ಪುಟ:Kannadigara Karma Kathe.pdf/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

xi

ಪ್ರಸ್ತಾವನೆ

ಈವರೆಗೆ ಕನ್ನಡದಲ್ಲಿ ಪ್ರಸಿದ್ಧವಾಗಿರುವ ಕಾದಂಬರಿಗಳು ಕನ್ನಡಿಗರ ಸದ್ಗುಣಪೋಷಣಮಾಡತಕ್ಕಂಥವಿದ್ದರೂ, ಅವು ಕನ್ನಡಿಗರ ಅಭಿಮಾನಕ್ಕೆ ಆಸ್ಪದವಿಲ್ಲದಿರುವವೆಂದು ಹೇಳಬಹುದು. ಅವು ರಜಪೂತರು ಮಹಾರಾಷ್ಟರು ಮುಸಲ್ಮಾನರು ಮುಂತಾದವರ ಅಭಿಮಾನಕ್ಕೆ ಪಾತ್ರವಾದ ಕಾದಂಬರಿಗಳೇ ಇರುತ್ತದೆ. ಕನ್ನಡಿಗರ ಉಜ್ವಲ ಹಿತದ ದೃಷ್ಟಿಯಿಂದ ನೋಡಿದರೆ ಇದೊಂದು ದೊಡ್ಡ ಕೊರತೆಯೆಂದು ಹೇಳಬಹುದು. ಇನ್ನು ಕನ್ನಡಿಗರಲ್ಲಿ ಚರಿತ್ರನಾಯಕರಾದ ರಾಜರೂ, ವೀರರೂ, ಮುತ್ಸದ್ದಿಗಳೂ ಇಲ್ಲದಿದ್ದರ ಉಪಾಯವಿದ್ದಿಲ್ಲ; ಆದರೆ ಹಿಂದಕ್ಕೆ ಕರ್ನಾಟಕದಲ್ಲಿ ಚಾಲುಕ್ಯ, ಕದಂಬ, ರಾಷ್ಟ್ರಕೂಟ ಮೊದಲಾದ ಪ್ರಸಿದ್ದ ರಾಜವಂಶಗಳು ಆಗಿರುವುದನ್ನು ಇತಿಹಾಸವು ಸಾರುತ್ತಿರುವುದು. ಈಗ ಸರಾಸರಿ ಮುನ್ನೂರಾಐವತ್ತು ವರ್ಷಗಳ ಹಿಂದೆ ವಿಜಯನಗರವೆಂಬ ಜಗತ್ತಿಸಿದ್ದ ಕನ್ನಡಿಗರ ರಾಜ್ಯವು ಪರಮವೈಭವದಿಂದ ಮೆರೆಯುತ್ತಿತ್ತೆಂಬುದನ್ನು ಕನ್ನಡಿಗರೆಲ್ಲರು ಬಲ್ಲರು. ಅಂದ ಬಳಿಕ ಕನ್ನಡಿಗರ ವೈಭವಗಳನ್ನು ವ್ಯಕ್ತಪಡಿಸಿ ಕನ್ನಡಿಗರ ಔದಾಸೀನ್ಯವೂ, ಅಭಿಮಾನಶೂನ್ಯತೆಯೂ ಚೆನ್ನಾಗಿ ವ್ಯಕ್ತವಾಗುವವು.

ಈ ಕೊರತೆಯನ್ನು ಅರಿತು ನಾನು ಈಗಮೂರು ವರ್ಷಗಳ ಹಿಂದೆ "ಕುಮುದಿನಿ" ಅಥವಾ "ಬಾಲಕ್ಕೆ ಬಡಿದಾಟ" ಎಂಬ ತೀರ ಸ್ವತಂತ್ರ ಕಾದಂಬರಿಯನ್ನು ಬರೆದದ್ದು ಕನ್ನಡಿಗರ ಸ್ಮರಣದಲ್ಲಿರಬಹುದು. ಅದು ವಿಜಯನಗರದ ರಾಜ್ಯವು ನಾಶವಾದ ಬಳಿಕ ಒದಗಿದ ಆ ಅರಸುಮನೆತನದ ಒಂದು ಅಂತಃಕಲಹವನ್ನು ಕುರಿತು ಬರೆಯಲ್ಪಟ್ಟಿರುವದು. ಇದರಂತೆ ವಿಜಯನಗರದ ರಾಜ್ಯದ ನಾಶ, ಅದರ ಅತ್ಯುತ್ಕರ್ಷ, ಅದರ ಸ್ಥಾಪನೆ ಇವುಗಳನ್ನು ಕುರಿತು ಇನ್ನು ಮೂರು ಕಾದಂಬರಿಗಳನ್ನು ಬರೆಯಬೇಕೆಂದು ಆಗ ನಾನು ನಿಶ್ಚಯಿಸಿದೆನು. ಅದರಂತೆ ಈ ವರ್ಷ ವಿಜಯನಗರ ರಾಜ್ಯದ ನಾಶವನ್ನು ಕುರಿತು ಬರೆದ ಈ "ಕನ್ನಡಿಗರ ಕರ್ಮಕಥೆ" ಎಂಬ ಕಾದಂಬರಿಯು ಮುಗಿದಿರುತ್ತದೆ. ಇದು ಕುಮುದಿನಯಂತೆ ಸ್ವತಂತ್ರ ಕಾದಂಬರಿಯಾಗಿರದೆ, ಪ್ರಸಿದ್ದ ಮಹಾರಾಷ್ಟ್ರ ಕಾದಂಬರಿಕಾರರಾದ ಮ.ರಾ.ರಾ. ಹರಿ ನಾರಾಯಣ ಆಪಟೆಯವರ "ವಜ್ರಾಘಾತ"ವೆಂಬ ಕಾದಂಬರಿಯ ರೂಪಾಂತರವಾಗಿರುವದು. ಇದೇ ಮೇರೆಗೆ ಕನ್ನಡಿಗರ ಅಭಿಮಾನಾಸ್ಪದವಾದ ಇಂಥ ಇನ್ನೂ ಎರಡು ಮನೋಹರ