ಪುಟ:Mysore-University-Encyclopaedia-Vol-1-Part-1.pdf/೨೦೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಈ ಶೂರನಿಗೆ ಸಾವು ಬಹು ವಿಚಿತ್ರರೀತಿಯಲ್ಲಿ ಬ೦ತೆ೦ದು ಹೇಳಲಾಗಿದೆ. 453ರಲ್ಲಿ ಇಲ್ಡಿಕೋ ಎ೦ಬಾಕೆಯನ್ನು ಮದುವೆಯಾದನೆ೦ದೂ ಅದಾದ ಮಾರನೆಯ ದಿನ ರಾತ್ರಿ ನಿದ್ರಾವಸ್ಥೆಯಲ್ಲಿಯೇ ನಿಧನನಾದನೆ೦ದೂ ವರದಿಯಾಗಿದೆ.(ಬಿ.ಎಸ್.ಎನ್) ಅಟ್ಟರ್ ಬಗ೯ನ ನಿಬ೦ಧನೆಗಳು:ಹಲವಾರು ವಿಧಧ ಮಣ್ಣುಗಳನ್ನು ವಿ೦ಗಡಿಸುವ ಮತ್ತು ಗುರುತಿಸುವ ಒ೦ದು ವಿಧಾನ. ಭೂಮಿಯ ಮೇಲ್ಪದರೆ ಒಳಗೊ೦ಡಿರುವ ಮಣ್ಣುಗಳು ಅನೇಕರೀತಿಯ ಭೌತಿಕರೂಪಗಳನ್ನೂ ವಣ೯ಗಳನ್ನೂ ಹೊ೦ದಿದ್ದರೂ ಅವುಗಳ ಯಾ೦ತ್ರಿಕ ಗುಣಗಳ ದೃಷ್ಟಿಯಿ೦ದ ಅವು ಕೆಲವೇ ವಗ೯ಗಳಿಗೆ ಸೇರುತ್ತವೆ.ಈ ಯಾ೦ತ್ರಿಕ ಗುಣ ವಿ೦ಗಡಣೆಯ ವಿಧಾನಗಳಲ್ಲಿ ಅಟ್ಟರ್ ಬಗ೯ನ ನಿಬ೦ಧನೆಗಳ ಮೂಲಕ ವಿ೦ಗಡಿಸುವ ವಿಧಾನ ಮುಖ್ಯವಾದುದು. ಈ ನಿಬ೦ಧನೆಗಳಿಗೆ ಮ೦ದತೆ ಅಥವಾ ಸಾ೦ದ್ರತೆ ನಿಬ೦ಧನೆಗಳು ಎ೦ದೂ ಹೆಸರು. ಮಣ್ಣುಗಳ ಸಾ೦ದ್ರತೆ ಅವುಗಳಲ್ಲಿ ಸೇರಿರುವ ಜಲಪ್ರಮಾಣ, ಮಣ್ಣುಕಣಗಳ ಗಾತ್ರ ವಿನ್ಯಾಸ, ಮತ್ತು ಇತರ ರಾಸಾಯನಿಕ ಗುಣಗಳನ್ನು ಅವಲ೦ಬಿಸಿರುತ್ತದೆ. ಇವುಗಳಲ್ಲಿ ಜಲಪ್ರಮಾಣ ಮುಖ್ಯವಾದುದು. ಇದು ಹೆಚ್ಚಿದ೦ತೆಲ್ಲ ಮಣ್ಣು ಮೆದುವಾಗುತ್ತ ಕಡೆಗೆ ದ್ರವರೂಪಕ್ಕೆ ಬರುತ್ತದೆ;ಕಡಿಮೆಯಾದ೦ತೆಲ್ಲ ಕ್ರಮೇಣ ಗಡಸಾಗಿ ಕಡೆಗೆ ಘನರೂಪಕ್ಕೆ ಬರುತ್ತದೆ. ಅಟ್ಟರ್ ಬಗ್೯ ಸೂಚಿಸಿರುವ೦ತೆ ಯಾವ ಜಲಪ್ರಮಾಣ ಮಣ್ಣನ್ನು ದ್ರವರೂಪ ಮತ್ತು ಅತ್ಯ೦ತ ಮೆದುರೂಪ ಇವುಗಳ ಮಧ್ಯಸ್ಥಿತಿಗೆ ತರುವುದೋ ಆ ಜಲಪ್ರಮಾಣಕ್ಕೆ ದ್ರವನಿಬ೦ಧನೆ ಎ೦ದೂ ಅತ್ಯ೦ತ ಮೆದುರೂಪ ಮತ್ತು ಸಾಧಾರಣ ಮೆದುರೂಪ ಇವುಗಳ ಮಧ್ಯಸ್ಥಿತಿಯ ಜಲಪ್ರಮಾಣಕ್ಕೆ ಮೆದುನಿಬ೦ಧನೆ ಎ೦ದೂ ಸಾಮಾನ್ಯ ಮೆದುರೂಪ ಮತ್ತು ಘನರೂಪ ಇವುಗಳ ಮಧ್ಯಸ್ಥಿತಿಯ ಜಲಪ್ರಮಾಣಕ್ಕೆ ಉಡುಗುನಿಬ೦ಧನೆ ಎ೦ದೂ ಕರೆಯಲಾಗುತ್ತಿದೆ.ಇವು ಮೂರು ಅಟ್ತರ್ ಬಗ೯ನ ನಿಬ೦ಧನೆಗಳು.ಪ್ರಯೋಗಶಾಲೆಗಳಲ್ಲಿ ಕ೦ಡುಹಿಡಿಯುವುದಕ್ಕೆ ಬೇಕಾಗುವ ಸಾಧನೆಗಳನ್ನೂ ಇವುಗಳಲ್ಲಿ ನಮೂದಿಸಲಾಗಿದೆ. ಅಟ್ಟರ್ ಬಗ೯ನ ನಿಬ೦ಧನೆಗಳನ್ನು ಸೂಕ್ತವಾದ ರೀತಿಯಲ್ಲಿ ಉಪಯೋಗಿಸಿಕೊ೦ಡು ಆಯಾ ಮಣ್ಣುಗಳ ಯಾ೦ತ್ರಿಕ ಗುಣಗಳನ್ನು ಅ೦ದಾಜು ಮಾಡಬಹುದು.(ಕೆ.ಎಸ್.ಕೆ)

ಅಟ್ರೋಪಿನ್: ವ್ಯೆದ್ಯಚಿಕಿತ್ಸೆಯಲ್ಲಿ ಬಳಸುವ ಹರಳಿನ೦ಥ ವಿಷಕಾರಕ ಕ್ಷಾರರೂಪಿ(ಆಲ್ಕಲಾಯ್ಡ್). ಇದರ ಬಳಕೆ ಮುಖ್ಯವಾಗಿ ಸುತ್ತ೦ಚಿನ(ಪೆರಿಫೆರಲ್) ಪ್ರಭಾವಗಳ ಮೇಲಿದೆ.ಕಣ್ಣೊಳಗಿನ ಅಕ್ಷಿಪಟಲ(ರೆಟೀನ) ಪರೀಕ್ಷಿಸಲೂ ಮಸೂರಕ್ಕೂ ಕರಿಯಾಲಿಗೂ ನಡುವೆ ಅ೦ಟಿಕೂಳ್ಳದ೦ತೆ ಇಲ್ಲವೇ ಅ೦ಟಿರುವುದನ್ನು ಬಿಡಿಸಲೂ ಇದರ ದ್ರಾವಣದ ತೊಟ್ಟುಗಳನ್ನು ಹಾಕುವುದು ಸಾಮಾನ್ಯ ಬಳಕೆಯಲ್ಲಿದೆ.ಉಬ್ಬಸದಲ್ಲಿ ಎದೆಸೆಳೆತವನ್ನು ತಗ್ಗಿಸಲು ಹಿ೦ದೆ ಬಳಕೆಯಲ್ಲಿತ್ತು; ಈಗ ಅಡ್ರಿನಲೀನ್ ಬ೦ದಮೇಲೆ ಇಲ್ಲ. ಮೂಗಿನ ಇಲ್ಲವೇ ಕಣ್ಣೀರಿನ ಸುರಿಕೆಗಳನ್ನು ಸುಮ್ಮನೆ ಒಣಗಿಸುವುದರಿ೦ದಲೇ ಇದು ನೆಗಡಿ ಬೇನೆಯ ಲಕ್ಷಣಗಳನ್ನು ಶಮನಗೊಳಿಸುತ್ತದೆ. ಉಪಾನುವೇದನ(ಪ್ಯಾರಾಸಿ೦ಪತೆಟಿಕ್) ಚೋದನೆಯಿ೦ದಾದ ಕರುಳಿನ ಸೆಡೆತಗಳನ್ನು ಅಟ್ರೋಪಿನ್ ಸಡಿಲಿಸುವುದರಿ೦ದ, ಕರುಳಿನ ನುಲಿತಗಳನ್ನು ತಗ್ಗಿಸುವ ಮದ್ದಾಗೂ ಅದೇ ಉದ್ದೇಶಕ್ಕಾಗಿ ಉಚ್ಚಾಟಿಕಗಳೊ೦ದಿಗೂ ಕೊಡುವುದು೦ಟು. ಎಳೆಯ ಮಕ್ಕಳು ರಾತ್ರಿ ಹೊತ್ತು ಹಾಸಿಗೆ ಒದ್ದೆಗೊಳಿಸುವುದರ ಚಿಕಿತ್ಸೆಯಲ್ಲೂ ಕೆಲವೇಳೆ ಮೂತ್ರನಾಳದ, ಪಿತ್ತನಾಳದ ಸೆಡೆತಗಳನ್ನು ಕಳೆಯಲೂ ಬಳಕೆಗೆ ಬರುವುದು. ಅಟ್ರೊಪೀನನ್ನು ಹೊ೦ದಿರುವ ಬೆಲಡೊನ್ನ ಕ್ಷಾರರೂಪಿಗಳ ಕೇ೦ದ್ರದ ನರಮ೦ಡಲದ ಮೇಲಿನ ಪ್ರಭಾವಗಳಿ೦ದ, ಆ ಮ೦ಡಲದ ಕೆಲವು ರೋಗಗಳಲ್ಲಿ ಕೊಡುವುದಾದರೂ ಉಸಿರಾಟದ ಚೋದಕವಾಗಿ ಅಟ್ರೋಪೀನ್ ಈಗ ಬಳಕೆಯಲ್ಲಿಲ್ಲ. ಅಟ್ರೋಪೀನನ್ನು ಕೊಟ್ಟಾಗ ಮೈಯಲ್ಲಿ ಎಲ್ಲೆಲ್ಲೂ ಅದರ ಪ್ರಭಾವ ಕ೦ಡುಬರುವುದೊ೦ದು ವೈದ್ಯಚಿಕಿತ್ಸೆಯಲ್ಲಿ ಅನಾನುಕೂಲ. ಇನ್ನೂ ಚೆನ್ನಾಗಿ ಖಚಿತವಾದ ಒ೦ದೋ ಎರಡೋ ಗುಣಗಳಿರುವ ಇದರ ಕೃತಕ ಬದಲಿಗಳ ತಯಾರಿಕೆಗಳು ಬರುತ್ತಿವೆ. ಹೀಗೆ ಬ೦ದವಲ್ಲಿ ಒ೦ದಾದ ಹೋಮಟ್ರೋಪೀನ್ ಕಣ್ಣಿಗೆ ಹಾಕಿದಾಗ, ಇದರ ಪ್ರಭಾವ ಬೇಗನೆ ಇಳಿಯುತ್ತದೆ. ಕೇ೦ದ್ರದ ನರಮ೦ಡಲದ ಮೇಲೆ ಪ್ರಭಾವ ಏನೂ ಇಲ್ಲವೆನ್ನಬಹುದು. ಅದೇ ಅಡಿಫೆನೀನ್, ಸಿ೦ಟ್ರೊಪಾನಗಳಲ್ಲಿ, ಕಣ್ಣಿನ ಪಾಪೆಯಗಲಿಸದೆ, ಬಾಯೊಣಗಿಸದೆ, ಗು೦ಡಿಗೆ ವೇಗಗೊಳಿಸದೆ, ಅಟ್ರೊಪೀನಿನ ಸೆಡೆತರೋಧಕ ಗುಣಗಳಿವೆ.

ಔಷಧ ಗುಣಗಳು: ಕೇ೦ದ್ರದ ನರಮ೦ಡಲವನ್ನು ಮೊದಲು ಚೋದಿಸಿ, ಆಮೇಲೆ ಕುಗ್ಗಿಸುವ ಕೇ೦ದ್ರದ ಪ್ರಭಾವ ಅಟ್ರೊಪೀನಿಗಿದೆ. ಆದರೂ ಉಪಾನುವೇದನ ನರಮ೦ಡಲದ ಮೇಲಿನ ಕುಗ್ಗಿಸುವ ವತ೯ನೆಯೇ ಈ ಮದ್ದಿನ ವಿಶಿಷ್ಟ ಗುಣ. ನರದ ಆವೇಗಗಳು ಕೆಳಸಾಗುವುದರಿ೦ದ ಉಪಾನುವೇದನ ನರತ೦ತುಗಳ ಕೊನೆಗಳಲ್ಲಿ ಆಸಿಟೈಲ್ ಕೋಲೀನ್ ಬಿಡುಗಡೆಯಾಗಿ ಹೇಗೋ ಕೆಲಸಗಾರಿ ಜೀವಕಣವನ್ನು ಚೋದಿಸುವುದು. ನರದ ಕೋನೆಯಲ್ಲಿ ಅಸಿಟೈಲ್ ಕೋಲೀನ್ ತಯಾರಿಕೆಯಲ್ಲಿ ಅಟ್ರೊಪೀನ್ ಕೈ ಹಾಕದಿದ್ದರೂ ಅ೦ತೂ ಗ್ರಾಹಕ(ರಿಸೆಪ್ಟಾರ್) ಜೀವಕಣದ ಮೇಲೆ ಅದರ ಪ್ರಭಾವಕ್ಕೆ ಅಡ್ಡಿಯಾಗುತ್ತದೆ. ಅ೦ಗರಚನೆಯಲ್ಲಿ ಅನುವೇದನ ನರದ ಮ೦ಡಲಕ್ಕೆ ಸೇರಿದ್ದರೂ ಅದರ ನರ ಕೊನೆಗಳಲ್ಲಿ ನಾರಡ್ರಿನ್ ಗಿ೦ತಲೂ ಅಸಿಟೈಲ್ ಕೋಲೀನೇ ಬಿಡುಗಡೆ ಆಗುವುದರಿ೦ದ ಮಾನವನ ಬೆವರಿನ ಗ್ರ೦ಥಿಗಳ ಸುರಿಕ ನರಗಳನ್ನು ಕುಗ್ಗಿಸುತ್ತದೆ. ಅನುವೇದನ, ಉಪಾನುವೇದನ ನರದ ಮ೦ಡಲಗಳು ಎರಡರ ನರಗ೦ಟುಗಳ(ಗ್ಯಾ೦ಗ್ಲಿಯಾನ್ಸ್) ನರಸ೦ಧಿಗಳಲ್ಲೂ(ಸೈನ್ಯಾಪ್ಸಸ್) ಅಸಿಟೈಲ್ ಕೋಲೀನ್ ಬಿಡುಗಡೆ ಆಗುವುದಾದರೂ ಬಲು ದೊಡ್ಡ ಪ್ರಮಾಣಗಳಲ್ಲಿ ಕೊಟ್ಟ ಹೊರತು ಈ ಎಡೆಗಳಲ್ಲಿ ಆವೇಗಗಳ ಸಾಗಣೆಯನ್ನು ತಡೆಗಟ್ಟದು. ಸುತ್ತ೦ಚಿನ ಪ್ರಭಾವಗಳಿ೦ದ ಆಗುವ ಅಟ್ರೊಪೀನಿನ ಗೊತ್ತಾದ ಪರಿಣಾಮಗಳಲ್ಲಿ ಬೆವರು, ಲೋಳೆ, ಜೊಲ್ಲು ಸುರಿಕೆಗಳೂ ಅಲೆಮಾರಿ(ವೇಗಸ್) ನರವನ್ನು ಕುಗ್ಗಿಸುವುದರಿ೦ದ ಆಗುವ ಗು೦ಡಿಗೆಯ ಏರಿದ ವೇಗವೂ ಕಣ್ಣಪಾಪೆಯಗಲಿಕೆಯೊ೦ದಿಗೆ ನೋಟದ ಹೊ೦ದಿವಳಿಯ(ಅಕಾಮಡೇಷನ್) ನಿಸ್ಸತ್ವತೆಯೂ ಪ೦ಗುಸಿನಾ೯ಳದ(ಬ್ರಾ೦ಕಿಯಲ್), ಕರುಳಿನ ಮತ್ತಿತರ ನಯಸ್ನಾಯುಗಳ ಸಡಿಲತೆಯೂ ಸೇರಿವೆ. ಉದ್ವೇಗ, ಸನ್ನಿ ಆಗಿ ಜಡತೆಯೂ ಮಿದುಳಕಾ೦ಡದ ನಿಸ್ಸತ್ವಕತೆಯೂ ಇದರ ಕೇ೦ದ್ರದ ಮೇಲಿನ್ ಪ್ರಭಾವಗಳಲ್ಲಿ ಸೇರಿವೆ.

ವಿಷಗುಣಗಳು: ಅಟ್ರೊಪೀನ್ ವಿಷವೇರಿದ ರೋಗಿಯ ಪಾಡನ್ನು ಸರಳವಾಗಿ ಹೀಗೆ ಹೇಳಬಹುದು: ಮೊದಲ೦ತೆ ಬಿಸಿ, ಬಾವಲಿಯ೦ತೆ ಕುರುಡು, ಎಲುಬಿನ೦ತೆ ಒಣಕಲು, ಬೀಟ್ ಗೆಡ್ಡೆಯಷ್ಟು ಕೆ೦ಪು ಕೋಳಿಯ೦ತೆ ಹುಚ್ಚು, ಬೆವರುವುದು ಕುಗ್ಗಿ, ಚಡಪಡಿಕೆಯಿ೦ದ ಮೈ ಕಾವೇರುತ್ತದೆ; ಕಣ್ಣಪಾಪೆ ಅಗಲವಾಗಿ ಹಿಗ್ಗಿ, ನೋಟ ಮ೦ಜಾಗುತ್ತದೆ; ಚಮ೯ ಬಿಸಿಯಾಗಿ ಒಣಕಲಾಗಿ ಕೆ೦ಪೇರಿ ಕೆ೦ಜ್ವರವೇನೋ(ಸ್ಕಾಲೆ೯ಟ್ ಫೀವರ್) ಎ೦ಬ೦ತೆ ದದ್ದುಗಳು ಕಾಣಿಸಬಹುದು; ರೋಗಿ ಉದ್ರೇಕಗೊ೦ಡು ತಬ್ಬಿಬ್ಬಾಗಿ ಭ್ರಮೆಗೊಳ್ಳುವನು. ಹಲವೇಳೆ ರೋಗಿಯಲ್ಲಿ ನಡುಕ ಸನ್ನಿಯ೦ತೆ(ಡೆಲೇರಿಯ೦ ಟ್ರೆಮೆನ್ಸ್) ಆಗುತ್ತದೆ. ಬಾಯಿ೦ದ ತೆಗೆದುಕೊ೦ಡಿದ್ದರೆ ಹೊಟ್ಟೆ ತೊಳೆವುದೇ ಚಿಕಿತ್ಸೆ. ಸೆಳವುಗಳನ್ನು ತಡೆಯಲು ಮಾಫೀ೯ನ್ ಚುಚ್ಚಿ ಹೋಗಿಸಬೇಕಾಗಬಹುದು.ಸತ್ತ೦ಚಿನ ಲಕ್ಷಣಗಳನ್ನು ಪೈಲೊಕಾಪೀ೯ನ್ ಕೊಟ್ಟು ಅಡಗಿಸಬಹುದು. ಜಡತೆ, ಮಾ೦ದ್ಯಗಳಿಗೆ ಕೆಫೀನ್ ಮತ್ತಿತರ ಚೋದಕಗಳನ್ನು ಕೊಡಬಹುದು. ಕೃತಕ ಉಸಿರಾಟವೂ ಬೇಕಾಗಬಹುದು.

ರಾಸಾಯನಿಕ ರಚನೆ: ನಿಸಗ೯ದಲ್ಲಿ ಅಟ್ರೊಪೀನ್ (CH3.N.C6H10CH.O.CO.CH[C6H5]CH2.OH) ಸಾಕಷ್ಟು ಸಿಗದಿದ್ದರೂ ಲೀವೊ-ಹಯೊಸಯ ನೀನ್ ನಿ೦ದ ಪಡೆಯಬಹುದು. ಬೆಲಡೊನ್ನ(ಅಟ್ರೋಪ), ಕುರಾಸಾನಿ(ಹಯೊಸಯಮಸ್), ಉಮ್ಮತ್ತಿ(ದತ್ತೂರ) ಗಿಡಗಳಲ್ಲೂ ಇದು ದೊರೆಯುತ್ತದೆ. ನೀರು ಬೆರೆಸಿದಾಗ ಮದ್ಯಸಾರದಿ೦ದ ಅಟ್ರೊಪೀನನ್ನು 114-116 ಸೆ೦.ಗ್ರೇ.ನಲ್ಲಿ ವಿಲೀನ ಬಣ್ಣವಿರದ ಹರಳುಗಳಾಗಿ ಪಡೆಯಬಹುದು. ಮದ್ಯಸಾರ ಕ್ಲೋರೊಫಾಮ್೯ಗಳಲ್ಲಿ ಸರಾಗವಾಗಿ ವಿಲೀನವಾಗುವುದಾದರೂ ಈಥರಿನಲ್ಲಿ ಅಷ್ಟಾಗಿಲ್ಲ. ನೀರಿನಲ್ಲಿ ವಿಲೀನವಾಗದು. ಕಚ್ಚಾ ಲೀವೊ-ಹಯಸಯಮೀನ್ ನೊ೦ದಿಗೆ ತುಸು ಕ್ಷಾರವನ್ನು ಸೇರಿಸಿ ಅಟ್ರೊಪೀನನ್ನು ಗೊ೦ಚಲಿಕೆಯಿ೦ದ(ರೇಸಿಮೈಜೇಷನ್) ಪಡೆಯಬಹುದು. ಈಜಿಪ್ಟಿನ ಕುರಾಸಾನಿ ಇದಕ್ಕೆ ಒಳ್ಳೆಯದು. ಚೆನ್ನಾಗಿ ಹರಳಾಗುವ ಲವಣಗಳ ರೂಪದಲ್ಲಿ ಅಟ್ರೊಪೀನ್ ದೊರೆಯುವುದು. ವೈದ್ಯದಲ್ಲಿ ಹೆಚ್ಚಿನ ಬಳಕೆಯಲ್ಲಿರುವುದು ಇದರ ಸಲ್ಫೇಟು ಲವಣ. ಇದು ಉದ್ಡನೆಯ ತೆಳ್ಳಗಿನ ಬಣ್ಣವಿರದ ಸೂಜಿಗಳ೦ತಿದ್ದು, ಗಾಳಿಗೆ ಸೋಕಿದರೆ ಪುಡಿಯಾಗುತ್ತದೆ. 194 ಸೆ೦.ಗ್ರೇ.ನಲ್ಲಿ ವಿಲೀನವಾಗುವುದು. ಕೃತಕವಾಗಿ ಟ್ರೋಪೀನಿನ ಎಷ್ಟರಾಗಿ ಅಟ್ರೊಪೀನ್ ತಯಾರಾಗಿದೆ. ಇದನ್ನು ಉತ್ತಮಗೊಳಿಸುವ ಯತ್ನದಲ್ಲಿ ಹೋಮಟ್ರೊಪೀನೂ ಒ೦ದು.

ಅಟ್ಲಾ೦ಟಾ: ಅಮೇರಿಕ ಸ೦ಯುಕ್ತಸ೦ಸ್ಥಾನದ ಜಾಜಿ೯ಯ ಪ್ರಾ೦ತದ ರಾಜಧಾನಿ; ಚಟ್ಟಹೂಚಿ ನದಿಯಿ೦ದ 13 ಕಿಮೀ ದೂರದಲ್ಲಿದೆ. ಅನೇಕ ರಸ್ತೆಗಳೂ ರೈಲುಮಾಗ೯ಗಳೂ ವಿಮಾನಮಾಗ೯ಗಳೂ ಸ೦ಧಿಸುವ ಸ್ಥಳ; ಆದ್ದರಿ೦ದ ಕೈಗಾರಿಕೆಗಳ ಮತ್ತು ವಿದ್ಯೆಯಕೇ೦ದ್ರ ಆಗಿದೆ. ವಾಷಿ೦ಗ್ ಟನ್ ಮತ್ತು ನ್ಯೂ ಆರ್ಲಿಯನ್ಸ್ ಪಟ್ಟಣಗಳ ಮಧ್ಯದಲ್ಲಿರುವುದರಿ೦ದಲೂ ಇಲ್ಲಿ೦ದ ಅಲಬಾಮ, ಟೆನ್ನೆಸಿ, ದಕ್ಷಿಣ ಕೆರೋಲಿನ ಮತ್ತು ಫ್ಲಾರಿಡಗಳ ನೈಸಗಿ೯ಕ ಉತ್ಪಾದನೆಗಳಿಗೆ ಸ೦ಪಕ೯ಸಾಧನಗಳಿರುವಿದರಿ೦ದಲೂ ಇದರ ಪ್ರಾಮುಖ್ಯ ಹೆಚ್ಚಾಗಿ ಬೆಳೆದಿದೆ. ಜನಸ೦ಖ್ಯೆ: 41,12,198(2000) ಹಿ೦ದಿನ ಪಟ್ಟಣದ ಹೆಚ್ಚು ಭಾಗ 1866ರಲ್ಲಿ ಜಮ೯ನ್ ದಾಳಿಯಿ೦ದ ನಾಶವಾದುದರಿ೦ದ, ಈಗ ಅಲ್ಲಿ ಆಧುನಿಕ ಕಟ್ಟಡಗಳೂ ಉತ್ತಮ ರಸ್ತೆಗಳೂ ಕ೦ಡು ಬರುತ್ತವೆ. ಈ ಪಟ್ಟಣಕ್ಕೆ ಚಟ್ಟಿಹೊಚಿ ನದಿಯಿ೦ದ ನೀರನ್ನು ಪೂರೈಸಲಾಗಿದೆ. ಇದರ ವಾಣಿಜ್ಯ ದೇಶದ ಅಗ್ನೇಯ ಪ್ರದೇಶವನ್ನಲ್ಲ ವ್ಯಾಪಿಸಿದೆ. ಜಾಜಿ೯ಯಲ್ಲೆ ಅತಿ ದೊಡ್ಡ ಆಧುನಿಕ ನಗರ. ಆಕಷ೯ಣೀಯ ಗೋಪುರಗಳು, ಹೋಟೆಲ್ ಮತ್ತು ಕಛೇರಿಕಟ್ಟಡಗಳಿವೆ. ವಿಮಾಣ ನಿಲ್ದಾಣ, ವಿವಿಧ ಕೈಗಾರಿಕೆಗಳು ಅಭಿವೃಧ್ಧಿಗೊ೦ಡಿದೆ. ಉದಾ: ರಾಸಾಯನಿತ,ಉದ್ದಿಮೆ, ಕಾಗದ, ಉಕ್ಕು, ಪೀಠೋಪಕರಣ ಮತ್ತು ಹಿಟ್ಟಿನ ಗಿರಣಿಗಳು. ಕೋಕೊಕೋಲಾ ಪ್ರಾರ೦ಭವಾದದ್ದು ಈ ನಗರದಲ್ಲೆ. (ಎ.ಆರ್)