ವಿಷಯಕ್ಕೆ ಹೋಗು

ಪುಟ:Kannada Naaladi.djvu/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವ ಒ ಯದಂತೆ ರಾತ್ರಿಯಲ್ಲಿ ಒಬ್ಬೊಬ್ಬರಾಗಿ ಹೊರಟು ಹೋದರು. ಉದಯ ವಾದ ಬಳಿಕ ಅರಸನು ಆ ಮುನಿಗಳನ್ನು ಕಾಣದೆ ವ್ಯಾಕುಲಿತನಾಗಿ ಅವರ ಬಿಡಾರಗಳಲ್ಲಿ ಹುಡುಕಿ ಕಾಣದೆ ಅವರ ಪೀಠಗಳ ಕೆಳಗೆ ಒಂದೊಂದು ಪದ್ಯವನ್ನು ಬರೆದಿದ್ದ ಬೆ೦ಟಿಗಳಿದ್ದುದನ್ನು ಕಂಡನು. ಅವನ್ನು ತೆಗೆದು ಒಟ್ಟಿಗೆ ಸೇರಿಸಿ ವಿಚಾರಿಸುವಲ್ಲಿ ಒಂದಕ್ಕೊಂದು ಹೊ೦ದಿಕೆಯಿಲ್ಲದಿರುವು ದನ್ನು ಕಂಡು ಓಲೆಗಳನ್ನು ವೈಗೈ ಎಂಬ ನದಿಯಲ್ಲಿ ಹಾಕಿಬಿಡುವಂತೆ ಹೇಳಿದನು. ಬಿಸುಟು ಹಾಕಿದ ಆ ಚೇಟುಗಳೆಳಗೆ ನಾನೂರು ಇದಿರೇರಿ ದಡವನ್ನು ಸೇರಿದುವು. ಅದನ್ನು ಕಂಡು ಅರಸನು ಅವನ್ನು ಒಂದು ಗ್ರಂಥ ವಾಗಿಸಿ “ ನಾಲಡಿಯಾರ' ' ಎಂದು ಹೆಸರಿಟ್ಟನು. ಇದಿರೇರಲಾರದೆ ಹೇಗೂ ಕರೆಸೆರಿದುವನ್ನು “ ಸಳ ಮೊಳ ' ಎಂದೂ ಅನೆರಿಚ್ಛಾರಂ' ಎಂದೂ ಹೆಸರಿಟ್ಟು ಉದ್ಧರಿಸಿದನಂತೆ. ಇಂತು ಪ್ರಸಿದ್ದವಾದ ತಮಿಳ ನಾಲಡಿಯನ್ನು ಐದಾರು ವರುಷರ ಆಗೆ ಹಿಂದೆ ಭಾವ ಸೇವೆಗೆಂದು ಓದುತ್ತಿರುವಲ್ಲಿ ಪದ್ಯಗಳು ನೀತಿಯು ವಾಗಿಯೇ ನಮ್ಮ ಕನ್ನಡ ಜೈನ ಕವಿಗಳ ಮಾರ್ಗದಂತೆ ಇದ್ದುದರಿಂದ ಇದನ್ನು ಕನ್ನಡಿಸಿದರೆ ಚನ್ನಾಗಿರಬಹುದೆಂದು ತೋರಿತು. ಆದರೆ ಈ ಕಾಠ್ಯಕ್ಕೆ ಬೇಕಾದ ಉಭಯ ಭಾಷಾಪಾಂಡಿತ್ಯವೂ = ವಿತಾಶಕ್ತಿಯ ಸಾಲದೆ, ಪದ್ಯಗಳನ್ನು ಬರೆವ ಕ್ರಮವನ್ನೂ ಅರಿತುಕೊಳ್ಳಗೆ ಬೆಳ್ಳಕ್ಕರಿಗೆ ನಂತೆ ಹೊಸೆದು ದಡಪ್ರವೇಶ ಮಾಡಿದುದಾದ್ದು. * ಕೆಲವು ಪದ್ಯಗಳಲ್ಲಿ ಪೂರ್ವಾಪರಸಂಬಂಧವಿಲ್ಲ. ಅನ್ನವು ಕಷ್ಟ; ವ್ಯರ್ಥಪದಗಳು ಹೆಚ್ಚು ; ವ್ಯಾಕೃತಿಯ ಮರ್ಯಾದೆಯ ವಿಾರಿರುವುದು ' ಹೀಗೆಂದು ಹಲವು ದೋಷ ಗಳನ್ನು ತೋರಿಸಿ, ಜಾಡ್ಯವನ್ನು ಹೊಂದಿದ ಕೃತಿಗೆ ಗುಣವಾಗುವಂತೆ ಹಿತಸೂಚನೆಗಳನ್ನು ಹೇಳಿ ನೆಟ್ಟಗೆ ಬರೆವಂತೆ ಹೇಳಿದ ತೀರ್ಮಾ ವರದಾ ಚಾರ್ರ (ಮಹಾರಾಜರ ಕಾಲೇಜಿನ ಕನ್ನಡ ಮತ್ತು ಸಂಸ್ಕೃತ ಪಂಡಿತರು) 0