ಪುಟ:Mysore-University-Encyclopaedia-Vol-1-Part-1.pdf/೧೫೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಗ್ರೀಕ್‍ಲಿಪಿಯ ತೀಟ, ಪೈ, ಖೈ ಎಂಬ ಅಕ್ಷರಗಳನ್ನು ಬಿಟ್ಟು ಉಳಿದ ಅಕ್ಷರಗಳನ್ನು ಲ್ಯಾಟಿನ್ನಿಗೆ ಅಳವಡಿಸಿಕೊಂಡರು. ಕಾಲಕ್ರಮೇಣ ಲ್ಯಾಟಿನ್ನಿನ ಅಕ್ಷರಗಳು ಈಗಿನ ಇಂಗ್ಲಿಷ್ಲಿ ಪಿಗೆ ಸೇರಿದುವು. ಇಂಗ್ಲಿಷ್ ಭಾಷೆಯಲ್ಲಿ ವರ್ಣಮಾಲೆ (ಆಲ್ಫಬೆಟ್) ಎಂಬ ಪದ ಗ್ರೀಕರ ಆಲ್ಫ ಮತ್ತು ಬೀಟ ಎಂಬ ಎರಡು ಚಿಹ್ನೆಗಳಿಂದ ಬಂದಿದೆ. ಪ್ರಪಂಚದಲ್ಲಿರುವ ಇನ್ನೂ ಅನೇಕಾನೇಕ ಲಿಪಿಗಳು ಈ ಮೇಲೆ ನಿರೂಪಿತವಾಗಿರುವ ಒಂದಲ್ಲ ಒಂದು ಲಿಪಿಯಿಂದ ಉಗಮವಾದವುಗಳಾಗಿವೆ. (ಎ.ವಿ.ಎನ್.) ಅಕ್ಷಾಂಶ ಮತ್ತು ರೇಖಾಂಶ : ಭೂಮಿಯ ಮೇಲಿನ ಸ್ಥಳಗಳನ್ನು ಸೂಚಿಸುವ ಕೋನನಿರ್ದೇಶಕಗಳು (ಲ್ಯಾಟಿಟ್ಯೂಡ್ ಮತ್ತು ಲಾಂಜಿಟ್ಯೂಡ್). ಭೂಮಿಯ ಅಕ್ಷಕ್ಕೆ ಲಂಬವಾಗಿರುವಂತೆ, ಕೇಂದ್ರದ ಮೂಲಕ ರಚಿಸಿದ ಸಮತಳ, ಭೂಗೋಳವನ್ನು ಒಂದು ಮಹಾವೃತ್ತದಲ್ಲಿ ಛೇದಿಸುವುದು. ಇದು ಸಮಭಾಜಕ ವೃತ್ತ (ಭೂಮಧ್ಯ ರೇಖೆ: ಟೆರೆಸ್ಟ್ರಿಯಲ್ ಇಕ್ವೇಟರ್, 1ನೆಯ ಚಿತ್ರದಲ್ಲಿ ಕಿಖ). ಇದಕ್ಕೆ ಸಮಾನಾಂತರವಾಗಿ ಉತ್ತರಕ್ಕೂ ದಕ್ಷಿಣಕ್ಕೂ ಎಳೆದ ಅಲ್ಪವೃತ್ತಗಳು ಉತ್ತರ ಮತ್ತು ದಕ್ಷಿಣ ಅಕ್ಷಾಂಶ ವೃತ್ತಗಳು. ಭೂಮಿಕೇಂದ್ರ ಔ;P ಒಂದು ಸ್ಥಳ; ಸಮಭಾಜಕವೃತ್ತದ ಮೇಲೆ P ಯ ಅನುರೂಪಬಿಂದು ಖಿ ಆಗಿದ್ದರೆ ಖಿಔP ಕೋನ P ಸ್ಥಳದ ಅಕ್ಷಾಂಶ. ಆದ್ದರಿಂದ ಉತ್ತರ ಮೇರು ಮತ್ತು ದಕ್ಷಿಣ ಮೇರು (ಓ,S) ಅಕ್ಷಾಂಶಗಳು ಕ್ರಮವಾಗಿ 90º ಉ. ಮತ್ತು 90º ದ. ಯಾವುದೇ ಸ್ಥಳದ ಅಕ್ಷಾಂಶ ಇದಕ್ಕಿಂತ ಹೆಚ್ಚಾಗುವುದು ಅಸಾಧ್ಯ. ಆದ್ದರಿಂದ ಅಕ್ಷಾಂಶಗಳನ್ನು 0º ಯಿಂದ (ಸಮಭಾಜಕವೃತ್ತದ ಮೇಲಿರುವ ಸ್ಥಳಗಳು) 90º ಉ. ಅಥವಾ ದಕ್ಷಿಣದವರೆಗೆ ಸೂಚಿಸಲಾಗುವುದು. ಅಕ್ಷದ ಮೂಲಕ (ಓS ರೇಖೆ) ಸಾಗುವ ಸಮತಳಗಳು ಭೂಮಿಯನ್ನು ಮಹಾವೃತ್ತಗಳಲ್ಲಿ ಛೇದಿಸುವುವು ಮತ್ತು ಸಮಭಾಗಿಸುವುವು. ಇಂಥ ಮಹಾವೃತ್ತಗಳು ಅಸಂಖ್ಯಾತವಾಗಿವೆ. ಅವೆಲ್ಲವೂ ಸಮಭಾಜಕವೃತ್ತ ಮತ್ತು ಇತರ ಅಕ್ಷಾಂಶ ವೃತ್ತಗಳಿಗೆ ಲಂಬವಾಗಿವೆ. ಇವುಗಳ ಹೆಸರು ರೇಖಾಂಶವೃತ್ತಗಳು. ಇಂಗ್ಲೆಂಡಿನ ಗ್ರೀನಿಚ್ ಮೂಲಕ ಸಾಗುವ ರೇಖಾಂಶವೃತ್ತವನ್ನು (ಹೆಸರು ಪ್ರಧಾನ ರೇಖಾಂಶವೃತ್ತ ಓಃS ವೃತ್ತ) ಆಧಾರವಾಗಿಟ್ಟುಕೊಂಡು ಅಲ್ಲಿಂದ ಪೂರ್ವಕ್ಕೆ 0º ಯಿಂದ 180º ಮತ್ತು ಪಶ್ಚಿಮಕ್ಕೆ 0º ಯಿಂದ 180º ಗಳಾಗಿ (ಒಟ್ಟು 360º) ಭೂಗೋಳವನ್ನು ವಿಭಜಿಸಲಾಗಿದೆ. ಪ್ರಧಾನ ರೇಖಾಂಶವೃತ್ತ ಮತ್ತು P ಯ ಮೂಲಕ ಸಾಗುವ ರೇಖಾಂಶವೃತ್ತ ಇವೆರಡರ ನಡುವಣ ಕೋನ P ಸ್ಥಳದ ರೇಖಾಂಶ. ಗ್ರೀನಿಚ್‍ನಿಂದ P ಪೂರ್ವಕ್ಕೆ ಇದ್ದರೆ ಆ ರೇಖಾಂಶವನ್ನು ಪೂರ್ವ ರೇಖಾಂಶವೆಂದೂ ಪಶ್ಚಿಮಕ್ಕೆ ಇದ್ದರೆ ಪಶ್ಚಿಮ ರೇಖಾಂಶವೆಂದೂ ಹೇಳುತ್ತೇವೆ. ಃಔP ಕೋನ P ಯ ರೇಖಾಂಶ. ಹೀಗೆ ಒಂದು ಸ್ಥಳದ ಕೋನ ನಿರ್ದೇಶಕಗಳು ಏಕೈಕವಾಗಿವೆ ಮತ್ತು ಒಂದು ಜೊತೆ ಕೋನನಿರ್ದೇಶಕಗಳು ದತ್ತವಾಗಿರುವಾಗ ಅವು ಸೂಚಿಸುವ ಸ್ಥಳವೂ ಏಕೈಕವಾಗಿದೆ. ಋತುಭೇದಗಳನ್ನು ಅನುಸರಿಸಿ 23º 27| ಉತ್ತರ ಮತ್ತು ದಕ್ಷಿಣ ಅಕ್ಷಾಂಶವೃತ್ತಗಳನ್ನು ಕ್ರಮವಾಗಿ ಮಕರಸಂಕ್ರಾಂತಿ ವೃತ್ತ (ಟ್ರಾಪಿಕ್ ಆಫ್ ಕ್ಯಾಪ್ರಿಕಾರನ್) ಮತ್ತು ಕರ್ಕಾಟಕ ಸಂಕ್ರಾಂತಿ ವೃತ್ತ (ಟ್ರಾಪಿಕ್ ಆಫ್ ಕ್ಯಾನ್ಸರ್) (ಒಟ್ಟಾಗಿ ಸಂಕ್ರಾಂತಿವೃತ್ತಗಳು) ಎಂದೂ 66º 32| ಉತ್ತರ ಮತ್ತು ದಕ್ಷಿಣ ಅಕ್ಷಾಂಶವೃತ್ತಗಳನ್ನು ಉತ್ತರಮೇರುವೃತ್ತ (ಆರ್ಕ್‍ಟಿಕ್ ಸರ್ಕಲ್) ಮತ್ತು ದಕ್ಷಿಣಮೇರುವೃತ್ತ ಅಂಟಾರ್ಕ್‍ಟಿಕ್ ಸರ್ಕಲ್ - ಒಟ್ಟಾಗಿ ಮೇರುವೃತ್ತಗಳು) ಎಂದೂ ಕರೆಯಲಾಗಿದೆ. 0º ರೇಖಾಂಶವೃತ್ತದ ಮುಂದುವರಿಕೆಯೇ 180º ಪೂರ್ವ ಅಥವಾ 180º ಪಶ್ಚಿಮ ರೇಖಾಂಶವೃತ್ತ. ಒಂದು ಸ್ಥಳದ ಕೋನನಿರ್ದೇಶಕಗಳನ್ನು ಕೊಡುವಾಗ ಅಕ್ಷಾಂಶವನ್ನು ಮೊದಲೂ ರೇಖಾಂಶವನ್ನು ಅನಂತರವೂ ಹೇಳುವುದು ವಾಡಿಕೆ. ಬೆಂಗಳೂರಿನ ನಿರ್ದೇಶಕಗಳು (12º 57| ಉತ್ತರ, 77º 38| ಪೂರ್ವ) ಎಂದರೆ ಅದರ ಅಕ್ಷಾಂಶ 12º 57| ಉತ್ತರ ಎಂದೂ ರೇಖಾಂಶ 77º 38| ಪೂರ್ವ ಎಂದೂ ಅರ್ಥ. ಖಗೋಳೀಯ ಅಕ್ಷಾಂಶ ಮತ್ತು ರೇಖಾಂಶ : ನಮಗೆ ಕಾಣುವ ಆಕಾಶಗೋಳ ನಿಜವಾಗಿ ಇದೆಯೆಂದೂ ಅದರ ಕೇಂದ್ರ ಭೂಮಿಯೆಂದೂ ಭಾವಿಸುತ್ತೇವೆ. ಆಕಾಶಗೋಳದ ಹೆಸರು ಖಗೋಳ. ವೀಕ್ಷಕನ ಸುತ್ತಲೂ ಖಗೋಳ ಪೂರ್ವದಿಂದ ಪಶ್ಚಿಮಕ್ಕೆ ಪ್ರತಿ 24 ಗಂಟೆಗಳಿಗೆ ಒಂದು ಸಲ ಆವರ್ತಿಸುವುದು ಎಲ್ಲರ ಅನುಭವ. ಈ ಆವರ್ತನದ ಅಕ್ಷ ಖಗೋಳವನ್ನು ಉತ್ತರ ಮತ್ತು ದಕ್ಷಿಣ ಧ್ರುವ ಬಿಂದುಗಳಲ್ಲಿ ಸಂಧಿಸುವುದು. ಉತ್ತರ ಧ್ರುವಬಿಂದುವಿನ ಸಮೀಪವಿರುವ ಕ್ಷೀಣ ನಕ್ಷತ್ರದ (ಧ್ರುವ ನಕ್ಷತ್ರ) ಸಹಾಯದಿಂದ ಆ ಬಿಂದುವನ್ನು ಗುರುತಿಸಬಹುದು. ಖಗೋಳಾಕ್ಷಕ್ಕೆ ಲಂಬವಾಗಿರುವಂತೆ ಖಗೋಳಕೇಂದ್ರದ (ಅಂದರೆ ಭೂಮಿ) ಮೂಲಕ ರಚಿಸಿದ ಸಮತಳ, ಖಗೋಳವನ್ನು ಛೇದಿಸುವ ಮಹಾವೃತ್ತವೇ ವಿಷುವದ್ವøತ್ತ (ಸೆಲೆಸ್ಟಯಲ್ ಇಕ್ವೇಟರ್, 2ನೆಯ ಚಿತ್ರದಲ್ಲಿ ಕಿಖ.). ಭೂಮಿ ಮತ್ತು ಇತರ ಗ್ರಹಗಳು ಸೂರ್ಯನ ಸುತ್ತಲೂ ಪರಿಭ್ರಮಿಸುವ ಕಕ್ಷೆಗಳು (ಆರ್ಬಿಟ್ಸ್) ಸುಮಾರಾಗಿ ಏಕಸಮತಳೀಯವಾಗಿದೆ. ಈ ಸಮತಳ ಖಗೋಳವನ್ನು ಛೇದಿಸುವ ಮಹಾವೃತ್ತದ ಹೆಸರು ಕ್ರಾಂತಿವೃತ್ತ (ಎಕ್ಲಿಪ್ಟಿಕ್, ಅಐ). ಕ್ರಾಂತಿವೃತ್ತ ಮತ್ತು ವಿಷುವದ್ವøತ್ತಗಳ ನಡುವಿನ ಕೋನ ಸುಮಾರು 23º 27|. ಅವೆರಡೂ ್ಭ (ವಸಂತವಿಷುವದ್ಬಿಂದು ಅಥವಾ ಮೇಷಬಿಂದು) ಮತ್ತು (ಶರದವಷುವದ್ಬಿಂದು ಅಥವಾ ತುಲಾಬಿಂದು) ಎಂಬ ಎರಡು ಬಿಂದುಗಳಲ್ಲಿ ಸಂಧಿಸುತ್ತದೆ. ಏ ಮತ್ತು ಏ| ಕ್ರಾಂತಿವೃತ್ತದ ಧ್ರುವಗಳು. S ಒಂದು ಆಕಾಶಕಾಯ. ಈ ಕಾಯ ಮತ್ತು ಏ ಮೂಲಕ ಎಳೆದ ಒಂದು ಮಹಾವೃತ್ತ ಏSಒ . ಇದು ಕ್ರಾಂತಿವೃತ್ತಕ್ಕೆ (ಅಐ) ಲಂಬವಾಗಿದೆ. ಒS ಮತ್ತು ಙಒಗಳ ಕೋನಮಾನಗಳ (ಅಂದರೆ ಅವು ಭೂಮಿಯಲ್ಲಿ, ಔ ಉಂಟುಮಾಡುವ ಕೋನ) ಹೆಸರು ಕ್ರಮವಾಗಿ (Sನ) ಖಗೋಳೀಯ ಅಕ್ಷಾಂಶ, ಮತ್ತು ಖಗೋಳೀಯ ರೇಖಾಂಶ. ಕ್ರಾಂತಿವೃತ್ತದ ಉತ್ತರಕ್ಕಿರುವ ಕಾಯಗಳ ಅಕ್ಷಾಂಶಗಳನ್ನು ಉತ್ತರ