ಪುಟ:Kanakadasa darshana Vol 1 Pages 561-1028.pdf/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೫೬ ಕನಕ ಸಾಹಿತ್ಯ ದರ್ಶನ-೧ ಕನಕದಾಸರಲ್ಲಿ ಬಂಡಾಯದ ದನಿ ೭೫೭ 3 3 ಶೂದ್ರೇತರ ಎನ್ನುವಷ್ಟು ಸರಳವಲ್ಲ. ಕನಕದಾಸರ ಮಾತಿನ ಪ್ರತಿಭಟನೆಯಂತೆ ನಮ್ಮ ಈ ಥರದ ವಿಮರ್ಶೆ ಕೂಡ ವಿಮರ್ಶೆಯ ಬಂಡಾಯ ಆಗಿ ಬಿಡಬಹುದಾದ ಸಾಧ್ಯತೆಗಳು ಹೆಚ್ಚು ಕನಕದಾಸರ ರಾಮಧಾನ್ಯ ಚರಿತ್ರೆಯಾಗಲಿ ಅವರ ಕೆಲವು ಕೀರ್ತನೆಗಳ ಭಾಷೆ-ಭಾವ ಆಗಲಿ, ಅಷ್ಟಕ್ಕೆ ಅವರ ಬಂಡಾಯ ಸೀಮಿತವಾಗುವುದಿಲ್ಲ. ಅವರ ಒಟ್ಟು ಬದುಕೆ ; ಅವರು ಸ್ವೀಕರಿಸಿದ ಹಾಗೂ ತಿರಸ್ಕರಿಸಿದ ಒಟ್ಟು ಮೌಲ್ಯಾತ್ಮಕ ಬದುಕೇ ಬಂಡಾಯವಾಗುತ್ತದೆ. ವೇಷಧಾರಿಗಳನ್ನು ವಿರೋಧಿಸುವುದಕ್ಕಿಂತ ತಾನು ದಾಸರ ದಾಸ, ಕೀಳುದಾಸ, “ಕುನ್ನಿದಾಸ', 'ಮಾದಿಗದಾಸ' ಆಗುವ ಪರಿ ಕನಕದಾಸರು ತಮಗೆ ತಾವೇ ಒಂದು ಬಂಡಾಯದ ಪ್ರತಿಭಟನೆ ಆಗಿದ್ದಾರೆ. ಶೂದ್ರ ಸಮೂಹಕ್ಕೆ ಒಂದು ಭಯಂಕರ ಬಂಡಾಯ ಆಗಿದ್ದಾರೆ. ನಮ್ಮ-ನಿಮ್ಮೆಲ್ಲರ ಬಂಡಾಯ ಆಗಿದ್ದಾರೆ. ಬಂಡಾಯ ಮಾಡುವ, ಆ ಬಗ್ಗೆ ಮಾತನಾಡುವ, ಬರೆಯುವ ಸಂದರ್ಭದಲ್ಲಿ ಕನಕದಾಸರನ್ನು ಅಸ್ತ್ರ ಶಸ್ತ್ರವನ್ನಾಗಿ ಬಳಸಿಕೊಳ್ಳುವ ನಮ್ಮ ವ್ಯಕ್ತಿತ್ವದಲ್ಲಿ ಕನಕದಾಸರಂಥ ಅನೇಕ ಸಾಂಪ್ರದಾಯಿಕ ಬಂಡಾಯಗಾರರಿದ್ದಾರೆ ಅವರು ತಮ್ಮ ಮೂಲ ಜಾತಿಯನ್ನು ತಿರಸ್ಕರಿಸಿದಾಗ ಕೂಡ ದಾಸತ್ವವನ್ನು ಹೆಮ್ಮೆಯಿಂದ ಒಪ್ಪಿಕೊಂಡಾಗ ಕೂಡ ಅವರನ್ನು ನಮ್ಮವರೆಂದು, ನಮ್ಮ ವರ್ಗದ ಆದರ್ಶ ಪಿತೃವೆಂದು ಒಪ್ಪಿಕೊಳ್ಳುವಲ್ಲಿ ಕನಕದಾಸರು ಮತ್ತು ನಾವು ಮುಗ್ಧ ಬಂಡಾಯಗಾರರಾಗುತ್ತೇವೆ, ನಾವು ; ಬರೆಯುತ್ತಿರುವ ಜನ ಕನಕದಾಸರನ್ನು ನಮ್ಮ ಬಂಡಾಯಕ್ಕೆ ಅನ್ವಯಿಸಿಕೊಂಡರೆ ಅದೇ ನಮ್ಮ ಜನ ಅವರನ್ನು ಮಹಾತ್ಮರೆಂದು ಭಕ್ತಿಯಿಂದ ನಮಿಸುತ್ತಾರೆ. ಕನಕನ ಕಿಂಡಿಯ ಹೊರಗೆ ಅವರನ್ನು ಕಂಡಾಗ ಕೂಡ ನಮಗೆ ಏನೋ ಒಂದು ಬಗೆಯ ನೆಮ್ಮದಿ-ಸಿಟ್ಟು ಉಂಟಾಗುತ್ತದೆ. ಅವರನ್ನು ಕುರಿತು ಬರೆದು, ಆರಾಧಿಸಿ ಆಚರಿಸಿದರೆ ನಮಗೆ ನೆಮ್ಮದಿ-ಸಂತೋಷ ಆಗುತ್ತದೆ. ಈ ಅಖಂಡ ಭಾರತೀಯ ಸಂಘರ್ಷದ ಸಂದರ್ಭದಲ್ಲಿ ಕನಕದಾಸರು ಬಂಡಾಯಗಾರರು. ಅವರ ಬಂಡಾಯವನ್ನು ಅವರ ಕೃತಿಗಷ್ಟೆ ಸೀಮಿತಮಾಡಿ ಮಾತನಾಡುವುದು ಕನಕದಾಸರನ್ನು ಸರಿಯಾಗಿ ಅರ್ಥಮಾಡಿಕೊಂಡಂತೆ ಆಗುವುದಿಲ್ಲ. ೩. ೫ ರಾಗಿ-ರಾಘವ ; ಕನಕದಾಸರು ರಾಗಿ ರಾಘವನಾಗುವ ಪ್ರಕ್ರಿಯೆ ಕನಕದಾಸರ ಜೀವನ ಪ್ರಕ್ರಿಯೆಯ ಸಂಕೇತ ಎನ್ನುವುದು ಸಂದರ್ಭಕ್ಕೆ ಸೂಕ್ತವಾದ ಚಿಂತನೆ ಹೌದು. ಒಟ್ಟಾಗಿ ಕನಕದಾಸರು-ರಾಗಿ ಮತ್ತು ಅವರ ಬದುಕು ಭಾರತೀಯ ಪರಂಪರೆಯೊಳಗೆ ಸಿಡಿಸಿದ ಬಂಡಾಯಕ್ಕೆ ಸಂಕೇತವಾಗುತ್ತದೆ. ಆದಕಾರಣ ಕನಕದಾಸರ ಕೃತಿಗಳು ಅವರ ಬಂಡಾಯಕ್ಕೆ ಕೇವಲ ದಾಖಲಾದ ಉದಾಹರಣೆಗಳು. ಕನಕದಾಸರ ಸಾಹಿತ್ಯ-ಮೇಲ್ವರ್ಗದ ಒಳಕ್ಕೆ ಮಾಡುತ್ತಿರುವ ಪ್ರವೇಶವೇ ಒಂದು ಬಂಡಾಯ. ಅವರ ಬಗ್ಗೆಯ ದಂತಕಥೆಗಳು ಮತ್ತು ಆ ಸಂದರ್ಭಕ್ಕೆ ದೊರೆಯುತ್ತಿರುವ ಹೇಳಿಕೆ, ನುಡಿಗಟ್ಟು ಇತರರ ಹೇಳಿಕೆಗಳಿಂದ ಅದನ್ನು ತಿಳಿಯಬಹುದಾಗಿದೆ ಈ ಎಲ್ಲ ಸ್ಥಿತಿ-ಗತಿಗಳ ಪರಿಣಾಮವೆ 'ರಾಮಧಾನ್ಯ ಚರಿತ್ರೆ ಇಲ್ಲಿ ಬಂಡಾಯದ ಪ್ರಶ್ನೆ ಎಂದರೆ ಮಾನ್ಯತೆಯ ಪ್ರಶ್ನೆ : ಊಟದ ಪ್ರಶ್ನೆ ಅಲ್ಲ. ಕನಕದಾಸರದೂ ಇದೇ ಪ್ರಶ್ನೆಯಾಗಿತ್ತು ; ಈ ಪ್ರಶ್ನೆ-ಪರಿಹಾರದ ಪ್ರತಿಕ್ರಿಯೆಯೆ ಕಾವ್ಯ ಮೂಲ ಮತ್ತು ಸತ್ವ, ಗಮನಿಸಿ : ವೀಹಿ : ಏನೆಲವೂ ನರೆದಲೆಗೆ ನೀನು ಸಮಾನನೇಯೆನಗೆ ಕುಲಹೀನ ನೀನು ಮತಿಹೀನ ನೀನು ನಿಕಾಕೃತ ಶೂದ್ರಾನ್ನ ಬಾಹಿರ ನೀನಾವ ಮಾನ್ಯ ಅಶುಭ ಅಯೋಗ್ಯ ಭ್ರಷ್ಟ ರಾಜರಿಗೆ ಶಿಶುಗಳಿಗೆ ಬ್ರಹ್ಮನಿಗೆ ಭೂಸುರರಿಗೆ ಪುಣ್ಯಕ್ಕೆ ಸೇಸೆಗೆ ಶಾಸ್ತ್ರಕ್ಕೆ ಗಂಧಾಕ್ಷತೆಗೆ ಮಂತ್ರ-ತಂತ್ರಕ್ಕೆ