ವಿಷಯಕ್ಕೆ ಹೋಗು

ಪುಟ:Kannada Naaladi.djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1j ܒ2 ܩ ಮಾತುಗಳನ್ನು ಒಂದು ಕಿವಿಯಿಂದ ಕೇಳಿದೆನು. ಮತ್ತೊಮ್ಮೆ ಮತ್ತೊಂದು ಕಿವಿಯಿಂದ ತಮಿಳ ಕಾವ್ಯದ ಆಧಾರದಿಂದ ಬರೆದ ನೀತಿಮಂಜರಿಯೆಂಬ ಕಾವ್ಯದ ಒಂದೆರಡು ಪದ್ಯಗಳನ್ನೂ ಕೇಳಿದೆನು. ಇವೆರಡನ್ನೂ ಬಲ್ಲವನಿಗೆ ಅನುಕೂಲತೆಯ ಅವಕಾಶವೂ ಇದ್ದಲ್ಲಿ, ಸೊಗಸಾದ ಕಾವ್ಯವನ್ನು ಬರೆಯಲಿಕ್ಕೆ ಮಾರ್ಗವನ್ನು ಬೇರೆ ಕಲಿಯಬೇಕಾಗಿಲ್ಲ, ಆದರೆ ದೈವಗಳ ಲ್ಲವನ್ನೂ ಒಳಗೊಳ್ಳುವಂತೆ ಬರೆಯಲಿಕ್ಕಾಗದೆ ಹೋಯೆಂದು ನನಗೆ ಸತ್ತಾ ತಾಪವಾಗಿರುವುದು. ಬರೆದಿಟ್ಟು ಐದಾರು ವರ್ಷಗಳಾಗಿ ಹೋದುವು. ಪುನರವಲೋಕನದಿಂದ ಗುಣವಾದೀತೆಂದಿದ್ದರೂ ವೈದ್ಯರ ಸಹಾಯವಿಲ್ಲದುದ ರಿಂದ ಜಾಡ್ಯವು ಹೋಗಲಿಲ್ಲ. ಆದುದರಿಂದ ಪಾಠಕ ಮಹಾಶಯರು ಕೃಪೆ ಮಾಡಿ ಶುದ್ದ ಕತ್ರವನ್ನು ನೋಡಿ ಮುಂದಾಗಿ ಸರಿಮಾಡಿಕೊಂಡು ಆಮೇಲೆ ಗುಣವನ್ನು ಹುಡುಕಲಿಕ್ಕೆ ಪಂಜುಹಿಡಿದು ನೋಡಬಹುದು. ದೋಷಗಳನ್ನು ಹುಡುಕಲೇ ಬೇಡ. ಒಂದಕ್ಷರಕ್ಕೆ ಎರಡು ಮೂರಲಿಕ್ಕೂ ಸಾಕು. 10, 71, 73, 76, 77, 79, 97, 15, 107, 117, 128. 138, 145, 223, 224, 226, 231, 2:34, 237, 242, 245, 285 290, 307, 348-ಈ ಮುಂತಾದ ಪದ್ಯಗಳಲ್ಲಿ ಮಲಯರಸನಿಗೆ ಸಂಬೋಧನ ಇರುವುದರಿಂದ ಅನ್ವಯವು ಕೆಟ್ಟಿರಲಿಕ್ಕೆ ಸಾಕು ; 287 ರಲ್ಲಿ ಆರೋ ಸ್ತ್ರೀ ಯನ್ನು ಸಂಬೋಧನೆ ಮಾಡಿ ಹೇಳಿದೆ. ಮತ್ತೊಂದು ಮಾತು. ಇಂತಹ ಪ್ರಯತ್ನಕ್ಕೆ ಸಹಾಯವನ್ನು ಮಾಡಿ ಗ್ರಂಥಮಾಲೆಯಲ್ಲಿ ಮುದ್ರಿಸಲು ಅವಕಾಶವನ್ನು ಕೊಡಿಸಿದ ಶ್ರೀಮಂತ ರಾದ ಬಾಪೂ ಸುಬ್ಬರಾಯರಿಗೆ ನನ್ನ ಧನ್ಯವಾದಗಳು. - ವಿಕ್ಷನರೂ ದ್ರಾವಿಡ ಭಾಷಾಪಕ್ಷದವರೂ ಕೃಪೆಮಾಡಿ ಮ ದಿಸುವುದರೊಳಗೆ, ಹಿತಸೂಚನೆಗಳ ಕೃತ್ಯನಾಗುವೆನು. R, Tata, ತೋ