ಪುಟ:Mysore-University-Encyclopaedia-Vol-1-Part-1.pdf/೨೨೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕಂಪನಾವರ್ತಗಳ ಈ ಕಿರಣಗಳನ್ನು ಒಂದು ಪದಾರ್ಥದ ಮೇಲೆ ಕ್ರಮೇಣ ಹಾಯಿಸಿದರೆ, ನಿರ್ದಿಷ್ಟವಾದ ಕೆಲವು ಕಂಪನಾವರ್ತಗಳ ಕಿರಣಗಳನ್ನು ಪದಾರ್ಥ ಹೀರುತ್ತದೆ; ಹೀಗೆ ಹೀರಲ್ಪಟ್ಟ ಕಂಪನಾವರ್ತಗಳು ಪದಾರ್ಥದ ಸಹಜ ಸ್ಪಂದನಕ್ಕೆ ಅಥವಾ ಚಕ್ರಗತಿಗೆ ಸಂಬಂಧಿಸಿರುತ್ತದೆ. ಇದರಿಂದ ಉದ್ಭವಿಸುವ ರೋಹಿತ ಪದಾರ್ಥದ ವಿಶಿಷ್ಟಗುಣವಾಗಿರು ತ್ತದೆ; ಏಕೆಂದರೆ, ಈ ರೋಹಿತ ಪದಾರ್ಥದಲ್ಲಿಯ 1 ಪರಮಾಣುಗಳು, 2 ಪರಮಾಣುಗಳ ನಡುವಿನ ಬಂಧನ ಶಕ್ತಿಗಳು ಮತ್ತು 3 ಬಾಹ್ಯಾಕಾಶದಲ್ಲಿನ (ಸ್ಪೇಸ್) ಅಣುವಿನ ಆಕೃತಿ ಅಥವಾ ರಚನಾ ಸ್ವರೂಪಗಳನ್ನು ಅವಲಂಬಿಸಿದೆ. ಪದಾರ್ಥಗಳಲ್ಲಿ ಗುಣವ್ಯತ್ಯಾಸಗಳನ್ನುಂಟು ಮಾಡುವ ಮುಖ್ಯಾಂಶಗಳೇ ಇವುಗಳಾದ್ದರಿಂದ, ಅತಿರಕ್ತವರ್ಣ ರೋಹಿತ ಪದಾರ್ಥದ ವಿಶಿಷ್ಟ ಗುಣವಾಗಿರುತ್ತದೆ. ಇವುಗಳಲ್ಲಿ ಯಾವ ಒಂದು ಅಂಶವನ್ನು ಬದಲಿಸಿದರೂ ರೋಹಿತದ ಸ್ವರೂಪವೇ ಬದಲಾಗುತ್ತದೆ. ಆದ್ದರಿಂದ ಈ ರೋಹಿತವನ್ನು ಅಣುವಿನ ಹಸ್ತಮುದ್ರಿಕೆ (ಮಾಲೆಕ್ಯುಲರ್ ಫಿಂಗರ್‍ಪ್ರಿಂಟ್) ಎಂದು ಕರೆಯುತ್ತಾರೆ. ಇದರಿಂದ ಗೊತ್ತಾಗುವ ಸ್ಪಂದನ ಮತ್ತು ಚಕ್ರಗತಿಗೆ ಸಂಬಂಧಪಟ್ಟ ಕಂಪನಾವರ್ತಗಳಿಂದ ಅಣುವಿನಲ್ಲಿರುವ ವಿವಿಧ ಪರಮಾಣುಬಂಧಗಳನ್ನೂ ಅದರಲ್ಲಿರುವ ನಿರ್ದಿಷ್ಟ ಪರಮಾಣು ಸಮುದಾಯಗಳನ್ನೂ (ಅಟಾಮಿಕ್ ಗ್ರೂಪಿಂಗ್) ಅರಿಯಬಹುದು. ಪರಮಾಣು ಸಮುದಾಯದಲ್ಲಿ ಮಾತ್ರ ವ್ಯತ್ಯಾಸವಿದ್ದು, ಅಣುಸೂತ್ರಗಳು ಒಂದೇ ಆಗಿದ್ದಲ್ಲಿ, ಇದನ್ನು ಅತಿರಕ್ತವರ್ಣರೋಹಿತಗಳ ಸಹಾಯದಿಂದ ಗುರುತಿಸಲು ಸಾಧ್ಯ. ಈ ರೋಹಿತಗಳ ಸಹಾಯದಿಂದ ಅಣುಗಳ ರಚನಾಸ್ವರೂಪವನ್ನು ಎಲ್ಲ ಸಂದರ್ಭ ದಲ್ಲೂ ಸಂಪೂರ್ಣವಾಗಿ ಅರಿಯಲು ಕಷ್ಟಸಾಧ್ಯವಾಗಬಹುದು. ಒಂದೊಂದು ಅಣುವಿನ ಗಾತ್ರ ಮತ್ತು ಅದರಲ್ಲಿಯ ತೊಡಕುಗಳಿಗನುಗುಣವಾಗಿ ವಿವಿಧಮಟ್ಟದ ಸಾಫಲ್ಯವನ್ನು ಸಾಧಿಸಬಹುದು. ಈ ರೋಹಿತವಿನ್ಯಾಸದಲ್ಲಿ ಅಣುವಿನ ವಿಶಿಷ್ಟಾನುರೂಪತೆ (ಸಿಮೆಟ್ರಿ) ಬಹಳ ಪ್ರಾಮುಖ್ಯವನ್ನು ಹೊಂದಿದೆ. ಕೆಲವು ಸಣ್ಣ ಮತ್ತು ಕೆಲವು ಹೆಚ್ಚಿನ ಮಟ್ಟದ ವಿಶಿಷ್ಟಾನುರೂಪತೆಯನ್ನು ಹೊಂದಿದ ಅಣುಗಳಲ್ಲಿ, ಅತಿ ಕಡಿಮೆ ಸ್ವತಂತ್ರನಿಯತಾಂಕಗಳು ಸಾಕಾಗಬಹುದು. ಕೇವಲ ಒಂದೆರಡು ಬಂಧನಾಂತರ ಅಥವಾ ಬಂಧನಕೋನಗಳ ಸಹಾಯದಿಂದ ಅಣುವಿನ ಪೂರ್ಣಸ್ವರೂಪವನ್ನು ವಿಶದಪಡಿಸಬಹುದು. ಸಮಪಾಶ್ರ್ವಗಳಿ ರುವ ಚಿಕ್ಕ ಅಣುಗಳಲ್ಲಿ ಕೇವಲ ಚಕ್ರಗತಿಯ ಕಂಪನಾವರ್ತಗಳಿಂದಲೇ ಈ ಅರಿವನ್ನು ಪಡೆಯಬಹುದು. ಸ್ಪಂದನ ಗತಿಯಲ್ಲಿ ಹೀರಲ್ಪಟ್ಟ ರಶ್ಮಿಗಳ ಅತಿಸೂಕ್ಷ್ಮರಚನೆಗಳಿಂದಾಗಿ (¥s಼ೈನ್ ಸ್ಟ್ರಕ್ಚರ್ ಇನ್ ವೈಬ್ರೇಷನಲ್ ಅಬ್ಸಾರ್ಪ್‍ಷನ್), ಅಣುವಿನ ಬಂಧನಾಂತರಗಳನ್ನು ಕಂಡುಹಿಡಿಯಬಹುದು. ಒಂದಕ್ಕಿಂತ ಹೆಚ್ಚು ಬಂಧನಾಂತರಗಳಿದ್ದಲ್ಲಿ, ಅಣುವಿನಲ್ಲಿನ ಕೆಲವು ಮೂಲಧಾತುಗಳನ್ನು, ಅವುಗಳ ಸಮಸ್ಥಾನಿ (ಐಸೊಟೋಪ್) ಮೂಲಧಾತುಗಳಿಂದ ಸ್ಥಾನಪಲ್ಲಟಗೊಳಿಸಿ, ಪರೀಕ್ಷೆಮಾಡುವ ಆವಶ್ಯಕತೆ ಉಂಟಾಗುತ್ತದೆ. ಬಹುದೊಡ್ಡ ಅಣುಗಳ ರಚನಾಸ್ವರೂಪವನ್ನು ಕಂಡುಹಿಡಿಯುವಾಗ ಈ ನಿಯತಾಂಕಗಳ ಸಂಖ್ಯೆ ಬಹಳ ದೊಡ್ಡದಾಗುತ್ತದೆ. ಈ ಸಂದರ್ಭದಲ್ಲಿ ಅಣುವಿನ ಎಲ್ಲ ಬಂಧನಾಂತರಗಳನ್ನು ಮತ್ತು ಈ ಬಂಧನಕೋನಗಳನ್ನು ಖಚಿತವಾಗಿ ಹೇಳಲು ಕಷ್ಟವಾ ದರೂ ಅಣುವಿನ ರೂಪವೈಶಿಷ್ಟ್ಯವನ್ನು ಸಾಧಾರಣವಾಗಿ ಹೇಳಬಹುದು. ಅಣುವಿನ ವಿಶಿಷ್ಟಾನುರೂಪತೆಯನ್ನು ಪದಾರ್ಥದ ಅತಿರಕ್ತವರ್ಣರೋಹಿತದ ಅಧ್ಯಯನದಿಂದ ನಿರ್ಣಯಿಸಬಹುದು. ಈ ವಿಶಿಷ್ಟಾನುರೂಪತೆಯ ಜ್ಞಾನದಿಂದ ಅಣುವಿನ ಸ್ಪಂದನ ಕಂಪನಾವರ್ತಗಳ ಸಂಖ್ಯೆಯನ್ನೂ ತಿಳಿಯಬಹುದು. ಇದರ ಜೊತೆಗೆ ರಾಮನ್‍ರೋಹಿತ ದಿಂದ ಪಡೆದ ಜ್ಞಾನವನ್ನೂ ಸೇರಿಸಿಕೊಂಡರೆ ಇನ್ನೂ ಹೆಚ್ಚಿನ ದೃಢತೆಯಿಂದ ಅಣುಸ್ವರೂಪವನ್ನು ನಿರ್ಣಯಿಸಬಹುದು. ii. ರಾಮನ್ ವರ್ಣರೋಹಿತ ವಿನ್ಯಾಸ : ತೀಕ್ಷ್ಣವಾದ ಏಕವರ್ಣೀಯ ಬೆಳಕಿನ ಕಿರಣಗಳನ್ನು ಒಂದು ಪದಾರ್ಥದ ಮೇಲೆ ಲಂಬವಾಗಿ ಬೀಳುವಂತೆ ಮಾಡಿದಾಗ, ಅವು ಚದುರುತ್ತವೆ. ಹೀಗೆ ಪಾಶ್ರ್ವಕ್ಕೆ ಚದರಿಸಲ್ಪಟ್ಟ ಕಿರಣಗಳನ್ನು ರೋಹಿತಗ್ರಾಹಕದ (ಸ್ಪೆಕ್ಟ್ರೋಗ್ರಾಫ್) ಸಹಾಯದಿಂದ ಛಾಯಾಗ್ರಹಣಮಾಡಬಹುದು. ಇಂಥ ಛಾಯಾಗ್ರಹಣವನ್ನು ಪರೀಕ್ಷಿಸಿದಲ್ಲಿ ಪತನರಶ್ಮಿಗೆ (ಇನ್ಸಿಡೆಂಟ್ ರೇ) ಸಂಬಂಧಿಸಿದ ಕಂಪನಾವರ್ತದ ಬಹು ತೀಕ್ಷ್ಣರೇಖೆಯೂ ಅದರ ಎರಡು ಪಾಶ್ರ್ವದಲ್ಲಿಯೂ ಸಮನಾದ ಅಂತರದಲ್ಲಿ ಮೂಡಿರುವ ಬಹುಸೂಕ್ಷ್ಮ ರೇಖೆಗಳೂ ಕಂಡುಬರುತ್ತವೆ. ಈ ಸೂಕ್ಷ್ಮರೇಖೆಗಳ ಕಂಪನಾವರ್ತಗಳು ಪತನರಶ್ಮಿರೇಖೆಗಿಂತ ಒಂದು ಪಕ್ಕದಲ್ಲಿ ಸಣ್ಣವೂ ಇನ್ನೊಂದು ಪಕ್ಕದಲ್ಲಿ ದೊಡ್ಡವೂ ಆಗಿರುತ್ತವೆ. ಈ ಸೂಕ್ಷ್ಮ ರೇಖೆಗಳನ್ನು ಮೊದಲಬಾರಿಗೆ (1928) ಭಾರತದ ಸರ್ ಸಿ. ವಿ. ರಾಮನ್ ಮತ್ತು ಅವರ ಸಹೋದ್ಯೋಗಿ ಕೆ.ಎಸ್. ಕೃಷ್ಣನ್‍ರವರು ಸಂಶೋಧನೆ ಮಾಡಿದರು. ಇದಕ್ಕೆ ಮೊದಲು ಜರ್ಮನಿಯ ಸ್ಮೆಕಲ್‍ರವರು ಈ ಸೂಕ್ಷ್ಮರೇಖೆಗಳ ಅಸ್ತಿತ್ವವನ್ನು ತತ್ವಶಃ ಪ್ರತಿಪಾದಿಸಿದ್ದರು. ಈ ಭೌತಿಕ ಘಟನೆಗೆ ರಾಮನ್ ಪರಿಣಾಮ ಎಂದೂ ಪತನರಶ್ಮಿ ರೇಖೆ ಮತ್ತು ಇತರ ಸೂಕ್ಷ್ಮರೇಖೆಗಳನ್ನೊಳಗೊಂಡ ಛಾಯಾಗ್ರಹಣಕ್ಕೆ ರಾಮನ್ ರೋಹಿತ ಎಂದೂ ಕರೆಯುತ್ತಾರೆ. ಈ ವರ್ಣರೋಹಿತದ ಸೂಕ್ಷ್ಮರೇಖೆಗಳನ್ನೂ ರಾಮನ್ ರೇಖೆಗಳು ಎಂದು ಕರೆಯಲಾಗಿದೆ. ರಾಮನ್ ರೇಖೆಗಳಲ್ಲಿ ಪತನರಶ್ಮಿರೇಖೆಗಳಿಗಿಂತ ಕಡಿಮೆ ಕಂಪನಾವರ್ತವುಳ್ಳ ರೇಖೆಗಳನ್ನು ಸ್ಟೋಕ್ಸ್-ರಾಮನ್ ರೇಖೆಗಳೆಂದೂ ಅದಕ್ಕೂ ಹೆಚ್ಚಿನ ಕಂಪನಾವರ್ತವುಳ್ಳ ರೇಖೆಗಳನ್ನು ಆ್ಯಂಟಿಸ್ಟೋಕ್ಸ್-ರಾಮನ್ ರೇಖೆಗಳೆಂದೂ ಕರೆಯುತ್ತಾರೆ. ಪದಾರ್ಥದಲ್ಲಿನ ಅಣುಗಳು ಪತನರಶ್ಮಿಯ ಜ್ಯೋತಿಬಿಂದುಗಳನ್ನು (ಫೋಟಾನ್) ಸಂಧಿಸಿದಾಗ ಅವೆರಡರ ಮಧ್ಯೆ ಶಕ್ತಿ ಸ್ಥಳಾಂತರವಾಗುವುದೇ ಈ ಕಂಪನಾವರ್ತದಲ್ಲಿನ ಬದಲಾವಣೆಗೆ ಕಾರಣವೆಂದು ನಂಬಲಾಗಿದೆ. ಹಾಗೆ ಸ್ಥಳಾಂತರವಾದ ಶಕ್ತಿ ಅಣುವಿನ ಸ್ಪಂದನ ಅಥವಾ ಚಕ್ರಗತಿಯಲ್ಲಿ ಬದಲಾವಣೆಯನ್ನುಂಟುಮಾಡಬಹುದು. ಆದ್ದರಿಂದ ಪತನರಶ್ಮಿರೇಖೆ ಮತ್ತು ರಾಮನ್ ರೇಖೆಗಳ ನಡುವಿನ ವ್ಯತ್ಯಾಸಗಳು, ಅಣುವಿನ ಸ್ಪಂದನ ಅಥವಾ ಚಕ್ರಗತಿಯ ಕಂಪನಾವರ್ತಗಳೇ ಆಗಿದ್ದು ಪದಾರ್ಥದ ವಿಶಿಷ್ಟ ಗುಣಗಳಾಗಿವೆ. ಹೀಗಾಗಿ ಈ ಮಾರ್ಗದಿಂದ ಅತಿರಕ್ತವರ್ಣರೋಹಿತ ವಿನ್ಯಾಸದಿಂದ ಪಡೆಯಬಹುದಾದಂಥ ಅರಿವನ್ನೇ ಪಡೆಯಲು ಸಾಧ್ಯವಾಗಿದೆ. ಅಣುವಿನ 3ಟಿ-6 (ಅಥವಾ 3ಟಿ-5) ಪ್ರಮುಖ ಸ್ಪಂದನಗಳಲ್ಲಿ ಟಿ = ಅಣುವಿನಲ್ಲಿಯ ಪರಮಾಣುಗಳ ಸಂಖ್ಯೆ) ಎಲ್ಲ ಸ್ಪಂದನಕಂಪನಾವರ್ತನಗಳನ್ನೂ ಅತಿರಕ್ತವರ್ಣ ರೋಹಿತ ದಲ್ಲಿಯೇ ಆಗಲಿ, ರಾಮನ್‍ರೋಹಿತದಲ್ಲಿಯೇ ಆಗಲಿ ಕಾಣಲು ಸಾಧ್ಯವಾಗದಿರಬಹುದು. ಕೆಲವು ನಿಶ್ಚಿತವರ್ಗದ ಸ್ಪಂದನಗಳನ್ನು ಮಾತ್ರ ಯಾವುದೋ ಒಂದರಲ್ಲಿ ಕಾಣಲು ಸಾಧ್ಯ. ರಾಮನ್‍ರೋಹಿತದಲ್ಲಿ ಕಾಣದ ಕೆಲವನ್ನು ಅತಿರಕ್ತವರ್ಣ ರೋಹಿತದಲ್ಲಿ ಕಾಣಬಹುದು. ಇವೆರಡರ ಸಂಯುಕ್ತಜ್ಞಾನದಿಂದ ಅಣುವಿನ ಎಲ್ಲ ಸ್ಪಂದನಗತಿಗಳನ್ನೂ ಅರಿಯಬಹುದು; ಅಣುರಚನಾಸ್ವರೂಪವನ್ನು ಅರಿಯುವುದಕ್ಕೆ ಇವೆರಡರ ಸಹಾಯ ಆವಶ್ಯಕ. ಕೆಲವು ವಿಶೇಷಸಂದರ್ಭಗಳಲ್ಲಿ, ಈ ಎರಡು ರೋಹಿತಗಳಿಂದ ವ್ಯಕ್ತವಾಗುವ ಕಂಪನಾವರ್ತಗಳ ಹೋಲಿಕೆಯಿಂದಲೇ ಅಣುವಿನ ವಿಶಿಷ್ಟಾನುರೂಪತೆ ಸೂಚಿತವಾಗುವುದು. ಉದಾಹರಣೆ ಗಾಗಿ, ಕೇಂದ್ರ ಬಿಂದು ಅನುರೂಪತೆಯುಳ್ಳ ಅಣುಗಳಲ್ಲಿ ಯಾವ ಒಂದು ಕಂಪನಾವರ್ತವೂ ರಾಮನ್ ಮತ್ತು ಅತಿರಕ್ತವರ್ಣರೋಹಿತಗಳೆರಡರಲ್ಲೂ ಇರುವುದಿಲ್ಲ. ಬೆಂಜ಼ೀನ್ ಮತ್ತು ಎಥಿಲೀನ್‍ಗಳು ಇದಕ್ಕೆ ಸಾಕ್ಷಿ. ಇಂಗಾಲದ ಡೈಆಕ್ಸೈಡ್‍ನಲ್ಲಿ ಕೂಡ ಇದೇ ಪರಿಸ್ಥಿತಿಯಿರುವುದ ರಿಂದ, ಅದರಲ್ಲಿಯ ಅ ಮತ್ತು ಔ ಪರಮಾಣುಗಳು ಒಂದೇ ರೇಖೆಯಲ್ಲಿದ್ದು, ಈ ಬಗೆಯ ಅನುರೂಪತೆಯನ್ನು ಹೊಂದಿರಬೇಕೆಂದು ನಿರ್ಣಯಿಸಲಾಗಿದೆ. ಈ ರೋಹಿತವಿನ್ಯಾಸ ಮಾರ್ಗಗಳಿಂದ. ಅಔ2 ಮತ್ತು ಊ2ಔ ಅಣುಗಳ ರಚನಾ ಸ್ವರೂಪಕ್ಕೆ ಸಂಬಂಧಿಸಿದ ನಿರ್ಣಯಗೊಂಡ ಮುಖ್ಯಾಂಶಗಳು ಈ ರೀತಿ ಇವೆ: ಅಔ2 ನ ಸ್ವರೂಪ ಔ-ಅ-ಔ ಎಂಬಂತೆ ಇದ್ದು ಇಲ್ಲಿ ಅ ಮತ್ತು ಪರಮಾಣುಗಳೆಲ್ಲವೂ ಸಮರೇಖೆಯಲ್ಲಿರುತ್ತವೆ. ಅ-ಔ ಬಂಧನಾಂತರ ಈ ಅಣುವಿನಲ್ಲಿ 1.16150ಂ ಎಂದು ಕಂಡುಬರುತ್ತದೆ. ಆದರೆ ಊ2ಔ ಅಣುವಿನಲ್ಲಿ ಊ ಮತ್ತು ಔ ಪರಮಾಣುಗಳು ಸಮರೇಖೆಯಲ್ಲಿರದೆ ಬಾಗಿದ ಆಕೃತಿಯಲ್ಲಿವೆ. ಇಲ್ಲಿ ಊಔಊ ಕೋನವು 104027’ ಮತ್ತು ಔ-ಊ ಬಂಧನಾಂತರ 0.95840ಂ ಆಗಿರುತ್ತವೆ. ಆದ್ದರಿಂದ ಈ ಎರಡು ಅಣುಗಳು ಬೇರೆ ಬೇರೆ ವಿಶಿಷ್ಟಾನುರೂಪತೆಯುಳ್ಳ ಗುಂಪುಗಳಿಗೆ ಸೇರಿರುತ್ತವೆ. iii. ನ್ಯೂಕ್ಲಿಯರ್ ಮ್ಯಾಗ್ನೆಟಿಕ್ ಅನುನಾದ (ರೆಸೊನೆನ್ಸ್) : ದೊಡ್ಡ ಅಣುಗಳ ರಚನಾಸ್ವರೂಪವನ್ನು ನಿರ್ಣಯಿಸುವಲ್ಲಿ ಯಾವ ಮಾರ್ಗವೂ ಸ್ವಯಂಪೂರ್ಣ ಅರಿವನ್ನು ನೀಡದೆ ಇರಬಹುದು. ಇಂಥ ಸಂದರ್ಭದಲ್ಲಿ, ಬೇರೆ ಬೇರೆ ಮಾರ್ಗಗಳಿಂದ ದೊರೆತ ಅಪೂರ್ಣ ಅಂಶಗಳನ್ನೆಲ್ಲ ಸಂಗ್ರಹಿಸಿ, ಅಣುವಿನ ನೈಜಸ್ವರೂಪವನ್ನು ಅರಿಯಬಹುದು. ಹೀಗೆ ಆಂಶಿಕವಾದರೂ ಬಹು ಉಪಯುಕ್ತಜ್ಞಾನವನ್ನು ಕೊಡುವ ಮಾರ್ಗಗಳಲ್ಲಿ ಈ ವಿಧಾನ ಮುಖ್ಯವಾದದ್ದು. ಇಂಗಾಲದ ಸಂಯುಕ್ತಗಳ ರಸಾಯನವಿಜ್ಞಾನದಲ್ಲಿ ಕಂಡುಬರುವ ಎಲ್ಲ ಪದಾರ್ಥಗಳಲ್ಲೂ ಅವಶ್ಯ ಘಟಕವಾದ ಜಲಜನಕ ಪರಮಾಣುಕೇಂದ್ರಗಳು ಔಊ ಗುಂಪಿನಲ್ಲಿರುವ 1ಊ ಕೇಂದ್ರ. ಈ ದೃಷ್ಟಿಯಲ್ಲಿ, ಅಊ3 ಗುಂಪಿನಲ್ಲಿರುವ 1ಊ ಕೇಂದ್ರದಿಂದಾ ಗಲೀ ಅಥವಾ ಓಊ ಗುಂಪಿನಲ್ಲಿರುವ ಕೇಂದ್ರದಿಂದಾಗಲೀ ಭಿನ್ನವಾಗಿರುತ್ತದೆ. ಹೀಗೆ ಇವುಗಳ ಪ್ರತ್ಯೇಕ ವೈಶಿಷ್ಟ್ಯದ ಆಧಾರದ ಮೇಲೆ ಎಷ್ಟೊ ಅಣುರಚನಾಸ್ವರೂಪದ ಸಮಸ್ಯೆಗಳನ್ನು ಬಿಡಿಸಬಹುದು. ರಾಸಾಯನಿಕ ವಿಜ್ಞಾನದ ಸಂಯುಕ್ತಗಳಲ್ಲಿ ಸಾಮಾನ್ಯ ಪರಮಾಣುಕೇಂದ್ರಗಳಾದ 1ಊ, 19ಈ ಮತ್ತು 31P ಇವುಗಳ ಭ್ರಮಣ ಕೋನೀಯವೇಗವನ್ನೂ (ಸ್ಪಿನ್ ಆಂಗ್ಯುಲರ್ ಮೊಮೆಂಟಮ್) ಹೊಂದಿವೆ. ಇವುಗಳಿಗೆ ಸಂಬಂಧಿಸಿದ ಭ್ರಮಣ ಕ್ವಾಂಟಂ ಸಂಖ್ಯೆ 1/2 ಇರುತ್ತದೆ. ಇನ್ನೂ ಹೇರಳವಾಗಿ ದೊರೆಯುವ ಪರಮಾಣು ಕೇಂದ್ರಗಳಾದ 12c