ಪುಟ:Mysore-University-Encyclopaedia-Vol-1-Part-1.pdf/೨೩೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಮತ್ತೊಬ್ಬನಿಂದಾಗಿ ಇಲ್ಲವೇ ದೈವಲೀಲೆಯಿಂದ (ಪ್ರವಾಹದಿಂದ ಕೊಚ್ಚಿ,ಬಿರುಗಾಳಿಯಿಂದ ಹಾರಿ)ತನ್ನದೊಂದು ಸಾಮಾನು ಇನ್ನೊಬ್ಬನ ಆಸ್ತಿಯೊಳಗೆ ಪ್ರವೇಶಿಸುವುದುಆಕ್ರಮಣವಾಗದು. ಆದರೆ ತನ್ನದೇ ಆಕೃತ್ಯದಿಂದ ಹಾಗೆ ಸಾಮಾನು ಇಡಲ್ಪಟ್ಟಿದ್ದು ಅದಕ್ಕಾಗಿ ಪ್ರವೇಸಿದರೆ ಆಕ್ರಮ ಪ್ರವೇಶವಾಗುತ್ತದೆ. ತನಗೆ ಸ್ವಾಮಿತ್ವ ಅಥವಾ ಇತರ ಹಕ್ಕಿದೆಯೆಂಬ ಪ್ರಾಮಾಣಿಕ ನಂಬಿಕೆಯ ಬಲದಲ್ಲಿ ಇನ್ನೊಬ್ಬನ ಆಸ್ತಿಯನ್ನು ಪ್ರವೇಶಿಸುವುದು ಆಕ್ರಮಣವಲ್ಲವಾದರೂ ಸಂದೇಹನಿವಾರಣೆಯಾದ ಮೇಲೆ ಕಾನೂನಿನಂತೆ ನಡೆಯಬೇಕಾಗುವುದು.

ಕ್ರಮಬದ್ಧವಾಗಿಯೇ ಒಬ್ಬನ ಆಸ್ತಿಯೊಳಗೆ ಪ್ರವೇಶಿಸಿ ಬಳಿಕ ಅಲ್ಲಿ ಕಳ್ಳತನವೇ ಮುಂತಾದ ಆಕೃತ್ಯವನ್ನು ಮಾಡಿದರೆ ಅಂಥ ಪ್ರವೇಶ ಮೂಲದಿಂದಲೇ ಆಕ್ರಮ ಪ್ರವೇಶವಾಗುತ್ತದೆ;ಇದು ಆಸ್ತಿಯ ಪ್ರವೇಶಾನಂತರ ತಮ್ಮ ಅಧಿಕಾರ ದುರುಪಯೋಗ ಪಡಿಸುವ ಅಧಿಕಾರಿಗಳ ಕೃತ್ಯಕ್ಕೂ ಅನ್ವಯಿಸುತ್ತದೆ.

ಯೋಗ್ಯವಾದ ಬಲಪ್ರಯೋಗದ ಮೂಲಕ ಆಕ್ರಮಣಕಾರನನ್ನು ಹೊರದಬ್ಬುವ ಹಕ್ಕು ಆಸ್ತಿಯ ಒಡೆತನ ಮತ್ತು ಸ್ವಾಧೀನತಿಗಳನ್ನು ಸಿದ್ಧಪಡಿಸುವುದರ ಬಗ್ಗೆ ಕ್ರಮ ಕೈಗೊಳ್ಳಬೇಕಾಗುತ್ತದೆ.ಆಕ್ರಮಪ್ರರವೇಶ ಮಾಡಿದವನು ಪರಿಹಾರ ಧನವನ್ನೂ ತಾನು ಅನುಭೋಗಿಸಿದದ ಅದರ ಅದಾಯವನ್ನೂ ಒಡೆಯನಿಗೆ ತೆರಲು ಬದ್ಧ.

ಅಪರಾಧಿಕ ಅತಿಕ್ರಮ: ಯಾವನು ಅಪರಾಧ ಮಾಡುವ, ಆಸ್ತಿಯ ಸ್ವಾಧೀನತೆ ಇರುವ ಮನುಷ್ಯನಿಗೆ ಹೆದರಿಕೆ ಹುಟ್ಟಿಸುವ, ಅಪಮಾನ ಮಾಡುವ, ಅಥವಾ ತೊಂದರೆ ಕೊಡುವ ಉದ್ದೇಶದಿಂದ ಬೇರೊಬ್ಬನ ಆಸ್ತಿಯನ್ನು ಪ್ರವೇಶಿಸುತ್ತಾನೊ ಅಥವಾ ನ್ಯಾಯಸಮ್ಮತವಾಗಿ ಆಸ್ತಿಯನ್ನು ಪ್ರವೇಶಿಸಿರುತ್ತಾ ಮೇಲೆ ಹೇಳಿದ ಉದ್ಧೇಶಗಳೀಗಾಗಿ ಅಲ್ಲಿ ನ್ಯಾಯಬಾಹಿರವಾಗಿ ಉಲೀಯುತ್ತಾನೊ ಅವನು ಅಪರಾಧಿಕ ಅತಿಕ್ರಮಪ್ರವೇಶ ಮಾಡುತ್ತಾನೊ ಪೀನಲ್ ಕೋಡಿನಲಗಲಿ ವ್ಯಾಖ್ಯೆ ಇದೆ.

ಅಪರಾಧಿಕ ನ್ಯಾಯಶಾಸ್ತ್ರದಲ್ಲಿ ಸಾಧಾರಣವಾಗಿ ಉದ್ದೇಶದಷ್ಟೇ ತಿಳಿವಳಿಕೆಗೂ ಮಹತ್ತ್ವ ಕೊಲಾಗುತ್ತದೆ