ಪುಟ:Mysore-University-Encyclopaedia-Vol-1-Part-1.pdf/೧೮೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


-189-


ಅಜಂತದೊಡ್ಡ ಪಠ್ಯ

ಬೆಳೆದು ಮೃಗಪಕ್ಷಿಗಳ ಆವಾಸಸ್ಥಾನವಾಗಿ ಮಾನವ ಸ್ಕ್ರತಿಗೋಚರದಿಂದ ಮರೆಯಾಯಿತು ಇವು ಪ್ರ.ಶ.19 ನೆಯ ಶತಮಾನದ ಪೂರ್ವಾರ್ಧದಲ್ಲಿ ಆಂಗ್ಲ ವಿದ್ವಾಂಸರ ಗಮನಕ್ಕೆ ಬಂದು ಅವರಲ್ಲಿ ವಿಸ್ಮಯವನ್ನೂ ಕುತೂಹಲವನ್ನೂ ಕೆರಳಿಸಿ ನಮ್ಮ ನಾಡಿನ ಹಾಗೂ ಪ್ರಪಂಚದ ಕಲಾತಜ್ಞರ ಗಮನವನ್ನು ಅತ್ತ ಸೆಳೆದುವು.ಅಜಂತದಲ್ಲಿ ಒಟ್ಟು 30 ಗುಹಾಂತರ್ದೇವಾಲಯಗಳಿವೆ.ಅನೇಕ ಗುಹಾಲಯಗಳಲ್ಲಿ ಕಾಲ ಮತ್ತು ಪ್ರಕೃತಿಯ ಹೊಡೆತದಿಂದ ಚಿತ್ರಗಳು ನಾಶವಾಗಿವೆ.ಆದಾಗ್ಗ್ಯ ಅವುಗಳ ಭವ್ಯಕಲ್ಪನೆಯನ್ನು ಚಿತ್ರಿಸಿಕೊಳ್ಳಲು ಎಡೆಯಿದೆ.ಪಳೆಯುಳಿದೆಗಳನ್ನು ಇತ್ತೀಚೆಗೆ ಉದ್ದಾರಮಾಡಿ ಕಾಪಾಡಿಕೊಂಡು ಬರುವ ಏರ್ಪಾಡು ಮಾಡಲಾಗಿದೆ.ಹಾಳಾಗಿರುವ ಭಾಗಗಳ ಪಡಿಯಚ್ಚು ಮಾಡಿಕೊಳ್ಳಲಾಗಿದೆ. ಇವುಗಳಲ್ಲಿ 16ನೆಯ ಗುಹಾಲಯ ಕಲೆಯ ದೃಷ್ಟಿಯಿಂದ ಅತ್ಯಂತ ಮುಖ್ಯವಾದುದು.ಇದನ್ನು ಬೆಟ್ಟದೊಳಕ್ಕೆ 20 ಮೀ ಕೊರೆದು ನಿರ್ಮಿಸಲಾಗಿದೆ.20 ಕಂಬಗಳನ್ನು ಅಂದವಾಗಿ ಕೊರೆದಿದ್ದಾರೆ.ಮುಖಮಂಟಪದಲ್ಲಿ 5 ಕಂಬಗಳಿವೆ.ರಂಗಮಂಟಪದಲ್ಲಿ ಪ್ರತಿಯೊಂದು ಕಡೆಯೂ 7 ಚಿಕ್ಕ ಚಿಕ್ಕ ಕೋಣೆಗಳಿವೆ. ಗರ್ಭಗೃಹದಲ್ಲಿ ಪ್ರಲಂಬ-ಪಾದಾಸನನಾಗಿರುವ ಬುದ್ದದೇವನ ಮೂರ್ತಿ ಇದೆ.14 ನೆಯ ಗುಹಾಲಯ ಸರಿಸುಮಾರಾಗಿ ಇದೇ ಮಾದರಿಯನ್ನು ಹೋಲುವುದು.ಇಲ್ಲಿ 79 ವಿಸ್ತಾರವಾದ ಹಚಾರವಿದೆ.20 ಸುಂದರವಾದ ಕಂಬಗಳನ್ನು ಕೊರೆದು ಬಿಡಿಸಲಾಗಿದೆ.ಈ ಗುಹಾಲಯವನ್ನು ಅತ್ಯಂತ ಸುಂದರವಾದ ಮಂದಿರವನ್ನಾಗಿಸಬೇಕೆಂಬ ಇಚ್ಚೆಯಿಂದ ಕೊರೆದಂತಿದೆ.ಆದರೆ ಕೊರೆಯುವ ಕೆಲಸ ಪೂರ್ಣವಾಗಿಲ್ಲ.ಜೊತೆಗೆ ಗುಹಾಲಯ ಬಹುವಾಗಿ ಶಥಿಲವಾಗಿದೆ.1,2,4 ಮತ್ತು 24ನೆಯ ಗುಹಾಲಯಗಳು ಕಲಾದೃಷ್ಟಿಯಿಂದ ಉನ್ನತವಾದ ಕಟ್ಟಡ ವಿನ್ಯಾಸವನ್ನು ಪ್ರದರ್ಶಿಸುತ್ತವೆ.1 ಮತ್ತು 2 ನೆಯ ಗುಹಾಲಯಗಳು ಮನೋಜ್ಞವಾದ ಶಿಲ್ಪ ಹಾಗೂ ಕೆತ್ತನೆಯ ಉದಾಹರಣೆಯಾಗಿವೆ.ಕಂಬಗಳು ಅಂದವಾದ ಕೆತ್ತನೆಯ ಕೆಲಸ ಹಾಗೂ ಸುಂದರವಾಗಿ ಕಡೆದ ಬೋದಿಗೆಗಳನ್ನು ಹೊಂದಿವೆ.19 ಮತ್ತು 26 ನೆಯ ಗುಹಾಲಯಗಳಲ್ಲಿಯೂ ಉತ್ತಮ ಕೆತ್ತನೆಯ ಕೆಲಸಗಳನ್ನು ಲೋಡಬಹುದು.ಈ ಕೆಲಸಗಳು ಮುಂಬರಲಿದ್ದ ದಕ್ಷಿಣ ಭಾರತದ ಶಿಲ್ಪ ಕಲಾಸಂಪನ್ನತೆಯ ಮುಂಬೆಳಗಿನ ಪ್ರಜ್ಞೆಯಂತಿದೆ ಎಂಬುದಾಗಿ ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಅಜಂತದ ಚಿತ್ರಗಳ ಪುಖ್ಯಗುರಿ ಮತಬೋಧನೆ.ಬೌದ್ದ ಭಿಕ್ಷುಗಳು,ಕೆಂಪು,ಹಸಿರು,ಹಳದಿ,ಊದ,ಧೂಮ್ರ ಮತ್ತು ನೀಲವರ್ಣಗಳಿಂದ ಬಿಡಿಸಿರುವ ಭಿತ್ತಿಚಿತ್ರಗಳು ವರ್ಣನಾತೀತವಾದ ಸೌದರ್ಯವನ್ನೂ ಕೌಶಲವನ್ನೂ ಪ್ರದರ್ಶಿಸುತ್ತದೆ ಚಿತ್ರಕಾರರು ಸಾಂಪ್ರದಾಯಿಕ ನೀತಿಯನ್ನನುಸರಿಸಿದಾಗ್ಗ್ಯೂ ತಮ್ಮ ಪ್ರತಿಭೆ ಮತ್ತು ಸ್ವಾತಂತ್ರ್ಯವನ್ನು ತೋರ್ಪಡಿಸಿದ್ದಾರೆ ಬೋಧಿಸ್ತವ ಬುದ್ದದೇವನ ಜೀವನದ ಪ್ರಮುಖ ಘಟನೆಗಳು ಸಜೀವವಾಗಿ ಪಡಿಮೂಡಿವೆ.ಹೂಬಳ್ಳಿಗಳ,ಗೂಳಿ,ಕಪಿ,ನವೀಲು ಮುಂತಾದ ಪ್ರಾಣಿ ಪಕ್ಷಿಗಳ ಚಿತ್ರಗಳು ನೈಜವಾಗಿವೆ.ಸ್ತ್ರೀ ಚಿತ್ರಗಳು ಭಾರತೀಯ ಸ್ತ್ರೀಯರ ಸಹಜವಾದ ಶರೀರಭಂಗಿ,ಪ್ರಮಾಣ,ಅಲಂಕಾರ,ಮಾರ್ದವ,ಲಾವಣ್ಯಗಳನ್ನು ನಿದರ್ಶಿಸುತ್ತವೆ. ದೇವಾನುದೇವತೆಗಳ,ಅಪ್ಸರೆಯರ,ಕಿನ್ನರರ,ಪ್ರಭು,ಪ್ರಭೃತಿಗಳ,ಗಣ್ಯರ,ವೀರರ,ಹಳ್ಳಿ,ನಗರಗಳ,ಸಂತರ ಮತ್ತು ಮಹರ್ಷಿಗಳ ಚಿತ್ರಗಳು ಸಹಜವಾಗಿ,ಸುಂದರವಾಗಿ,ಮನೋಜ್ಞವಾಗಿ ಒಡಮೂಡಿವೆ.ಒಂದು ಮತ್ತು ಎರಡನೆಯ ಗುಹಾಲಯಗಳಲ್ಲಿ ಪುಲಕೇಶಿಯ ಆಸ್ತಾನವನ್ನೂ ಪರ್ಷಿಯಾ ರಾಯಭಾರಿಗಳ ಆಗಮನವನ್ನು ಜೀವಂತವಾಗಿ ಚಿತ್ರಿಸಿದ್ದಾರೆ.ಈ ಗುಹೆಗಳಲ್ಲಿರುವ ಜಿಂಕೆಗಳ ಹಾಗೂ ಶಿವಪಾರ್ವತಿಯಯರ ಭತ್ತಿಚಿತ್ರಗಳು ಅತ್ಯಂತ ಸುಂದರವಾಗಿವೆ.17 ನೆಯ ಗುಹೆಯಲ್ಲಿ ಬೌದ್ದಧರ್ಮದ ನಿಯಮನಿಷ್ಟೆಯಲ್ಲಿದ್ದ ನಿರಂತರ ಶ್ರದ್ದೆ ಹಾಗೂ ಪರಂಪರಾನುಗುತವಾಗಿ ಬೆಳೆಸಿಕೊಂಡು ಬಂದ ಚಿತ್ರಕಲಾಭ್ಯಾಸ ಇವುಗಳ ಅನುಭವದ ಆನಂದ ಪರವಶತೆಯನ್ನೂ ಕೌಶಲವನ್ನೂ ಅನಾಮಧೇಯ ಬೌದ್ದಭಿಕ್ಷುಗಳು ಪರಮೋತ್ಕ್ರಷ್ಟವಾಗಿ ಅಜಂತ ಗುಹಾಂತರ್ದೇವಾಲಯಗಳಲ್ಲಿ ಪ್ರದರ್ಶಿಸಿದ್ದಾರೆ.ಸೌಮ್ಯತೆ,ಅಸದೃಶವಾದ ಕುಂಚಕೌಶಲ,ಎಣೆಯಿಲ್ಲದ ವರ್ಣವಿನ್ಯಾಸದ ವೈಖರಿ,ಅಸಾಧಾರಣ ಪ್ರೌಢಿಮೆ-ಇವುಗಳು ಅದ್ವಿತೀಯ ನಿದರ್ಶನಗಳಾಗವೆ ಯೆಂದು ಕಲಾವಿಮರ್ಶಕರು ಪ್ರಶಂಸಿಸಿದ್ದಾರೆ. ಅಜಂತದ ವಾಸ್ತುಶಿಲ್ಪ : ಅಜಂತದ ಗುಹಾಂತರ್ದೇವಾಲಯಗಳು ಜಗತ್ಪ್ರಸಿದ್ದವಾಗಿವೆ.ಇದಕ್ಕೆ ಕಾರಣ ಅಲ್ಲಿನ ನೈಸರ್ಗಿಕ ಸೌದರ್ಯ,ಶಿಲ್ಪಕಲೆ,ಚಿತ್ರಕಲೆ,ಎದುರಿಗೆ ಸಮೀಪದಲ್ಲಿಯೇ ಜುಳು ಜುಳು ಎಂದು ಮಂಜುಳ ಧ್ವನಿಗೈಯುತ್ತ ಹರಿಯುವ ವಾಘೋರಾ ನದಿ ಚಿಕ್ಕ ಏಳು ಜಲಪಾತಗಳಿಂದ ಕೂಡಿಕೊಂಡು ರಮ್ಯವಾಗಿದೆ.ನದಿಯ ಕೊಳ್ಳ ಗಂಭೀರ ಶಾಂತತೆಯಿಂದ ಮೆರೆಯುತ್ತಿದೆ. ಸು.200 ಬೌದ್ದ ಭಿಕ್ಷುಗಳು ಇಲ್ಲಿನ ಗುಹೆಗಳಲ್ಲಿ ವಾಸಮಾಡಿಕೊಂಡಿದ್ದಿರಬೇದು.ಅವರು ಸುತ್ತಮುತ್ತಲಿನ ನಿಸರ್ಗ ರಮಣೀಯತೆಯಲ್ಲಿ ತಮ್ಮ ಆದ್ಯಾತ್ಮ ಸಾಧನೆಯನ್ನು ಮಾಡುತ್ತಿದ್ದರು.ಅವರ ದರ್ಶನ ಪಡೆದು ಅವರಿಗೆ ಅನ್ನ ಬಟ್ಟೆಗಳನ್ನೊದಗಿಸಿ ಅವರಿಂದ ಆಶೀರ್ವಾದ ಪಡೆಯಲು ಜನರು ಇಲ್ಲಿಗೆ ಮೇಲಿಂದ ಮೇಲೆ ಬರುತ್ತಿದ್ದರು. ಸು.1.2ಮೀ ಉದ್ದವಾದ ಕುದುರೆಲಾಳದ ಆಕಾರದ ಬೆಟ್ಟದ ಬಿಡಿದಾದ ಓರೆಯಲ್ಲಿ ಈ ಗುಹಾಂತರ್ದೇವಾಲಯಗಳನ್ನು ಕೊರೆದಿದ್ದಾರೆ.ಇವು ಹೆಚ್ಚಾಗಿಬೌದ್ಧಮತಕ್ಕೆ ಸಂಬಂಧಿಸಿದುವು.ಸ್ಥೂಲವಾಗಿ ಹೀನಯಾನ ಮತ್ತು ಮಹಾಯಾನ ಎಂಬ ಎರಡು ಬೌದ್ಧಪಂಥಗಳಿಗೆ ಸಂಬಂಧಪಟ್ಟುವೆಂದು ಅವುಗಳಲ್ಲಿ ಕೆತ್ತಿದ ಬೌದ್ದ ಮೂರ್ತಿಗಳು,ಬಣ್ಣದ ಚಿತ್ರಗಳು ಮತ್ತು ಕಂಬಗಳ ರಚನೆಯಿಂದ ವಿಂಗಡಿಸಬಹುದು.ಇವುಗಳು