ಪುಟ:Mysore-University-Encyclopaedia-Vol-1-Part-1.pdf/೯೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


           ಅಂತರಿಕ್ಷ ಸಂಶೋಧನೆ

ಮೇನಕ ಮತ್ತು ರೋಹಿಣಿ ಎಂಬ ರಾಕೆಟ್ಟುಗಳನ್ನೂಟ್ರಾಂಬೆಯಲ್ಲಿ ತಯಾರಾದ ಸೆಂಟಾರ್ ಎಂಬ ರಾಕೆಟ್ಟನ್ನೂ ಹಾರಿಬಿಡಲಾಯಿತು.ತುಂಬಾದಲ್ಲಿ ನಡೆಸಿದ ಪ್ರಯೋಗಗಳಲ್ಲಿ ಮುಖ್ಯವಾದುದೆಂದರೆ ವಿವಿಧ ಎತ್ತರಗಳಲ್ಲಿ ಗಾಳಿಯ ಚಲನೆಯನ್ನು ಗೊತ್ತು ಹೆಚ್ಚುವುದು.ಇದಕ್ಕಾಗಿ ರಾಕೆಟ್ ಮೇಲಕ್ಕೆ ಹೋಗುತ್ತ ಒಂದು ನಿರ್ದಿಷ್ಟ ಎತ್ತರದಲ್ಲಿ ಸೋಡಿಯಂ ಧೂಮವನ್ನು ಹೊರಬಿಡುತ್ತಿತ್ತು ಈ ಧೂಮ ಚ್ಲಿಸುವ ದಿಕ್ಕು ಮತ್ತು ವೇಗಗಳನ್ನು ದ್ಳಗ್ನಿಧಾನದಲ್ಲಿ ಕಂಡುಹಿಡಿಯಲಾಗುತ್ತಿತ್ತು.

  ತುಂಬಾ ಕೇಂದ್ರದಲ್ಲಿ ಅಯೋನಾವರಣಕ್ಕೆ ಸಂಬಂಧಿಸಿದ ಪ್ರಯೋಗಗಳನ್ನೂ ಮಾಡಲಾಯಿತು.ತುಂಬಾವು ಭೂಮಿಯ ಕಾಂತುಮಧ್ಯರೇಖೆಗೆ ಬಹಳ ಹತ್ತಿರವಿರುವುದರಿಂದ ಈ ರೀತಿಯ ಪ್ರಯೋಗಗಳು ನಡೆಯಲು ಬಹಳ ಸಹಾಯಕಾರಿಯಾಗಿದೆ.
  ೧೯೬೯ರಲ್ಲಿ ಭಾರತದ ಪೂರ್ವ ಕರಾವಳಿಯಲ್ಲಿ ಇರುವ ಚೆನ್ನೈ(ಮದ್ರಾಸ್)ನ ಹತ್ತಿರ ಇನ್ನೊಂದು ರಾಕೆಟ್ ಕೇಂದ್ರವನ್ನು ಸ್ಧಾಪಿಸಲಾಯಿತು ಭಾರತದ ಪ್ರಧಮ ಉಪಗ್ರಹವನ್ನು ಹಾರಿಬಿಟ್ಟದ್ದು ಇಂದು ಸತೀಶ್ ಧವನ್ ಅಂತರಿಕ್ಷ ಕೇಂದ್ರ-ಶಾರ್ ಎಂಬ ಹೆಸರಿರುವ ಈ ಕೇಂದ್ರದಿಂದಲೇ.ಇದು ಅಂದ್ರಪ್ರದೇಶದ ನೆಲ್ನೂರು ಜೆಲ್ಲಿಯ ಶ್ರೀಹರಿಕೋಟ ದ್ವೀಪದಲ್ಲಿದೆ.
  ಯುರೋಪಿನ ಕಾರ್ಯಕ್ರಮಗಳು ಯುರೋಪಿನ ಒಂಬತ್ತು ರಾಷ್ಟ್ರಗಳು ಯುರೋಪಿನ ಅಂತರಿಕ್ಷ ಸಂಶೋದಿನ ಸಂಘವನ್ನು [ಯುರೋಪಿಯನ್ ಸ್ವೇಸ್ ರಿಸರ್ಚ್ ಅರ್ಗನೈಸೇಷನ್ -(ಇ ಎಸ್ ಅರ್ ಒ)]ಮಾಡಿಕೊಂಡಿವು.ಇದರ ಜೊತೆಗೆ ಯುರೋಪಿನ ವಾಹನಾಭಿವೃದ್ದಿ ಸಂಘವನ್ನು [ಯುರೋಪಿಯನ್ ಲಾಂಚರ್ ಡೆವಲಮೆಂಟ್ ಅರ್ಗನೈಸೇಷನ್-(ಇ ಎ.ಡಿ ಒ)]ಮಾಡಿಕೊಂಡು ಇ ಎಸ್ ಅರ್ ಒ ಆಶ್ರಯದಲ್ಲಿ ಹಾರಿಸಲಿರುವ ಉಪಗ್ರಹಗಳಿಗೆ ರಾಕೆಟ್ ವಾಹನಗಳನ್ನು ತಯಾರಿಸುವ ಯೋಜನೆಯನ್ನು ಇಟ್ಟುಕೊಂಡಿದ್ದವು.ಬಳಿಕ ಸ್ಧಾಪನೆಯಾದ ಐರೋಪ್ಯ ಅಂತರಿಕ್ಷ ಸಂಸ್ಥೆ (ಈಸಾ) ಅಂತರಿಕ್ಷ ಕ್ಷೇಶ್ರದಲ್ಲಿ ಅನೇಕ ಸಾಧನೆಗಳನ್ನು ಮಾಡಿದೆ.
  ಅಮೆರಿಕ ಮತ್ತು ಇತರ ದೇಶಗಳ ಸಹಕಾರ:ಅಮೆರಿಕದ ರಾಕೆಟ್ ವಾಹನಗಳನ್ನುಪಯೋಗಿಸಿಕೊಂಡು ಕೆಲವು ರಾಷ್ತ್ರಗಳು ತಮ್ಮ ಉಪಗ್ರಹಗಳನ್ನು ಹಾರಿಸಿದವು.ಆಪೈಕಿ೧.ಇಂಗ್ಲೆಂಡ್-ಏರಿಯಲ್ ಮತ್ತು ಎರಿಯಲ್ ೨.ಕೆನಡ-ಆಲ್ಮೂಟ್,೩.ಫ಼್ರಾನ್ಸ್-ಫ಼್ರೆಂಚ್ ೪.ಇಟಲಿ-ಸ್ಯಾನ್-ಮಾರ್ಕೋ.
  ಪರೀಕ್ಷಕ ರಾಕೆಟ್ಟುಗಳನ್ನು ಹಾರಿಸಲು ಭಾರತವೂ ಸೇರಿದಂತೆ ಅನೇಕ ರಾಷ್ಟ್ರಗಳಿಗೆ ಅಮೆರಿಕ ನೆರವು ನೀಡಿತು.ಅಂತರಿಕ್ಷಕ್ಷೇಶ್ರದಲ್ಲಿ ಒಂದು ಪ್ರಮುಖ ರಾಷ್ಟ್ರವೆನ್ನಿಸಿಕೊಂಡಿರುವ ಭಾರತ ಇಂದು ಅಮೆರಿಕದಂತೆಯೇ ಇತರ ರಾಷ್ಟ್ರಗಳ ವಿಜ್ಯಾನಿಗಳಿಗೆ ತರಬೇತಿಯನ್ನು ನೀಡುತ್ತಿದೆ.
  ೧೯೬೦ರ ದಶಕದಲ್ಲಿ ರಷ್ಯ ಮತ್ತು ಅಮೆರಿಕ ತನ್ನ ಹವಾಮಾನ ಉಪಗ್ರಹಗಳಿಂದ ಬರುವ ಮಾಹಿತಿಗಳನ್ನು ಇತರ ದೇಶಗಳಿಗೂ ಕಳಹಿಸಿದವು.
  ಅಂತರಿಕ್ಷ ಕಾನೂನು:ವಿಶ್ಚಸಂಸ್ಥೆಯ ಬಾಜ್ಯಾಂತಶರಿಕ್ಷ ಶಾಂತಿಯಾತ ಉಪಯೋಗಗಳ ಮಂಡಲಿ ಮತ್ತು ಅದರ ಕಾನೂನು ಉಪಮಂಡಲಿ ನಿದ್ದಪಡಿಸಿದ ವಿಚಾರಗಳ ಮೇಲೆ ವಿಶ್ಚಸಂಸ್ಥೆ ಚರ್ಚಿಸಿ ಅವನ್ನು ತನ್ನ ಶಾಸನದಲ್ಲಿ ೧೯೬೨ನೆಯ ಸಾಅಲಿನ ಠರಾವನ್ನಾಗಿ(ನಂ.೧೦೮) ಅಂಗೀಕರಿಸಿತು.ಈ ಠರಾವಿನ ಕೆಲವು ಅಂಶಗಳು ಹೀಗಿವೆ:
  ಈಗಿರುವ ಅಂತಾರಾಷ್ಟೀಯ ಕಾನೂನು ಬಾಹ್ಯಾಂತರಿಕ್ಷ ಮತ್ತು ಖಗೋಳ ವಿಜ್ಯಾನಗಳಿಗೂ ಸಂಬಧಿಸುತ್ತದೆ.ಬಾಹ್ಮಾಂತರಿಕ್ಷ ಮತ್ತು ಆಕಾಶಕಾಯಗಕನ್ನು ಎಲ್ಲ ದೇಶಗಳವರೂ ಸಂಶೋಧಿಸಬಹುದು.ಹೀಗೆ ಮಾಡುವಾಗ ಅವು ಅಂತಾರಾಷ್ತೀಯ ಕಾನೂನಿಗೆ ಒಳಪಟ್ಟಿರುತ್ತವೆ.
 ಸದಸ್ಯ ರಾಷ್ಟಗಳ ಸರ್ಕಾರವಾಗಲೀ ಇಲ್ಲವೇ ಆ ರಾಷ್ಟಗಳ ಸರ್ಕಾರೇತರ ಸಂಸ್ಥೆಗಳಾಗಲೀ ತಾವು ನಡೆಸುವ ಅಂತರಿಕ್ಷ ಸಂಶೋಧನೆಗಳಿಗೆ ತಾವೇ ಜವಾಬ್ದಾರಿಯಾಗಿರುತ್ತವೆ.ತಮ್ಮ ಕಾರ್ಯಕ್ರಮಗಳಿಂದ ಇತರ ರಾಷ್ಟಗಳಿಗೆ ತೊಂದರೆಯಾದರೆ ಅದರ ಸಂಪೂರ್ಣ ಜವಾಬ್ದಾರಿಯನ್ನು ತಾವೇ ವಹಿಸಬೇಕು.
 ಯಾವುದೇ ರಾಷ್ಟದ ಅಂತರಿಕ್ಷನೌಕೆ ಇತರ ದೇಶಗಳ ಮೇಲೆ ಹಾರಿದರೂ ಆ ದೇಶಗಳ ಮೇಲೆ ಬಿದ್ದರೂ ಅದರ ಯಜಮಾನಿಕೆ ಹಾರಿಸಿದ ರಾಷ್ಟದ್ದೇ ಆಗಿರುತ್ತದೆ.ಅದ್ದರಿಂದ ಯಾವ ದೇಶದ ಮೇಲಾಗಲೀ ಇತರ ದೇಶದ ಅಂತರಿಕ್ಷನೌಕೆ ಬಿದ್ದಲ್ಲಿ ಅಥವಾ ಅಕಸ್ಮಾತ್ತಾಗಿ ಮಾನವಸಹಿತವಾದ ನೌಕೆ ಇಳಿದಲ್ಲಿ ಅದನ್ನು ಸುರಕ್ಷಿತವಾಗಿ ಸಂಬಂಧಪಟ್ಟ ದೇಶಕ್ಕೆ ತಲಾಪಿಸಬೇಕು.
 ವಿಜ್ಯಾನಕ್ಷೇತ್ರದಲ್ಲಿ ಪ್ರಗತಿ ಮುಂದುವರಿದಂತೆಲ್ಲ ಮಾನವ ಹೊಸ ಸಂಶೋಧನಾ ಕಾರ್ಯಗಳನ್ನು ಕೈಗೊಳ್ಳುವುದು ಸಹಜ.ಈ ದಿಶೆಯಲ್ಲಿ ಪ್ರಸ್ತುತ ಅಂತರಿಕ್ಷ ಸಂಶೋಧನೆಯ ಮೂಲೋದ್ದೇಶ ಸಂಶೋಧನೆ.ಅಂತರಿಕ್ಷಕ್ಕೆ ಸಂಬಂಧಪಟ್ಟಂತೆ ಸಂಶೋಧನೆಯನ್ನು ನಡೆಸುವುದು ಮಾತ್ರವಲ್ಲದೆ ಮಾನವನ ಪ್ರಗತಿಶೀಲಾಭ್ಯುದಯಕ್ಕೆ ಸಹಾಯವೆಸಗುವಂತೆಯೂ ಅವನ್ನು ನಿರೂಪಿಸಲಾಗಿದೆ.ಸಂಶೊಧನೆಯ ಫ಼ಲವಾಗಿ ಹೆಚ್ಚು ಸುಧಾರಿತ ರೀತಿಯಲ್ಲಿ ಯುನಗಳನ್ನು ಕೈಗೊಳ್ಳುವುದು,ನಿರ್ದೇಶಿಸುವುದು ಹಾಗೂ ನಿಯಂತ್ರಿಸುವುದು-ಮುಂತಾದ ಯಂತ್ರೋದ್ಯಮದ ತಂತ್ರಗಳು ಇಂದು ಸಾಧ್ಯವಾಗಿವೆ.ಅಂತರಿಕ್ಷದಲ್ಲಿ ಒಂದು ನೌಕೆಯನ್ನು ಮತ್ತೋಂದು ನೌಕೆ ಉವುದು,ಮುಂದೆ ಸಂಧಿಸುವುದು ಒಗ್ಗೂಡುವುದು.ಪುನಃ ಬೇರ್ಪಡುವುದು,ಮುಂದೆ ಇತರ ಗ್ರಹಾನ್ಟೇಷಣೆಗೆ ಸಹಾಯವಾಗುವಂತೆ ಅಂತರಿಕ್ಷನಿಲ್ದಾಣಗಳನ್ನೂ ಸ್ಥಾಪಿಸಿಕೊಂಡು ಅಲ್ಲಿಂದಲೇ ನೌಕೆಗಳನ್ನು ಉದಾಯಿಸುವುದು,ಮುಖ್ಯವಾಗಿ ಭೂಮಿಯನ್ನು ಆಮೂಲಾಗ್ರವಾಗಿ ಅರಿವು ಈ ಸಂಶೋಧಿಸಿ ಅದರಿಂದೊದಗುವ ಸಮಸ್ತ ವಿಷಯಗಳನ್ನೂ ಭೂನಿವಾಸಿಗಳಿಗೆ ಅರಿವು ಮಾಡಿಕೊಡುವುದು-ಈ ಮುಂತಾದ ಕಾರ್ಯಕ್ರಮಗಳ ಬಗ್ಗೆ ಹೆಚ್ಚೆನ ಅರಿವು ಈ ಸಂಶೋಧನೆಯಿಂದ ಸಾಧ್ಯವಾಗಿದೆ.ಈ ಎಲ್ಲ ಕಾರ್ಯಕ್ರಮಗಳನ್ನು ನಧಾರಿತ ರೀತಿಯಲ್ಲಿ ರೂಪಿಸಿಕೊಂಡು ಕಾರ್ಯಗತಗೊಳಿಸಲು ಶ್ರಮಿಸುತ್ತಿರುವ ಅಮೆರಿಕದ ನಾಸಾ(ಎಸ್ ಎ.ಎಸ್ ಎ) ಸಂಸ್ಥೆ ಹಾಗೂ ರಷ್ಯ ಯುರೋಪ್,ಜಪಾನ್,ಭಾರತದ ಅಂತರಿಕ್ಷ ಸಂಸ್ಥೆಗಳು ಪ್ರಗತಿತೀಲ ಪ್ರಯತ್ನಗಳು ಹಾಗೂ ನಡೆಸುತ್ತಿರುವ ಕಾರ್ಯಕ್ರಮಗಳು-ಮಾನವನಿಗೆ ಯಶಸ್ಸನ್ನು ಗಳಿಸಿಕೊಟ್ಟು ಅವನ ಕೀರ್ತಿಯನ್ನು ವ್ಯೋಮಮಂಡಲದರುದ್ರವರೆಗೂ ಹರಡಿವೆ.ಈ ಅನ್ಟೇಷಣೆ ಅಜ್ಯಾನ-ಜ್ಯಾನಗಳ ನದುವೆ ಇರುವ ನಿರಂತರ ಸ್ಪೀಧೆಯಲ್ಲಿನ ಸತ್ಯಾನ್ಟೇಷಣೆಯೇ ಆಗಿದೆ.
  ಸೌರವ್ಯೂಹದ ಹೊರಭಾಗದ ಅನ್ಟೇಷಣೆ:ಮಂಗಳ ಗ್ರಹದ ಅನಂತರ ಬರುವ ಕ್ಷುಧ್ರಗ್ರಹಗಳ ಪಟ್ಟಿಯ ಅಚಿ ಬರುವ ಸೌರವ್ಯೂಹದ ಹೊರಭಾಗದ ಆಕಾಸಕಾಯಗಳು ಭೂಮಿಯಿಂದ ಇರುವ ದೂರದ ಮಹತ್ವದಿಂದಾಗಿ ಅವುಗಲತ್ತ ರೊಬೋಟ್ ಅಂತರಿಕ್ಷ ನೌಕೆಗಳನ್ನು ಉಡಾಯಿಸುವುದು ೧೯೭೦ರ ದಶಕದ ವರೆಗೂ ಸಾಧ್ಯವಾಗಲಿಲ್ಲ.ನಂತರ ೧೯೭೨ ರಲ್ಲಿ ಉಡಾಯಿಸಲಾದ ಅಮೆರಿಕದ ಪಯೊನೀರ್ ೧೦ನೌಕೆ ಕ್ಷುಧ್ರಗ್ರಹಗಳ ಪಟ್ಟಿಯನ್ನು ದಾಟಿ ಗುರುಗ್ರಹವನ್ನು ಅನ್ಟೇಷಿಸಿದ ಮೊದಲ ನೌಕೆಯಾಯಿತು.ನಂತರದ ಪಯೊನೀರ್ ೧೧(ಉಡಾವಣೆ ೧೯೭೩) ಗುರು ಹಾಗೂ ನಂತರ ಶನಿ ಈ ಎರಡು ಗ್ರಹಗಳನ್ನೂ ಅನ್ಷೇಸಿ ಮೊನ್ನಡೆಯಿತು.
  ಸೌರವ್ಯೂಹದ ಹೊರಭಾಗದ ಆಕಾಶ ಕಾಯಗಳ ಅನ್ಷೇಷಣೆಯಲ್ಲಿ ಅಮೆರಿಕ ೧೯೭೭ರಲ್ಲಿ ಉಡಾಯಿಸಿದ ವಾಯೇಜರ್ ಸರಣೆಯ ಎರಡು ನೌಕೆಗಳ ಪಾತ್ರ ಮಹತ್ತರವಾದುದು.ಆಪೈಕಿ ೧೯೭೯ರಲ್ಲಿ ಗುರುಗ್ರಹದ ಸಮೀಪದಲ್ಲಿ ಹಾದು ಹೋದ ವಾಯೇಜರ್ ೧ ಆ ಗ್ರಹದ ವಾತಾವರಣರದಲ್ಲಿನ ಸ್ವರೂಪಗಳ ಸ್ಳುಟವಾದ ಚಿತ್ರಗಳನ್ನು ರವಾನಿಸುವುರೊಂದಿಗೆ ಆ ಗ್ರಹಕ್ಕೆ ಇರುವ ಒಂದು ತೆಳುವಾದ ಉಂಗುರವನ್ನು ಗುರುತಿಸಿತು.ಇಷ್ಟೇ ಅಲ್ಲದೆ ಗುರುಗ್ರಹದ ನಾಲ್ಲ್ಕು ಗ್ಯಾಲೆಲೆಯನ್ ಉಪಗ್ರಹಗಳ ಸ್ವರೂಪದ ಪರಿಚಯವೂ ಮಾನವನಿಗಾಯಿತು.ಆ