ಪುಟ:Mysore-University-Encyclopaedia-Vol-1-Part-1.pdf/೩೩೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅನೇಕತ್ವವಾದ

ಭಿನ್ನ ಭಿನ್ನವಾದ ವ್ಯಕ್ತಿಗಳು ಪರಸ್ಪರ ಪ್ರೇಮದಿಂದ ಒಂದುಗೂಡಿರುವುದು ಸ್ವಾಭಾವಿಕವೆಂದು ಮಿತ್ರತ್ವವೇ ವಿಶ್ವದ ನಿಯಮವೆಂದು ಈತ ಹೇಳಿ ಸತ್ಯವನ್ನು ಮುಟ್ಟಬೇಕಾದರೆ ಸದ್ಗುಣದಿಂದಲೇ ಸಾಧ್ಯವೆಂದೂ ಪ್ರೇಮದ ಪರಿಪೂರ್ಣತೆಯೇ ಸತ್ಯದ ನೆಲೆಯೆಂದೂ ತಿಳಿಸಿದ್ದಾನೆ.

ಜೇಮ್ಸ್ ವಾರ್ಡ್: ಮ್ಯಾಕ್ಟ್ ಗರ್ಟನ ಸಮಕಾಲೀನ. ವಿಜ್ಞಾನದಲ್ಲಿ ಪಂಡಿತ, ಮನಶ್ಯಾಸ್ತ್ರಜ್ಞರಲ್ಲಿ ಪ್ರಸಿದ್ಧ. ವ್ಯಕ್ತಿಗೂ ಮನೋಧರ್ಮ ವಿಶಿಷ್ಟವಾದುದು. ಯಾವ ಎರಡು ವ್ಯಕಿಗಳೂ ಒಂದೇ ವಿಧವಲ್ಲವೆಂದು ಈತ ವಾದಿಸಿದ. ಲೀಬ್ನಿಟ್ಸನ ಚೇತನಾಣುಗಳ ತತ್ತ್ವವನ್ನು ಈತ ಸಂಪೂರ್ಣವಾಗಿ ಅಂಗೀಕರಿಸಿದ್ದಾನೆ. ಆದರೆ ಚೇತನಾಣುಗಳಿಗೆ ಪೂರ್ವಭಾವಿಯಾದ ಸಾಮರಸ್ಯ ಇರುವುದೆಂದು ಒಪ್ಪಿಕೊಂಡಿಲ್ಲ. ಪ್ರತಿಯೊಂದು ವ್ಯಕ್ತಿಯೂ ತನ್ನ ಅನುಭವವನ್ನು ಸ್ವತಂತ್ರವಾಗಿ ಇಚ್ಛಾನುಸಾರವಾಗಿ ರೂಪಿಸಿಕೊಳ್ಳುತ್ತಾನೆ. ಬದುಕುವ ಇಚ್ಛೆ ಅವನಲ್ಲಿ ಪ್ರಧಾನವಾಗಿರುತ್ತದೆ. ಅವನ ಕ್ರಿಯೆಗಳೆಲ್ಲವೂ ಉದ್ದೇಶಪೂರ್ವಕವಾಗಿ ನಡೆಯುತ್ತವೆ. ಅವು ಪೂರ್ವ ನಿಯಾಮಕವಲ್ಲ. ವಿಶ್ವ ಪರಸ್ಪರಸಂಬಂಧವಿಳ್ಳ ಎರಡು ತತ್ತ್ವಗಳನ್ನು ಪ್ರತಿಪಾದಿಸುತ್ತದೆ. ಇದರಲ್ಲಿ ನಾವು ಯಾವ ತತ್ತ್ವವನ್ನಾಗಲಿ ಉದ್ದೇಶವನ್ನಾಗಲಿ ಕಾಣುವುದಿಲ್ಲ. ಚೇತನಜಗತ್ತು ಅರ್ಥಗರ್ಭಿತವಾದುದು. ಪ್ರತಿಯೊಂದು ಕ್ರಿಯೆಯೂ ಚೇತನದಲ್ಲಿ ಉದ್ದೇಶಪೂರ್ವಕವಾದುದು. ಪರಮಸತ್ಯವಾದ ಈಶ್ವರನನ್ನು ಸಾಕ್ಷಾತ್ಕಾರಮಾಡಿಕೊಳ್ಳುವುದೇ ಈ ಉದೇಶಪೂರ್ವಕವಾದುದು.