಬಂಡಾಯವನ್ನು ವಿಸ್ತರಿಸಿದ್ದಾರೆ ಎನಿಸುತ್ತದೆ. ಇನ್ನೂ ಮುಂದೆ ಹೋದ ಡಾ. ಚಿದಾನಂದಮೂರ್ತಿಯವರು ಕನಕದಾಸರನ್ನು ತಾವು ಬದುಕುತ್ತಿರುವ ಸಮಕಾಲೀನ ಸಾಮಾಜಿಕ ಚಿಂತನೆಗಳ ಜೊತೆಗೆ ಬಹುವಾಗಿ ಸಮೀಕರಿಸಿದ್ದಾರೆ. ಕನಕದಾಸರ ಬಂಡಾಯ ಶೂದ್ರ