ಪುಟ:Mysore-University-Encyclopaedia-Vol-1-Part-2.pdf/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಅಲೆಗಳ ಉಬ್ಬರವಿಳಿತದ ಶಕ್ತಿ-ಅಲೆತಡೆ

  ಅಲೆಗಳ ಉಬ್ಬರವಿಳಿತದ ಶಕ್ತಿ:ಸಮುದ್ರದ ಅಲೆಗಳು ಏಳುವಾಗ ಬೀಳುವಾಗ ಉತ್ಪನ್ನವಾಗುವ ಶಕ್ತಿ(ಟೈಡಲ್ ಪವರ್೦.ಈ ಅಲೆಗಳಲ್ಲಿ ಮೂರು ವಿಧಗಳಿವೆ:೧.ಗಾಳಿಯ ಅಲೆಗಳು ೨.ತೆರೆನೊರೆ (ಸರ್ಘ್).೩.ಅಲೆಗಳ ಉಬ್ಬರವಿಳಿತ ಅಥವಾ ಭರತವಿಳಿತ.ಗಾಳಿಯ ಅಲೆಗಳು ೧೦,೦೦೦ ಟನ್ ತೂಕದ ಜಹಜುಗಳನ್ನು ನೂರಾರು ಸೆಂಮೀಎತ್ತರಕ್ಕೆ ಎತ್ತಬೇಕಾಗಿದ್ದರೆ ಅವುಗಳಲ್ಲಿ ಅಪಾರ ಶಕ್ತಿಯಿರಬೆಕು.ಆದರೆ ಈ ಶಕ್ತಿ ನಿರಂತರವಾಗಿ ದೊರಕುವುದಿಲ್ಲಿ ತೆರೆನೊರೆಯಿಂದ ಶಕ್ತಿಕೇಂದ್ರಗಳನ್ನು ಸ್ಮಾಪುಸಲಲು ಎಲ್ಲ ಕಡಲ ತೀರಗಳೂ ಒಂದೇ ಕ್ರಮದಲ್ಲಿ ನಡೆಯುವ ಖಗೋಳೀಯ ಘಟಸೆಯಾದ್ದರಿಂದ ಅದು ಯಾವಾಗ ಬರುವುದೆಂದು ಮುಂಚೆಯೇ ಹೇಳಬಹುದು.
  ಭರತದ ಮುಖ್ಯ ಕಾರಣ ಚಂದ್ರನ ಗುರುತ್ವಾಕರ್ವಣ ಬಲ.ಚಂದ್ರ ಭೂಮಿಯನ್ನು ಅಕರ್ಷಿಸುತ್ತದೆ ಭೂಮಿಯ ಮುಕ್ಕಾಲು ಭಾಗವನ್ನು ಅವರಿಸಿ ಚಲನೆಗೆ ಪ್ರತಿರೋಧವನ್ನು ಕೊಡದೆ ಇರುವ ನೀರಿನ ಮೇಲ್ವೈ ಇದರಿಂದ ಕೊಂಚ ಉಬ್ಬುತ್ತದೆ.ಜೊತೆಗೆ ಸೂರ್ಯ ಹೀಗೆಯೇ ಸಮುದ್ರವನ್ನು ಉಬ್ಬಿಸುತ್ತದೆ.ಅಮಾವಾಸ್ಮೆ ಮತ್ತು ಹುಣ್ಣಿಮೆಗಳಲ್ಲಿ ಸೂರ್ಯ ಮತ್ತು ಚಂದ್ರರಿಂದ ಸಂಛವಿಸಿದತ ಉಬ್ಯಗಳು ಒಂದೇ ದಿಕ್ಕಿನಲ್ನಿದ್ದು ಭರತಗಳು ಎತ್ತರವಾಗಿರುತ್ತವೆ.ಸೂರ್ಯ ತುಗ್ಗನ್ನು ಮಾಡುವ ಕಡೆ ಚಂದ್ರ ಉಬ್ಬನ್ನು ಮಾಡಿದರೆ ಭರತ ಕೊಂಚತಗ್ಗುತ್ತದೆ.ತೆರೆದ ಕಡಲಿನಲ್ಲಿ ಇದು  ಮ್ಯವಾಗಿರುತ್ತದೆ.ಸಮುದ್ರತೀರದಲ್ಲಿ ಒಳಚಾಚುಗಳಿದ್ದರೆ ಅದ್ಳುತವಾದ ದ್ಳುಶ್ಯಗಳು ಕಾಣಿಸುತ್ತವೆ.ಇಂಗ್ಲೆಂಡಿನಲ್ಲಿ ಸೆವರ್ನ್ ನದೀಮುಖದಲ್ಲಿ ೭-೧೫ಮೀ ಎತ್ತರದ ಉಬ್ಬರ ಸಾಮಾನ್ಯ.ಲಂಡನ್ ನಗರಕ್ಕೆ ಮೊದಲು ಕುಡಿಯುವ ನೀರು ದೊರೆತದ್ದು ಥೇಮ್ಸ್ ನದಿಯ ಸೇತುವೆಯ ಮೇಲೆ ಸ್ಮಾಪಿತವಾದ ಹುಟ್ತುಗಾಲಿಯಿಂದ (ಪ್ಯಾಡಲ್ ವೀಲ್).
  ಉಬ್ಬರ ಶಕ್ತಿಯನ್ನು ಬಳಸಲು ಹಲವು ಮಾರ್ಗಗಳಿವೆ ನದಿಯ ಅಳಿವೆಯಲ್ಲಿ ಸುಮಾರು ೬ಮೀ ಎತ್ತರದ ಭರತವಿದ್ದು ಕಟ್ಟೆಯನ್ನು ಕಟ್ಟಬಹುದಾದ ಹಳ್ಳವಿದ್ದರೆ ಕಟ್ಟೆಯಲ್ಲಿ ಬಾಗಿಲುಗಳನ್ನಿಟ್ಟು ಉಬ್ಬರದ ಕಾಲದಲ್ಲಿ ಎಲ್ಲ ಬಾಗಿಲುಗಳನ್ನೂ ತೆರೆದು ಹಳ್ಳವನ್ನು ತುಂಬಬಹುದು ಉಬ್ಬರ ಎತ್ತರಕ್ಕೆ ಹೋದಾಗ ಬಾಗಿಲುಗಳನ್ನು ಮುಚ್ಚಿಕೊಡಿಟ್ಟ ನೀರನ್ನು ತಿರುಬಾನಿಗಳ ಮೂಲಕ ಬಿಡಬಹುದು ಕೆಟ್ಟೆಯ ಎರಡು ಮುಖಗಳಲ್ಲಿಯೂ ನೀರು ಒಂದೇ ಮಟ್ಟಕ್ಕೆ ಬರುವವರೆಗೂ ಕೆಲವು ಗಂಟೆಗಳ ಕಾಲ ಈ ನೀರು ಒದಗುತ್ತದೆ.
  ಎತ್ತರದ ಉಬ್ಬರದ ಮಟ್ಟದಲ್ಲಿ ಒಂದು,ತಗ್ಗಿನ ಮಟ್ಟದಲ್ಲಿ ಇನ್ನೊಂದು-ಹೀಗೆ ಎರಡು ಕೊಳಗಳಿದ್ದರೆ ಒಂದೇ ಸಮವಾಗಿ ವಿದ್ಯುತ್ತಿನ ಉತ್ಪಾದನೆಯಾಗುತ್ತದೆ.ಟರ್ಟೊ-ಜನರೇಟರುಗಳನ್ನು ಕೊರಿಸಿದ ಕಟ್ಟೆ ಈ ಕೊಳಗಳನ್ನು ಪ್ರತ್ಯೇಕಿಸುತ್ತದೆ.ಟರ್ಬೈನುಗಳಿಂದ (ತಿರುವಾನಿ)ನೀರು ತಗ್ಗಿನ ಕೊಳಕ್ಕಾದರೂ ಬೀಳಬಹುದುಬ್ ಇಲ್ಲದೆ ನೇರವುದು ಸಾದ್ಯ ಇದರಲ್ಲಿ ಒಂದು ಕೊಳದ ಯೋಜನೆಯಿಂದ ಬರುವಷ್ಟು ಗರಿಷ್ಟ್ರ ವಿದ್ಯುತ್ ಉತ್ಪಾದನೆಯಾಗಲಾರದು.ಅದರೆ ಒಂದೇ ಒಂದು ಒಂದೇ ಕೊಳವಿದ್ದರೆ ದಿನಕ್ಕೆ ಎರಡು ಸಾರಿ ವೆದ್ಯುತ್ತಿನ ಉತ್ಪತ್ತಿಯೇ ಇರುವುದಿಲ್ಲ.ಪ್ರತಿಯಾಗಿ ಮತ್ತೆರಡು ಸಾರಿ ಗರಿಷ್ಟ ವಿದ್ಯುತ್ತೋ ಬರುತ್ತದೆ.ಅದು ನಮಗೆ ಅವಶ್ಯಕವಾದದ್ದಕ್ಕಿಂತ ಹೆಚ್ಚಾಗಬಹುದು.ಆಗ ಮತ್ತೋಂದು ಎರಡು ಕೊಳಗಳ ಯೋಜನೆಯನ್ನೂ ಇಡಬಹುದು.ಗರಿಷ್ಟ ಎತ್ತರದ ಉಬ್ಬರ ಬಂದಾಗ ನೀರನ್ನು ಎತ್ತರದಲ್ಲಿರುವ ಎರಡನೆಯ ಕೊಳಕ್ಕೆ ಪಂಮಮಾಡಿ ಶೇಖರಿಸಿ ಬೇಕಾದಾಗ ಬಳಸಿಕೊಳ್ಳಬಹುದು.
  ಇಂಗ್ಲೆಂಡಿನಲ್ಲಿ ಸೆವರ್ನ್ ನದೀಮುಖದಲ್ಲಿಯೂ ಫ಼್ರಾನ್ಸ್ನಲ್ಲಿ ರೋನ್ ನದಿಯಲ್ಲಿಯೂ ಕೆನೆಡದಲ್ಲಿ ಫ಼ಂಡಿ ಕೊಲ್ಲಿಯಲ್ಲಿಯೂ ಈ ಯೋಜನೆಗೆ ಸನ್ನೆವೇಶಗಳು ಅನುಕೂಲವಾಗಿವೆ.ಬೇರೆ ವಿಧಾನಗಳಲ್ಲಿ ತಗಲಾವ ವೆಚ್ಚಿಕ್ಕಿಂತ ಈ ಕ್ರಮದಲ್ಲಿ ಉತ್ವಾದನಾ ವೆಚ್ಚೆ ಕೊಂಚ ಹೆಚ್ಚಾಗಿರುವುದರಿಂದ ದೊಡ್ದ ಯೋಜನೆಗಳಿಗೆ ಅವಕಾಶವಾಗಿಲ್ಲ.ಅದರೆ ಭೂಗರ್ಭದಲ್ಲಿ ಇಂಧನಗಳು ತೀರಿದಂತೆ ಇಂಗ್ಲೆಂಡಿನಂಥ ಪ್ರದೇಶಗಳಲ್ಲಿ ಈ ಯೋಜನೆ ಸಾಧ್ಯವಾಗುತ್ತದೆ.ಸೆವರ್ನ್ ನದಿಗೆ ಅಡ್ಡಲಾಗಿ ೪ ಕಿಮೀ ಉದ್ದದ ಕಟ್ಟೆಯನ್ನು ಕಟ್ಟೆ ಒಂದು ಕೊಳದ ಯೋಜನೆಯನ್ನು . ಪ್ರಾರಂಭಿಸಬಹುದು ಸುಮಾರು ಹತ್ತು ಕೋಟಿ ಪೌಂಡು ಖರ್ಚಿನಿಂದ ವರ್ಷಕ್ಕೆ ೨೦೦ ಕೋಟಿಕ ಕಿಲೊವಾಟ್ ಗಂಟೆಗಳ(ಕೆಡಬ್ಲೂಎಚ್) ವಿದ್ಯುತ್ರನ್ನು ಉತ್ವತ್ತಿಮಾಡಿ ೧೦ ಲಕ್ಷ ಟನ್ ಕಲ್ಲಿದ್ದಲನ್ನು ಪ್ರತಿ ವರ್ಷವೂ ಉಳಿಸಬಹುದು.
  ನೋವಸ್ಳೋಪಿಯವನ್ನು ಕೆನಡದಿಂದ ಪ್ರತ್ಯೇಕಿಸುವ ವಂಡಿ ಕೊಲ್ಲಿಯಲ್ಲಿ ಇಂಥ ಎರಡು ಯೋಜನಗಳು ಸಾಧ್ಯ ಪೆಟಕೋಡಿಯಾಕ್ ನದಿಯ ಮೇಲಿನ ಯೋಜನೆಯಿಂದ ವರ್ಷಕ್ಕೆ ೧೩೦ ಕೋಟಿ ಕಿಲೋಪಾಟ್ ಗಂಟೆಗಳಷ್ಟು ವಿದ್ಯುತ್ತು ಬರಬಹುದು.ಪಾಸಮಕ್ವಾಡಿ ಯೋಜನೆಯಲ್ಲಿ ನಡುವ ದ್ವೀಪಗಳಿರುವುದರಿಂದ ಕಟ್ಟೆಯ ಖರ್ಚ ಕಡಿಮೆಯಾಗುತ್ತದೆ.ಇಲ್ಲಿ ೬೦ಕೋಟಿ ಕಿಲೊವಾಟ್ ಗಂಟೆಗಳ ಶಕ್ತಿಯನ್ನು ಒಂದೇ ಸಮವಾಗಿ ತೆಗೆಯುವುದು ಸಾಧ್ಯ ಖರ್ಚ ಕಲ್ಲಿದ್ದಲಿನ ಯೋಜನೆಯಲ್ಲಿ ಎರಡರಷ್ಟು ಆಗುತ್ತದೆ.ಆದರೆ ಇನ್ನೊಂದು ಶತಮಾನದ ಅನಂತರವೂ ಹೀಗೆಯೇ ಕಲ್ಲಿದ್ದಲು ಸಿಕ್ಕುತ್ತದೆಯೆ? ಉಬ್ಬರವಿಳಿತಗಳು ಮಾತ್ರ ನಿಲ್ಲಾವುದಿಲ್ಲ ಭಾರತದಲ್ಲಿಯೂ ನದೀ ಮುಖಜ ಭೂಮಿಯಲ್ಲಿ ಇಂತಹುದೇ ಯೋಜನೆಗಳು ಸಾಧ್ಯ.(ನೋಡಿ-ಉಬ್ಬರಳಿತಗಳು)

  ಅಲೆತಡೆ:ಸಮುದ್ರದ ಅಲೆಗಳ ರಭಸ ತದೆಯಲು ನಿರ್ಮಿಸಿದ ಕೃತಕ ತಡೆ(ಬ್ರೇಕ್ ವಾಟರ್).ಕೃತಕ ಬಂತರುಗಳಿಗೆ ಇದು ಅಲೆಗಳಿಂದ ರಕ್ಷಣೆ ಒದಗಿಸುತ್ತದೆ.ನೈಸರ್ಗಿಕ ಬಂದರುಗಳಲ್ಲಿ ರಕ್ಷಣೆ ಪೂರ್ತಿ ಮಾಡುತ್ತದೆ.ಅಲೆತಡೆಗಳಮನ್ನು ಸಾಮಾನ್ಯವಾಗಿ ದಡಕ್ಕೆ ಭದ್ರವಾಗಿ ಬಿಗಿಯುತ್ತಾರೆ.ಒಂದೇ ಕಟ್ಟಡವನ್ನು ದೋಣಿಗಳನ್ನು ನಿಲ್ಲಿಸುವುದಕ್ಕೊ ಅಲೆಗಳನ್ನು ಎದುರಿಸುವುದಕ್ಕೊ ಉಪಯೋಗವಾಗುವ ಹಾಗೆ ಕಟ್ಟಬಹುದಾದರೊ ರಕ್ಷಣಿಯ ಭಾಗವೇ ಇದರಲ್ಲಿ ಮುಖ್ಯ ಅಲೆತಡೆಗಳನ್ನು ಕಟ್ಟುವುದಕ್ಕೆ ಖರ್ಚು ವಿಶೇಷವಾಗುದರಿಂದ ಅವುಗಳ ನೇರವಾಗಿ ಬಡಿದರ ಆಘಾತ ಹೆಚ್ಚು ಆದರೆ ಓರೆಯಾಗಿ ಹೊಡೆದಾಗ ಕಟ್ಟಡದ ಮೇಲಿನ ಹೊಡೆತ ಕಡಿಮೆಯಾದರೂ ಬಂದರಿನ ಪ್ರವೇಶಮಾರ್ಗಕ್ಕೆ ಅಡ್ಡಲಾಗಿ ಅಲೆಗಳು ಹರಿದು ಸಮುದ್ರ ಪ್ರಕ್ಷುಬ್ದವಾಗಿದ್ದಾಗ ಹಡುಗುಗಳು ಒಳಗೆ ಬರುವುದೇ ಅಪಾಯವಾಗಬಹುದು.ಅದಕ್ಕಾಗಿ ಅಲೆತಡೆಗಳನ್ನು ಯಾವ ದಿಕ್ಕಿನಲ್ಲಿ ಕಟ್ಟಿದರೆ  ಅಲೆಗಳು ಬೇರೆ ದಿಕ್ಕಿಗೆ ತಿರುಗಿ ಬಂದರಿನ ಹೊರಗಡೆಯ ತೀರಕ್ಕೆ ಬಡಿಯುವುವೋ ಆ ದಿಕ್ಕಿನಲ್ಲಿ ಕಟ್ಟಬೇಕು.ನದಿಗಳ ಅಳಿವೆಗಳಲ್ಲಿ ಬಂದರುಗಳಿರುವಾಗ ಅಲೆಗಳನ್ನು ಎಲ್ಲ ಕಾಲದಲ್ಲಿಯೂ ತಡೆಯುವುದು ಸಾಧ್ಯವಾಗಲಾರದು.ಅಂಥ ಕಡೆಗಳಲ್ಲಿ ಅಲೆಬಲೆಗಳನ್ನು (ವೇವ್-ಟ್ರ್ಯಾಪ್ಸ್)ಕಟ್ಟಬೇಕಾಗುತ್ತದೆ.ಪ್ರವೇಶನಾಲೆಯ ಪಕ್ಕಗಳಲ್ಲಿ ಸಮುದ್ರದ ಕಡೆಗೆ ಮುಖವನ್ನು ತಿರುಗಿಸಿರುವ ಈ ಅಳವಾದ ಬಾಯಿಗಳು ಅಲೆಗಳನ್ನು ಹೀರುತ್ತವೆ.ಸಮುದ್ರತೀರದಲ್ಲಿರುವ ಒಳುಚಾಚುಗಳು,ಭೂಶಿರಗಳು,ತೀರಕ್ಕೆ ದೂರವಾದ ದ್ವೀಪಗಳು,ನೀರೊಳಗಣ ಬಂಡೆಗಳು-ಇವನ್ನೆಲ್ಲ ಸರಿಯಾಗಿ ಬಳಸಿಕೊಳ್ಳಬೇಕು.ಬಂದರಿನ ಪ್ರವೇಶಮಾರ್ಗದಲ್ಲಿ ಯಾವ ಅಡಚಣೆಗಳೂ ಇಲ್ಲದೆ ದೊಡ್ಡ ಹಡಗುಗಳೂ ಸರಾಗವಾಗಿ ಒಳ್ಳಕ್ಕೆ ಬರುವ ಹಾಗಿರಬೇಕು.
  ಬಂದರಿನಲ್ಲಿರಬೇಕಾದ ನೀರಿನ ಕನಿಷ್ಟ ಅಳಕ್ಕೆ ಅನುಸಾರವಾಗಿ ಅಲೆತಡೆಯ ಕನಿಷ್ಟ ಎತ್ತರವನ್ನು ನಿರ್ಣಯಿಸಬೇಕು.ನೀರಿನ ಅಳ ೨೩ಮೀಗಿಂತಲೂ ಹೆಚ್ಚಾದರೆ ಅಲೆತಡೆಯ ಬಾಹಗಳ ಉದ್ದವೂ ಹೆಚ್ಚಾಗುತ್ತದೆ.ಕಟ್ಟಡದ ಖರ್ಚೂ ವಿಪರೀತವಾಗುತ್ತದೆ.ಹೊಳನ್ನೆತ್ತುವುದು (ಡ್ರೆಡ್ಮಿಂಗ್) ಹೆಚ್ಚಾಗದ ಹಾಗೂ ಅವಶ್ಯಕವಾದ ಬಂದರಿನ ವಿಸ್ತೀರ್ಣ ದೊರಕುವ ಹಾಗೂ ಅಲೆತಡೆಯ ಜಾಗವನ್ನು ಅಖ್ಯೆರಾಗಿ ನಿಶ್ಚಯಿಸಬೇಕುಗುತ್ತದೆ.ಈ ವಿಸ್ತೀರ್ಣವನ್ನು ದಡದ ಕಡೆಗೆ ಹೊಳನ್ನು ತೆಗೆಯುವುದರಿಂದಲೂ,ಸಮುದ್ರದ ಕಡೆಗೆ ಅಲೆತಡೆಯ ಉದ್ದವನ್ನು ಹೆಚ್ಚೆಸುವುದರಿಂದಲೂ ಬೇಕಾದಷ್ಟು ದೊಡ್ಡದಾಗಿ ಮಾಡಬಹುದು.ತಳವಾಯದ ಸ್ಟೆಛಾವದ ಮೇಲೂ ಅಲೆತಡೆಯ ಜಾಗ ಬದಲಾಗಬಹುದು.ತಳದಲ್ಲಿ ಬಹಳ ಅಳದವರೆಗೂ ಮೆದುವಾದ ಮಣ್ಣೀ ಇದ್ದರೆ ಅದಕ್ಕೆ ಕಟ್ಟಡದ ಭಾರವನ್ನು ಹೊರುವ ಸಾಮರ್ದ್ಮವಿರುವುದಿಲ್ಲ.ಗಟ್ಟಿಯಾದ ತಳಪಾಯವಿರುವ ಕಡೆ ನೀರಿನ ಅಳ ಹೆಚ್ಚಾಗಿದ್ದರೂ ಚಿಂತೆಯಿಲ್ಲ.
  ಅಲೆತಡೆಯ ಪರಿಣಾಮವಾಗಿ ಸಮುದ್ರತೀರದಲ್ಲಿ ಮಣ್ಣು ಕೊರೆದು ಹೋಗಬಹುದು;ಇಲ್ಲವೆ ತುಂಬಿಕೊಳ್ಳಬಹುದು.ಅಲೆಗಳು ಸಮುದ್ರದತೀರವನ್ನು ಓರೆಯಾಗಿ ಬಡಿದರೆ ಉಪ್ಪಸ್ನವಾಗುವ ಪ್ರವಾಹಗಳು ತೀರದ ಮಣ್ಣನ್ನು ಕೊರೆದು ಬೇರೆ ಕಡೆಗೆ ಸಾಗಿಸಬಹುದು.ಇದರಿಂದ ಅಲೆತಡೆಯ ಪಕ್ಕದಲ್ಲಿ ಕೆಲವು ಕಿಲೋಮೀಟರುಗಳವರೆಗೂ ಸಮುದ್ರದತೀರದ ಆಸ್ತಿಗಳಿಗೆ ನಷ್ಟವಾಗಬಹುದು.
 ಭಾರತದ ಉಬ್ಬರವಿಳಿತಗಳ ವ್ಯಾಪ್ರಿಯೂ ಅಲೆತಡೆಯ ಜಾಗದ ಮೇಲೆ ಪರಿಣಾಮವನ್ನುಂಟು ಮಾಡುತ್ತೆದೆ ಉಬ್ಬರದ ನೀರಿನ ಇಳಿತದ ಪ್ರವಾಹ ಕಡಿಮೆಯಾಗಿದ್ದರೆ ಬಂದರಿನ ದಾರಿಯಲ್ಲಿ ಅಳ ಕಡಿಮೆಯಾಗುವುದಿಲ್ಲ ಸಮುದ್ರವನ್ನು ಸೇರುವ ನದಿಗಳ ಪ್ರವಾಹವನ್ನೂ ಅಲೆತಡೆಯ ಜಾಗವನ್ನು ನಿರ್ಣಯಿಸುವಾಗ ಲೆಕ್ಕೆಕ್ಕೆ ತೆಗೆದುಕೊಳ್ಳಬೇಕು.ನದಿಯಲ್ಲಿ ಬರುವ ನೀರಿನ ಪ್ರಮಾಣಾ,ಅದರ ವೇಗ,ಮೇಲಿನಿಂದ ಬರುವ ಮೆಕ್ಕಲಾಮಣ್ಣು-ಇವುಗಳಿಂದ ತೊಂದರೆಯಾಗದ ಹಾಗೆ ನೋಡಿಕೊಳ್ಳಬೇಕು.
 ಮಾರುತಗಳು:ಗಾಳಿಯಿಂದ ಅಲೆಗಳು ಉತ್ಪನ್ನವಾಗುತ್ತವೆ.ಬಂದರಿನ ಪ್ರವೇಶಮಾರ್ಗದಲ್ಲಿಯೂ ಒಳಗಡೆಯೂ ಹಡಗುಗಳ ಚಲನೆಗಳಿಗೆ ಗಾಳಿಯಿಂದ ತೊಂದರೆಯಾಗುವುದುಂಟು.ಸಮುದ್ರವು ವರ್ಷದ ಯಾವ ಕಾಲದಲ್ಲಿ ಶಾಂತವಾಗಿರುವುದೆಂದು ನೋಡಿ ಅಲೆತಡೆಗಳ ರಿಪೇರಿಯನ್ನು ತೆಗೆದುಕೊಳ್ಳಬೇಕು ಭಾರತದಲ್ಲಿರುವ ಹಾಗೆ ಕ್ಲುಪ್ರಮಾರುತಗಳು(ಮಾನ್ಸೊನ್ಸ್) ಬೀಸುವ ಕಡೆ ಋತುಗಳಿಗೆ ಅನುಸಾರವಾಗಿ ಗಾಳಿಯ ದಿಕ್ಕೂ ಬಲವೂ ನಿಯತಕ್ರಮದಲ್ಲಿ ಬದಲಾಗುತ್ತದೆ.ಚಂಡಮಾರುತಗಳೂ ಸುಂಟರಣಾಳಿಗಳೂ ಕ್ಲುಪ್ತಕಾಲದಲ್ಲಿ ಬೀಸುತ್ತವೆ.
 ಅಲೆಗಳನ್ನು ಹೆಚ್ಚು ಅಳವಾದ ನೀರಿನ ಅಲೆಗಳು ಮತ್ತು ಅಳ ಕದಿಮೆಯಾದ ನೀರಿನ ಅಲೆಗಳು ಎಂದು ಎರಡು ಭಾಗವಾಗಿ ವಿಂಗಡಿಸಬಹುದು.ಅಲೆಯ ಉದ್ದರ ಅರ್ಧಕ್ಕಿಂತಲೂ ಹೆಚ್ಚು ಆಳದ ನೀರಿನ ಅಲೆಗಳು ಮೊದಲನೆಯ ವರ್ಗಕ್ಕೆ ಸೇರುತ್ತವೆ.ಇವುಗಳಲ್ಲಿ ಅಲೆಗಳ ವೇಗ ಅವುಗಳು ಉದ್ದಕ್ಕೆ ಅನುಗುಣವಾಗಿದೆ.ಅಳ ಕಡಿಮೆಯಾದ ಕಡೆ ಸಮುದ್ರದ ತೆಳದ ಎಳೆತಕ್ಕೆ ಅಲೆಗಳು ಒಳಪಟ್ಟು ಅಲೆಯ ಜೀಗ ಕಡಿಮೆಯಾಗುತ್ತದೆ.

ನೀರು ಗಾಳಿಗೆ ಒಡ್ಡಿದ ದೂರ (ಫ಼ೆಚ್) ಹೆಚ್ಚಾದಷ್ಟೂ ಗಾಳಿಯ ವೇಗವೂ ಅದು ಬೀಸುವ ಅವಧಿಯೂ ಹೆಚ್ಚಾಗಿ ಅಲೆಗಳ ಎತ್ತರವೂ ಉದ್ದವೂ ವೇಗವೂ ಹೆಚ್ಚಾಗುತ್ತವೆ.ಕೆಲವು ಸಾಗರದ ಅಲೆಗಳು ಉತ್ವತ್ತಿಯಾದ ಜಾಗದಿಂದ ಸಾವಿರಾರು ಮೈಲಿಗಳ ದೂರ.