ಪುಟ:Mysore-University-Encyclopaedia-Vol-1-Part-2.pdf/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಸ್ಸೀರಿಯನ್ನರ ಕಲೆ

ಅತ್ಯಂತ ಪುರಾತನ ಮಾನವನ ಅವಶೇಷಗಳಾದ ಆದಿ ಹಳೆಯ ಶಿಲಾಯುಗದ ಮಧ್ಯಕಾಲಕ್ಕೆ ಸೇರಿದ ಅಷೂಲಿಯನ್-ಲೆವಲ್ವಷಿಯನ್ ಹಂತದ ಕೈಗೊಡಲಿಗಳೂ ಚಕ್ಕೆ ಕಲ್ಲಿನ ಉಪಕರಣಗಳೂ ಬಾರ್ದಾಬಲ್ಯ ಎಂಬಲ್ಲಿ ದೊರಕಿವೆ.ಹಜ್ಗರ್ ಮರ್ದ್ ಮತ್ತು ಷನಿದಾರ್ ಗುಹೆಗಳ ತಳಪದರಗಳಲ್ಲಿ ದೊರಕುವ ಚಕ್ಕೆ ಕಲ್ಲಿನ ಉಪಕರಣಗಳು ಮುಣ್ದಿನ ಹಂತವಾದ ಲೆವಲ್ವಷಿಯೊ-ಮೌಸ್ತಿರಿಯನ್ ಕೈಗಾರಿಕೆಯನ್ನು ಹೋಲುತ್ತವೆ.ಹಜ್ಗರ್ ಮರ್ದ್ ಅವಶೇಷಗಳು ಷನಿದಾರ್ ಅವಶೇಷಗಳಿಗಿಂತಲೂ ಹಳೆಯವೆಂದು ಅಲ್ಲಿ ದೊರಕಿದ ಕೈಗೊಡಲಿಗಳ ಆಧಾರದ ಮೇಲೆ ಹೇಳಲಾಗಿವೆ.

ಹಜ್ಗರ್ ಮರ್ದ್ ಮತ್ತು ಷನಿದಾರ್ ಮೇಲ್ಪದರಗಳಲ್ಲಿ ದೊರಕಿದ ಕಲ್ಲು ಚಕ್ಕೆ ಉಪಕರಂಅಗಳೂ ಸೂಕ್ಷ್ಮ ಶಿಲೋಪಕರಣಗಳೂ ಜರ್ಜಿ ಮತ್ತು ಪಲೆಗಾವ್ರಾ ಎಂಬಲ್ಲೂ ದೊರಕುತ್ತವೆ.ಇವುಗಳ ಆಧಾರದ ಮೇಲೆ ಈ ಜನರು ಸಮಕಾಲೀನ ಯುರೋಪಿನ ಜನರಿಗಿಂತಲೂ ಹೆಚ್ಚು ಮುಂದುವರೆದಿದ್ದರೆಂದು ಹೇಳಲಾಗಿದೆ.ಪ್ಯಾಲಸ್ತೀನಿನ ಶಿಲಾಯುಗದ ಷನಿದಾರ್ ಗುಹಯ ಮೇಲ್ಪದರಗಳ ಸಂಸ್ಕೃತಿ ಈ ಪ್ರದೇಶದ ಚಕ್ಕೆ ಕಲ್ಲಿನ ಉಪಕರಣಗಳ ಸಂಸ್ಕೃತಿಗಳಲ್ಲಿ ಹಳೆಯದೆಂದು ಹೇಳಬಹುದು.

ಮಧ್ಯಶಿಲಾಯುಗದ ಅವಶೇಷಗಳು ಷನಿದಾರ್ ಗುಹೆಯ ಮತ್ತು ಜರ್ಜಿಯದ ಮೇಲ್ಪದರಗಳಲ್ಲಿ ದೊರಕಿವೆ.ಇವುಗಳಿಗೂ ಪ್ಯಾಲಸ್ತೀನಿನ ನಟೂಫಿಯನ್ ಸಂಸ್ಕೃತಿಗೂ ಹೋಲಿಕೆಗಳಿದ್ದು,ಈ ಹಂತ ಆಹಾರೋತ್ಪಾದನೆಯ ಕಡೆಗೆ ಒಯ್ಯುವ ಮೊದಲ ಹೆಜ್ಜೆಯಾಗಿತ್ತು.

ನವಶಿಲಾಯುಗದಲ್ಲಿ ಇಲ್ಲಿನ ಮತ್ತು ಸುತ್ತಲಿನ ನೆಲೆಗಳಲ್ಲಿ ಆದಿಮಾನವ ಆಹಾರೋತ್ಪಾದನೆಯ ದಿಕ್ಕಿನಲ್ಲಿ ಹೆಚ್ಚು ಪ್ರಗತಿ ಸಾಧಿಸಿದೆ.ಕ್ರೀಂಷಾಹಿರ್,ಜಾವಿಷೆಮಿ,ಷ್ನಿದಾರ್ ಮ್ಲಾಘಾತ್-ಮುಂತಾದೆಡೆಗಳಲ್ಲಿ ಈ ಸಸ್ಕೃತಿಯ ಅತ್ಯಂತ ಪ್ರಾಚೀನ ಅವಶೇಷಗಳು ದೊರೆಕಿವೆ.ಕರೀಂಷಾಹಿರ್ನ ಆಹಾರೋತ್ಪತ್ತಿಯ ಹಲವು ಮಾಹಿತಿಗಳೂ ಕಲ್ಲೌಕಟ್ಟಡದ ಅವಶೇಷಗಳೂ ಪ್ರ.ಶ.ಪೂ. ೬೦೦೦ಕ್ಕೂ ಮೊದಲಿನವು. ಜಾರ್ಮೋ ನೆಲೆಯಲ್ಲಿ ಪ್ರಗತಿದಾಯಕ ಸಂಸ್ಕೃತಿಯ ಅವಶೇಷಗಳಾದ ಕಲ್ಲಿನ ಪಾತ್ರೆಗಳು,ಕಲ್ಲಿನ ಕುಡುಗೋಲು,ಸೂಕ್ಶ್ಮ ಶಿಲೋಪಕರಣಗಳು,ನಯಮಾಡಿದ ಕಲ್ಲಿನ ಉಪಕರಣಗಳು,ಕಟ್ಟಡಗಳ ಅವಶೇಷಗಳು,ಪಳಗಿಸಳ್ಪಟ್ಟ ಕುರಿ ಮೇಕೆ ಹಂದಿಗಳ ಮೂಳೆಗಳು ದೊರೆಯುತ್ತವೆ.ಈ ಸಂಸ್ಕೃತಿಯ ಅಂತ್ಯಕಾಲ್ದಲ್ಲಿ ಮಣ್ಣಿನ ಪಾತ್ರೆಗಳು ಬಳಕೆಗೆ ಬಂದವು.ಗೋದಿ ಮತ್ತು ಬಾರ್ಲಿಗಳನ್ನು ಬೆಳೆಸುತ್ತಿದ್ದರು.

ಪ್ರಗತಿಪರ ನವಶಿಲಾಯುಗದ ಅವಶೇಷಗಳು ಹಸ್ಸುನಾ,ನಿನೆವ್ಹೆ,ಅರ್ಪಾಚಿಯ,ಗಾವ್ರಾ ಎಂಬೆಡೆಗಳಲ್ಲಿ ದೊರಕುತ್ತಿವೆ.ವರ್ಣರಂಜಿತ ಮಣ್ಣಿನ ಪಾತ್ರೆಗಳು,ಕಲ್ಲಿನ ಕುಡುಗೋಲು ಮತ್ತಿತ್ತರ ವ್ಯವಸಾಯೋಪಕರಣಗಳು,ಹಸಿ ಇಟ್ಟಿಗೆ ಗೋಡೆಗಳು ಮನೆಗಳೂ ದಾನ್ಯಶೇಖರಣೆ ಭೂಮಿಯೂಳಗಿನ ಗುಂಡಿಗಳು-ಈ ಸಂಸ್ಕೃತಿಯ ಮುಖ್ಯ ಸಾಧನೆಗಳು.ಮಕ್ಕಳ ಶವಗಳನ್ನು ಮಣ್ಣಿನ ಜಾಡಿಗಳಲ್ಲೂ ವಯಸ್ಕರ ಶವಗಳನ್ನು ಗುಂಡಿಗಳಲ್ಲೂ ಹೂಳುತ್ತಿದ್ದರು.ಬೇಟೆಗಾರಿಕೆಯಿಂದ ಸುಧಾರಿತ ವ್ಯವಸಾಯ ಪದ್ದತಿಗಳ ಕಡೆಗೆ ಪ್ರಗತಿ ಕಂಡುಬರುತ್ತದೆ.ನೇಯ್ಗೆ ಕೆಲಸದ ಪರಿಚಯವಿತ್ತು.ಮಡಿಕೆ ಕುಡಿಕೆಗಳು ಕೆಂಪು,ಕಂದು ಮತ್ತು ಕಪ್ಪು ಬಣ್ಣಗಳಿಂದ ಚಿತ್ರಿತವಾಗಿರುತ್ತಿದ್ದವು.ಈ ಸಂಸ್ಕೃತಿಯ ಆವಶೇಷಗಳು ಆಸ್ಸೀರಿಯದ ಹಲವೆಡೆಗಳಲ್ಲಿ ಕಂಡುಬಂದಿವೆ.ಮುಂದಿನ ಹಂತವಾದ ತಾಮ್ರ ಶಿಲಾಯುಗದ ಹಲಾಫ್ ಸಂಸ್ಕೃತಿಯಲ್ಲಿ ವರ್ಣಚಿತ್ರಿತ ವಾದ ವಿವಿಧಾಕೃತಿಗಳ ಮಡಕೆಗಳು ಉಪಯೋಗದಲ್ಲಿದ್ದವು.ಕಲ್ಲಿನ ಗುಂಡಿ ಮುದ್ರೆಗಳೂ ಮಣಿಗಳೂ ಸಣ್ಣ ಪಾತ್ರೆಗಳೂ ಬಳಕೆಗೆ ಬಂದವು.ಜನನೇಂದ್ರಿಯಗಳ ನಿರೂಪಣೆಗೆ ಪ್ರಧಾನವಾಗಿದ್ದ ಮಣ್ಣಿನ ಸ್ತ್ರೀಗೊಂಬೆಗಳು ಪ್ರಾಚೀನ ಕಾಲದಲ್ಲಿ ಮಾತೃದೇವತಾ ಪ್ರಧಾನವಾಗಿದ್ದ ಮತೀಯ ಆಚರಣಗಳ ಸಂಕೇತಗಳಾಗಿವೆ.ಅನಂತರ ಈ ಪ್ರವೇಶ ದಕ್ಷಿಣ ಇರಾಕಿನ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಯಿತು.ಎರಡನೆಯ ಸಹಸ್ರಮಾನದ ಆರಂಭದಲ್ಲಿ ದಕ್ಷಿಣ ಇರಾಕಿನ ಪ್ರಭಾವದಿಂದ ಅಸ್ಸೀರಿಯದ ಜನ ಚಾರಿತ್ರಿಕ ಘಟ್ಟವನ್ನು ತಲುಪಿದರು.ಆ ವೇಳಗೆ ಸಿಮಿಟಿಕ್ ಪಂಗಡದ ಜನ ಇದನ್ನು ಆಕ್ರಮಿಸಿದರು.

ಅಸ್ಸೀರಿಯನ್ನರ ಕಲೆ:ಚರಿತ್ರೆಯ ಪ್ರಾರಂಭದಲ್ಲಿ ಮೆಸಪೊಟೇಮಿಯದ ನಿಮ್ನ ಪ್ರದೇಶ ಸುಮೇರೋ-ಅಕ್ಕೇಡಿಯನ್ನರ ಸಂಸ್ಕೃತಿಗೆ ಸ್ಥಾನವಾಗಿತ್ತು.ಈ ಪ್ರದೇಶದ ಪೂರ್ವಭಾಗ ಸುಮೇರಿಯನ್ನರಿಗೂ ಉತ್ತರಭಾಗ ಸಿಮಿಟಿಕ್ ವಂಶದ ಅಕ್ಕೇಡಿಯನ್ನರಿಗೂ ಸೇರಿದ್ದವು.ಕಾಲಕ್ರಮೇಣ ದಕ್ಷಿಣ ಪಥದ ಅಕ್ಕೇಡಿಯನ್ನರನ್ನು ಬ್ಯಾಬಿಲೋನಿಯನವರೆಂದೂ ಕ್ಯಾಲ್ಡಿಯನ್ನರೆಂದೂ ವಾಯವ್ಯ ಪಥದಲ್ಲಿದ್ದವರನ್ನು ಅಸ್ಸೀರಿಯನರೆಂದೂ ಕರೆಯಲಾಯಿತು.

ಅಕ್ಕೇಡ್ ಪ್ರದೇಶದ ರಾಜನಾದ ಸಾರ್ಗಾನ್ ನಿಂದ(ಪ್ರ.ಶ.ಪೂ.೨೫೦೦)ಸುಮೇರಿಯನ್ನರ ಕಡೆಯ ರಾಜನಾದ ಲೂಗಲ್ ಜ್ಗ್ಗಿಸಿ ಪರಾಭವ ಹೊಂದಿದ ಅನಂತರ ಸಿಮಿಟೆಕ್ ರಾಜವಂಶದ ಆಳ್ವಿಕೆ ಪ್ರಾರಂಭವಾಯಿತು.ಸಿಮಿಟೆಕ್ ಅಕ್ಕೇಡಿಯನ್ನರ ವೈಭವ ಹಮ್ಮುರಾಬಿ ಆಳ್ವಿಕೆಯಲ್ಲಿ ಶಿಖರಕ್ಕೇರಿತು.ಅವನ ಕಾಲದಲ್ಲಿ ಷಿನಾಜೆಗೆ ಬೇಬಿಲ್ನ್ನೆಂದು ಹೆಸರಾಯಿತು.ಹಮ್ಮುರಾಬಿ ಯೂಫ್ರೆಟೀಸ್ ತೀರದ ಮರಿ ಎನ್ನುವ ಪಟ್ಟಣವನ್ನು ಅದರ ಕಡೆಯ ರಾಜನಾದ ಜಿರೀಲಿನಿಂದ ಗೆದ್ದು ಅವವ್ನ ವಂಶಪಾರಂಪರ್ಯದಲ್ಲಿ ಸಾವಿರಾರು ವರ್ಷಗಳಿಂದ ಹೊಳೆಯುತ್ತಿದ್ದ ಬಣ್ಣಾಗಳಿಂದ ಶೋಭಾಯಮಾನವಾಗಿ ಚಿತ್ರಿಸಲಾದ ಅರಮನೆಯ ಮತ್ತಿತರ ಕಲಾಕೃತಿಗಳನ್ನು ನಾಶ ಮಾಡಿದ.ಈ ಚಿತ್ರಗಳಲ್ಲಿ ಕೆಲವು ಗೋಡೆಯ ಮೇಲಿನವು(ಮ್ಯುರಲ್ಸ್)ಅಂದರೆ,ಯಜ್ನಶಾಲೆಗೆ ಕರೆದೊಯ್ಯುವ ಗೂಳಿ,ಜಲ ಮತ್ತು ಅಗ್ನಿಯಜ್ನ,ಇಷ್ಟಾರ್ ದೇವಿಯ ರಾಜ್ಯಾಭಿಷೇಕ ಮುಂತಾದವು(ಇವು ಈಜಿಪ್ಟಿನ ಕಲೆಯನ್ನು ಹೋಲುವವು).ಪ್ರತಿಮೆಗಳ ಪೈಕಿ,ಎರಡು ಕೊಂಬುಗಳ್ಳುಳ್ಳ ಶಿರಸ್ತ್ರಾವಣವನ್ನು ಧರಿಸಿ ಕೈಯಲ್ಲಿ ಕುಂಭವನ್ನು ಹಿಡಿದಿರುವ ದೇವಿಯ ಸ್ವರೂಪ ಇವೆಲ್ಲವೂ ಮುದ್ದಾಗಿವೆ.ಇವುಗಳಲ್ಲಿ ಚಿತ್ರಗಾರರ ನೈಜತೆ,ಸೌಲಭ್ಯ,ಭಾವದೃಷ್ಟಿ,ರೇಖಾವಿಲಾಸಗಳು ಮನೋಹರವಾಗಿವೆ.ಆದರೆ ಇವೆಲ್ಲವೂ ಯಥಾರ್ಥ ದೃಷ್ಟಿಯಲ್ಲಿಲ್ಲ.ಕೆಲವು ಸುಮೇರರ ಆಧ್ಯಾತ್ಮಕತೆಗೆ ಸಾಂಕೇತಿಕ.ಇದೇ ಕೌಶಲದಿಂದ ಪತಾಕದ ತ್ರಿಕೋಣದ ಕೊನೆಗಳಲ್ಲಿ,ಅದರ ನಾನಾವರ್ಣ್?ಅದ ಫಲಕಗಳಲ್ಲಿ ರಚಿಸಲಾದ ರೂಪಗಳ ವೈಶಿಷ್ಟ್ಯವನ್ನು ಕಾಣಬಹುದು.

ಯ್ತ್ತರ,ವಾಯವ್ಯ,ಈಶಾನ್ಯ ದಿಕ್ಕುಗಳಿಂದ ಬಂದ ಸುತ್ತಮುತ್ತಲಿನ ಬುಡಕಟ್ಟಿನ ಜನರಿಂದ ಪ್ರ.ಶ.ಪೂ. ಸು.೨೦೦೦ದಲ್ಲಿ ಬ್ಯಾಬಿಲೋನಿಯ ರಾಜ್ಯಕ್ಕೆ ತೊಂದರೆ ಉಂಟಾಯಿತು-ಹಿಟ್ಟೈಟರಿಂದ(ಪ್ರ.ಶ.ಪೂ.೧೭೫೦),ವಾಯವ್ಯದ ಕಾಶ್ಶೈಟರದಿಂದ(ಪ್ರ.ಶ.ಪೂ.೧೫೫೦).ಪ್ರ.ಶ.ಪೂ.೧೫೫೦-೧೧೬೯ರ ವರೆಗೂ ಬಾಬಿಲೋನಿಯ ಕಾಶ್ಶೈಟ್ಟರ ಆಡಳಿತದಲ್ಲಿದ್ದು ಪ್ರ.ಶ.ಪೂ.೧೦೦೦ದಲ್ಲಿ ಯುದ್ಧದಲ್ಲಿ ಚತುರರಾದ ಅಸ್ಸೀರಿಯನ್ನರ ಆಡಳಿತ ಈಜಿಪ್ಟ್ ಮೇಲೆ ಪ್ರ.ಶಪೂ.೭೦೦ರಲ್ಲಿ ಹರಡಿತು.ಬ್ತ್ಯಾಬಿಲೋನಿಯದಲ್ಲಿ ಜೆಡಿಮಣ್ಣು ಎಷ್ಟು ಹೇರಳವೋ ಅಸ್ಸೀರಿಯದಲ್ಲಿ ಕಲ್ಲು ಅಷ್ಟು ಹೇರಳವಾಗಿದ್ದು,ಅವರು ದೇವಸ್ಥಾನ(ಜಿಗ್ಗುರಾತ್) ಅರಮನೆ ಮುಂತಾದ ಕಟ್ಟಡಗಳಲ್ಲಿ,ಅವುಗಳ ಅತ್ಯದ್ಭುತವಾದ ಭಿತ್ತಿಚಿತ್ರಗಳ ಉಬ್ಬಿದ ಶಿಲ್ಪಾಕೃತಿಗಳ ಶೃಂಗಾರದಲ್ಲಿ,ಜೀವನದ ವೈಭವ ಮತ್ತು ಆಡಂಬ್ವರದಲ್ಲಿ ತೊಡಗಲು ಅವಕಾಶವಾಯಿತು.ಇದರ ಪರಿಣಾಮ ಅವರ ಆಡಳಿತ ಸಡಿಲಾಗಿ ನಾಶವಾಯಿತು.ಈ ರಾಜ್ಯ ಪರ್ಷಿಯನ್ ರಾಜನಾದ ಸೈರಸ್ ನಿಂದ ಪರಭಾವ(ಪ್ರ.ಶ.ಪೂ.೩-೧೦-೫೩೮)ಹೊಂದುವವರೆಗೂ ವೈಭವದಿಂದ ಮೆರೆಯಿತು.

ಕಟ್ಟಡದ ನಿರ್ಮಾಣದಲ್ಲಿ,ಅದರ ಅಲಂಕಾರದಲ್ಲಿ,ಅಸ್ಸೀರಿಯನ್ನರು ಸುಮೇರಿಯನ್ನರಿಗಿಂತಲೂ,ದಕ್ಷಿಣ ಅಕ್ಕೇಡಿಯನ್ನರಿಗಿಂತಲೂ ಹೆಚ್ಚಾದ ನೈಪುಣ್ಯವನ್ನು ಸಾಧಿಸಿದರು.ಇವರ ಶೈಲಿ ವಿಶಿಷ್ಟ ರೂಪಗಳನ್ನು ತಾಳಿದ್ದರೂ ಬ್ಯಾಬಿಲೋನಿಯ ಸಂಪ್ರದಾಯಕ್ಕೇ ಹೊಂದಿಕೊಂದಿದೆ.ಚಿತ್ರಗಳು ಉಚ್ಚಮಟ್ಟದವು.ಇವರು ಅಲಂಕಾರವನ್ನು ಅಂತಃಪುರಾಣಗಳಿಗೂ ಮಹಾದ್ವಾರಗಳಿಗೂ ಮಾನಸ್ತಂಭ ಮುಂತಾದ ಸ್ಮಾರಕ ಕಟ್ಟಡಗಳಿಗೂ ಹೆಚ್ಚಾಗಿ ಉಪಯೋಗಿಸಿದರು.ಸುಮೇರ್ ಅಕೇಡಿಯನ್ನರ ಪುರಾಣ,ಇತಿಹಾಸಗಳು ಅವರ ಸಾಂಕೆತಿಕಶಾಸ್ತ್ರದೊಂದಿಗೆ ಯುದ್ಧದ ದೃಶ್ಯಗಳು,ಅರಮನೆಯ ಹ್ರೀಡಾಚಟಿವಟಿಕೆಗಳು,ಬೇಟೆ ಮುಣ್ತಾದವು ಹೇರಳವಾಗಿ ವಿತರಣೆ ಸಹಿತ ಚಿತ್ರಿಸಲಾಯಿತು.

ಪ್ರ.ಶ.ಪೂ.೬೮೯ರಲ್ಲಿ ಸೆನ್ನಚರೀಬ್ ಬ್ಯಾಬಿಲೋನಿಯವನ್ನು ನಾಶಮಾಡಿದರು.ಅವನ ತರುವಾಯ ಬಂದ ರಾಜರಾದ ನೇಬೋಫೋಲಾಜಾರ್ ಅವನ್ ಮಗ ನೆಬಿಚಡ್ನಸರ್ ಇವರುಗಳಿಂದ ಪುನರುಜ್ಜೀವಿತವಾಯಿತು;ತನ್ನ ಕಲಾಔನ್ನತ್ಯವನ್ನು ಪುನಃ ಪಡೆಯಿತು(ಪ್ರ.ಶ.ಪೂ ೬೦೧೫-೫೬೨).ಬ್ಯಾಬಿಲೋನ್ ಪಟ್ಟಣದ ವೈಶಾಲ್ಯ ೨೪ ಕಿಮೀ ಚತುರಸ್ರ;ಅದರ ತೂಗುದ್ಯಾನಗಳೂ;ಕಂದಕದ ಗೋಡೆಗಳು ೫೦ ಮೊಳೆಗಳ ದಪ್ಪ ೨೦೦ ಮೊಳೆಗಳ ಎತ್ತರ;ಅದರ ಮರ್ದೂರ್ ದೇವಾಲಯದ ಆವರಣದಲ್ಲಿ ಸುಮೇರರ ದೇವಾಲಯದಂತೆ ನಿರ್ಮಿತವಾದ ಏಳು ಅಂತಸ್ತಿನ ಜಿಗ್ಗುರಾಟ್ ದೇವಾಲಯ;ಅದರ ಪೂರ್ವಕ್ಕೆ ನಿರ್ಮಿಸಲಾದ ಪ್ರದಕ್ಷಿಣೆ ಕೈಸಾಲೆ;ಅದರ ಗೋಡೆಗಳ ಮೇಲೆ ಸುಟ್ಟಿ ಹೆಂಚುಗಳಿಂದ