ಪುಟ:Mysore-University-Encyclopaedia-Vol-1-Part-2.pdf/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಲೆಕ್ಸಾಂಡರ್ ದ್ವೀಪಗಳು-ಅಲೆಕ್ಸಸ್, ವಿಲಿಬಲ್ಡ್

ಆಗಬಹುದಾಗಿದ್ದ ಘಷ‌‌‍ಣೆಯನ್ನು ತಪ್ಪಿಸಿದ. ಪ್ರಾನ್ಸಿನ ಎಂಟನೆಯ ಚಾರಲ್ಸ್ ಇಟಲಿಯನ್ನು ಆಕ್ರಮಿಸುವುದನ್ನು ತಡೆದ. ಚೆಲುವಿನ ರೋಮನ್ ಸುಂದರಿಯೊಬ್ಬಳೊಡನೆ ಸಂಬಂಧವಿಟ್ಟುಕೊಂಡಿದ್ದರಿಂದ ಅಪಕೀತಿ‍ಗೊಳಗಾದ. ತನ್ನ ಮಕ್ಕಳನ್ನು ಉನ್ನಡ ಪದವಿಗಳಿಗೇರಿಸಲು ಸವ‍ಪ್ರಯತ್ನವನ್ನೂ ಮಾಡಿದ. ಫ್ರಾನ್ಸ್ ಮತ್ತು ಸ್ಪೇನ್ ಗಳ ನಡುವೆ ಯುದ್ಧವಾದಾಗ ಯಾರ ಪಕ್ಷ ವಹಿಸಬೇಕೆಂದು ತಿಳಿಯದೆ ಪೇಚಾಡಿದ. ಅಲೆಕ್ಸಾಂಡರ್ ಪೋಪ್ ..... : ೧೬೫೫-೬೭. ೧೫೯೯ರ ಫೆಬ್ರವರಿ ೧೩ರಂದು ಇಟಲಿಯ ಪ್ರಸಿದ್ಧ ಕುಟುಂಬವೊಂದರಲ್ಲಿ ಜನಿಸಿದ. ತಾಯಿ ತಂದೆಗಳಿಂದ ಉತ್ತಮ ಶಿಕ್ಷಣ ಪಡೆದ ಬಳಿಕ ಸೈನ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರ ಮತ್ತು ನ್ಯಾಯಶಾಸ್ತ್ರಗಳಲ್ಲಿ ಡಾಕ್ಟರೇಟ್ ಪದವಿ ಗಳಿಸಿದ. ೧೬೨೬ರಲ್ಲಿ ಧಮೋ‍ಪದೇಶಕನಾಗಿ೧೬೫೫ರಲ್ಲಿ ಪೋಪ್ ಪದವಿಗೆ ಆಯ್ಕೆಯಾದ. ಜೀವನ ಪವಿತ್ರತೆ, ನೈತಿಕ ನಿಷ್ಠೆ, ವೈರಾಗ್ಯಗಳಿಂದ ಜನಾದರಣೆ ಗಳಿಸಿದ. ರೋಮ್ ನಗರವನ್ನು ಅಂದಗೊಳಿಸಲು ಬಹಳ ಶ್ರಮಿಸಿದ. ಅಲ್ಲಿನ ವಿಶ್ವವಿದ್ಯಾಲಯವನ್ನು ಊಜಿ‍ತಗೊಳಿಸಿದ. ಅಲೆಕ್ಸಾಂಡರ್ ಪೋಪ್..: ೧೬೮೯-೯೧. ವೆನಿಸ್ನ ಪ್ರಧಾನಿಯ ಮಗನಾಗಿ ೧೬೧೦ರ ಏಪ್ರಿಲ್ ನಲ್ಲಿ ಜನಿಸಿದ. ಕ್ರೈಸ್ತ ಧಮ‍ಶಾಸ್ತ್ರ ಸಂಹಿತೆಯಲ್ಲೂ ಕಾಯಿದೆ ಶಾಸ್ತ್ರದಲ್ಲೂ ಪಾರಂಗತನಾಗಿ ಡಾಕ್ಟರೇಟ್ ಪದವಿ ಗಳಿಸಿದ ೧೬೮೯ರಲ್ಲಿ ಪೋಪ್ ನ ಸ್ಥಾನಕ್ಕೆ ಚುನಾಯಿತನಾದ. ಈತನ ಶಾಂತಗುಣ, ಪ್ರಭಾವಗಳಿಂದ ಫ್ರಾನ್ಸಿನ ರಾಜನಾಗಿದ್ದ ಹದಿನಾಲ್ಕನೆಯ ಲೂಯಿ ಬಹಳ ಪ್ರಯೋಜನ ಹೊಂದಿದೆ. (ಎ.ಪಿ.) ಅಲೆಕ್ಸಾಂಡರ್ ದ್ವೀಪಗಳು: ದಕ್ಷಿಣ ಅಂಟಾಕ್‍ಟಿಕ್ ಪ್ರದೇಶದಲ್ಲಿರುವ ಈ ದ್ವೀಪಗಳಲ್ಲಿನ ಮುಖ್ಯ ಭೂಭಾಗ ಗ್ರಹ್ಯಾಮ್ ಲ್ಯಾಂಡ್ ಪಯಾ‍ಯ ದ್ವೀಪದ ಪಶ್ಚಿಮಕ್ಕಿದೆ. ಬೆಲಿಂಗ್ ಹೌಸೆನ್ ಇವನ್ನು ಕಂಡು ಹಿಡಿದು (೧೮೨೧) ಅಲೆಕ್ಸಾಂಡರ್ ಭೂ ಪ್ರದೇಶ ಎಂಬುದಾಗಿ ಹೆಸರಿಟ್ಟ (ಈ ದ್ವೀಪಗಳ ಭೌಗೋಳಿಕ ಮೊದಲಾದ ಲಕ್ಷಣವನ್ನು ೧೯೪೦ರಲ್ಲಿ ತಿಳಿಯಲಾಯಿತು). ಫಾಕ್ ಲೆಂಡ್ ದ್ವೀಪಗಳ ವಿಸ್ತೃತ ಭಾಗವಾಗಿರುವ ಈ ದ್ವೀಪಗಳಲ್ಲಿ ಮೀನುಗಾರಿಕೆ ವಿಶೇಷ. ತಿಮಿಂಗಿಲಗಳನ್ನು ಹಿಡಿವ ತಂಡಗಳು ಈ ದ್ವೀಪಗಳಿಗೆ ಆಗಾಗ್ಗೆ ಬರುತ್ತಿರುತ್ತವೆ. (ಜಿ.ಕೆ.ಜಿ.)