ಪುಟ:Mysore-University-Encyclopaedia-Vol-1-Part-1.pdf/೩೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅನುರೂಪಶ್ರೇಣಿಗಳು - ಅನುವಂಶೀಯತೆ ಪರಸ್ಪರ ಅನನೂರೂಪವಾಗಿವೆ. ಇವುಗಳನ್ನು ಬೇರ್ಪಡಿಸುವ ವಕ್ರವಲಯಕ್ಕೆ ಅನನುರೂಪತೆ (ಅನ್ಕನ್ಫಾರ್ಮಿಟಿ) ಎಂಬ ಹೆಸರಿದೆ. ಇದರ ವ್ಯಾಪ್ತಿ ಅತ್ಯಲ್ಪ ಪ್ರದೇಶಕ್ಕ್ಕೆ ಸೀಮಿತಗೊಂಡಿದ್ದರೆ ಅದನ್ನು ಸ್ಥಳೀಯ ಅನನುರೂಪತೆಯೆಂದೂ ವಿಶಾಲಪ್ರದೇಶಕ್ಕೆ ಹಬ್ಬಿದ್ದರೆ ಅದನ್ನು ಪ್ರದೇಶಿಕ ಅನನುರೂಪತೆಯೆಂದೂ ಕರೆಯುತ್ತಾರೆ. ಬೇರ್ಪಡಿಸಿದ ಎರಡು ಸ್ತರಸಮೂಹಗಳ ಕಾಲಾಂತರಸೂಚಿ ಅನನುರೂಪತೆ. ಅನನುರೂಪತೆಯಲ್ಲಿ ಎರಡು ವಿಧ: ಓರೆಯಾಗಿರುವ ಪದರಗಳ (ಟಿಲ್ಪೆಡ್ ಬೆಡ್ಸ್) ಮೇಲೆ ಅನನುರೂಪತೆ ವ್ಯಾಪಿಸಿ ಎರಡು ಸ್ತರಸಮೂಹಗಳನ್ನು ಪ್ರತ್ಯೇಕಿಸಿದರೆ (ಅಯಂಗ್ಯುಲರ್ ಅನ್ಕನ್ಫಾರ್ಮಿಟಿ) ಎಂದು ಕರೆಯುತ್ತಾರೆ. ಚಿತ್ರ ೨ರಲ್ಲಿ ಕಾಣಿಸಿರುವ A ಮತ್ತು B ಸ್ತರಸಮೂಹಗಳು ಓರೆಯಾದ ಪದರಗಳ ಮೇಲಿವೆ. ಆದ್ದರಿಂದ ಇಲ್ಲಿರುವ ಅನನುರೂಪತೆ C ಅಸಾರೂಪ್ಯಕ್ಕೆ ನಿದರ್ಶನ. P ಪದರಗಳು ಪರಸ್ಪರ ಸಮಾನಾಂತರವಾಗಿರಬಹುದು. ಚಿತ್ರ ೩ರಲ್ಲಿರುವ A ಮತ್ತು B ಸ್ತರಸಮೂಹಗಳನ್ನು ಬೇರ್ಪಡಿಸುವ ಅನನುರೂಪತೆಯ ಹೆಸರು ಅಸಂಗತಿ (ಡಿಸ್ಕನ್ಫಾರ್ಮಿಟಿ). (ಎ.ಎನ್.ಎಸ್.ಐ.) ಅನುರೂಪಶ್ರೇಣಿಗಳು: ಒಂದು ಸಂಯುಕ್ತಕ್ಕೂ ಅದರ ಪಕ್ಕದ ಸಂಯುಕ್ತಕ್ಕೂ ಅಣುಸೂತ್ರದಲ್ಲಿ ವ್ಯತ್ಯಾಸವಿರುವಂಥೆ ಸಾವಯವ ಸಂಯುಕ್ತಗಳ ಶ್ರೇಣಿಗಳು (ಹೊಮೊಲೋಗಸ್ ಸೀರೀಸ್). ಇದಕ್ಕೆ ಅತ್ಯಂತ ಸರಳನಿದರ್ಶನ, ಆಲ್ಕೇನ್ ಶ್ರೇಣಿ. ಈ ಶ್ರೇಣಿಗೆ ಸೇರಿದ ಸಂಯುಕ್ತಗಳನ್ನು ಆಲ್ಕೋನ್ಗಳೆಂದು ಕರೆಯುತ್ತಾರೆ. ಇವೆಲ್ಲವೂ ಹೈಡ್ರೋಕಾರ್ಬನ್ಗಳು. ಅಂದರೆ ಹೈಡ್ರೋಜನ್, ಕಾರ್ಬನ್ಗಳೆರಡೇ ಇರುವ ಸಂಯುಕ್ತಗಳು. ಆಲ್ಕೇನ್ ಶ್ರೇಣಿ ಹೊರತು ಎಲ್ಲ ಅನುರೂಪಶ್ರೇಣಿಗಳಿಗೂ ಒಂದು ವಿಶಿಷ್ಟ ಅಣ್ವಂಗವಿರುತ್ತದೆ (ರ್ಯಾಡಿಕಲ್). ಅಣ್ವಂಗವೆಂದರೆ ವಿಶಿಷ್ಟ ರಾಸಾಯನಿಕ ಗುಣಗಳುಳ್ಳ ಒಂದು ನಿರ್ದಿಷ್ಟ ಪರಮಾಣುಪುಂಜ. ಒಂದು ಅನುರೂಪಶ್ರೇಣಿಗೆ ಸೇರಿದ ಎಲ್ಲ ಸಂಯುಕ್ತಗಳಲ್ಲೂ ಒಂದೇ ಅಣ್ವಂಗವಿರುತ್ತದೆ. ಉದಾಹರಣೆಗೆ, ಅಣ್ವಂಗ ಆಲಿಫ್ಯಾಟಿಕ್ ಆಲ್ಕೋಹಾಲ್ ಶ್ರೇಣಿಯ ಎಲ್ಲ್ಲ ಸಂಯುಕ್ತಗಳಲ್ಲ್ಲೂ ಇರುತ್ತದೆ. ಹಾಗೆಯೇ ಆಲಿಫ್ಯಾಟಿಕ್ ಆಮಿನ್ಗಳಲ್ಲಿ -NH2 ಅಣ್ವಂಗವೂ ಆಲ್ಪಿಹೈಡುಗಳಲ್ಲಿ - CHD ಅಣ್ವಂಗವೂ ಕಾರ್ಬಾಕ್ಸಿಲಿಕ್ ಆಮ್ಲಗಳಲ್ಲಿ COOH ಅಣ್ವಂಗವೂ ಇರುತ್ತವೆ. ಒಂದು ಅನುರೂಪಶ್ರೇಣಿಗ ಸೇರಿದ ಸಂಯುಕ್ತಳೆಲ್ಲಕ್ಕೂ, ಒಂದು ಸಾಮಾನ್ಯ ಅಣುಸೂತ್ರವನ್ನು ಬರೆಯಬಹುದು. ಉದಾಹರಣೆಗೆ ಆಲ್ಕೇನ್ಗಳ ಅಣುಸೂತ್ರ CnH2n+2. ಆಲಿಫ್ಯಾಟಿಚ್ ಆಲ್ಕೋಹಾಲ್ಗಳ ಅಣುಸೂತ್ರ CnH2n+1OH. ಅಲ್ಲದೆ ಒಂದು ಅನುರೂಪ ಶ್ರೇಣೆಯ ಎಲ್ಲ ಸಂಯುಕ್ತಗಳಲ್ಲಿಯೂ ಒಂದೇ ಅಣ್ವಂಗವಿರುವುದರಿಂದ ಅವುಗಳ ರಾಸಾಯನಿಕ ವರ್ತನೆ ಹೆಚ್ಚು ಕಡಿಮೆ ಒಂದೇ ಆಗಿರುತ್ತದೆ. ಆದರೆ ಬಣ್ಣ, ವಾಸನೆ, ದ್ರವಿಸುವ ಬಿಂದು, ಕುದಿಯುವ ಬಿಂದು ಮುಂತಾದ ಭೊಉತಿಕ ಗುಣಗಳನ್ನು ತೆಗೆದುಕೊಂಡರೆ ಶ್ರೇಣಿಯಲ್ಲಿ ಅಣುತೂಕ ಹೆಚ್ವಾಗುತ್ತ ಹೋದಂತೆ, ಈ ಭೊಉತಿಕಗುಣಗಳು ಒಂದು ಕ್ರಮದಲ್ಲಿ ವ್ಯತ್ಯಾಸವಾಗುತ್ತ ಹೋಗುತ್ತವೆ. ಅನುರೂಪಶ್ರೇಣಿಗೆ ಸೇರಿದ ಸಂಯುಕ್ತಗಳ ಗುಣಗಳಲ್ಲಿ ಈ ರೀತಿಯ ಒಂದು ಕ್ರಮಬದ್ಧ ವ್ಯವಸ್ಥೆ ಇರುವುದರಿಂದ ಅವುಗಳ ಅಧ್ಯಯನ ಸುಗಮಗೊಳ್ಳುತ್ತದೆ. ಅನುರೂಪಶ್ರೇಣಿಗೆ ಸೇರಿದ ಸಂಯುಕ್ತಗಳಲ್ಲಿ ಒಂದನ್ನು ಇನ್ನೊಂದರ ಅನುರೂಪಿ (ಹೊಮೊಲೋಗ್)ಎನ್ನುತ್ತಾರೆ. ಪ್ರೋಪೇನ್ ಈಥೇನಿನ ಮೇಲಿನ ಅನುರೂಪಿ; ಮೀಥೇನು ಈಥೇನಿನ ಕೆಳಗಿನ ಅನುರೂಪಿ. ಕೆಲವು ವೇಳೆ ಎರಡು ಸಂಯುಕ್ತಗಳು ಒಂದು ಅನುರೂಪ ಶ್ರೇಣಿಗೆ ಸೇರದ್ದಿದ್ದರೂ ಅವೆರಡಕ್ಕೂ CH2 ವ್ಯತ್ಯಾಸವಿದ್ದರೆ ಒಂದನ್ನು ಇನ್ನೊಂದರ ಅನುರೂಪಿ ಅನ್ನುವುದುಂಟು. ಉದಾಹರಣೆಗೆ ಟಾಲ್ವೀನನ್ನ್ಯ್ (C6H5CH3) ಬೆನ್ಸೀನಿನ (C6H6)ಅನುರೂಪಿ ಎನ್ನುತ್ತಾರೆ. ಅನುವಂಶೀಯತೆ: ಜೀವಿ ತಂದೆತಾಯಿಯರಿಂದ ಪಡೆಯುವ ಲಕ್ಷಣಗಳನ್ನು ನಿರ್ಧರಿಸುವ ಮೂಲಾಂಶಗಳು ಪರಿಸರದಲ್ಲಿ ಪ್ರಕಟಗೊಳ್ಳುವಿಕೆ (ಹೆರೆಡಿಟಿ; ಇನ್ಹೆರಿಟನ್ಸ್). ಸಸ್ಸ್ಯಗಳ ಮತ್ತು ಪ್ರಾಣಿಗಳ ರಚನೆ ಶಾರೀರಕ ಲಕ್ಷ್ಯಣಗಳು ಒಂದು ಗೊತ್ತಾದ ಪರಿಸರದಲ್ಲಿ ಅನುವಂಶೀಯವರ್ತನೆಯಿಂದುಂಟಾಗುತ್ತವೆ ಎಂಬುದು ಸರ್ವನಿದಿತ. ಸಾವಾಯವ ಅನುವಂಶೀಯತೆ (ಆರ್ಗ್ಯಾನಿಕ್ ಇನ್ಹೆರಿಟನ್ಸ್) ಮತ್ತು ಅದು ಕಾರ್ಯಗತವಾಗಲು ಬೇಕಾದ ಪರಿಸರ ಒಂದಕ್ಕೊಂದು ಪೂರಕವಾದವೂ ಬೇರ್ಪಡಿಸಲಾಗದವೂ ಆಗಿವೆ. ಇವೆರಡರಲ್ಲಿ ಪ್ರತಿಯೊಂದರ ಸ್ವಲ್ಪ ವ್ಯತ್ಯಾಸವೂ ಒಂದೇ ರೀತಿಯಲ್ಲಿ ಜೀವಿಗಳಲ್ಲಿ ಮಾರ್ಪಾಟುಗಳನ್ನುಂಟುಮಾಡುವ ಶಕ್ತಿ ಹೊಂದಿರುತ್ತದೆ. ಆದ್ದರಿಂದ ಅನುವಂಶೀಯತೆ ಮತ್ತು ಪರಿಸರ, ಇವೆರಡರಲ್ಲಿ ಯಾವುದು ಮುಖ್ಯವಾದದ್ದು? ಯಾವುದು ಹೆಚ್ಚು ಪ್ರಭಾವಶಾಲಿಯಾದದ್ದು? ಎಂದು ಆಗಾಗ್ಗೆ ಕೇಳಿಬರುವ ಪ್ರಶ್ನೆಗಳು ಅರ್ಥವಿಲ್ಲದವುಗಳಾಗಿವೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಇವೆರಡೂ ವ್ಯಕ್ತಿ ವ್ಯಕ್ತಿಗಳಲ್ಲಿ ಕಂಡುಬರುವ ವ್ಯತ್ಯಾಸಗಳನ್ನು ಉಂಟುಮಾಡುವಲ್ಲಿ ಸಮ್ಮನ ಪ್ರಾಧಾನ್ಯ ಪಡೆದಿವೆ. ಇವುಗಳ ಅನ್ಯೋನ್ಯ ಸಂಬಂಧ ಏನೇ ಇರಲಿ ಮೊದಲು ಅನುವಂಶೀಯತೆಯ ಮಹತ್ವ, ಕಾರ್ಯಗಳು ಮುಂತಾದವನ್ನೆಲ್ಲ ತಿಳಿದುಕೊಂಡು ಆನಂತತ ಪರಿಸರದ ವ್ಯತ್ಯಾಸಗಳಿಂದುಂಟಾಗುವ ಪರಿಣಾಮಗಳನ್ನು ಪರಿಶೀಲಿಸುತ್ತೇವೆ. ಅನುವಂಶೀಯತೆಯ ವಾದಗಳು: ಬಹಳ ಕಾಲದಿಂದಲೂ ಅನುವಂಶೀಯತೆಯ