ಪುಟ:Mrutyunjaya.pdf/೧೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮ್ರತ್ಯುಂಜಯ ಲೋಚನೆ ನಡೆಸಿದ. "ಆದೇಶ್ ನೀಡಲಾಗಿದೆ." ಹೋಗಬೇಕೆ, ಬೇಡವೆ? ವಿವಿಧ ಅಭಿಪ್ರಾಯಗಳು : 'ಆತುರ ಸಲ್ಲದು;' 'ಪೆರೋ ನಮ್ಮ ವಿಷಯದಲ್ಲಿ ಪ್ರೀತಿ ತೋರಿಸೋದಾದ್ರೆ ಅದು ಸ್ವಾಗತಾರ್ಹ ;' ಏನಾದರೂ ಮೋಸ ಇದ್ದೀತು; 'ಮೋಸದ ಮಾತಾದರೆ ಒಂಭತ್ತು ತಿಂಗಳು ಮೀರಿ ಕಾಯಬೇಕಾಗಿತ್ತೆ?;' 'ಮುಚ್ಚುಮರೆಯ ಅಕೃತ್ಯ ನಾವೇನೂ ಮಾಡಿಲ್ಲವಲ್ಲ;' 'ಜತನದಿಂದ ಇದ್ದರೆ ಸರಿ." ಮೆನೆಪ್ ಟನೆಂದೆ: " ನಮ್ಮದು ಋಜುಮಾರ್ಗ. ಈವರೆಗೂ ಅಷ್ಟೆ. ಮುಂದೆಯೂ ಅಷ್ಟೆ. ಭಯ ಲೋಕದ ಭ್ರಮಣದಿಂದ ಏನೂ ಹಿತವಿಲ್ಲ. ನಮ್ಮ ಮಾಟ ನಮ್ಮನು ಕಾಯ್ತದೆ. ಹೋಗಿ ಬರ್‍ತೇನೆ." ಸೆಬೆಕ್ಖು ಹೇಳಿದ: " ಖೈಮ ಜೊತೆಗಿರಲಿ.” ಮೆನೆಪ್ಟಾ ಒಪ್ಪಲಿಲ್ಲ! "ಬೇಡ. ಪ್ರಾಂತದ ರಕ್ಷಣೆ ಅವನ ಹೊಣೆ.ನನ್ನನ್ನು ಬಟಾ ಬಿಟ್ಟು ಬರ್‍ತಾನೆ ನೀನೆಲ್ಲದ ವೇಳೆಯಲ್ಲಿ ఇల్లి ?" “ ಯಾಕೆ? ಸ್ನೋಫ್ರು ಇಲ್ಲವೆ? ಸೆಬೆಕ್ಖು ಇಲ್ಲವೆ? ಇಬ್ಬರಲ್ಲೊಬ್ಬರು ದಿನವೂ ರಾಜಗೃಹಕ್ಕೆ ಬಂದರಾಯ್ತು, ನಾನಿಲ್ಲ ಅಂತ ಆಡಳಿತ ನಿಲ್ಲಬೇಕೆ? ಹೆಚ್ಚೆಂದರೆ ಒಂದು ತಿಂಗಲು ಅದಷ್ಟು ಬೇಗ ಬಂದ್ಬಿಡ್ತೇನೆ." ಇಫ್‍ಯುವರ್ ಉತ್ತರ ಸಿದ್ದಗೊಳಿಸಿದ: " ಹೋರಸ್ ಸಮಾನರಾದ ಐಗುಪ್ತದ ಪೆರೋ ಮಹಾಶಯರ ಸನ್ನಿಧಿ యుల్లి ನೀರಾನೆ ಪ್ರಾಂತದ నాಯಕ ಮೆನೆಪ್ಟ ವಿಜ್ಞಾಪನೆಗಳು. ತಮ್ಮ ಸೆಡ್ ಮಹೋತ್ಸವದ ಕರೆಯೋಲೆ ತಲಪಿದೆ. ಕೃತಜ್ಞ ನಾಗಿದ್ದೇನೆ. ತಾವು ನೀಡಿರುವ ಆದೇಶದಂತೆ ರಾಜಧಾನಿಗೆ ಬರುತ್ತೇನೆ.” "ಕರೆಯೋಲೆಯೋ ಆದೇಶ. ಆದೇಶವೇ ಕರೆಯೋಲೆ. ಸರಿ, ಸರಿ," ಎಂದ ಮೆನೆಪ್ಟ.