ಪುಟ:Mysore-University-Encyclopaedia-Vol-1-Part-1.pdf/೨೦೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


              ಅಡಿಲೇಡ್- ಅಡೀಸನ್, ಜೋಸೆಫ್

ಆಳದವರೆಗೂ ಅಳವಡಿಸಬಹುದು. ಆಯಸ್ಕಾಂತಿಯ ಆಡಿಮುದ್ದುಗಳಿಂದ ರಕ್ಷಣೆಪಡೆಯಲು, ಎರೆಡು ದೂರದ ಚಿಕ್ಕ ನೌಕೆಗಳ ಮದ್ಯೆ ಎರೆಡು ತಂತಿಗಳನ್ನು ಕಟ್ಟಿ ಅದರಲ್ಲಿ ವಿದ್ಯತ್ತನ್ನು ಹರಿಸಿ ಕೃತಕ ಆಯಸ್ಕಾಂತಕ್ಷೇತ್ರವನ್ನುಂಟುಮಾಡುತ್ತಾರೆ. ಈ ಆಯಸ್ಕಾಂತಕ್ಷೇತ್ರದಿಂದ ಆಡಿಮದ್ದು ಮೇಲೆ ಬಂದು ಎದ್ದಲ್ಲಿಯೇ ಸಿಡಿಯುತ್ತದೆ. ಸುತ್ತಮುತ್ತ ನೈಸರ್ಗಿಕ ತಡೆಗಳಿಲ್ಲದ ಸ್ಥಳಗಳಲ್ಲಿ ಶತ್ರುಗಳಿಂದ ರಕ್ಷಣೆ ಪಡೆಯಲು ಇವುಗಳ ಬಳಕೆ ಹೆಚ್ಚಗಿ ಆಗುತ್ತದೆ. ಉತ್ತರ ಆಫ಼್ರಿಕದ ಟೋಬ್ರುಕ್ ಯುದ್ಧದಲ್ಲಿ (೧೯೪೦-೪೧) ಸುತ್ತಲೂ ಮರುಭೂಮಿ ಎದ್ದುದರಿಂದ ಈ ಆಡಿಮದ್ದುಗಳನ್ನು ಬಹಳವಾಗಿ ಬಳಸಲು ಅವಕಶವಾಯಿತು. ಅಡಿಮದ್ದುಗಳನ್ನು ಸಾಮಾನ್ಯವಾಗಿ ಲೋಹದ ಪಾತ್ರೆಗಳಲ್ಲಿ ಅಳವಡಿಸಿರತ್ತರೆ. ಲೋಹದ ಚೂರುಗಳು ಅಲೆಗಳನ್ನು ಪ್ರತಿಫಲಿಸುತ್ತವೆ. ಈ ಸೂತ್ರವನ್ನುಪಯೋಗಿಸಿ ನೆಲದಲ್ಲಿ ಹುದುಗಿಸಿಟ್ಟ ಅಡಿಮದ್ದುಗಳಿಂದ ಕಂಡುಹಿದಿಯುತ್ತರೆ. ಹಾಗೆ ಕಂಡುಹಿಡಿಯದಿರಲೆಂದು ಈಗ ಅಡಿಮದ್ದುಗಳನ್ನು ಅಲೋಹಗಳಾದ ಮರ, ಪ್ಲಾಸ್ಟಿಕ್ಕು, ಕಾಗದ ಮುಂತಾದವುಗಳಲ್ಲಿ ಹೊಂದಿಸುತ್ತಾರೆ. ಒಳಗೆ ಲೋಹದ ಬದಲು ಗಾಜು ಮತ್ತು ಪಿಂಗಾಣಿ ಚೂರುಗಳನ್ನು ಅಲೋಹ ಭಾಗಗಳಾಗಿ ಉಪಯೋಗಿಸುತ್ತಾರೆ. ಅಡಿಮದ್ದುಗಳಲ್ಲಿ ಟೆಲ್ಲರ, ಆಯಸ್ಕಾಂತೀಯ, ವಿಶೇಷ ರೀತಿಯ ಆಕೌಸ್ಟಿಕ್, ಆಯಿಸ್ಪರ್ ಹಾಗೂ ಜರ್ಮನಿಯ ೫ ಅಡಿಮದ್ದುಗಳು ಪ್ರಮುಖವದುವು. ಅಡಿಲೇಡ್ : ದಕ್ಷಿಣ ಆಸ್ಟ್ರೇಲಿಯ ಪ್ರಾಂತದ ರಾಜಧನಿ ನಗರ. ಟಾರೆಸ್ಸ್ ನದೀಮುಖ ಪ್ರದೇಶದಲ್ಲಿದೆ. ಆಸ್ಟ್ರೇಲಿಯದ ನಗರಗಳಲ್ಲಿ ೪ನೆಯ ಸ್ಥಾನ ಪಡೆದಿದೆ. ೪ನೆಯ ವಿಲಿಯಮ್ ನ ರಾಣಿಯ ಸ್ಮರಣಾರ್ಥವಾಗಿ ಸ್ಥಾಪಿಸಲ್ಪಟ್ಟಿತು. ಜನಸಂಖ್ಯೆ ೧೦೭೨೫೮೫ (೨೦೦೧). ಮಳೆಗಾಲದ ಅವದಿ ೧೨೨ ದಿನಗಳು. ವಾರ್ಷಿಕ ಮಳೆ ಸರಾಸರಿ ೫೦-೬೦ಸೆಂ.ಮೀ. ವಾಯುಗುಣ ಹಿತಕರ. ಗೋಧಿ ಎಲ್ಲಿನ ಮುಖ್ಯ ಬೆಳೆ. ಈಗ ದೊಡ್ಡ ಉದ್ದಿಮೆಗಳು ತಲೆ ಮೇಲೆ ಎತ್ತಿವೆ. ಇಲ್ಲಿ ಅಡಿಲೇಡ್ ವಿಶ್ವವಿದ್ಯಾನಿಲಯವಿದೆ (೧೮೭೪). ಇತರ ಸ್ಮಾರಕಗಳೆಂದರೆ; ಪಾರ್ಲಿಮೆಂಟ್ ಭವನ, ಸರ್ಕಾರಿ ಭವನ ಮತ್ತು ಎರಡು ಬೃಹತ್ತಾದ ಕತೀಡ್ರಲ್ ಗಳು. ಅಡಿಲೇಡ್ ಬಂದವರು ೧೮೩೯ರಲ್ಲಿ ಸ್ಥಾಪನೆಗೊಂಡಿತು. ೧೮೪೦ರಲ್ಲಿ ನಗರ ಸಭೆ ರಚನೆಯಾಯಿತು. ಪ್ರಮುಖ ಕೃಷಿ ಉತ್ಪನ್ನ ಮಾರುಕಟ್ಟೆ ಕೇಂದ್ರ ಜೊತೆಗೆ ಖನಿಜಗಣಿಗಳಿಗೆ ಸಮೀಪದಲ್ಲಿ ನೆಲೆಸಿದೆ. ಕೈಗಾರಿಕಾ ಕೇಂದ್ರ, ತೈಲ ಶುದ್ಧೀಕರಣ ಕೇಂದ್ರಗಳಿದ್ದು ಅಲ್ಲಿಂದ ನೈಸರ್ಗಿಕ ಅನಿಲ ಉತ್ಪಾದನಾ ಮತ್ತು ಬಳಕೆ ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುವ ಉತ್ತಮ ಕೊಳವೆ ಮಾರ್ಗಗಳ ವ್ಯವಸ್ಥೆಯಿದೆ. ಅಡಿವರಸೆ: ಗೋಡೆ ಮೊದಲಾದುವುಗಳ ತಳದಲ್ಲಿ ಮುಂದಕ್ಕ ಚಾಚಿಕೊಂಡಿರುವ ವರಸೆಗೆ ಈ ಹೆಸರಿಗೆ,ಕಟ್ಟಡದ ಗೋಡೆಯನ್ನು ಕಟ್ಟುವಾಗ ಗಟ್ಟಿಯಾದ ಅಡಿಪಾಯ ಸಿಕ್ಕುವವರೆಗೂ ಅಗೆವುತ್ತಾರಷ್ಟೆ. ಅಡಿಪಾಯದಲ್ಲಿ ಎಲ್ಲ ಕಡೆಗಳಲ್ಲೂ ಕಲ್ಲನ್ನು ನಿರೀಕ್ಷಿಸಲಾಗುವುದಿಲ್ಲ. ಸಾಮಾನ್ಯವಾದ ಅಡಿಪಾಯದ ಮಣ್ಣು ಒಂದು ಚದರಡಿಯ ಮೇಲೆ ಇಟ್ಟಿಗೆಗೋಡೆ ಹೊರುವಷ್ಟು ಭಾರವನ್ನು ಹೊರಲಾರದು ಅದಕ್ಕಗಿ ಮಹಡಿಯ ಮನೆಯ ೧೧/೨ಮೀ ದಪ್ಪದ ಇಟ್ಟಿಗೆ ಗೋಡೆಯ ಅಡಿಪಾಯ ೧.೨ಮೀ ವರೆಗೂ ಅಗಲವಾಗಿರಬೇಕಾಗುತ್ತದೆ ತಳಪಾಯದಲ್ಲಿ ೧೫೬-೨೨೮ಮೀ ವರೆಗೂಕಾಂಕ್ರೀಟನ್ನು ತುಂಬುತ್ತರೆ ನೆಲಮಟ್ಟದ ಕೆಳಗಿರುವ ಗೋಡೆಯ ಭಾಗವನ್ನು ಮೇಲ್ಪಾಯ (ಬೇಸ್ ಮೆಂಟ್) ಎನ್ನುತ್ತಾರೆ. ಮೇಲ್ಪಾಯದ ಕೆಳಗಡೆ ತಳಪಯದ ಕಾಂಕ್ರೀಟಿನ ಮೇಲಿನ ಮಟ್ಟದವರೆಗೂ ಇರುವ ಕಲ್ಲುಗಾರೆಯ ಕಟ್ಟಡವೇ ಅಡಿವರಸೆ. ಈಗ ಮೇಲ್ಪಾಯದ ಅಗಲ ೨ ಇದ್ದು ಅಡಿಪಾಯದ ಕಾಂಕ್ರೀಟಿನ ಅಗಲ ೧.೨ಮೀ ಆಗಿದ್ದರೆ ಕಲ್ಲುಗಾರೆಯಿಂದ ಎರೆಡು ಅಡಿವರಸೆಗಳನ್ನು ೦.೭೫ಮೀ ಅಗಲವಾಗಿಯೂ ಇನ್ನೆರೆಡು ಅಡಿವರಸೆಗಳನ್ನು ೧ಮೀ ಅಗಲವಾಗಿಯೂ ಕಟ್ಟಿ ಕೆಳಗಡೆ ಕಾಂಕ್ರೀಟ್ ಒಂದೊಂದು ಕಡೆಯಲ್ಲಿಯೂ ೧೫೨ಮೀಮೀ ಹೊರಚಾಚುವ ಹಾಗೆ ಮಾಡಬಹುದು. ಆಗ ಗೋಡೆಯ ಮೇಲೆ ಬರುವ ಭಾರ ಅಡಿವರಸೆಗಳ ಮೂಲಕ ಅಡಿಪಾಯದ ಮೇಲೆ ಅದರ ಶಕ್ತಿಗೆ ತಕ್ಕಂತೆ ಹರಡುಹುದು ಸಾದ್ಯವಗುತ್ತದೆ. ಅದಿಸನ್, ಜೋಸೆಫ್ : ೧೬೭೨-೧೭೧೯. ಇಂಗ್ಲಿಷ್ ಪ್ರಬಂಧಕಾರ, ಕವಿ, ವಿಮರ್ಶಕ, ನಾಟಕಕಾರ ಹಾಗೂ ರಾಜಕಾರಣಿ. ಆಕ್ಸ್ ಫರ್ಡ್ ನಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಪ್ರಾಚೀನ ಸಾಹಿತ್ಯದಲ್ಲಿ ವಿಶೇಷ ಆಸಕ್ತಿಯನ್ನು ತೋರಿಸಿದ. ೧೭೦೬ರಲ್ಲಿ ಸರ್ಕಾರದಲ್ಲಿ ಉಪಕಾರ್ಯದರ್ಶಿಯಾದ. ೧೭೦೮ರಿಂದ ಜೀವಮಾನ ಪರ್ಯಂತ ಪಾರ್ಲಿಮೆಂಟಿನ ಸದಸ್ಯನಾಗಿದ್ದ. ಇವನನ್ನು ಆಲೆಕ್ಸಾಂಡರ್ ಪೋಪ್ 'ಅಂಟಿಕಸ್' ಎಂಬ ಹೆಸರಿನ ಪಾತ್ರದಲ್ಲಿ ವಿಡಂಬನೆ ಮಾಡೀದ್ದಾನೆ. ೧೭೧೦ರಲ್ಲಿ ಇವರ ಸ್ನೇಹಿತರ ರಿಚರ್ಡ್ ಸ್ಟೀಲ್ ಪ್ರಾರಂಭಿಸಿದ ದಿ ಟ್ಯಾಟ್ಲರ್ ಪತ್ರಿಕೆ ಆಡಿಸನ್ನನ ಕಲ್ಪನಾಶಕ್ತಿಗೆ ಉತ್ತಮವಾದ ಅವಕಾಶವನ್ನು ಒದಗಿಸಿತು. ಇದರಲ್ಲೂ ದಿ ಸ್ಪೆಕ್ಟೇಟರ್ ಪ್ರತಿಕೆಯಲ್ಲೂ (೧೭೧೦-೧೨) ಆಡಿಸನ್ ಸ್ಪೀಲ್ ನೊಂದಿಗೆ ಕೆಲಸ ಮಾಡಿದ. ಸ್ಪೆಕ್ಟೇಟರ್ ಕ್ಲಬ್ಬು ಸ್ಟೀಲ್ ಸೃಷ್ಟಿ ; ಕ್ಲಬ್ಬಿನ ಒಂದು ಪಾತ್ರ-ಸರ್ ರೋಜರ್ ಕವರ್ ಲಿಯನ್ನು ಪೂರ್ಣವಾಗಿ, ಮನೋಹರವಾಗಿ ಬೆಳೆಸಿದವನು ಆಡಿಸನ್. ಇವನ ಪ್ರಬಂಧಗಳ ಉದ್ದೇಶ ತತ್ತ್ವಶಾಸ್ತ್ರವನ್ನು ವಿದ್ಯಾಲಯ ಪುಸ್ತಕಭಂಡಾರಗಳಿಂದ ಮನೆ ಮನೆಗೆ, ಸಾಮಾನ್ಯ ಮನುಷ್ಯನಿಗೆ ತಂದುಕೊಡುಹುದು. ಆಡಿಸನ್ನನ ಪ್ರಬಂಧಗಲಲ್ಲಿ ಸುವರ್ಣಮಾಧ್ಯಮನೀತಿ ಬೆಳಗುತ್ತದೆ. ಸುತ್ತಮುತ್ತಲಿನ ಜೀವನವನ್ನು ಸಾಮಾನ್ಯ ವಿವೇಚನೆಯ ದೃಷ್ಟಿಯಿಂದ ಇವನು ಕಾಣುತ್ತನೆ. ಸ್ಟೀಲ್ ನಲ್ಲಿ ಕಾನುವ ಸ್ನೇಹಪರತೆ, ಸಹಾನುಭೂತಿ ಇವನಲ್ಲಿಲ್ಲ.ಉದಾತ್ತ ಆದರ್ಶಗಳೇನೂ ಇಲ್ಲದಿದ್ದರೂ ಅಪಹಾಸ್ಯಕ್ಕೀಡಾಗಬಾರದೆಂಬ ಮರ್ಯಾದೆಯ ಅಭಿಮಾನ ಇವನಿಗೆ ಕೈದೀವಿಗೆಯಾಗಿತ್ತು. ಇವನ ಪ್ರಬಂದಗಳು ರಂಜನೆ ಮತ್ತು ಉಪದೇಶಗಳ ಮಧುರ ಸಂಗಮವಾಗಿದೆ. ಲಾಲಿತ್ಯ ಮತ್ತು ನಿರ್ದುಷ್ಟತೆಗಳು ಇವನ ಶೈಲಿಯ ಮುಖ್ಯ ಲಕ್ಷಣಗಳು. ಲಲಿತಪ್ರಬಂಧದ ರೂಪ, ಧ್ವನಿ ಮತ್ತು ಶೈಲಿಗಳ ಮೇಲೆ ಇವರ ಪ್ರಭವ ಅಪಾರವಾದುದು. ಗೋಲ್ಡ್ ಸ್ಮಿತ್ ಅಥವಾ ಸ್ಪೀಲ್ ನಂತೆ ಅಡಿಸನ್ ತನ್ನ ಹೃದಯವನ್ನು ತೆರೆದು ತೋರಿಸುವುದಿಲ್ಲ. ಆದರೆ ಗಾಂಭೀರ್ಯ, ಸಂಯಮ ಮತ್ತು ಸಾದ ಎಚ್ಚೆತ್ತ ಅಭಿರುಚಿ ಇವರ ಬರಹವನ್ನು ಉತ್ತಮಗೊಳಿಸಿವೆ. ಶಬ್ದಸಂಪತ್ತು ಮಿತವಾಗಿದ್ದರೂ ಪರಿಣಾಮ ಕಾರಿಯಾಗಿ ಕಟಕಿಯನ್ನು ಇವನು ಬಳಸಬಲ್ಲ. ತನ್ನ ಪ್ರಬಂಧಗಳ ಮೂಲಕ ಸಮಾಜದ ಮೇಲೆ ವಿಶೇಷ ಪ್ರಭಾವವನ್ನು ಈತ ಬೀರಿದ. ಸಭಾನಡತೆ, ಸಾರ್ಯಜನಿಕ ಸ್ಥಳಗಳಲ್ಲಿ ಮಾತುಕತೆ ; ಉಡುಗೆತೊಡುಗೆಗಳು, ಅಭಿರುಚಿ, ರಾಜಕೀಯ, ಸಾಹಿತ್ಯಕೃತಿಗಳ ಮೌಲ್ಯದ ನಿರ್ಧರ, ಅಷ್ಟೆಕೆ, ಪ್ರಿಯ ಪ್ರೇಯಸಿಯನ್ನು ಕಾಣಬೇಕಾದ ರೀತಿ-ಈ ಎಲ್ಲ ವಿಷಯಗಳಲ್ಲಿ ಮೀ. ಸ್ಪೆಕ್ಟೇಟರ್ ನ ಮಾತೇ ಶಾಸನವಾಯಿತು. ೧೭೧೯ರಲ್ಲಿ ಈತ ತೀರಿಕೊಂಡರುಇನ್ನೂ ಅರ್ಧ ಶತಮಾನ ಈತ ಚಿತ್ರಿಸಿದ ಸಭ್ಯನದತೆಯೇ ಆದರ್ಶವಾಗಿ ಉಳಿಯಿತು. ಆಸ್ಥಾನದ ಮತ್ತು ನಗರದ ಸಾಮಾಜಿಕ ಜೀವನ ನೈತಿಕವಾಗಿ ಹೀನಸ್ಥಿತಿಗಿಳಿದಿದ್ದಾಗ ಇವನ ಮತ್ತು ಸ್ಪೀಲ್ ನ ಪ್ರಬಂಧಗಳು ಇದನ್ನು ಸ್ವಚ್ಛಗೊಳಿಸಿ ಉದಾತ್ತಗೊಳಿಸಿದವು. ಈತ ರೋಸಮಂಡ್ (೧೭೦೭) ಎಂಬ ಗೀತರೂಪಕಗಳನ್ನೂ ಕೇಟೋ (೧೭೧೩) ಎಂಬ ಗಂಭೀರ ನಾಟಕವನ್ನೂ ದಿ ಡ್ರಮ್ಮರ್ (೧೭೧೫) ಎಂಬ ಹರ್ಷನಾಟಕವನ್ನೂ ಬರೆದಿದ್ದಾನೆ. ಕೃತಿ ಹೊರಬಿದ್ದ ವರ್ಷದಲ್ಲಿಯೇ ಅಭಿನಯಿಸಲ್ಪಟ್ಟ. ಇವನ ದುರಂತ ನಾಟಕ ಕೇಟೋ ಬಹು ಯಶಸ್ವಿಯಾಯಿತು. ಪ್ರ.ಶ.ಪೂ. ೪೬ ರಲ್ಲಿ ಜೂಲಿಯಸ್ ಸೀಸರನಿಗೂ ಮಾರ್ಕಸ್ ಪಾರ್ ಸಿಅಸ್ ಕೇಟೋವಿಗೂ ನಡೆದ ಘರ್ಘಣೆ ನಾಟಕದ ವಸ್ತು. ತಾನು ನಂಬಿದವರು ದ್ರೋಹವೆಸಗಿದ ಮೇಲೆ, ಕೇಟೋ ಶತ್ರುವಿನ ವಶವಾಗಲು ಇಚ್ಚಿಸದೆ, ಗೆಳೆಯರು ತಪ್ಪಿಸಿಕೊಳ್ಳುವಂತೆ ಸಹಾಯಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತನೆ. ಈ ದುರಂತಕಥೆಯೊಂದಿಗೆ ಆಡಿಸನ್ ಎರೆಡು ಪ್ರೇಮದ ಕಥೆಗಳನ್ನು ಹೆಣೆದಿದ್ದಾನೆ. ನಾಟಕ ಪಡೆದ ಯಶಸ್ಸಿಗೆ ಕತೃವಿನ ಕೀರ್ತಿ ಒಂದು ಕಾರಣ. ಇಂಗ್ಲೆಂಡಿನ ರಾಣಿ ಆನ್ ಳ ಆರೋಗ್ಯಸ್ಥಿತಿ ಕೆಡುತ್ತಿದ್ದುದರಿಂದ ಉತ್ತರಾಧಿಕಾರಿಯ ಪ್ರಶ್ನೆಗೆ ಬಂದಿದ್ದ ಮಹತ್ವ ಮತ್ತೋಂದು ಕಾರಣ. ಪ್ರಾಚೀನ ನಾಟಕ ಪದ್ಧತಿಯನ್ನು ಅನುಸರಿಸಿದ ಅಡಿಸನ್ ಐಕ್ಯಗಳನ್ನು ಬೆಳೆಸಿದ ರೀತಿ ಅಲ್ಲಲ್ಲಿ ಆ ಸಮರ್ಪಕವಾಗಿದೆ; ಕೆಲವು ಘಟನೆಗಳು ಅಸಂಭವ ಎಂದು ತೋರುತ್ತದೆ. ಶೈಲಿಯೂ ಕೃತಕ. ಅಡಿಸನ್ ತನ್ನ ವಿದ್ಯಾರ್ಥಿದೆಶೆಯಲ್ಲೆ ಪ್ರಾಚೀನ ಕಾವ್ಯಗಳನ್ನು ಅಭ್ಯಾಸಮಾಡಿದ್ದು, ಲ್ಯಾಟಿನ್ನಿನಲ್ಲಿ ಕವನಗಳನ್ನು ರಚಿಸಿದ. ಬ್ಲೇನ್ ಹೀಮ್ ಕಾಳಗದ ವಿಜಯವನ್ನು ಶ್ಲಾಘಿಸಿ ದಿ ಕ್ಯಾಂಪೇನ್ (೧೭೦೪) ಎಂಬ ಕವನವನ್ನು ಲಾರ್ಡ್ ಹ್ಯಾಲಿಫ್ಯಾಕ್ಸರ ಆದೇಶದಂತೆ ರಚಿಸಿದ. ಇದು ಎಂದು ವಿಶಿಷ್ಟ ಘಟನೆಯನ್ನು ಕುರಿತ ಕವನ. ರಚಿತವಾದಾಗ ಜನಪ್ರಿಯವಾಗಿದ್ದು ಈಗ ಮರೆತುಹೋದ ಕೃತಿ. ಆದರೆ ಆಗ ಇದರ ಯಶಸ್ಸು ಆಡಿಸನ್ನನಿಗೆ ರಾಜ್ಯದ ಉಪಕಾರ್ಯದರ್ಶಿತ್ವವನ್ನು ತಂದುಕೊಟ್ಟಿತ್ತು.