ಪುಟ:Mysore-University-Encyclopaedia-Vol-1-Part-1.pdf/೧೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿಲೆಯಲ್ಲಿ ವಿವಿಧಾಕಾರದ ಸೂಕ್ಷ್ಮ ಕಣಗಳನ್ನು ನೋಡಬಹುದು. ಇವುಗಳನ್ನು ಕ್ರಿಸ್ಟಲೈಟ್ಸ್ ಮತ್ತು ಮೈಕ್ರೊಲೈಟ್ಸ್ ಎಂದು ಹೆಸರಿಸಲಾಗಿದೆ. ಕ್ರಿಸ್ಟಲೈಟ್ಸ್‍ಗಳು ಅತೀ ಸೂಕ್ಷ್ಮ ಕಣಗಳಾಗಿದ್ದು, ಅವುಗಳು ಯಾವ ಖನಿಜ ವಿಭಾಗಕ್ಕೆ ಸೇರಿದವು ಎಂಬುದನ್ನು ಗುರುತಿಸಲು ಸಾಧ್ಯವಾಗದು. ಇವೇ ಭ್ರೂಣ ಸ್ಫಟಿಕಗಳು. ಭ್ರೂಣ ಸ್ಫಟಿಕಗಳು ವಿವಿಧಾಕೃತಿಯಲ್ಲಿರುತ್ತವೆ. ಮಣಿ ಅಥವಾ ಹನಿಗಳಂತೆ (ಗ್ಲಾಬ್ಯುಲೈಟ್), ಮಣಿಗಳ ಹಾರದಂತೆ (ಮಾರ್ಗರೈಟ್), ಸರಳು ಅಥವಾ ಸಿಲಿಂದರಾಕಾರದಂತೆ (ಲ್ಯಾಂಗುಲೈಟ್ ಅಥವಾ ಬೆಲೊನೈಟ್), ಕೂದಲೆಳೆಯಂತೆ (ಟ್ರಿಕೈಟ್), ತೆಂಗಿನಗರಿಯಾಕಾರ ಅಥವಾ ಮರದ ಕೊಂಬೆಯಂತೆ (ಸ್ಕಾಪ್ಯುಲೈಟ್) ಕಂಡುಬರಬಹುದು. ಗಾತ್ರದಲ್ಲಿ ಕ್ರಿಸ್ಟಲೈಟ್‍ಗಿಂತ ಕೊಂಚ ದೊಡ್ಡದಾಗಿದ್ದು ಹೆಚ್ಚಿನ ಸ್ಫಟಿಕಾಕೃತಿಯನ್ನು ತಳೆದಿರುವ ಸೂಕ್ಷ್ಮ ಕಣಗಳೇ ಮೈಕ್ರೋಲೈಟ್ಸ್. ಸಾಮಾನ್ಯವಾಗಿ ಮೈಕ್ರೋಲೈಟ್ಸ್ ಸೂಕ್ಷ್ಮಸರಳು ಅಥವಾ ಸೂಜಿಯಾಕಾರವನ್ನು ತಳೆದಿರುತ್ತವೆ. ಇವನ್ನು ಸೂಕ್ಷ್ಮದರ್ಶಿಯ ಮೂಲಕ ಮಾತ್ರ ಗುರುತಿಸಬಹುದು ಹಾಗೂ ಯಾವ ಖನಿಜ ವಿಭಾಗಕ್ಕೆ ಸೇರಿದವೆಂದು ಹೇಳಬಹುದು. ನೈಜಗಾಜುಶಿಲೆಗಳು ಹೆಚ್ಚುಕಾಲ ಗಾಜಾಗಿ ಉಳಿಯಲಾರವು. ಹೀಗಾಗಿ, ಗಾಜುತನ ಮಾಯವಾಗಿ ಅದರ ಬದಲಾಗಿ ಅನುಕೂಲಕರ ಸನ್ನಿವೇಶದಲ್ಲಿ ಅಲ್ಲಲ್ಲಿ ಖನಿಜಾಂಶಗಳು ಸ್ಫಟಿಕಾಕಾರವನ್ನು ತಳೆಯಲು ಪ್ರಾರಂಭಿಸುತ್ತವೆ. ಈ ಕ್ರಿಯೆಯನ್ನು ವಿಗಾಜತ್ವ ಎಂದು ಕರೆಯುತ್ತಾರೆ. ಫೆಲ್ಸೈಟ್ ಎಂಬ ಶಿಲೆಯು ಈ ರೀತಿಯಾಗಿ ಉದ್ಭವಿಸಿ ಸೂಕ್ಷ್ಮಕಣ ವಿನ್ಯಾಸ ಹೊಂದಿರುತ್ತದೆ. ಕೆಲವೊಮ್ಮೆ ಈ ವಿಗಾಜತ್ವವು ಗಾಜುಶಿಲೆಯ ಬಿರುಕುಗಳಲ್ಲಿ ಮುತ್ತಿನಮಣಿ ಆಕಾರದಲ್ಲಿ ಕಾಣಬರುತ್ತವೆ. ಇಂತಹ ಬಿರುಕುಗಳನ್ನು ಪರ್ಲಿಟಿಕ್ ಬಿರುಕುಗಳು ಎಂದು ಹೆಸರಿಸಲಾಗಿದೆ. ಶಿಲೆಯ ಖನಿಜ ಕಣಗಳನ್ನು ಬರಿಗಣ್ಣಿನಲ್ಲಿ ಅಥವಾ ಮಸೂರದ ಮೂಲಕ ವೀಕ್ಷಿಸಿದಾಗ ಸ್ಫಷ್ಟವಾಗಿ ಗೋಚರಿಸಿದಲ್ಲಿ ಆ ಶಿಲೆಯ ವಿನ್ಯಾಸವನ್ನು ಫೆನಿರಿಕ್ (Pheಟಿeಡಿiಛಿ) ಎಂದೂ ಹಾಗೆ ಗೋಚರವಾಗದಿದ್ದಲ್ಲಿ ಅಫೆನಿಂರಿಕ್ ಎಂದೂ ವಿವರಿಸುತ್ತಾರೆ. ಫೆನಿರಿಕ್ ವಿನ್ಯಾಸವುಳ್ಳ ಶಿಲೆಗಳನ್ನು ಅದರಲ್ಲಿನ ಕಣಗಳ ಗಾತ್ರಕ್ಕನುಸಾರವಾಗಿ ದಪ್ಪ ಕಣದವು (5 ಮಿಮೀಗಿಂತಲೂ ಅಧಿಕವಾಗಿರುವ), ಮಧ್ಯಮಕಣದವು (1- 5 ಮಿಮೀ ಇರುವ) ಮತ್ತು ಸೂಕ್ಷ್ಮಕಣದವು (1 ಮಿಮೀಗಿಂತಲೂ ಕಡಿಮೆಯಿರುವ) ಎಂದು ಮೂರು ವಿಧವಾಗಿ ವಿಂಗಡಿಸಬಹುದು. ಶಿಲೆಗಳಲ್ಲಿ ಖನಿಜಕಣಗಳು ಸದಾ ಸಂಪೂರ್ಣ ಸ್ಫಟಿಕಾಕಾರವನ್ನು ಹೊಂದಿರುವುದಿಲ್ಲ; ಅವುಗಳ ಆಕಾರದಲ್ಲಿ ವ್ಯತ್ಯಾಸಗಳು ಕಂಡುಬರುತ್ತವೆ. ಖನಿಜಕಣಗಳು ಸಂಪೂರ್ಣ ಸ್ಫಟಿಕ ರೂಪವನ್ನು ತಳೆದಿದ್ದಲ್ಲಿ ಪೂರ್ಣಾಕೃತಿ (ಯೂಹೀಡುಲ್) ಎಂದೂ, ಸಾಧಾರಣ ಸ್ಫಟಿಕಾಕೃತಿಯನ್ನು ಹೊಂದಿದ್ದಲ್ಲಿ ಮಿತಾಕೃತಿ (subheಜಡಿಚಿಟ) ಮತ್ತು ನಿರಾಕಾರವಾಗಿದ್ದಲ್ಲಿ ನಿರಾಕೃತಿ (ಚಿಟಿheಜಡಿಚಿಟ) ಎಂದೂ ವಿವರಿಸಲಾಗುತ್ತದೆ. ಅಗ್ನಿಶಿಲೆಗಳಲ್ಲಿನ ಕಣಗಳ ಪರಸ್ಫರ ಸಂಬಂಧ, ಆಕಾರ, ಗಾತ್ರ ಮತ್ತು ಸ್ಫಟಿಕತೆಗಳ ಆಧಾರದ ಮೇಲೆ ಈ ಕೆಳಕಂಡ ಬಗೆಯ ಶಿಲಾವಿನ್ಯಾಸ ಅಥವಾ ರಚನೆಯನ್ನು ಗುರುತಿಸಲಾಗಿದೆ. ಸಮಕಣ ರಚನೆ: ಶಿಲೆಯಲ್ಲಿನ ಎಲ್ಲ ಕಣಗಳು ಹೆಚ್ಚು ಕಡಿಮೆ ಸಮ ಗಾತ್ರದವಾಗಿರುತ್ತವೆ. ಸಮಕಣ ರಚನೆಯಲ್ಲಿನ ಶಿಲೆಯ ಬಹುತೇಕ ಕಣಗಳು ಪೂರ್ಣಾಕೃತಿಯನ್ನು ತಳೆದಿದ್ದರೆ, ಅಂತಹವುಗಳನ್ನು ಪ್ಯಾನಿಡೆಯೋಮಾರ್ಫಿಕ್ ರಚನೆ ಎಂತಲೂ ಮಿತಕೃತಿಯನ್ನು ಹೊಂದಿದ್ದರೆ, ಹೈಪಿಡಿಯೋಮಾರ್ಫಿಕ್ ರಚನೆ ಎಂದೂ ಮತ್ತು ನಿರಾಕೃತಿಯಿಂದ ಕೂಡಿದ ಸಮಕಣ ರಚನೆಯನ್ನು ಅಲೋಟ್ರಿಯೋಮಾರ್ಫಿಕ್ ರಚನೆ ಎಂತಲೂ ವಿವರಿಸಬಹುದು. ಸಮಕಣ ರಚನೆಯು ಸಾಮಾನ್ಯವಾಗಿ ಅಂತಸ್ಥ ಶಿಲೆಗಳಲ್ಲಿ ಕಾಣಬಹುದು. ಅಲ್ಲದೆ, ಈ ರಚನೆಯನ್ನು ಮಧ್ಯಸ್ಥ ಮತ್ತು ಬಾಹ್ಯಸ್ಥ ಶಿಲೆಗಳಲ್ಲೂ ಕಾಣಬಹುದು, ಆದರೆ ಈ ಶಿಲೆಗಳಲ್ಲಿನ ಕಣಗಳ ಗಾತ್ರ ಚಿಕ್ಕದು. ಅಸಮಕಣ ರಚನೆ: ಶಿಲೆಯ ಖನಿಜ ಘಟಕಗಳ ಗಾತ್ರದಲ್ಲಿ ಸಾಕಷ್ಟು ವ್ಯತ್ಯಾಸಗಳಿದ್ದಲ್ಲಿ ಅಸಮಕಣ ರಚನೆ ರೂಪುಗೊಳ್ಳುತ್ತದೆ. ಅಂದರೆ ಶಿಲೆಯಲ್ಲಿನ ಕೆಲವು ಕಣಗಳು ದೊಡ್ಡದಾಗಿದ್ದು ಮತ್ತೆ ಕೆಲವು ಚಿಕ್ಕದಾಗಿರುತ್ತವೆ. ಕೆಲವೊಮ್ಮೆ ಕಣಗಳ ಗಾತ್ರದಲ್ಲಿ ಅನುಕ್ರಮ ವ್ಯತ್ಯಾಸಗಳು ಕಂಡುಬರುತ್ತವೆ. ಇದೊಂದು ವಿಶೇಷ ಬಗೆಯ ಅಸಮಕಣ ರಚನೆ ಆಗಿದ್ದು ಇದನ್ನು ಅನುಕ್ರಮ ರಚನೆ ಎಂದು ಹೆಸರಿಸಲಾಗಿದೆ. ಅಸಮಕಣ ರಚನೆಯಲ್ಲಿ ಮುಖ್ಯವಾಗಿ 2 ಬಗೆಯ ರಚನೆಯನ್ನು ಗುರುತಿಸಬಹುದು. ಪಾರ್ಫಿರಿಟಿಕ್ ರಚನೆ ಎಂಬ ಒಂದು ಬಗೆಯ ಅಸಮಕಣ ರಚನೆಯಲ್ಲಿ, ದೊಡ್ಡ ದೊಡ್ಡ ಹರಳುಗಳು ಸೂಕ್ಷ್ಮಕಣಗಳಿಂದಾದ ಮಾತೃಕೆಯಲ್ಲಿ ಅಲ್ಲಲ್ಲೆ ಕಂಡುಬರುತ್ತವೆ. ಈ ರಚನೆಗೆ ಶಿಲಾದ್ರವವು ಎರಡು ಸನ್ನಿವೇಶದಲ್ಲಿ ಸ್ಫಟಿಕೀಕರಣಗೊಂಡಿರುವುದೇ ಮುಖ್ಯ ಕಾರಣ. ದೊಡ್ಡ ಹರಳುಗಳು ಮೊದಲ ಸ್ಫಟಿಕೀಕರಣ ಸನ್ನಿವೇಶದಲ್ಲಿ ಬೆಳೆವಣಿಗೆ ಪ್ರಾರಂಭಿಸಿ, ಅದರ ಬೆಳೆವಣಿಗೆಯು ಎರಡನೆಯ ಸ್ಫಟಿಕೀಕರಣ ಸನ್ನಿವೇಶದಲ್ಲೂ ಮುಂದುವರೆದು ದೊಡ್ಡ ಗಾತ್ರವನ್ನು ಪಡೆಯುತ್ತದೆ. ಇದರಿಂದಾಗಿ, ಫಿನೋಕ್ರಿಸ್ಟ್ (ಬೃಹತ್ ಸ್ಫಟಿಕಗಳು) ನಲ್ಲಿ ಅನೇಕ ವೇಳೆ ವಿವಿಧ ಮಂಡಲಗಳಿರವ ಸಾಧ್ಯತೆಗಳಿರುತ್ತವೆ (ಉದಾ: ಪ್ಲೇಜಿಯೊಕ್ಲೆಸ್ ನಲ್ಲಿರುವ ಮಂಡಲಗಳು). ಆದರೆ, ಸೂಕ್ಷ್ಮಕಣಗಳು ಎರಡನೆಯ ಸ್ಫಟಿಕೀಕರಣದಲ್ಲಿ ಮಾತ್ರ ಬೆಳೆದು ಮಾತೃಕೆಯಾಗಿರುತ್ತದೆ. ದೊಡ್ಡ ಹರಳುಗಳನ್ನು ಫಿನೋಕ್ರಿಸ್ಟ್ ಎಂದು ಕರೆಯುತ್ತಾರೆ. ಮಾತೃಕೆಯು ಕೆಲವೊಮ್ಮೆ ಗಾಜಿನಂತಿರಬಹುದು (ವಿಟ್ರೋಫಿರಿಕ್), ಅಸ್ಫಷ್ಟ ಸೂಕ್ಷ್ಮಕಣಗಳಿಂದ ಕೂಡಿರಬಹುದು (ಫೆಲ್ಸೋಫಿರಿಕ್) ಅಥವಾ ಸಣ್ಣಕಣಗಳ ಖನಿಜಗಳಿಂದ ಕೂಡಿರಬಹುದು. ಪಾಯ್ಕಿಲಿಟಿಕ್ ಎಂಬ ಇನ್ನೊಂದು ಬಗೆಯ ಅಸಮಕಣ ರಚನೆಯು ಪಾರ್ಫಿರಿಟಿಕ್ ರಚನೆಗೆ ವಿರುದ್ಧವಾದುದು. ಶಿಲೆಯ ದೊಡ್ಡ ಖನಿಜದ ಹರಳಿನಲ್ಲಿ ಇತರ ಖನಿಜದ ಸಣ್ಣ ಸಣ್ಣ ಹರಳುಗಳು ಅಡಕವಾಗಿರುತ್ತವೆ. ಬೃಹತ್ ಹರಳುಗಳನ್ನು ಆಯ್ಕೊಕ್ರಿಸ್ಟ್ಸ್ (oiಞoಛಿಡಿಥಿsಣs) ಅಥವಾ ಆತಿಥೇಯ ಖನಿಜ ಎಂತಲೂ ಅದರಲ್ಲಿರುವ ಸಣ್ಣ ಖನಿಜ ಕಣಗಳನ್ನು ಕ್ಯಾಡೊಕ್ರಿಸ್ಟ್ಸ್ ಎಂತಲೂ ಕರೆಯುತ್ತಾರೆ. ಓಫಿಟಿಕ್ ವಿನ್ಯಾಸ: ಈ ರಚನೆಯನ್ನು ಡಾಲರೈಟ್ ಎಂಬ ಡೈಕ್ ಶಿಲೆಯಲ್ಲಿ ಸಾಮಾನ್ಯವಾಗಿ ಕಾಣುವುದರಿಂದ ಇದನ್ನು ಡಾಲೆರಿಟಿಕ್ ರಚನೆ ಎಂತಲೂ ಕರೆಯುತ್ತಾರೆ. ಈ ರಚನೆಯಲ್ಲಿ ಆಗೈಟ್ ಖನಿಜದ ದೊಡ್ಡ ಹರಳುಗಳನ್ನು ಪಟ್ಟಿಯಾಕಾರದ ಸಣ್ಣ ಸಣ್ಣ ಪ್ಲೇಜಿಯೊಕ್ಲೆಸ್‍ಗಳು ನಾನಾ ರೀತಿಯಲ್ಲಿ ಛೇದಿಸಿರುತ್ತವೆ. ಈ ಎರಡು ಖನಿಜಗಳ ಗಾತ್ರದಲ್ಲಿ ಹೆಚ್ಚು ವ್ಯತ್ಯಾಸ ಇಲ್ಲದಿದ್ದರೆ, ಅಂತಹ ರಚನೆಯನ್ನು ಸಬ್-ಓಫಿಟಿಕ್ ವಿನ್ಯಾಸವೆಂದು ಕರೆಯುತ್ತಾರೆ. ಬಸಾಲ್ಟ್ ವಿನ್ಯಾಸ: ಇದರಲ್ಲಿ ಎರಡು ಪ್ರಮುಖ ವಿಧಗಳು; ಇಂಟರ್ ಸರ್ಟಲ್ ಮತ್ತು ಇಂಟರ್ ಗ್ರಾನ್ಯುಲಾರ್. ಇವೆರಡನ್ನು ಬಾಹ್ಯಸ್ಥ ಶಿಲೆಯಾದ ಬೆಸಾಲ್ಟ್‍ನಲ್ಲಿ ವಿಶಿಷ್ಟವಾಗಿ ಗುರುತಿಸಬಹುದು. ಆದ್ದರಿಂದಲೇ, ಇದನ್ನು ಬಸಾಲ್ಟಿಕ್ ವಿನ್ಯಾಸವೆಂದೇ ಕರೆಯುತ್ತಾರೆ. ಈ ವಿನ್ಯಾಸದಲ್ಲಿ ಬಸಾಲ್ಟ್‍ನ ಪ್ರಧಾನ ಖನಿಜಗಳಾದ ಮೂರು ಅಥವಾ ಹೆಚ್ಚಿನ ಪ್ಲೇಜಿಯೊಕ್ಲೇಸ್‍ನ ಪಟ್ಟಕಗಳು ಒಂದರೊಡನೊಂದು ಸೇರಿ ವಿವಿಧ ಚೌಕಟ್ಟನ್ನು ರಚಿಸಿ, ಆ ಚೌಕಟ್ಟುಗಳ ಒಳಗೆ ಆಗೈಟ್, ಆಲಿವಿನ್ ಇತ್ಯಾದಿ ಖನಿಜಗಳ ಸೂಕ್ಷ್ಮಕಣಗಳು