ಪುಟ:Mysore-University-Encyclopaedia-Vol-1-Part-2.pdf/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಗ್ಬರ್ನ್,ಡಬ್ಲ್ಯು ಎಫ಼್ - ಆಚರಣೆ ಆಗ್ಬರ್ನ್,ಡಬ್ಲ್ಯು ಎಫ಼್.:೧೮೮೬-೧೯೫೯. ಪ್ರಸಿದ್ಧ ಸಮಾಜಶಾಸ್ತ್ರಜ್ಞ ಸಂಯುಕ್ತ ಸಂಸ್ಥಾನದ ಜಾರ್ಜಿಯದಲ್ಲಿ ಬಟ್ಲರ್ ಎಂಬಲ್ಲಿ ಹುಟ್ಟಿದ. ವಿದ್ಯಾಭ್ಯಾಸ ಮರ್ಸರ್ ಮತ್ತು ಕೊಲಂಬಿಯ ವಿಶ್ವವಿದ್ಯಾನಿಲಯದಲ್ಲಿ ಜರುಗಿತು. ಮೊದಲು ಪ್ರಿನ್ಸ್ ಟನ್ ಮತ್ತು ವಾಷಿಂಗ್ಟನ್ ವಿಶ್ವವಿದ್ಯಾನಿಲಯಗಳಲ್ಲಿ ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಇತಿಹಾಸ ಮತ್ತು ಸಮಾಜವಿಜ್ಙಾನಗಳ ಅಧ್ಯಾಪಕನಾಗಿದ್ದ. ಮುಂದೆ ಕೆಲಕಾಲ ಶಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಸಮಾಜವಿಜ್ಙಾನದ ಪ್ರಾದ್ಯಾಪಕನಾಗಿ ಕೆಲಸಮಾಡಿದ. ೧೯೫೧ರಲ್ಲಿ ನಿವ್ರತ್ತನಾಗಿ ಪ್ರಪಂಚಪರ್ಯಟನ ಕೈಗೊಂಡು ಹೋದೆಡೆಯೆಲ್ಲ ಪ್ರಾಜ್ಙರಿಂದ ಹೆಚ್ಚು ವಿಷಯ ಸಂಗ್ರಹಿಸಿ ಉಪನ್ಯಾಸಗಳನ್ನು ಕೊಟ್ಟ. ಭಾರತಕ್ಕೆ ಬಂದಿದ್ದಾಗ ಕೊಲ್ಕತ್ತ ಮತ್ತು ದೆಹಲಿ ವಿಶ್ವವಿದ್ಯಾನಿಲಯಗಳಲ್ಲಿ ಅವನ ಉಪನ್ಯಾಸ ನಡೆಯಿತು. ಅಮೆರಿಕ ಸರ್ಕಾರದ ನಾನಾ ಶಾಕೆಗಳಲ್ಲೂ ಸೇವೆ ಸಲ್ಲಿಸಿದ. ಸಮಾಜವಿಜ್ಙಾನಿಗಳು ಸಮಾಜದ ಸ್ಥಿತಿಗತಿಗಳನ್ನು ಮಾತ್ರವೇ ಅಭ್ಯಸಿಸದೆ ಚರಿತ್ರೆ, ರಾಜಕೀಯ, ಸಂಸ್ಕೃತಿ, ಸಂಪ್ರದಾಯಗಳು ಮುಂತಾದ ಎಲ್ಲ ಮುಖಗಳನ್ನೂ ಪರಿಶೀಲಿಸಿದಾಗಲೇ ಸಾಮಾಜಿಕ ಸಮಸ್ಯೆಗಳನ್ನು ಬಿಡಿಸಲು ಸಾಧ್ಯವಾಗುತ್ತದೆ ಎಂಬುದು ಅವನ ಅಭಿಪ್ರಾಯ. ಆಗ್ರ : ವಾಸ್ತುಶಿಲ್ಪಕ್ಕೆ ಪ್ರಸಿದ್ದವಾಗಿರುವ ತಾಜ್ ಮಹಲ್ ಇರುವ ಉತ್ತರ ಪ್ರದೇಶದ ಪ್ರಮುಕನಗರ ಮತ್ತು ಜಿಲ್ಲಾ ಕೇಂದ್ರ(ಉ.ಅ.೨೭.೦೯ ಮತ್ತು ೭೮.೦೨ಪೂ.ರೇ.).ಯಮುನಾ ನದಿಯ ದಡದಲ್ಲಿ ದೆಹಲಿಗೆ ೧೯೭ ಕಿಮೀ ದೂರದಲ್ಲಿದೆ. ಜನಸಂಖ್ಯೆ ೧,೪೦೦,೦೦೦(೨೦೦೧). ಅಕ್ಟರ್ ಮಹಾಶಯ ಇದನ್ನು ಊಜ್ರಿತಗೊಳಿಸಿ(೧೫೬೬) ತನ್ನ ರಾಜಧಾನಯನ್ನಾಗಿ ಮಾಡಿಕೊಂಡ. ಇಲ್ಲಿ ಒಂದು ವಿಶ್ವವಿದ್ಯಾನಿಲಯವಿದೆ. ಒಂದು ದೊಡ್ಡ ರೈಲು ಮತ್ತು ವಿಮಾನ ನಿಲ್ದಾಣ, ವಾಣಿಜ್ಯ ಮತ್ತು ಪ್ರೇಕ್ಷನಣೇಯ ಕೇಂದ್ರ, ಹತ್ತಿ ಮತ್ತು ಜವಳಿ ಹಿಟ್ಟಿನ ಗಿರಣಿಗಳಿವೆ. ಕಲಾತ್ಮಕವಾದ ಉಣ್ಣೆಯ ಜಮಖಾನಗಳು ಎಲ್ಲಿಂದ ದೇಶ ವಿದೇಶಗಳಿಗೆ ಹೋಗುತ್ತವೆ. ಚರ್ಮದ ವಸ್ತುಗಳಿಗೂ ಇದು ಪ್ರಸಿದ್ಧ. ಅಮೃತಶಿಲೆಯ ಕೆತ್ತನೆ ಕೆಲಸ,ಬೆಳ್ಳಿಯ ಎಳೆಗಳ ನೇಯ್ಗೆಗಳಿಗೆ ಇದು ಹೆಸರುವಾಸಿ. ಆಗ್ರ ಜಿಲ್ಲೆ ೪೦೨೭ ಚ.ಕಿಮೀ ವಿಸ್ತಾರವಾಗಿದೆ. ಜನಸಂಖ್ಯೆ ೩೬,೧೧,೩೦೧ (೨೦೦೧).ಯಮುನಾ ನದಿ ಮತ್ತು ಆಗ್ರ ಕಾಲುವೆಗಳು ಇಲ್ಲಿನ ಅಭಿವೃದ್ದಿಗೆ ಕಾರಣಮಾಗಿವೆ.ಗೋದಿ, ಜವೆಗೋದಿ, ದ್ವಿದಳ ಧಾನ್ಯಗಳು ಹೇರಳವಾಗಿ ಸಾಗುವಳಿಯಾಗುತ್ತವೆ. (ಸಿ.ಕೆ.ಎನ್.) ಇಲ್ಲಿನ ಜನರ ಭಾಷೆ ಹಿಂದಿ. ಆಗ್ರ ನಗರ ಐತಿಹಸಿಕವಾಗಿ ಪ್ರಸಿದ್ಧವಾದ ಸ್ಥಳ.ಇಟಾವ. ತೊಯಿಲ್, ಗ್ವಾಲಿಯರ್, ಡೋಲಪುರ ಮೊದಲಾದ ಊರುಗಳ ನಾಯಕರನ್ನು ತನ್ನ ಹತೋಟಿಗೆ ತರಲು ಸಿಕಂದರ್ ಲೋದಿ ೧೫೦೪ರಲ್ಲಿ ಈ ನಗರವನ್ನು ಕಟ್ಟಿ ಅದನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡು ಅದಕ್ಕೆ ಒಂದು ಕೋಟೆಯನ್ನು ಕಟ್ಟಿಸಿದ.ಮುಂದೆ ಮೊಗಲ ಬಾದಶಹನಾದ ಬಾಬರ್ ಇದನ್ನು ಗೆದ್ದು ಹಳೆಯ ಕೋಟೆಯಲ್ಲಿ ಜಾಮಿಯ ಮಸೀದಿಯನ್ನು ಕಟ್ಟಿಸಿದ. ತರುವಾಯ ಇದು ಅಕ್ಬರ್, ಜಹಾಂಗೀರ್, ಷಹಜಹಾನ್ ಮೊದಲಾದ ಮೊಗಲ ಬಾದಶಹರ ರಾಜಧಾನಿಯಾಗಿತ್ತು. ಅಕ್ಬರ್ ಈ ನಗರದ ಸಮೀಪದಲ್ಲಿ ಸಿಕ್ರಿ ಎಂಬಲ್ಲಿ ಸುಂದರ ಕಲ್ಲಿನ ಕಟ್ಟಡಗಳನ್ನು ಕಟ್ಟಿಸಿದ. ಈ ಕಟ್ಟಡಗಳ ರಚನೆ ಇತಿಜಹಾಸಪ್ರಸಿದ್ಧವಾದದ್ದು. ಅಕ್ಬರ್ ಇಲ್ಲಿಯೇ ಹಲವು ಕಾಲ ವಾಸಮಾಡಿದ.ಅವನ ಕಾಲದ ಜಹಂಗೀರ್ ಮಹಲ್ ಹಿಂದೂ ರಾಜನ ಅರಮನೆಯಂತಿದ್ದು ಮೊಗಲ್ ಶೈಲಿಯ ಮೇಲೆ ಆದ ಹಿಂದೂಪ್ರಭಾವಕ್ಕೆ ಸಾಕ್ಷಿಯಾಗಿದೆ. ಕಲಾಪ್ರೇಮಿಯಾದ ಷಹಜಹಾನ್ ಅಕ್ಬರನ ಕಾಲದ ಕೋಟೆಯನ್ನು ದುರಸ್ತು ಮಾಡಿದಲ್ಲದೆ ಇಲ್ಲಿ ಸುಂದರ ಕಟ್ಟಡಗಳನ್ನು ಕಟ್ಟಿಸಿದ. ಈತ ಕಟ್ಟಿಸಿದ ಮೋತಿಮಸೀದಿ ಒಂದು ಉತ್ಕೃಷ್ಟ ಕಲಾಕೃತಿ. ತನ್ನ ಹೆಂಡತಿ ಮಮತಾಜಳ ಸ್ಮರಣೆಗಾಗಿ ನಿರ್ಮಿಸಿದ ತಾಜಮಕಹಾಲ್ (ನೋಡಿ)ಎಂಬ ಶಿಲಾಕೃತಿ ಜಗತ್ತಿನಲ್ಲೇ ಶ್ರೇಷ್ಟ, ಅದ್ಭುತ ಕಲಾಕೃತಿಯಾಗಿದೆ. ಇದಲ್ಲದೆ ತನ್ನ ಹೆಂಡತಿಗಾಗಿ ಕಟ್ಟಿಸಿದ ಶಹಾಬುಜ್ರಿ ಗೋಪುರ, ಜುಮ್ಮಮಸೀದಿ, ದಿವಾನ-ಈ-ಆಮ್, ದಿವಾನ-ಈ-ಖಾಸ್ ಮೊದಲಾದುವು ಈಗಲೂ ಅಚ್ಚಳಿಯದೆ ಕಂಗೊಳಿಸುತ್ತಿವೆ. ಆದ್ದರಿಂದಲೇ ಇದು ಅರಮನೆಗಳ ಆಗರವಾಗಿದೆ. ಆದರೆ ಬಾಬರ್ ಮತ್ತು ಹುಮಾಯೂನರ ಕಾಲದ ಮಸೀದಿಗಳು ಈಗ ಹಾಳಾಗಿವೆ. (ವಿ.ವಿ.ಎನ್.; ಎಸ್.ಎಂ.ಎಚ್.) ಆಗ್ರಯಣೇಷ್ಟಿ : ಹೊಲಗಳಲ್ಲಿ ಬೆಳೆದ ಮೊದಲ ಫಲವನ್ನು ಉಪಯೋಗಿಸುವ ಮುನ್ನ ಅಹಿತಾಗ್ನಿಯಾದ ಗೃಕಸ್ಥ ಮಾಡಬೇಕಾದ ಶ್ರತಕರ್ಮಕ್ಕೆ ಆಗ್ರಯಣ ಇಷ್ಟಿಯೆಂದು ಹೆಸರು. ಶರದೃತುವಿನಲ್ಲಿ ಬತ್ತ. ವಸಂತದಲ್ಲಿ ಯವ ಇವು ಹೋಮದ್ರವ್ಯಗಳಿಂದಲೂ ಬೇರೆ ಬೇರೆ ದೇವತೆಗಳನ್ನುದ್ದೇಶಿಸಿಯೂ ನಡೆಯಬಹುದಾಗಿದೆ. ಈ ಇಷ್ಟಿಗಳೆಲ್ಲ ಪ್ರಾಯಃ ದರ್ಶಪೂರ್ಣಮಾಸದ ವಿಕೃತಿಗಳೇ ಎನ್ನಬಹುದು. ಆಗ್ಸ್ ಬರ್ಗ ಒಕ್ಕೂಟ : ೧೭ನೆಯ ಶತಮಾನದ ಉತ್ತರಾರ್ಧದಲ್ಲಿ ಯುರೋಪಿನ ಅತ್ಯಂತ ಪ್ರತಿಭಾಶಾಲಿ ದೊರೆಯಾಗಿದ್ದ ಫ್ರಾನ್ಸಿನ ಹದಿನಾಲ್ಕನೆಯ ಲೂಯಿ ಪರಮ ಪ್ರಭುವಾಗಬೇಕೆಂಬ ಆಸೆಯಿಂದ ಮಧ್ಯ ಯುರೋಪಿನ ರಾಷ್ಟ್ರಗಳ ಮೇಲೆ ನುಗ್ಗಬಹುದೆಂಬ ಭಯವುಂಟಾದಾಗ, ಆಸ್ಟ್ರಿಯದ ಚಕ್ರವರ್ತಿ ಮೊದಲನೆಯ ಲಿಯೋಪಾಲ್ಡ್ ಲೂಯಿಯ ಧಾಳಿಯನ್ನೇರ್ಪಡಿಸಿದ. ಮಧ್ಯ ಯುರೋಪಿನಲ್ಲಿ ತಮಗೂ ಸೇರಿದ್ದ ಪ್ರಾಂತ್ಯಗಳಿದ್ದುದರಿಂದ ಯುದ್ಧವೇನೂ ನಡೆಯಲಿಲ್ಲ. ಎರಡು ವರ್ಷ ಕಳೆದ ಮೇಲೆ ಫ್ರಾನ್ಸಿನ ಸೈನ್ಯಗಳು ಪ್ಯಾಲಟಿನೇಟ್ ಪ್ರಾಂತ್ಯಕ್ಕೆ ನುಗ್ಗಿದಾಗ ಕೆಲವು ರಾಜ್ಯಗಳ ಈ ಒಕ್ಕೂಟವನ್ನು ತ್ಯಜಿಸಿದ್ದುವು. ಇಂಗ್ಲೆಂಡ್, ಸವಾಯ್, ಡಚ್, ನೆದರ್ ಲೆಂಡ್ಸ್ ಹೊಸದಾಗಿ ಸೇರಿಕೊಂಡುವು. ಆಗ ಈ ಒಕ್ಕೂಟಕ್ಕೆ ಮಹಾರಾಷ್ಟ್ರಕೂಟ (ಗ್ರ್ಯಾಂಡ್ ಅಲ್ಯೆಯನ್ಸ್) ಎಂದು ಹೆಸರಾಯಿತು. ಮುಂದೆ ನಡೆದ ಯುದ್ಧಕ್ಕೆ ಆಗ್ಸ್ ಬರ್ಗ ಒಕ್ಕೂಟದ ಸಮರ ಎಂದು ಕೆಲವರು ಹೆಸರು ಕೊಟ್ಟಿದ್ದಾರೆ. ಅದನ್ನು ಮಹಾರಾಷ್ಟ್ರಕೂಟ ಸಮರ ಎಂದು ಕರೆಯುವುದು ಹೆಚ್ಚು ಸಮಂಜಸ. ಆಚಣ್ಣ : ಸು. ೧೧೯೫. ವರ್ಧಮಾನಪುರಾಣದ ಕತೃ. ಶಿಕಾರಿಪುರ ೧೧೯, ೧೨೩, ೧೫೫, ೧೯೨ ಮತ್ತು ಆರಸೀಕೆರೆ ೭೭ನೆತಯ ಶಾಸನಗಳಲ್ಲಿ ಹೊಗಳಿಸಿಕೊಂಡಿರುವ, ವಸುಧೈಕ ಬಾಂಧವನೆಂಬ ಬಿರುದುಳ್ಳ ರೇಚರಸದಂಡನಾಥನ ಆಶ್ರಯದಲ್ಲಿದ್ದ. ಈತನಿಗೆ ಆಚರಾಜ ಎಂಬ ಮತ್ತೊಂದು ಹೆಸರೂ ಇದೆ. ಭಾರದ್ವಾಜ ಗೋತ್ರೋದ್ಭವ. ತಂದೆ ಕೇಶಿರಾಜ, ತಾಯಿ ಮಲ್ಲಾಂಬಿಕೆ. ತಾರೇಶೋಜ್ವಳಕೀರ್ತಿ ಜೈನರುಚಿ ಎಂದು ವಿಶೇಷಿಸಿ ಕೊಂಡಿರುವುದರಿಂದ ಕವಿ ಪ್ರಖ್ಯಾತನೆಂದೂ ಜಿನಮತದಲ್ಲಿ ಬಹು ಶ್ರದ್ಧೆಯುಳ್ಳವನೆಂದೂ ಪರಿಶುದ್ಧವಾದ ಆಚಾರವಂತನೆಂದೂ ಗೊತ್ತಾಗುತ್ತದೆ. ಈತನಿಗೆ ವಾಣೀವಲ್ಲಭನೆಂಬ ಬಿರುದಿತ್ತು. ವರ್ಧಮಾನಪರಾಣ ೨೪ನೆಯ ತೀರ್ಥಂಕರನಾದ ಶ್ರೀವರ್ಧಮಾನ ಮಹಾವೀರನ ಪಾವನ ಚರಿತವಾಗಿದೆ. ಇದೊಂದು ಉತ್ತಮ ಚಂಪೂಕಾವ್ಯ, ಮಹಾಪುರಾಣ. ಬಂಧ ಪ್ರೌಢವಾಗಿಯೂ ಸಂಸ್ಕ್ರತಪದಭೂಯಿಷ್ಟವಾಗಿಯೂ ಇದೆ. ಪ್ರಾಸಯಮಕಾದಿ ಶಬ್ದಾಲಂಕಾರಗಳನ್ನು ಪ್ರಯೋಗಿಸುವುದರಲ್ಲಿ ಆಚಂಂಅನಿಗೆ ತುಂಬ ಪ್ರೀತಿ. ಶೈಲಿ ನಿರರ್ಗಳವಾಗಿ ಓಡುತ್ತದೆ. ತನ್ನ ಕಾವ್ಯ ಸದಳಂಕಾರದಾಗರಂ, ಮೃದು ಸಂದರ್ಭದ ಗರ್ಭಂ ಎಂದು ಮುಂತಾಗಿ ಹೇಳಿಕೊಂಡಿರುವುದು ಆತಿಶಯೋಕ್ತಿಯಲ್ಲ. ರಸಭಾವಗಳನ್ನು ಮನಮುಟ್ಟುವಂತೆ ವರ್ಣಿಸುವ ಕವಿತಾಸಾಮರ್ಥ್ಯ ಆಚಣ್ಣನಿಗಿತ್ತು. ಅದಕ್ಕೆ ಅನುಕೂಲವಾದ ಶಬ್ದಸಂಪತ್ತಿಯಿತ್ತು. ಸುಂದರ ನುಡಿಗಟ್ಟುಗಳೂ ಸಂದರ್ಭೋಚಿತ ಗಾದೆಯ ಮಾತುಗಳೂ ಆತನ ಶೈಲಿಗೆ ಮೆರುಗು ಕೊಟ್ಟಿವೆ. ವರ್ಧಮಾನ ಪುರಾಣವನ್ನಲ್ಲದೆ ಶ್ರೀಪಾದಶೀತಿ ಎಂಬ ಸುಮಾರು ೯೪ ಕಂದಗಳಿರುವ ಮತ್ತೊಂದು ಪಟ್ಟ ಗ್ರಂಥನನ್ನೂ ಆಚಣ್ಣ ರಚಿಸಿದ್ದಾನೆ. ಇದು ಪಂಚಪದಗಳ ಮಹಿಮೆಯನ್ನು ತುಳಿಸುವ ಒಂದು ಕೃತಿ. ಇದರಲ್ಲಿ ಆರ್ಹಂತ ಸಿದ್ಧ ಸಾಧು ಉಪಾಧ್ಯಾಯ ಆಚಾರ್ಯ ಇವರ ಮಹಿಮಾವರ್ಣನೆ ಅಡಕವಾಗಿದೆ. ಆಚಯನ : ಖನಿಜ ಮಿಶ್ರಣದ ಅಂಶಗಳ ಸಾಪೇಕ್ಷ ಸಾಂದ್ರತೆಗಳ ಭಿನ್ನತೆಯಿಂದ ಅವು ಬೇರ್ಪಟ್ಟು ಗರುತ್ವಾಕರ್ಷಣೆಯಿಂದ ಸ್ಥಳಾಂತರಗೊಳ್ಳುವಿಕೆ (ಪ್ಯಾನಿಂಗ್). ಅದ್ದರಿಂದ ಸಾಪೇಕ್ಷಸಾಂದ್ರತೆ ಅಧಿಕವಾಗಿರುವ ಖನಿಜಾಂಶದ ಮೂಲಸ್ಥಾನ ಗುರ್ತಿಸಲು ಅನ್ವೇಷಕ ಅದರ ನಿಕ್ಷೇಪದಿಂದ ಏರುದಿಕ್ಕಿನಲ್ಲಿ ಸಾಗಬೇಕು. ಆಚರಣೆ : ಮತಧರ್ಮಗಳಿಗೆ ಸಂಬಂಧಿಸಿದಂತೆ, ಅಗೋಚರ ದೈವಶಕ್ತಿಗಳ ಪ್ರೀತ್ಯರ್ಥವಾಗಿ ಮಾನವ ನಡೆಸುತ್ತ ಬಂದಿರುವ ಮತಾಚಾರಗಳಿಗೆ, ಕರ್ಮವಿಧಿಗಳಿಗೆ ಈ ಹೆಸರಿದೆ (ರಿಚುಆಲ್). ಮತಸಂಬಂಧವಾದ ಆಚಾರ (ನೋಡಿ-ಆಚಾರ), ಆಚಾರ್ಯ (ನೋಡಿ-ಆಚಾರ್ಯ) ಇವು ಪ್ರತ್ಯೇಕ ವಿಷಯಗಳಾಗಿವೆ. ಮನುಷ್ಯ ಸತ್ತಮೇಲೆ ಅವನಿಗೆ ನಡೆಸುವ ಉತ್ತರ ಕ್ರಿಯಾದಿಗಳೂ ಒಂದು ರೀತಿಯ ಕರ್ಮವೇ. ಅದನ್ನು ಸಂಸ್ಕಾರ ಎನ್ನಲಾಗಿದೆ. ತದನಂತರ ಮೃತರ ಬಗ್ಗೆ ಮಾಡುವ ಶ್ರಾದ್ಧ ಪಿತೃಪಕ್ಷಗಳ ಬಗ್ಗೆ ಪ್ರತ್ಯೇಕವಾಗಿ ಉಲ್ಲೇಖಿಸಲಾಗಿದೆ. ಇಲ್ಲಿ ದೈವೀಸಂಬಂಧವಾದ ಆಚರಣೆಗಳನ್ನು ಮಾತ್ರ ಪರಿಶೀಲಿಸಲಾಗುತ್ತದೆ. ಕ್ರಮವತ್ತಾದ, ವಿಧೊಪೂರ್ವಕವಾದ, ಪರಂಪರಾನುಗತವಾಗಿ ನಡೆದು ಬಂದ ರೀತಿಯಲ್ಲಿ ನಡೆಸುವ ಎಂಥ ಕ್ರಿಯೆಗಳ ಹಿನ್ನೆಲೆಯಲ್ಲಿ ನಂಬಿಕೆ ಆಳವಾಗಿ ಬೇರು ಬಿಟ್ಟಿರುತ್ತದೆ, ಧರ್ಮ ಇದರ ಅಡಿಗಲ್ಲು. ಧಾರ್ಮಿಕ ವಿಧಿಗಳಿಂದ ತಾನು ನಂಬಿದ ಪವಿತ್ರ