ಇವನನ್ನು ದಂಡಿಸು " ಎಂದು ಯಮದಂಡನಿಗೆ ಅಪ್ಪಣೆಮಾಡಿದನು, ಅವನು ಕಳ್ಳನನ್ನು ತನ್ನ ಜೊತೆಯಲ್ಲಿ ಮನೆಗೆ ಕರೆದುಕೊಂಡು ಹೋಗಿ, ಮಾಘಮಾಸದ ರಾತ್ರಿಯಲ್ಲಿ ಅತಿ ಶೀತದಲ್ಲಿ ಘೋರವಾದ ಮೂವತ್ತೆರಡು ಬಗೆಯ ದಂಡನೆ ಗಳಿಂದ ಬಹು ದೀರ್ಘಕಾಲ ದಂಡಿಸಿದನು. ತೊನ್ನನು ಅವಷ್ಟನ್ನೂ ಸಹಿಸಿ ಕೊಂಡು, " ನಾನು ಕಳ್ಳನಲ್ಲ. ಅಯ್ಯೋ! ಬಲ್ಲಾಳನದಿಂದ ಈ ತಳಾರನು ನನ್ನನ್ನು ಕೊಲ್ಲುತ್ತಾನೆ " ಎಂದು ಕಿರಿಚಿ ಹುಯ್ಯಲಿಟ್ಟನು. ಇಳಾರನಿಗೆ * ಇವನು ಕಳ್ಳನಲ್ಲ ' ಎಂಬ ಒಂದು ನಂಬಿಕೆಯಾಯಿತು.
ಬೆಳಗಾಗಲು ಅರಮನೆಗೆ ಹೋಗಿ ದೊರೆಯನ್ನು ಕಂಡು, ' ದೇವಾ, ಮೂವತ್ತೆರಡು ಬಗೆಯ ಘೋರದಂಡನೆಗಳಿಂದಲೂ ದಂಡಿಸಿ ನೋಡಿದೆನು. ಇವನು ಕಳ್ಳನಲ್ಲ. ನನ್ನನ್ನು ದೇವರು ಮೆಚ್ಚಿದಂತೆ ಮಾಡಬಹುದು" ಎಂದು ಬಿನ್ನಯಿಸಿವನು, ಅರಸನು, " ಯಮದಂಡನನ್ನು ಸ್ಮಶಾನದಲ್ಲಿ ಶೂಲಕ್ಕೆ ಹಾಕಿ " ಎಂದು ಆಳುಗಳಿಗೆ ಅಪ್ಪಣೆ ಮಾಡಿದನು. ಅವರು ಆತನನ್ನು ಸ್ಮಶಾ ನಕ್ಕೆ ಎಳೆದುಕೊಂಡು ಹೋಗಿ ಶೂಲದ ಮೇಲೇರಿಸಲು ಸಿದ್ದವಾದರು. ಅಷ್ಟರಲ್ಲಿ ಅವರೊಡನೆಯೇ ಹೋಗಿದ್ದ ತೊನ್ನನು ರೂಪನ್ನು ಮಾರ್ಪಡಿಸಿ ಕೊಂಡು ತನ್ನ ಸ್ವಾಭಾವಿಕವಾದ ವಿದ್ಯುಚೊರನ ದಿವ್ಯ ರೂಪವನ್ನು ತಾಳಿ ದನು. ತಾಳಿ ಯಮದಂಡನನ್ನು ಶೂಲಕ್ಕೆ ಹಾಕುವುದಕ್ಕೆ ಬಿಡದೆ ಅಡ್ಡ ನಿಂತನು. ಅರಸನ ಕಾಸಿನಾಳುಗಳನ್ನು ಕುರಿತು, " ಎಲೆ ಅಣ್ಣಗಳಿರಾ, ನೀವು ಈತನನ್ನು ಕೊ೦ದಿ. ಈತನು ಶಲದಲ್ಲಿ ಹಾಕಲ್ಪಟ್ಟವನಾಗಿ ಸತ್ತವನೇ" ಎಂದು ನುಡಿದನು.
ಬಳಿಕ ಇಳಾರನನ್ನು ಮಾತಾಡಿಸಿದನ:: ( ಎಲಾ ಯಮದಂಡಾ, ನೀನೂ ನಾನೂ ಕಿರಿತನದಲ್ಲಿ ಒಬ್ಬ ಉಪಾಧ್ಯಾಯರ ಬಳಿಯಲ್ಲಿ ಓದುತ್ತಿದ್ದಾಗ ನಂದನವನದೊಳಗೆ ನಾನು ಮಾಡಿದ ಪ್ರತಿಜ್ಞೆಯನ್ನು ನೆನೆದೆಯೋ? ಒಂದೂ ದೋಷವಿಲ್ಲದೆ ನಿನ್ನನ್ನು ಕೊಲ್ಲಿಸಿದೆನೋ, ಕೊಲ್ಲಿಸಲಿಲ್ಲವೋ? ಮಾಡಿದ ಪ್ರತಿಜ್ಞೆಯನ್ನು ನೆನೆಯುನೆಯೋ, ನೆನೆಯುವುದಿಲ್ಲವೋ?" ಎಂದನು. ಯನು ದಂಡನು " ಚೆನ್ನಾಗಿ ನೆನೆದೆನೆ "ಂದನು. ವಿದ್ಯುಚ್ಚರನು, "ಮತ್ತೀಗ ನೀನೇನು ಸತ್ಯಯೋ, ಸಾಲೆಯೋ; ಮತ್ತೆ (ನೋ?" ಎಂದನು. ಆಗ ಯಮದಂಡನು " ದೇವಾ, ನೀನು ಗೆದ್ದೆ; ನಾನು ಸೋತೆ; ಸತ್ತೆ" ಎಂದನು.