ಪುಟ:Mysore-University-Encyclopaedia-Vol-1-Part-1.pdf/೨೯೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅನಿಲದ ಕೋಣೆ-ಅನಿಲ ದ್ರವೀಕರಣ ಈ ರಾಸಾಯನಿಕಕ್ರಿಯೆ ಶಾಖಜನಿಕ ಕ್ರಿಯೆಯಾಗಿದ್ದು ಕೋಕ್ ಬೇಗ ಉರಿದುಹೋಗುವುದರಿಂದ,ಉತ್ಪತ್ತಿಯಾಗುವ ಶಾಖವನ್ನು ಸಮತೂಗಿಸಲು ಸೂಕ್ತ ಪ್ರಮಾಣದಲ್ಲಿ ಉಗಿಯನ್ನು ಗಾಳಿಯೊಡನೆ ಬೆರೆಸುವುದುಂಟು.ಉತ್ಪಾದಕನಿಲದಲ್ಲಿ ಹೆಚ್ಚು ಭಾಗ ನೈಟ್ರೋಜನ್ನೇ ಆಗಿರುವುದರಿಂದ ಅದರ ಸಾಂದ್ರತೆ ಗಾಳಿಗಿಂತ ಸ್ವಲ್ಪ ಮಾತ್ರ ಕಡಿಮೆ ಇರುತ್ತದೆ.ಅದರ ಶಾಖೋತ್ಪಾದಕ ಸಾಮರ್ಥ್ಯ ಬಹಳ ಕಡಿಮೆ,130-140 ಅಷ್ಟೇ.ಸಾಮಾನ್ಯವಾಗಿ ಇದನ್ನು ತಯಾರಿಸುವುದು ಸ್ಥಳೀಯ ಉಪಯೋಗಕ್ಕೆ.

ದ್ರವೀಕೃತ ಪೆಟ್ರೋಲಿಯಂ ಅನಿಲ ಕಚ್ಚಾ ಪೆಟ್ರೋಲಿಯಂ ಅಥವಾ ನಿಸರ್ಗಾನಿಲಯಗಳಿಂದ ಬರಬಹುದು,ಇಲ್ಲವೆ ಪೆಟ್ರೋಲಿಯಂ ಶುದ್ಧೀಕರಣ ಸ್ಥಾವರಗಳಿಂದ ಬರಬಹುದು.ನಿಸರ್ಗಾನಿಲದಲ್ಲಿರುವ ಹೈಡ್ರೋಕಾರ್ಬನ್ಗಳಿಗಿಂತ ಸ್ವಲ್ಪ ಕಡಿಮೆ ಅಣುತೂಕವಿರುವ ಹೈಡ್ರೋಕಾರ್ಬನ್ಗಳ ಮಿಶ್ರಣ 3,4 ಕಾರ್ಬನ್ ಪರಮಾಣುಗಳಿಂದ ಹೈಡ್ರೋಕಾರ್ಬನ್ಗಳು ಇದರಲ್ಲಿರುತ್ತವೆ.ಈ ಮಿಶ್ರಣ ಸಾಮಾನ್ಯತಾಪದಲ್ಲಿ ಅನಿಲವಾಗಿದ್ದರೂ ಅದೇ ತಾಪದಲ್ಲೇ ಅಧಿಕ ಒತ್ತಡಕ್ಕೊಳಪಡಿಸಿ ದ್ರವೀಕರಿಸಬಹುದು.ಹಾಗೆ ದ್ರವೀಕರಿಸಿದ ಅನಿಲಗಳನ್ನು ಸಿಲಿಂಡರುಗಳಲ್ಲಿ ಸರಬರಾಜು ಮಾಡುತ್ತಾರೆ.

ಅಮೆರಿಕದಲ್ಲಿ ಅನಿಲ ಸರಬರಾಜು ಕಂಪನಿಯವರು ಅನಿಲಕ್ಕೆ ಅಧಿಕ ಬೇಡಿಕೆ ಇರುವಾಗ ಬೇಕಾಗಬಹುದೆಂದು ಕೈಗಾವಲಿಗಾಗಿ ಇದನ್ನು ಇಟ್ಟುಕೊಂಡಿರುತ್ತಾರೆ.ಅಲ್ಲದೆ ಸರಬರಾಜು ಕೊಳವೆ ಸಾಲುಗಳು ಹತ್ತಿರ ಇಲ್ಲದಿರುವಂಥ ಗ್ರಾಮಾಂತರ ಪ್ರದೇಶಗಳಲ್ಲೂ ಇದರ ಬಳಕೆ ರೂಢಿಯಲ್ಲಿದೆ.ಪೆಟ್ರೋಲಿಯಂ ಶುದ್ಧೀಕರಣ ಸ್ಥಾವರಗಳು ಭಾರತದಲ್ಲಿ ಪ್ರಾರಂಭವಾದ ತರುವಾಯ ಇಲ್ಲಿಯೂ ದ್ರವೀಕೃತ ಪೆಟ್ರೋಲಿಯಂ ಅನಿಲದ ಬಳಕೆ ಹೆಚ್ಚಾಗುತ್ತಿದೆ.

ಅನಿಲದ ಕೋಣೆ;ಮರಣ ದಂಡನೆಗೆ ಗುರಿಯಾದ ಅಪರಾಧಿಗಳನ್ನು ತಲೆ ಕಡಿದೋ ನೇಣು ಹಾಕೋ ಸಾಯಿಸುವ ಕ್ರೂರ ವಿಧಾನವನ್ನು ಬಿಟ್ಟು ಮಾನವೀಯ ರೀತಿಯಲ್ಲಿ ಸಾಯಿಸಲು,ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಬಳಕೆಯಲ್ಲಿರುವ ಕೋಣೆ (ಗ್ಯಾಸ್ ಚೇಂಬರ್).

ಮೊಟ್ಟಮೊದಲು (1924) ನೆವಾಡ ಸಂಸ್ಥಾನದಲ್ಲಿ ಜಾರಿಗೆ ತಂದರೂ ಕೆವಲ ನಾಲ್ಕರಲ್ಲಿ ಒನ್ದು ಸಂಸ್ಥಾನದಲ್ಲಿ ಈ ತೆರನ ದಂಡನೆ ವಿಧಿಸಿದ್ದಾರೆ.ಎಲ್ಲ ಕಡೆಗಳಲ್ಲೂ ಮುಚ್ಚಿರುವ ಒಂದು ಚಿಕ್ಕ ಕೋಣೆಯಲ್ಲಿ ಅಪರಾಧಿಯನ್ನು ಕುರ್ಚಿಯಲ್ಲಿ ಕೂರಿಸಿ,ಬಿಗಿದು ವಿಷದ ಅನಿಲದ ಹೊಗೆಯಿಂದ ತಟಕ್ಕನೆ ಕುಸಿದುಬಿದ್ದು ನೋವಿಲ್ಲದೆ ಅಸುನೀಗುತ್ತಾನೆ.ಆದರೆ ಬಹಳ ಮಂದಿ ಉಸಿರು ಕಟ್ಟಿ ಹಿಡಿದು ನಿಧಾನವಾಗಿ ಸ್ವಲ್ಪ ಸ್ವಲ್ಪವಾಗಿ ಉಸಿರುವಾಡುವರು.ಅಂಥವರು ಸಾಯುವ ಮುನ್ನ ತುಂಬ ಹೊತ್ತು ನರಳಾಡಬೇಕಾಗುವುದು.(ನೋಡಿ-ಮರಣದಂಡನೆ;ನಾಜಿಗಳು)

ಅನಿಲದ ಮೊಗವಾಡ:ಮನುಷ್ಯ ಜೀವಕ್ಕೆ ಅಪಾಯಕಾರಕ ಅನಿಲ ಸೇವನೆಯಿಂದ ತಟ್ಟಬಹುದಾದ ಹಾನಿಯಿಂದ ಮನುಷ್ಯನನ್ನು ರಕ್ಶಿಸುವ ಸಾಧನೆ(ಗ್ಯಾಸ್ ಮಾಸ್ಕ್).ಇದಕ್ಕೆ ಈಗ ಉಸಿರಾಟಕವೆಂದೂ (ರೆಸ್ಪಿರೇಟರ್) ಹೆಸರಿದೆ.ಯುದ್ಧದ ಸಲುವಾಗಿ ಮೊಟ್ಟಮೊದಲು (ಜನವರಿ 31,1915) ಒಂದನೆಯ ಮಹಾಯುದ್ಧದ ಕಾಲದಲ್ಲಿ ಪೋಲೆಂಡಿನ ಜರ್ಮನರು ರಷ್ಯನರ ಮೇಲೆ ವಿಷಾನಿಲವನ್ನು ಹಾಕಿದರು,ಮತ್ತೆ ಬೆಲ್ಜಿಯಮ್ಮಿನಲ್ಲಿ ಮಿತ್ರರಾಷ್ಟ್ರಗಳ ಸೇನೆಗಳ ಮೇಲೂ ಬಳಸಿದರು.ಆಗ ಅನಿಲ ಮೊಗವಾಡದ ಅವಶ್ಯಕತೆ ಉಂಟಾಯಿತು.

ವಿಷಾನಿಲದ ಕೆಡುಕು ತಾಗದಂತೆ ತಡೆಯಲು ಮೊದಲು ತಯಾರಿಸಿ ಬಳಸಿದ ಸೈನಿಕನ ಮೊಗವಾಡ ಒಡ್ಡೊಡ್ಡಾಗಿತ್ತು.ಮೊಗದ ಸುತ್ತ ತಗುಲಿಸಿರುವ ಮೊಗವಾಡ ಸೈನಿಕನ ಈಯ ಮುಂದೆ ಕೊರಳಿಗೆ ತೂಗು ಕಟ್ಟಿರುವ,ಮೊಗವಾಡದೊಂದಿಗೆ ಕೊಳವೆಯಿಂದ ಕೂಡಿರುವ ಕರಾಟವನ್ನು (ಕ್ಯಾನಿಸ್ಟರ್) ಹೊತ್ತುಕೊಂಡಿರಬೇಕಿತ್ತು.ಒಣ ಇದ್ದಲು ತುಂಬಿದ ಕವಾಟದ ಮೂಲಕ ಬರುವ ಕೊಳವೆಯನ್ನು ಸೈನಿಕ ಬಾಯಲ್ಲಿ ಇರಿಸಿಕೊಂಡು ಉಸಿರು ಎಳೆದುಕೊಂಡಾಗ ವಿಷಾನಿಲ ಸೋಸಿ ಬರುತ್ತಿತ್ತು.ಮೂಗಿನಲ್ಲಿ ಗಾಳಿ ತೂರದಂತೆ ಒಂದು ಬಂಧನಿ(ಕ್ಲಿಪ್) ಹಾಕುತ್ತಿದ್ದರು.ಇವನ್ನು ತೊಟ್ಟ ಸೈನಿಕನ ಚಲನವಲನವೂ,ಕಾದಾಡುವ ಸಾಮರ್ಥ್ಯವೂ ಕುಗ್ಗಿತ್ತು.ಗುಂಡಿನ ಸುರಿಮಳೆಯಿಂದ ತಪ್ಪಿಸಿಕೊಳ್ಳಲು ಸೈನಿಕ ನೆಲದ ಮೇಲೆ ಕವುಚಿ ಬೀಳಲು ಆತಂಕವಾಗಿತ್ತು.

ಎರಡನೆಯ ಮಹಾಯುದ್ಧದ ಹೊತ್ತಿಗೆ ಅನುಕೂಲವಾದ ಮೊಗವಾಡಗಳು ಬಂದಿದ್ದವು.ಇವು ಹಗುರವಾಗಿದ್ದು ತೊಡಲು ಚೆನ್ನಾಗಿದ್ದವು.ಕಣ್ಣುಗಳಿಗೆ ಅಡ್ಡ ಬರುತ್ತಿರಲಿಲ್ಲ.ಮೂಗಿನ ಬಂಧನ,ಬಾಯಲ್ಲಿನ ಕೊಳವೆ ಇಲ್ಲದೆ ಉಸಿರಾಟ ಸರಾಗವಾಯಿತು.ಅಲ್ಲದೆ ಕರಾಟವನ್ನು ಹೆಗಲ ಮೇಲೆ ಹಾಕಿ,ಕಂಕುಳಿನ ಕೆಳಗೆ ಇರಿಸುತ್ತಿದ್ದರಿಂದ ಸೈನಿಕನ ಹೋರಾಟಗಳಿಗೆ ಏನೂ ಅಡ್ಡ ಬರುತ್ತಿರಲಿಲ್ಲ.

ಮೊಗವಾಡದಲ್ಲಿ ತಿದ್ದುಪಾಟುಗಳು ಆಗಿಬಂದರೂ ವ್ಷಾನಿಲ ತುಂಬಿದ ಗಾಳಿಯನ್ನು ಸೋಸಲು ಬಳಸುತ್ತಿದ್ದ ರಾಸಾಯನಿಕಗಳು ಮಾತ್ರ ಬದಲಾಗಿಲ್ಲ.ಕರಾಟಗಳ್ಲ್ಲಿನ ಇದ್ದಲಿ ಸೋಡಾ ಲೈಮು ಎಂಥಹ ವಿಷಾನಿಲಗಳನ್ನೂ ಹೀರಿಕೊಂಡು ಸಯ್ಗೊಳಿಸುತ್ತಿದ್ದವು.ಆದರೆ ವಿಷಾನಿಲ ಹುಟ್ಟಿಸುವ ಕೆಲವು ರಾಸಾಯನಿಕಗಳು ಎಷ್ಟೋ ಹೊತ್ತು ನುಣ್ಣನೆಯ ಪುಡಿಯಂತೆ ಗಾಳಿಯಲ್ಲಿ ತೇಲಾಡುತ್ತಿದ್ದುವು.ಇವನ್ನು ತಡೆವಂತೆ ಗಾಳಿಯನ್ನೂ ಸೋಸಿಬಿಡುವ ಉಣ್ಣೆ ತಡಿಯ ಪಟ್ಟೆಗಳು ಕರಾಟಗಳಲ್ಲಿವೆ.


ಅಮೆರಿಕದ ನೆಲ,ಜಲ,ಆಕಾಶಸೇನಗಳಲ್ಲಿ ಹಲವಾರು ವರ್ಷಗಳಿಂದಲೂ ಜಾರಿಯಲ್ಲಿರುವ,ವಿಷಾನಿಲದ ಮೊಗವಾಡ ಇನ್ನೂ ಚೆನ್ನಾಗಿದೆ.ಇದರಲ್ಲಿ ಬಿಡಿಯಾಗಿ ಯಾವ ಕರಾಟವೂ ಇಲ್ಲ.ಜೋಡಿಸಬೇಕಾದ ಕೊಳವೆಯೂ ಇಲ್ಲ.ಬದಲಾಗಿ,ಮೊಗವಾಡದ ಮುಂಭಾಗದಲ್ಲಿ ಅಚ್ಚೊಯ್ದಿರುವ ಸ್ಪಂಜಿನಂಥ ಪದರ ಪಟ್ಟಿಗಳ ಮೂಲಕ ವಿಷಾನಿಲ ಸೋಸಿ ಒಳಗೆ ಹೋಗುತ್ತದೆ.ರಾಸಾಯನಿಕ,ಏಕಾಣುಜೀವಿಕ,ವಿಕಿರಣ ಕಾರಕಗಳಿಂದ ಬರುವ ವಿಷಾನಿಲಗಳನ್ನೂ ಗಾಳಿ ತೂರುದ್ರವಗಳನ್ನೂ ಇದು ಚೆನ್ನಾಗಿ ತಡೆಗಟ್ಟುತ್ತದೆ.

ಸೈನ್ಯದಲ್ಲೇ ಅಲ್ಲದೆ,ಅನಿಲದ ಮೊಗವಾಡಗಳು ಕೈಗಾರಿಕೆಗಳಲ್ಲೂ ಬಳಕೆಯಲ್ಲಿವೆ.ಗಣಿ ಕೆಲಸದ,ಸಹಜವಾಗಿಯೇ ತಯಾರಿಕೆಯ ವಿಧಾನಕ್ರಮಗಳಿಂದಲೇ ಏಳುವ ಹಾನಿಕಾರವೆನಿಸುವ ಹೊಗೆಗಳನ್ನೂ ಅನಿಲಗಳನ್ನೂ ಹೊರಬಿಡುವ,ರಾಸಾಯನಿಕ ಮತ್ತಿತರ ಕಾರ್ಖಾನೆಗಳ ಕೆಲಸಗಾರರಿಗೆ ಹಾನಿ ತಟ್ಟದಂತೆ ತಡೆಯಲು ಇವು ಕೆಲಸಕ್ಕೆ ಬರುತ್ತವೆ.ಬೆಂಕಿ ಆರಿಸುವವರೂ ನೆರವಿಗೆ ತಂಡದವರೂ ತಮ್ಮ ಎಂದಿನ ಸಲಕರಣೆಗಳೊಂದಿಗೆ ಅನಿಲದ ಮೊಗವಾಡಗಳನ್ನೂ ಇಟ್ಟುಕೊಂಡಿರಬೇಕು.ಅದರಲ್ಲೂ ವಿಶೇಷವಾಗಿ,ಕಳೆದ ಎರಡನೆಯ ಮಹಾಯುದ್ಧದ ಕಾಲದಲ್ಲಿ ಯುರೋಪಿನಲ್ಲಿ ವಿಷಾನಿಲದ ಮೊಗವಾಡಗಳನ್ನು ಜನರಿಗೂ ಕೊಟ್ಟಿದ್ದರಂತೆ.

ಅನಿಲ ದ್ರವೀಕರಣ:ಘನ,ದ್ರವ,ಅನಿಲ-ಇವು ಒಂದು ವಸ್ತುವಿನಲ್ಲಿ ಅಡಕವಾಗಿರುವ ಉಷ್ಣವನ್ನು ಅವಲಂಬಿಸಿ ಇರುವ ಸ್ಥಿತಿತ್ರಯಗಳು.ವಸ್ತುವಿನ ಅನಿಲಸ್ಥಿತಿಯಲ್ಲಿ ಅಣುಗಳ ಚಲನಶಕ್ತಿ ಮತ್ತು ಪರಸ್ಪರ ಅಂತರ ಹೆಚ್ಚಾಗಿದ್ದು ಆಕರ್ಷಣಬಲ ಕನಿಷ್ಟವಾಗಿರುವುದು.ಆದ್ದರಿಂದ ಒಂದು ಅನಿಲವನ್ನು ದ್ರವೀಕರಿಸಬೇಕಾದರೆ ಅದನ್ನು ತಂಪು ಮಾಡುವುದರ ಮೂಲಕ ಅಣುಗಳ ಚಲನಶಕ್ತಿಯನ್ನು ಕಡಿಮೆ ಮಾಡಬೇಕು.ದ್ರವದಲ್ಲಿರುವಂತೆ ಅಣುಗಳು ಪರಸ್ಪರ ಹತ್ತಿರ ಬರುವಂತೆ ಮಾಡಲು ಒತ್ತಡ ಹೆಚ್ಚಿಸಬೇಕು.

ಅನಿಲಗಳನ್ನು ದ್ರವೀಕರಿಸುವ ಅಭಿಪ್ರಾಯ ಮೊಟ್ಟಮೊದಲು ಯಾರಿಂದ ಉದ್ಭವಿಸಿತೆಂಬುದು ವಿವಾದಾಸ್ಪದ.ಬಾಹ್ಯಾಕಾಶದ ಉಷ್ಣತೆಗೆ ಭೂಮಿಯನ್ನಿ ಶ್ಯೈತ್ಯೀಕರಿಸಿದರೆ ಭೂಮಿಯ ವಾತಾವರಣ ದ್ರವೀಕರಣಗೊಳ್ಳುವುದೆಂಬ ಅಭಿಪ್ರಾಯವನ್ನು ಲವ್ ವಸೈ ಎಂಬಾತ ವ್ಯಕ್ತಪಡಿಸಿದ್ದ.ಈತ ಯಾವ ಅನಿಲವನ್ನು ದ್ರವೀಕರಿಸದಿದ್ದರೂ ಈತನ ಸಹೋದ್ಯೋಗಿಗಳಾದ ಮಾಂಗೆ ಮತ್ತು ಕ್ಲೂಏ ಎಂಬುವರು ಸು.1790ರಲ್ಲಿ ಮಂಜುಗಡ್ಡೆ ಮತ್ತು ಉಪ್ಪು-ಇವುಗಳ ಮಿಶ್ರಣದಿಂದ ಶೈತ್ಯಗೊಳಿಸಿದ ಗಾಜಿನ ಕೊಳವೆಯಲ್ಲಿ ಗಂಧಕದ ಡೈ ಆಕ್ಸೈಡ್ ಅನಿಲವನ್ನು ದ್ರವೀಕರಿಸಿದರು.ಸುಮಾರು ಇದೇ ಕಾಲದಲ್ಲಿ ವಾನ್ ಮೇರಂ ಮತ್ತು ಪೀಟ್ಸ್ ವಾನ್ ಟ್ರೂಸ್ಟ್ವಿಕ್ ಎಂಬುವರು ಅಮೊನಿಯ ಅನಿಲ ಬಾಯಿಲ್ ನಿಯಮಕ್ಕನುಗುಣವಾಗಿ ವರ್ತಿಸುವುದೇ ಇಲ್ಲವೇ ಎಂಬುದನ್ನು ಪರೀಕ್ಷಿಸಲು ಅದನ್ನು ಒಂದು ನಿರ್ದಿಷ್ಟ ಒತ್ತಡಕ್ಕೊಳಪಡಿಸಿದಾಗ ಅದು ದ್ರವೀಕರಣ ಹೊಂದುವುದನ್ನು ಗಮನಿಸಿದರು.1799ರಲ್ಲಿ ಗೀಟಾನ್ ಡ ಮಾರ್ವೋ ಎಂಬ ವಿಜ್ಞಾನಿ ಅಮೊನಿಯ ಅನಿಲವನ್ನು ಉಪ್ಪು ಮತ್ತು ಕ್ಯಾಲ್ಸಿಯಂ ಕ್ಲೋರೈಡ್ ಮಿಶ್ರಣದ ಉಷ್ಣತೆಗೆ ತಮ್ಪುಮಾಡಿ ದ್ರವೀಕರಿಸಿದ.1805ರಲ್ಲಿ ನಾರ್ತ್ ಮೋರ್ ಎಂಬಾತ ಯಾಂತ್ರಿಕವಾಗಿ 15 ವಾಯುಮಾನಗಳವರೆಗೆ ಅನಿಲಗಳ ಒತ್ತಡ ಹೆಚ್ಚಿಸುವ ವಿಧಾನ ಕಂಡುಹಿಡಿದು ಕ್ಲೋರೀನ್ ಅನಿಲವನ್ನು ದ್ರವೀಕರಿಸಬಹುದೆಂದು ತೋರಿಸಿದ.

1823ರವರೆಗೆ ಈ ದಿಶೆಯಲ್ಲಿ ಮತ್ತೆ ಯಾವ ಪ್ರಯೋಗವೂ ಕಾಣಬರುವುದಿಲ್ಲ.ಇದೇ ವರ್ಷದಲ್ಲಿ ಫ್ಯಾರಡೆ ಅನಿಲಗಳ ದ್ರವೀಕರಣವನ್ನು ಪ್ರಯತ್ನಿಸಿದ.

ಅವನು ಚಿತ್ರ 1ರಲ್ಲಿ ತೋರಿಸಿರುವ ಉಪಕರಣವನ್ನುಪಯೋಗಿಸಿ ಕ್ಲೋರೀನ್ ಅನಿಲವನ್ನು ದ್ರವೀಕರಿಸಿದ.ಕಡಿಮೆ ಉದ್ದದ ಒಂದು ಗಾಜಿನ ಕೊಳವೆಯಲ್ಲಿ ರಾಸಾಯನಿಕ ಕ್ರಿಯೆಯಿಂದ ಕ್ಲೋರೀನ್ ಅನಿಲ ಉತ್ಪತ್ತಿ ಮಾಡಿದರೆ ಮತ್ತೊಂದು ಭಾಗದಲ್ಲಿ ಶೇಖರಗೊಳ್ಳುವುದು.ಶೇಖರಣೆಯಾಗುತ್ತ ಒತ್ತಡ ಹೆಚ್ಚುತ್ತಿರುವುದು ಉದ್ದದ ಕೊಳವೆಯನ್ನೂ ಮಂಜಿನಿಂದ ಶೈತ್ಯಗೊಳಿಸಿದರೆ ಅನಿಲ ದ್ರವವಾಗಿ ಪರಿವರ್ತನೆ ಹೊಂದಿ ಶೇಖರವಾಗುವುದು.

ಈ ವಿಧಾನವನ್ನನುಸರಿಸಿ 1824ರಲ್ಲಿ ಥಿಲೋರಿಯರ್ ಇಂಗಾಲದ ಡೈ ಆಕ್ಸೈಡ್ ಅನಿಲವನ್ನು ಹೆಚ್ಚಿನ ಪ್ರಮಾಣದಲ್ಲಿ ದ್ರವೀಕರಿಸಿದ.ಕಾಯಿಸಿದಾಗ ಈ ದ್ರವ ಶೀಘ್ರ ವಿಕಾಸ ಹೊಂದುವುದನ್ನು ಈ ಪ್ರಯೋಗಗಳಲ್ಲಿ ನೋಡಿ.ಅವಾಹಕದ ಒಳ ಹೊದಿಕೆಯಿರುವ ಪೆಟ್ಟಿಗೆಯೊಳಕ್ಕೆ ಒಂದು ರಂಧ್ರದ ಮುಖಾಂತರ ಈ ದ್ರವ ಹೋಗುವಂತೆ ಮಾಡಿದ.ಮಂಜಿನೋಪಾದಿಯಲ್ಲಿರುವ ಘನವಸ್ತು ಉತ್ಪತ್ತಿಯಾಗುವುದೆಂದು