ಪುಟ:Mysore-University-Encyclopaedia-Vol-1-Part-1.pdf/೧೬೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಜ್ವಾಲಾಮುಖಿಗಳು. ಇದಕ್ಕೆ ಅಪವಾದವೆಂದರೆ ಮೌಂಟ್ ಎಟ್ನ. ಇದೊಂದು ಗುರಾಣಿ ಜ್ವಾಲಾಮುಖಿ. ಅಪಸರಣ ಫಲಕಗಳ ಗಡಿ ಖಂಡೀಯವಾಗಿರಬಹುದು ಇಲ್ಲವೇ ಸಾಗರೀಯವಾಗಿರಬಹುದು. ಮಧ್ಯಮ ಅಥವಾ ಫೆಲ್ಸಿಕ್ ಸಂಯೋಜನೆಯ ಲಾವಾ ಇದರ ವಿಶೇಷ. ಅಗ್ನಿ ಶಿಲಾಛಿದ್ರಗಳನ್ನು ಧಾರಾಳವಾಗಿ ಉತ್ಪಾದಿಸುತ್ತವೆ. ಫಿಲಿಪ್ಪೀನ್ಸ್‍ನ ಮೌಂಟ್ ಪಿನತುಬೊ, ಮಯಾನ್ ಎರಡೂ ಜ್ವಾಲಾಮುಖಿಗಳು ಸಾಗರೀಯ ಫಲಕದ ಸ್ವಾಹಾವಲಯದಲ್ಲಿ ನೆಲೆಯಾಗಿವೆ. ಹವಾಯಿ ದ್ವೀಪದ ಜ್ವಾಲಾಮುಖಿಗಳು ಅಂತರಫಲಕ ಜ್ವಾಲಾಮುಖಿ ಚಟುವಟಿಕೆಗೆ ಉದಾಹರಣೆಯಾಗಿವೆ. ಭೂಚಿಪ್ಪಿನಡಿ ಇರುವ ಬಿಸಿದಾಣಗಳ ಮೇಲೆ ಫಲಕಗಳು ಸರಿದಾಗ ಈ ಬಗೆಯ ಜ್ವಾಲಾಮುಖಿಗಳು ರೂಪುಗೊಳ್ಳುತ್ತವೆ. ಜ್ವಾಲಾಮುಖಿ ಸ್ಫೋಟಕ ಸೂಚಿ: ಭೂಕಂಪನದ ಪರಿಮಾಣವನ್ನು ಅಳೆಯಲು ರಿಕ್ಟರ್ ಮಾಪಕವಿದೆ. ತೀವ್ರತೆಯನ್ನು ಅಳೆಯಲು ಮರ್ಕಿಲಿ ಮಾಪನ ಬಳಸುತ್ತಾರೆ. ಜ್ವಾಲಾಮುಖಿಗಳ ಅಳತೆಯನ್ನು ವಿಜ್ಞಾನಿಗಳು ಒಂದು ಪಟ್ಟಿಯನ್ನು ನಿಗದಿಪಡಿಸಿದ್ದಾರೆ. ಅದು ಸ್ಫೋಟಕ ಸೂಚಿ (ವಾಲ್ಕನಿಕ್ ಎಕ್ಸ್‍ಪ್ಲೋಸಿಟಿವಿಟಿ ಇಂಡೆಕ್ಸ್ - ವಿ.ಇ.ಐ). ಜ್ವಾಲಾಮುಖಿಗಳು ಬಿಡುಗಡೆಮಾಡುವ ಶಕ್ತಿಯ ಪ್ರಮಾಣದ ಸೂಚಕ ಇದಲ್ಲ. ಬದಲಿಗೆ ಅವು ಹರಡುವ ಟಿಫ್ರಾ (ಅಗ್ನಿಶಿಲಾಛಿದ್ರಗಳ ಒಟ್ಟಾರೆ ಹೆಸರು), ಲಾವಾರಸ ಆಕ್ರಮಿಸುವ ಜಾಗದ ವೈಫಲ್ಯ ಮುಂತಾದವು ಪ್ರಧಾನವಾಗಿ ಗಣನೆಗೆ ಬರುವ ಅಂಶಗಳು. ಸ್ಫೋಟಕ ಸೂಚಿ 0ಯಿಂದ ಪ್ರಾರಂಭವಾಗಿ 8ಕ್ಕೆ ಕೊನೆಗೊಳ್ಳುತ್ತದೆ. ಅಗ್ನಿ ಪರ್ವತಗಳ ಮೇಲೆ ನಿಗ: ಅಮೆರಿಕ ಭೂ ವೈಜ್ಞಾನಿಕ ಸಮೀಕ್ಷಾ ಸಂಸ್ಥೇಯ ವರದಿಯಂತೆ ಇಂದು ಜಗತ್ತಿನಾದ್ಯಂತ ಸುಮಾರು ಐವತ್ತು ಕೋಟಿ ಮಂದಿ ಭೂ ಚಿಪ್ಪಿನ ಫಲಕಗಳ ಅಂಚಿನಲ್ಲಿ ನೆಲೆಸಿದ್ದಾರೆ. ಈ ಭಾಗದಲ್ಲಿರುವ ಅಗ್ನಿಪರ್ವತಗಳು ಅನೇಕ ಭಾರಿ ಸ್ಫೋಟಿಸಿವೆ, ಮುಂದೆಯೂ ಸ್ಫೋಟಿಸುವ ಅಪಾಯವಿದೆ. 1975-85ರ ನಡುವೆ ಸು. 370 ಅಗ್ನಿಪರ್ವತಗಳ ಚಟುವಟಿಕೆಗಳು ವರದಿಯಾದವು. ಆದರೂ ಇಟಲಿ, ಜಪಾನ್ ನ್ಯೂಜ಼ಿಲೆಂಡ್, ಕ್ಯಾಸ್ಕೇಡ್ ಶ್ರೇಣಿಯ ಅಗ್ನಿಪರ್ವತಗಳನ್ನುಳಿದರೆ ಬೇರೆಡೆ ಅವುಗಳ ಬಗ್ಗೆ ನಿಗಾ ಇಟ್ಟಿರುವ ಪ್ರಸಂಗ ಕಡಿಮೆಯೇ. ಅಗ್ನಿಪರ್ವತಗಳ ಕಾರ್ಯಚಟುವಟಿಕೆಗಳನ್ನು ನಿರಂತರವಾಗಿ ಗಮನಿಸುವ, ವೈಜ್ಞಾನಿಕ ಅಧ್ಯಯನಗಳ ಹಿನ್ನಲೆಯಲ್ಲಿ ವಿಶ್ಲೇಷಿಸುವ ಕಾರ್ಯ ಹವಾಯಿ ಅಗ್ನಿಪರ್ವತಗಳ ಮೇಲೆಯೇ ಸ್ಥಾಪಿಸಿರುವ ಅವಲೋಕನ ಕೇಂದ್ರದಲ್ಲಿ ಮಾಡಲಾಗುತ್ತಿದೆ. ಅಗ್ನಿಪರ್ವತಗಳ ಚಟುವಟಿಕೆಗೆ ಸಂಬಂಧಿಸಿದಂತೆ ಭೌತ, ರಾಸಾಯನಿಕ ಪ್ರಮಿತಿಗಳನ್ನು ಅನ್ವಯಿಸಲಾಗುತ್ತದೆ. ಭೂಮಿಯ ಆಳದಿಂದ ಲಾವಾರಸ ನುಗ್ಗಿ ಮೇಲೇರುವ ಸಂದರ್ಭದಲ್ಲಿ ಸುತ್ತಮುತ್ತಣ ಭಾಗ ಉಬ್ಬುತ್ತದೆ. ಅಲುಗು ಮಾಪಕಗಳು (ಟಿಲ್ಟ್ ಮೀಟರ್) ಇವನ್ನು ದಾಖಲಿಸಿಕೊಳ್ಳಬಲ್ಲವು. ಕ್ಷಿತೀಜೀಯ ಚಲನೆಯನ್ನು ಲೇಸರ್ ಕಿರಣ ಬಳಸಿದ ಜೀಯೋಡಿ ಮೀಟರ್ ಬಳಸಿ ಗಣನೆ ಮಾಡಬಹುದು. ಅನಿಲಗಳ ಸಂಯೋಜನೆಯ ವಿಶ್ಲೇಷಣೆ ಕೂಡ ಮುನ್ನುಡಿಯಲು ನೆರವಾಗಬಹುದು. ಅಗ್ನಿಪರ್ವತಗಳ ಸುತ್ತಮುತ್ತ ಕಾಂತೀಯ ಮತ್ತು ವಿದ್ಯುತ್ ಕ್ಷೇತ್ರಗಳ ಬದಲಾವಣೆ ಮುಂಬರುವ ಸ್ಫೋಟಕ್ಕೆ ಸೂಚನೆಯಾಗಬಹುದು. ಇದ್ದಕ್ಕಿದಂತೆ ಭೂಕಂಪನದ ಪುನರಾವರ್ತನೆ ಹೆಚ್ಚಬಹುದು. ಅದರಲ್ಲೂ ಸಂಗತ ಕಂಪನ (ಹಾರ್ಮೋನಿಕ್ ಟ್ರಮರ್) ಅಂತರಾಳದಿಂದ ಶಿಲಾಪಾಕ ಮೇಲೇರಿ ಬರುತ್ತಿರುವುದರ ಸೂಚಕ. ಹವಾಯಿ ದ್ವೀಪದ ಹಾಗೂ ಅಮೆರಿಕದ ಸೇಂಟ್ ಹಲೆನ್ ಅಗ್ನಿಪರ್ವತ ಗಳಲ್ಲಿ ಈ ಬಗೆಯ ಚಟುವಟಿಕೆಗಳು ಸರ್ವಸಾಧಾ ರಣ ಎಂಬುದನ್ನು ಅಧ್ಯಯನಗಳು ತೋರಿಸಿ ಕೊಟ್ಟಿವೆ. ಇವುಗಳ ಜೊತೆಗೆ ಆಯಾ ವಿಜ್ಞಾನವನ್ನು ವಿಶೇಷವಾಗಿ ಅನಿಲ ವಿಶ್ಲೇಷಣೆಯನ್ನು ಅಗ್ನಿಪರ್ವತ ಗಳ ಅಧ್ಯಯನಕ್ಕೆ ಯಶಸ್ವಿಯಾಗಿ ಅನ್ವಯಿಸಲಾಗು ತ್ತಿದೆ. ಲಾವಾರಸ ಉಕ್ಕುವ ಮೊದಲು ಊ2ಔ ಅಂಶ ಕಡಿಮೆಯಾಗಬಹುದು. ಅಔ, Sಔ2, ಊ2S, ಊಅಟ, ಓ2 ಹೆಚ್ಚುವುದು ಅನೇಕ ಕ್ರಿಯಾಶೀಲ ಜ್ವಾಲಾಮುಖಿ ಗಳಲ್ಲಿ ಕಂಡುಬರಬಹುದು. ಆದರೆ ಊ2 ಮತ್ತು ಔ2 ಪ್ರಮಾಣದಲ್ಲಿ ಅಂಥ ವ್ಯತ್ಯಾಸವೇನೂ ಕಂಡು ಬರುವುದಿಲ್ಲ. ಶಿಲಾಪಾಕದಲ್ಲಿ ಗಂಧಕ ಮತ್ತು ಕಾರ್ಬನ್ ಡೈ ಆಕ್ಸೈಡ್ ಅನಿಲಗಳು ಪ್ರಾರಂಭಿಕ ಹಂತದಲ್ಲಿ ಸಮೃದ್ಧವಾಗಿರುತ್ತವೆ. ಆದರೆ ಇವು ಅವಿಲೇಯ ಶಿಲಾ ಪಾಕ ಮೇಲೇರಿದಂತೆ ಅನಿಲೋತ್ಪಾಟನೆ ಕ್ರಿಯೆಯಲ್ಲಿ ಹೊರದೂಡಲ್ಪಡುತ್ತವೆ. ಆದರೆ ಹೆಚ್ಚು ವಿಲೇಯವಾದ ಹೈಡ್ರೋಕ್ಲೋರಿಕ್ ಆಮ್ಲ ಹಾಗೂ ನೀರು ಹಾಗೆಯೇ ಉಳಿದುಕೊಳ್ಳುತ್ತವೆ. ಅಗ್ನಿ ಪರ್ವತದಿಂದ ಹೊರಹೊಮ್ಮುವ ಅನಿಲಗಳನ್ನು ವಿಶ್ಲೇಷಿಸುವುದು ಈಗ ಅತ್ಯುತ್ತಮ ಫಲಿತಾಂಶ ನಿಡಿದೆ: Sಔ2:ಊಅಟ ನಿಷ್ಪತ್ತಿ ಶಿಲಾಪಾಕ ಕ್ರಿಯಾಶೀಲ ವಾಗಿರುವುದನ್ನು ತಿಳಿಸಬಲ್ಲದು. ಈಗ ಭೌಗೋಳಿಕ ಸ್ಥಾನ ನಿರ್ಧರಣಾ ವ್ಯವಸ್ಥೆ ಕೂಡ (ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್) ಕ್ರಿಯಾಶೀಲ ಅಗ್ನಿಪರ್ವತಗಳ ಸುತ್ತಮುತ್ತಣ ಜಾಗದಲ್ಲಿ ಆಗುವ ಏರಿಳಿತಗಳ ಬದಲಾವಣೆಗಳನ್ನು ಸ್ಪಷ್ಟವಾಗಿ ಸೂಚಿಸಬಲ್ಲದು. ಅಗ್ನಿಪರ್ವತಗಳಿರುವ ಕಡೆ ಮನುಷ್ಯವರ್ಗಕ್ಕೆ ವಿಪರೀತವಾದ ಪ್ರಾಣ ಮತ್ತು ಧನಹಾನಿ ಉಂಟಾಗುತ್ತದೆ. ಪ್ರಪಂಚದಲ್ಲಿ 270ಕ್ಕೂ ಹೆಚ್ಚು ಜಾಗೃತಜ್ವಾಲಾಮುಖಿಗಳಿದ್ದು, ಆಯಾ ಪ್ರದೇಶಗಳಲ್ಲಿ ಹೆಚ್ಚು ಕಡಿಮೆ ನಷ್ಟವುಂಟಾಗುತ್ತಲೇ ಇರುತ್ತದೆ. ಇಷ್ಟಾದರೂ ಮಾನವವರ್ಗಕ್ಕೆ ಇವುಗಳಿಂದ ಮತ್ತೊಂದು ರೀತಿಯಲ್ಲಿ ಉಪಯೋಗವಾಗಿದೆ. ಪ್ರಕೃತಿಯಲ್ಲಿ ದೊರೆಯುವ ಗಂಧಕ, ನವಸಾಗರ, ಬೋರಿಕ್ ಆ್ಯಸಿಡ್ ಇವು ಒದಗುವುದು ಅಗ್ನಿಪರ್ವತಗಳ ಮೂಲಕವೇ. ಇದಲ್ಲದೆ ಐಸ್ಲೆಂಡ್ ಮತ್ತು ಅಮೆರಿಕಗಳಲ್ಲಿ ಬಿಸಿನೀರಿನ ಊಟೆಗಳಿಂದ ಬರುವ ನೀರನ್ನು ಅಡುಗೆ ಮಾಡುವುದಕ್ಕೂ ಮತ್ತು ಬಟ್ಟೆ ಒಗೆಯುವುದಕ್ಕೂ ಉಪಯೋಗಿಸುತ್ತಾರೆ. ಕೆಲವು ಕಡೆ ಅತಿ ಆಳವಿಲ್ಲದ ಬಿಸಿನೀರಿನ ಊಟೆಗಳಿಂದ ಬರುವ ಆವಿಯನ್ನು ಕೈಗಾರಿಕೆಗಳಿಗೆ ಬಳಸುತ್ತಾರೆ. ಅಗ್ನಿಪರ್ವತಗಳಿಂದ ಹೊರಬರುವ ಹಬೆಯನ್ನುಪಯೋಗಿಸಿಕೊಂಡು ವಿದ್ಯುಚ್ಛಕ್ತಿ ಉತ್ಪಾದನಾಕೇಂದ್ರಗಳನ್ನು ಅಮೆರಿಕದ ಕ್ಯಾಲಿಫೋರ್ನಿಯದಲ್ಲಿ ಸ್ಥಾಪಿಸಲಾಗಿದೆ. ಇಲ್ಲಿ ಬಳಸಲಾಗುವ ತಿರುಬಾನಿ ಯಂತ್ರಗಳನ್ನು ನಡೆಸಲು ಅಗ್ನಿಪರ್ವತದಿಂದ ಹೊರ ಬರುವ ಅಧಿಕ ಉಷ್ಣದ ಅನಿಲವನ್ನೇ ಬಳಸಿಕೊಳ್ಳುತ್ತಾರೆ (ನೋಡಿ-ಲಾವಾ, ಜ್ವಾಲಾಮುಖಿಜ- ಶಿಲೆಗಳು) (ಎಂ.ಎನ್.ವಿ.) ಅಗ್ನಿಪುರಾಣ : ಸಂಸ್ಕøತದಲ್ಲಿರುವ ಹದಿನೆಂಟು ಮುಖ್ಯಪುರಾಣಗಳಲ್ಲೊಂದು. ಅಗ್ನಿದೇವತೆಯಿಂದ ವಸಿಷ್ಠಮುನಿಗೆ ಉಪದಿಷ್ಟವಾದುದೆಂದು ಪ್ರತೀತಿ. ಕಾಲ ಸುಮಾರು ಪ್ರ.ಶ. 7ನೆಯ ಶತಮಾನ. ಪ್ರಧಾನವಾಗಿ ಶೈವಮತಕ್ಕೆ ಸಂಬಂಧಪಟ್ಟ ವಿಚಾರಗಳಲ್ಲದೆ ಜಗತ್ತಿನ ಸೃಷ್ಟಿ, ಧರ್ಮಶಾಸ್ತ್ರ, ರಾಜಧರ್ಮ, ಆಯುರ್ವೇದ, ಅಲಂಕಾರ, ಛಂದಸ್ಸು ಮುಂತಾದ ಅನೇಕ ವಿಷಯಗಳನ್ನೊಳಗೊಂಡು ವಿಶ್ವಕೋಶದಂತಿದೆ. (ಬಿ.ಕೆ.ಎಸ್.) ಅಗ್ನಿಮಿತ್ರ : ಮೌರ್ಯರಿಂದ ಮಗಧರಾಜ್ಯವನ್ನು ಪ್ರ.ಶ.ಪೂ. ಸು. 187ರಲ್ಲಿ ಕಸಿದುಕೊಂಡು ಶುಂಗ ರಾಜಸಂತತಿಯನ್ನು ಸ್ಥಾಪಿಸಿ ಸು. 150ರವರೆಗೆ ಆಳಿದ ಪುಷ್ಯಮಿತ್ರನ ಮಗ. ತಂದೆಯ ಕಾಲದಲ್ಲಿ ಸಾಮ್ರಾಜ್ಯಕ್ಕೆ ಉಪರಾಜಧಾನಿಯಾಗಿದ್ದ ವಿದಿಶಾದಲ್ಲಿ ನಿಂತು