ಪುಟ:Mysore-University-Encyclopaedia-Vol-1-Part-1.pdf/೧೬೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


165

ಅಗ್ನಿ ಪರ್ವತ

ಕಡಿಮೆಯಾಗುವುದರಿಂದ,ಬಿಸಿನೀರಿನ ಊಟೆಗಳು ಅನಿಲರೂಪದ ಅಗ್ನಪರ್ವತಗಳಾಗಿಯೂ ಚಳಿಗಾಲ ಅಥಾವ ಮಳೆಗಾಲಗಳಲ್ಲಿ ಜಲಾಂಶ ಹೆಚ್ಚಾಗುವುದರಿಂದ ಅನಿಲರೂಪದ ಅಗ್ನ ಪರ್ವತಗಳು ಬಿಸಿನೀರಿನ ಊಟೆಗಳಾಗಿಯೂ ಪರಿವರ್ತನೆ ಹೊಂದುತ್ತವೆ.ಊಟೆಗಳು ಭೂಮಿಯ ಅಂತರಾಳದ ವಿಶೇಷವಾದ ಒತ್ತಡದಿಂದ ನೀರನ್ನು ನೂರಾರು ಮೀ.ಗಳ ಎತ್ತರಕ್ಕೆ ಚಿಮ್ಮುತ್ತವೆ. ಅಮೆರಿಕದ ಎಲ್ಲೋಸ್ಟೋನ್ ನ್ಯಾಷನಲ್ ಪಾರ್ಕ್ನಲ್ಲಿಯೂ ಐಸ್ಲೆಂಡ್ ಮತ್ತು ನ್ಯೂಜಿಲೆಂಡ್ ದೇಶಗಳಲ್ಲಿಯೂ ಇವನ್ನು ಹೆಚ್ಚು ಕಾಣಬಹುದು. ನೀರನ್ನು ಚಿಮ್ಮುವ ಕಾಲ ಎಡೆಬಿಡದೆ 5 ನಿಮಿಟಗಳಾದರೂ ಆಗಬಹುದು ಅಥವಾ 5 ವರ್ಷಗಳೇ ಆಗಬಹುದು. ಯೆಲ್ಲೊಸ್ಟೋನ್ ನ್ಯಾಟನಲ್ ಪಾರ್ಕಿನಲ್ಲಿರವ ಓಲ್ಡ್ ಫೆತ್ ಎಂಬುದು 66 ನಿಮಿಷಗಳಿಗೊಮ್ಮೆ ನೀರನ್ನು 30-50ಮೀ. ಎತ್ತರಕ್ಕೆ ಹೊರಚಿಮ್ಮುತ್ತದೆ. ಅಗ್ನಿಪರ್ವತಗಳ ಸ್ವರೂಪ ಅವುಗಳ ಶಿಲಾಸಂಯೋಜನೆ ಮುಂತಾದ ಅಂಶಗಳನ್ನಾದರಿಸಿ ಮೂರು ಬಗೆಯ ಅಗ್ನಿ ಪರ್ವಗಳನ್ನು ಗುರುತಿಸಲಾಗಿದೆ –ಗುರಾಣಿ ಅಗ್ನಿಪರ್ವತ, ಕಿಟ್ಟಶಂಕ, ಸಂಕೀರ್ಣ ಅಗ್ನಿ ಪರ್ವತ. ಗುರಾಣಿ ಅಗ್ನಿಪರ್ವಗಳು ಹೆಸರೇ ಸೂಚಿಸುವಮತೆ ಪೀನ ಭಾಗ ಮೇಲಿರುವಂತೆ ನೆಲದ ಮೇಲಿಟ್ಟ ಗುರಾಣಿಯನ್ನು ಹೋಲುತ್ತವೆ. ಇವುಗಳು ದಂಡಾಗಿದ್ದು ಇಳಿಜಾರು 2 -10 ಗಳನ್ನು ಸಾವಧಾನ ಇಳಿಜಾರೆನ್ನಬಹುದು. ಇಂಥ ಅಗ್ನಿಪರ್ವತಗಳು ಕಡಿಮೆ –ಸ್ನಿಗ್ಧತೆಯ ಪ್ರತ್ಯಾಮ್ಲೀಯ ಶಿಲಾರಸದ ಹರಿವನ್ನುಳ್ಳವು ಎಂದು ತಿಳಿಸುತ್ತದೆ. ತೆಳು ಹರಿವಾದ್ದರಿಂದ ವಿಶಾಲ ಕ್ಷೇತ್ರವನ್ನು ಆವರಿಸುತ್ತವೆ. ಸಾಧಾರಣ ಅಗ್ನಿಪರ್ವತಗಳಿರುವಂತೆ ಎವಕ್ಕೂ ಬಾಯಿ\ಕುಂಡ ಇರುವುದಂಟು. ಪಕ್ಕದಿಂದ ಅನೇಕ ಶಂಖಾಕೃತಿ ತೆರವುಗಳಿಂದ ಲಾವಾರಸವನ್ನು ಹೊರಹೊಮ್ಮಿಸಬಹಿದು. ಹವಾಯಿ ದ್ವೀಪದ ಕಿಲೌಯಿಯ ಅಗ್ನಪರ್ವತದ ಪಾರ್ಶ್ವ ರಂಧ್ರವೊಂದು ತೆರೆದುಕೊಂಡು 1983-86 ನಡುವೆ 250 ಮೀ.ಎತ್ತರಕ್ಕೆ ಬೆಳೆದಿತ್ತು.ಗುರಾಣಿ ಅಗ್ನಿಪರ್ವತಹಳು ಲಾವಾರಸ ಸಾಸುವ ಪ್ರಕ್ರಿಯೆಯನ್ನು ಕೆಲವೊಮ್ಮೆ ಹವಾಯಿ ಬಗೆಯ ಅಗ್ನಿಪರ್ವತ ಚಟುವಟಿಕೆ ಎನ್ನುವುದೂ ಉಂಟು.ಇವು ಸ್ಫೋಟಕ ಅಗ್ನಿಪರ್ವತಗಳಲ್ಲ.ಾದರೆ ಬುಗ್ಗೆಯಂತೆ ಲಾವಾರಸ ಉಕ್ಕಿಬರುತ್ತೆ. ಕೆಲವೊಮ್ಮೆ 400ಮೀ ಎತ್ತರಕ್ಕೆ ಚಿಮ್ಮಬಹುದು.ಬಹುತೇಕ ಇವು ಬಸಾಲ್ಟ್ ಸಂಯೋಜನೆಯ ಶಿಲಾರಸದಿಂದಾಗಿವೆ. ಸಾಗರ ಪ್ರದೇಶದಲ್ಲಿ ಈ ಬಗೆಯ ಅಗ್ನಪರ್ವತಗಳೇ ಹೆಚ್ಚು.ಹವಾಯ್ –ಐಸ್ಲೆಂಡಿನಲ್ಲಿ ಬಹುತೇಕ ಇಂತಹ ಅಗ್ನಿಪರ್ವತಗಳು ಇವೆ. ಕೆಲವೊಮ್ಮೆ ಪೂರ್ವ ಆಫ್ರಿಕದಲ್ಲಿದ್ದಂತೆ ಖಂಡದಲ್ಲೂ ನೆಲೆಯಾಗಿರಬಹುದು. ಹವಾಯ್ ದ್ವೀಪದ ಕಿಲೌಯಿಯ ಮತ್ತು ಮೌನಲೋಆ ಪ್ರಪಂಚದ ಅತಿ ದೊಡ್ಡ ಜ್ವೌಲಾಮುಖಿಗಳ ಸಾಲಿಗೆ ಸೇರುತ್ತವೆ.ಮೌನಲೋಆ ಬುಏದಲ್ಲಿ 100 ಕಿಮೀ. ಸುತ್ತಳೆಯದು ಸುತ್ತಣ ಸಾಗರ ತಳದಿಂದ3.5ಕಿಮೀ.ಮೇಲೆದ್ದಿದೆ. ಇದರ ಗಾತ್ರ 50,000 ಘನ ಕಿಮೀ.ಎನ್ನಲಾಗಿದೆ.

ಕಿಟ್ಟಶಂಕ (ಸಿಂಡ್ ರ್ ಕೋನ್): ಶೃಂಗಗಳು ಅಗ್ನಶಿಲಾ ಛಿದ್ರಗಳಿಂದ ಮೈದಳೆದಿರುವ ಅಗ್ನಿಪರ್ವತಗಳು. ರಾಶಿ ಹಾಕಿದ ಕಿಟ್ಟದಂತೆ ಕಾಣುವುದರಿಂದ ಈ ಹೆಸರು.ಅಗ್ನಿಪರ್ವತಗಳು ಸ್ಫೋಟಿಸುವಾಗ ಅಗ್ನಿಶಿಲಾಛಿದ್ರಗಳು ವಾಯುವಿನಲ್ಲಿ ತೂರಿ ಮತ್ತೆ ಪಾತವಾಗಿ ಬಾಯಿಯ ಸುತ್ತಲೂ ಸಂಚಯಿಸಿದಾಗ ಈ ಬಗೆಯ ಕಡಿದಾದ ಪಾರ್ಶ್ವಮುಖ ರಚನೆಗಳುಂಟಾಗುತ್ತವೆ. ಕೋನ 33 ಡಿಗ್ರಿವರೆಗೂ ವ್ಯತ್ಯಯವಾಗಬಹುದು.ಸಾಮಾನ್ಯವಾಗಿ ಈ ಬಗೆಯ ಅಗ್ನಿಪರ್ವತಗಳು ಗರಿಷ್ಠವೆಂದರೆ 400 ಮೀ.ಎತ್ತರಕ್ಕೇರಬಹುದು.ಆದರೆ ಬೋಗುಣಿಯಾಕಾರದ ಬಾಯಿರುವುದು ಸರ್ವೆಸಾಮಾನ್ಯ.ಕೆಲವೆಡೆ ಇದು ಸ್ವತಂತ್ರವಾಗಿ ಅಸ್ತಿತ್ವವಿರದೆ ದೊಡ್ಡ ಅಗ್ನಿಪರ್ವತದ ಕುಂಡದ ಒಳಗೆ ಅಥವಾ ಪಾರ್ಶ್ವದಲ್ಲಿ ನಿರ್ಮಿತವಾಗಿರಬಹುದು.ಹಿಂದೆ ಬಸ್ಟಾಲ್ ಶಿಲಾಹರವು ಇದ್ದ ಜಾಗದಲ್ಲಿ ಇವು ನೆಲೆಯಾಗಿರುತ್ತವೆ. ಈ ಬಗೆಯ ರಚನೆಗಳು ಅಗ್ನಿಶಿಲಾ ಚಟುವಟಿಕೆಯ ಕೊನೆಯ ಹಂತವನ್ನು ಪ್ರತಿನಿಧಿಸುತ್ತದೆ.ಕ್ಯಾಲಿಫೋರ್ನಿಯ,ಒರೆಗಾನ್ ಮತ್ತು ವಾಷಂಗ್ ಟನ್ ಬಳಿ ಇಂಥ ರಚನೆಗಳಿವೆ. ಕಿಟ್ಟಶಂಕದ ಚಟುವಟಿಕೆ ಬಲು ಹ್ರಸ್ವ.ಅಲ್ಲಿಂದ ಹೊರ ಹರಿಯುವ ಲಾವಾರಸವನ್ನು ನಿಯಂತ್ರಿಸುವುದೂ ಸಾಧ್ಯ ಸಂಕೀರ್ಣ ಅಗ್ನಿಪರ್ವತಗಳು: ಸ್ತರ ಅಗ್ನಿಪರ್ವತ ಎನ್ನುವುದು ಪರ್ಯಾಯ ಹೆಸರು ಅಗ್ನಿಶಿಲಾಛಿದ್ರಗಳು ಮತ್ತು ಲಾವಾ ಹರಿವು ಎರಡರಿಂದಲೂ ನಿರ್ಮಾಣವಾದ ರಚನೆಗಳು.ಇವೆರಡೂ ಮಧ್ಯಮ ರಾಸಾಯನಿಕ ಸಂಯೋಜನೆಯವು .ಮುಂದೆ ಶೈತ್ಯಗೊಂಡು ಆ್ಯಂಡಿಸೈಟ್ ಶಿಲೆಗಳಾಗುತ್ತವೆ.ಈ ಬಗೆಯ ಲಾವಾರಸ ಆತಿಕ್ಷಾರ ಲಾವಾರಸಕ್ಕಿಂತ ಹೆಚ್ಚು ಸ್ನಿಗ್ಧ ಅಲ್ಲದೆ ಲಹರ್ ಎಂಬ ಮಡ್ಡಿಯು ಇದರಲ್ಲಿ ಬೆರೆತಿರುತ್ತದೆ.ಕೆಲವೊಮ್ಮೆ ತೀರ ಜಾಳಾದ ಅಗ್ನಿಶಿಲಾಛಿದ್ರಗಳು ಮೇಲೆ ಮಳೆಗರೆದಾಗಲೂ ಲಹರ್ ಉಂಟಾಗಿ ಕೆಲವೆಡೆ ಕುಸಿತವಾಗಿ ಸಂಚಾರಕ್ಕೆ ತಡೆಯೊಡ್ಡಬಹುದು.ಕೊಲಂಬಿಯದಲ್ಲಿ ಈ ಬಗೆಯ ಲಹರ್ ಜಾರಿ 1985 ರಲ್ಲಿ 23,00 ಜನ ಮಡಿದರು.ಫಿಲಿಪೀನ್ಸ್ ನಪಿನತುಬೋ ಜ್ವಾಲಾಮುಖಿಯಿಂದ ಹೊರಬಂದ ಲಹರ್ ನಿಂದ 727 ಮಂದಿ 1991 ರಲ್ಲಿ ಬಲಿಯಾಗಿದ್ದರು. ಸಂಕೀರ್ಣ ಅಗ್ನಿಪರ್ವತಗಳು ಬಾಯಿಂದ ಕೆಳಗೆ ಅತಿ ಕಡಿದಾಗುತ್ತ ಬರುತ್ತದೆ. ಬಾಯಿ ವಿಶಾಲವಾಗಿದ್ದು ಅಗ್ನಿಶಿಲಾಛಿದ್ರಗಳು.ಲಾವಾ ಆಗಿಂದಾಗ್ಗಿ ಹೊರಚಿಮ್ಮುತ್ತವೆ. ವಾಷಿಂಗ್ ಟನ್ ಬಳಿಯ ಸೇಂಟ್ ಹೆಲೆನ್ಸ್ ಇದಕ್ಕೆ ಉದಾ: ಇವು ಬಹುತೇಕ ಖಂಡ ಮತ್ತು ದ್ವೀಪಚಾಪಕ್ಕೆ ಸೀಮಿತವಾಗಿವೆ.ಜಪಾನಿನ ಫ್ಯೂಜಿಯಾಮ,ಇಟಲಿಯ ವೆಸೂವಿಯಸ್ 1991 ರಲ್ಲಿ ಸ್ಫೋಟಿಸಿದಾಗ 3-5 ಘನ ಕಿಮೀ ಅಗ್ನಿ ಶಿಲಾಛಿದ್ರ ಮತ್ತು ಬೂದಿಯನ್ನು ತೂರಿ ಕಳೆದ 50 ವರ್ಷಗಳಲ್ಲಿ ಅತಿ ವಿಧ್ವಂಸಕಾರಕ ಅಗ್ನಿಪರ್ವತ ಎನ್ನಿಸಿಕೊಂಡಿತು.

ಲಾವಾಗುಮ್ಮಟ: ಅತಿ ಸ್ನಿಗ್ಧ ಲಾವಾ ಅಗ್ನಿಪರ್ವತದ ಬಾಯಿಯೊಡನೆ ಸಂಪರ್ಕ ವಿರುವ ಕೊಳವೆಗಳಲ್ಲಿ ನುಗ್ಗಿದರೆ ಮೇಲೇರಿದಂತೆ ಗುಮ್ಮಟದಂತೆ ಹರಡಿಕೊಳ್ಳಬಹುದು. ಇಂಥ ಲಾವಾರಸ ಸಾಮಾನ್ಯವಾಗಿ ಫೆಲ್ಸಿಕ್ ಸಂಯೋಜನೆಯದಾಗಿರತ್ತದೆ.ಕೆಲವೊಮ್ಮೆ ಸಂಯೋಜನೆಯ ಲಾವಾರಸವೂ ಈ ರೂಪ ತಳೆಯುವುದುಂಟು.ಈ ಕ್ರಿಯೆ ಬಲು ನಿಧಾನ ಗ್ವಾಟೆಮಾಲದ ಸಂತಮೇರಿಯ ಅಗ್ನಿಪರ್ವತದೊಳಗೆ 1992 ರಲ್ಲಿ ಮೈದಳೆದ ಲಾವಾಗುಮ್ಮಟ 500ಮೀ ಎತ್ತರ ಗಳಿಸಲು ಎರಡು ವರ್ಷಗಳೇ ಬೇಕಾದವು.ಇಂಥ ಗುಮ್ಮಟಗಳೇ ಮುಂದೆ ಸಂಕೀರ್ಣ ಅಗ್ನಿಪರ್ವತಗಳಾಗಲು ಆಕರಗಳಾಗುತ್ತವೆ. ಮತ್ತೆ ಮತ್ತೆ ಕೆರಳುವ ಅಗ್ನಿಪರ್ವತಗಳಲ್ಲಿ ಈ ಬಗೆಯ ಗುಮ್ಮಟಗಳು ನಾಶವಾಗುತ್ತಿರುತ್ತವೆ. ಕೆಲವೊಮ್ಮೆ ಒತ್ತಡ ಏರಿದಾಗ ಸ್ಪೋಟಕ್ಕೂ ಅವಕಾಶ ಕೊಡುವುದುಂಟು.ಅಗ್ನಿಶಿಲಾ ಛಿದ್ರಗಳಲ್ಲದೆ ಅನಿಲ ಹಾಗೂ ಮಿನುಗುವ ಮೋಡವೆಂದೇ ಕರೆಸಿಕೊಂಡಿರುವ ದಹಿಸುತ್ತಿರುವ ಅನಿಲಗಳೂ ಎಡೆಮಾಡಿಕೊಡುತ್ತವೆ.1902 ರಲ್ಲಿ ಇಂಥ ಮೀಡ ಮೌಂಟ್ ಪೀಲಿಯಿಂದ ಗಂಟೆಗೆ 100 ಕಿಮೀ ವೇಗದಲ್ಲಿ ಧಾವಿಸಿ ಸೇಂಟ್ ಪೀಲೇ ನಗರದ 28,000 ಜನರನ್ನು ಕೊಂದಿತು.ದಹಿಸುತ್ತಿದ್ದ ಅನಿಲ 700 ಡಿಗ್ರಿ ಉಷ್ಣತೆಯಿತ್ತು ಎಂದು ಹೇಳಲಾಗಿದೆ.