ಪುಟ:Mrutyunjaya.pdf/೫೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ ಟೆಹುಟಿಯವರ ಯೋಧರ ಮುಖ್ಯಸ್ಥನನ್ನು ಈ ಜನ ಅವಮಾನಿಸಿದ್ದಾರೆ ಅಂತ ಕೇಳಿದ್ದೇನೆ. ಅಲ್ಲಿ ನಡೆದಿರುವ ಎಲ್ಲ ದೌರ್ಜನ್ಯಕ್ಕೂ ಈತನೇ ಮೂಲ . ಹೆಚ್ಚೇನು ಹೇಳಲಿ? ನ್ಯಾಯಮೂರ್ತಿಯವರಿಗೆ ಎಲ್ಲ ವಿಷಯ ತಿಳಿದೇ ಇದೆ "

            ಮಾತು ಮುಗಿಯುತ್ತ ಬಂದಂತೆ ನುಟ್ ಮೋಸನ ಕಂಠ ಗದ್ಗದ ವಾಯಿತು. ಕಣ್ಣುಗಳಲ್ಲಿ ಹನಿ ಆಡಿತು. ಆತ ಅಂಗೈಗಳಿಂದ ಮುಖ ಮುಚ್ಚಿಕೊಂಡು ಅತ್ತ .ಸೆತೆಕ್ ನೆಖ್ತ್, ಸೆನ್ ಉಸರ್ಟರೂ ಬೆರಳುಗಳಿಂದ ಕಣ್ಣೊರೆಸಿಕೊಂಡರು.
            ಮೆನೆಪ್ ಟಾನಿಗೆ ಮುಗುಳು ನಗೆಯನ್ನು ಹತ್ತಿಕ್ಕಲು ಆಗಲಿಲ್ಲ.
            ಕುಳಿತುಕೊಳ್ಳುವಂತೆ ಭೂಮಾಲಿಕರಿಗೆ ಸನ್ನೆ ಮಾಡಿ, ಅಮಾತ್ಯ ಮಹಾ ಅರ್ಚಕನ ಹತ್ತಿರ ವೇದಿಕೆಗೆ ಒತ್ತಿಕೊಂಡು ನಿಂತಿದ್ದ ಇನೇನಿಯತ್ತ ನೋಡಿದ. ಬಳಿಕ, ತನ್ನ ಆಸನಕ್ಕೊರಗಿ ವಿರಮಿಸುತ್ತಿದ್ದ ಅಧಿಕಾರ ಕೋಲಿನ ಬುಡವನ್ನೇ ದಿಟ್ಟಿಸುತ್ತ ನುಡಿದ:
            "ಈ ವ್ಯಕ್ತಿಯ  ವಿರುದ್ಧ ದೂರು ಕೊಟ್ಟಿರುವ ಇನ್ನೊಬ್ಬ ಪ್ರತಿಷ್ಠಿತ  ಮನುಷ್ಯ–ನೀರಾನೆ ಪ್ರಾಂತದ ದೇವಮಂದಿರದ ಅರ್ಚಕ ಅಪೆಟ್ .ಮೂಲತಃ ಈ ದೂರು ಸಲ್ಲಿಸಿರೋದು ಮಹಾ ಅರ್ಚಕರ ಸನ್ನಿಧಿಗೆ ಅದರ ಸಾರಾಂಶ ವನ್ನು ಅರಮನೆ ಮಂದಿರದ ಅರ್ಚಕ ಇನೇನಿ ಈಗ ನ್ಯಾಯಸ್ಥಾನಕ್ಕೆ ತಿಳಿಸ್ತಾರೆ.
            ಮೆನೆಪ್ ಟಾ ಕಣ್ಣುಗಳನ್ನು ಕಿರಿದುಗೊಳಿಸಿದ. ಸುಳ್ಳಿನಲ್ಲೂ ವಿಶಿಷ್ಟ ಸುಳ್ಳು.ಅಪೆಟ್ ಗೆ ಅನ್ಯಾಯವೇನು ? ಆತ ಮಹಾ ಅರ್ಚಕನಿಗೆ ದೂರು ಕಳುಹಿಸಿದ್ದು ಯಾವಾಗ ? ಯಾರ ಮಾಲಕ ?
            ಮಹಾ ಅರ್ಚಕ ಕಣ್ಣೆವೆಗಳನ್ನು ಮುಚ್ಚಿ ಕುಳಿತ. ಇನೇನಿಯ ಗಂಟಲಿ ನಿಂದ “ಪೆರೋನ ಆಯುರಾರೋಗ್ಯ ವರ್ಧಿಸಲಿ” ಎಂಬ ಘೋಷ ಹೊರಬಿದ್ದೊಡನೆ , ಎವೆಗಳನ್ನು ತುಸು ತೆರೆದು, ಇನೇನಿ-ಮೆನೆಪ್ ಟಾ-ಅಮಾತ್ಯರೆಲ್ಲರ ಮೇಲೆ ದೃಷ್ಟಿ ಹರಿಸಿದ.
            ಪರದೆಯಾಚೆ ಪೆರೋ ತನ್ನ ಪೀಠದಲ್ಲಿ ಮೈ ಸಡಿಲ ಬಿಟ್ಟು ಒರಗಿದುದು ಮೆನೆಪ್ ಟಾಗೆ ಕಾಣಿಸಿತು. ಮಹಾ ಅರ್ಚಕನಿಗೂ ನಿದ್ದೆ?