ಪುಟ:Mysore-University-Encyclopaedia-Vol-1-Part-2.pdf/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕುಗ್ಗುವ ಶೆಕ್ತಿಯನ್ನು ಹೊಂದಿವೆ. ಇವುಗಳ ಟೆಂಟಕಲ್ ಗಳಲ್ಲಿ ನೆಮಟೋಸಿಸ್ಟ್ಪಗಳೆಂಬ ಕೋಶಗಳು ತುಂಬಿವೆ. ಇವನ್ನು ಕುಟುಕುಕೋಶಗಳಂದ ಕರೆಯುತ್ತಾರೆ. ಈ ಕೋಶಗಳು ಜೀವಿಗಳಿಗೆ ರಕ್ಷಣೆಯನ್ನೊದಗಿಸುತ್ತವೆ ಮತ್ತು ಆಹಾರ ಗಳಿಕೆಯನ್ನು ಸಾಧ್ಯವಾಗಿಸುತ್ತವೆ. ಆಂಥೊಜೋವವನ್ನು ಅತ್ಯಂತ ವಿಶಾಲವಾದ ಎರಡು ಉಪವಗ೯ಗಳಾಗಿ ಹೀಗೆ ವಿಂಗಡಿಸಲಾಗಿದೆ: 1. ಆಲ್ ಸಿಯೊನೇರಿಯ ಅಥವಾ ಆಕ್ಟೊಕೊರೇಲಿಯ, ಉದಾಹರಣೆಗಳು- ಕಡಲ ಕುಸುಮ, ಮಿದುಳು ಹವಳ, ನಾಯಿಕೊಡೆ ಹವಳ, ನಕ್ಷತ್ರ ಹವಳ, ಜಿಂಕೆಕೊಂಬು ಹವಳ. 2. ಜುಆಂಥೇರಿಯ ಅಥವಾ ಹೆಕ್ಸಾ ಕೊರೇಲಿಯೆ. ಉದಾಹರಣೆಗಳು -ಸುಮುದ್ರದ ಬೀಸಣಿಗೆ, ಸಮುದ್ರದ ಪೆನ್. ಟ್ಯುಬಿಫೇರಾ, ಆಲ್ಸಿಯೇನಿಯಂ, ಕೇರಾಲಿಯಂ ರುಬ್ರಮ್ ಒಡವೆಗಳಲ್ಲಿ ಬಳಸುವ ಬೆಲೆಬಾಳುವ ಹವಳ.

ಆಂಥ್ರಸೀನ್ ಮತ್ತು ಫೀನಾಂಥ್ರಿನ್ : ಒಂದೇ ಅಣುಸೂತ್ರವುಳ್ಳ (C14H10) ಎರಡು ಆರೋಮ್ಯಾಟಿಕ್ ಹೈಡ್ರೊಕಾರ್ಬನ್ನುಗಳು.ಇವೆರಡೂ ಕಲ್ಲಿದ್ದಲು ಟಾರಿನಲ್ಲಿ ದೊರೆಯುತ್ತವೆ.ಟಾರನ್ನು ಆರಿಶಿಕವಾಗಿ ಬಟ್ಟಿ ಇಳಿಸುವಾಗ 300