ಪುಟ:Mysore-University-Encyclopaedia-Vol-1-Part-2.pdf/೨೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಆಧಾರ ಕಟ್ಟಡ - ಆಧಾರಭಾವನೆ ಹೊಂದಿದೆ. ಈ ಸಂತತಿಯಲ್ಲಿ ಹಿರಿಯನೇ ಆದಿಶೇಷ. ಬ್ರಹ್ಮನನ್ನು ಕುರಿತು ತಪಶರ್ಯೆ ಮಾಡಿ,ವರವನ್ನು ಪಡೆಯ ಭೂಮಿಯನ್ನೇ ಹೊರುವ ಕೆಲಸದಲ್ಲಿ ನಿಂತು ಕ್ಷೀರಸಮುದ್ರದಲ್ಲಿ ಶ್ವೇತದ್ವೀಪದ ನಡುವೆ,ವಿಷ್ಣುವಿಗೆ ಮಲಗಲು ಹಾಸಿಗೆಯಾಗಿ ನೆರವಾದ, (ಎಸ್.ಕೆ.ಆರ್.)

   ಆಧಾರ ಕಟ್ಟಡ: ಗೋಡೆಗಳ ಕೆಳತುದಿಗೂ ಭೂಮಟ್ಟಕ್ಕೂ ಮಧ್ಯೆ ಭದ್ರತೆಗಾಗಿ

ಕಟ್ಟುವ ಮಂದವಾದ ಕಟ್ಟಡ್ಡ (ಪ್ಲಿಂತ್ ; ಮೇಲ್ಪಾಯ),ಚಡಿಯೆಂದೂ ಹೆಸರಿದೆ.ಕೊರುಲು ಅನುಕೂಲಿಸುಂತೆ ಸ್ವಲ್ಪ ಅಗಲವಾಗಿರುವ ಚಡಿಯ ಹೆಸರು ಚಿಟ್ಟೆ .ಸಾಧಾರಣವಾಗಿ ಈ ಭಾಗವನ್ನು ಕಲ್ಲಿನಿಂದ ಕಟ್ಟುತ್ತಾರೆ.ಇದು ಪೂರ್ತ ಕಟ್ಟಡದ ಭದ್ರತೆಗೆ ಆಧಾರ.ಆಂದದ ದ್ರುಷ್ಟಿಯಿಂದ ಆಧಾರ ಕಟ್ಟಡದ ಎತ್ತರ ಗೋಡೆಗಳ ಎತ್ತರದ ಸುಮಾರು ಆರನೆಯ ಒಂದು ಭಾಗದಷ್ಟಿರುತ್ತದೆ. ಸಾಮಾನ್ಯವಾಗಿ ಮನೆಗಳ ಒಳಭಾಗದ ನೆಲಗಟ್ಟಿನ ಮಟ್ಟ ಆಧಾರ ಕಟ್ಟಡದ ಮೇಲ್ಮಟ್ಟವಾಗಿರುತ್ತದೆ.ಈ ಮಟ್ಟದ ಹೆಸರು ಆಧಾರಮಟ್ಟ (ಪ್ಲಿಂತ್ ಲೆವಲ್). ಐದಾರು ಅಂತಸ್ತುಗಳ ಸೌಧಗಳ ಆಧಾರ ಕಟ್ಟಡದ ಎತ್ತರ ಮೇಲ್ಕಂಡ ಪ್ರಮಾಣದ ಪ್ರಕಾರ ಒಂದು ಅಂತಸ್ತಿನಷ್ಟಿರುತ್ತದೆ.ಇಒಥ ಕೆಳ ಅಂತಸ್ತಿನ ಹೆಸರು ಆಧಾರ ಅಂತಸ್ತು (ಬೇಸ್ ಮೆಂಟ್ ಪ್ಲೋರ್).ಕೆಲವು ಸಂದರ್ಭಗಳಲ್ಲಿ ಈ ಆಧಾರ ಅಂತಸ್ತು ಕುಬ್ಜವಾಗಿ,ಮತ್ತೆ ಕೆಲವು ಸಂದರ್ಭಗಳಲ್ಲಿ ಭಾಗಶಃ ಅಥವಾ ಪೂರ್ತಿ ಭೂಮಟ್ಟಕ್ಕಿಂತ ಕೆಳಗೆ ಇರುತ್ತೆದೆ. ಇಂಥ ಆಧಾರ ಆಂತಸ್ತನ್ನು ಉಗ್ರಾಣ,ದಫ್ತರ ಖಾನೆ,ಗಾಡೆ ಖಾನೆ ಮುಂತಾದವುಗಳಿಗಾಗಿ ರಚಿಸುತ್ತಾರೆ. (ಕೆ.ಎಸ್.ಸ್.ಎಂ.ಜಿ,ಎಸ್)

ಆಧಾರಗೆರೆ : ನೆಲದ ಸರ್ವೆಗೆ ತೊಡಗುವ ಮೊದಲು ಗುರುತಿಸುವ ಸಮತಲದೂರದ

ಅತಿಮುಖ್ಯವಾದ ಗೆರೆ (ಬೇಸ್ ಲೈನ್). ಎರಡು ಬಿಂದುಗಳ ಮಧ್ಯೆ ಇರುವ ಸಮತಲದೂರ ವನ್ನು ಕರಾರುವಾಕ್ಕಾಗಿ ಸ್ಥಾಪಿಸುವುದೇ ಈ ಅಳತೆಯ ಉದ್ದೇಶ.ಆಧಾರಗೆರೆ ಸಾಧ್ಯಾವಾದ ಮೆಟ್ಟೆಗೂ ಸಮತಲವಾದ ಭೂಪ್ರದೇಶದಲ್ಲಿ ಹಾದುಹೋಗುವಂತಿದ್ಡರೆಒಳ್ಳೆಯದು.ಏಕೆಂದೆರೆ ಆದರಿಂದ ಅಳತೆ ಕರಾರುವಾಕ್ಕಾಗಿಯೂ ಸುಲಭವಾಗಿಯೂ ಆಗುವುದು,ತ್ರಿಕೋನಣಾಕಾರ ದಲ್ಲಿ ಸರ್ವೆ ಮಾಡುವಾಗ ಆಧಾರಗೆರೆಯನ್ನು ಅತಿ ನಿಖರವಾಗಿ ಅಳೆಯಬೇಕಾದುದು ಅವಶ್ಯಕ.ಮಿಶ್ರಲೋಹದ ಟೇಪಿನಿಂದ ಅಳೆಯುವಾಗ ಅದು ಜೋತುಬೀಳದ ರೀತಿಯಲ್ಲಿ ಅದನ್ನು ಅಲ್ಲಲ್ಲಿ ಭಧ್ರಪಡಿಸಿ ಸಮಾನವಾದ ಎತ್ತರದಲ್ಲಿರುವಂತೆ ವ್ಯವಸ್ಥೆ ಮಾಡಬೇಕು. ಇಂಥ ಟೇಪನ್ನು ತಯಾರಿಸುವಾಗ ಎಷ್ಟರಮಟ್ಟಿನ ಎಳೆತಕ್ಕೆ ಅದನ್ನು ಗುರಿಪಡಿಸಲಾಗಿತೋ ಅಷ್ಟೇ ಪ್ರಮಾಣದ ಎಳೆತಕ್ಕೆ ಅದನ್ನು ಖಚಿತಗೊಳಿಸಲು ಅದರ ಎರಡೂ ತುದಿಯಲ್ಲೂ ಸ್ಟ್ರಿಂಗ್ ತಕ್ಕಡಿಯನ್ನು ಉಪಯೋಗಿಸಿ ಉಷ್ಣತೆಯನ್ನು ಗುರುತಿಸಲು ಉಷ್ಣಮಾಪಕವನ್ನು ಉಪಯೋಗಿಸಿ ಉಷ್ಣತೆಯ ವ್ಯತ್ಯಾಸಕ್ಕೆ ಅನುಗುಣವಾಗಿ ಅಳತೆಯನ್ನು ಸರಿಪಡಿಸಿಕ್ಕೊಳ್ಳಬೇಕು.

                                                    (ಕೆ.ಸಿ.ಆರ್.ಎಂ,ಜಿ.ಎಸ್.)
ಆಧಾರತತ್ತ್ವಗಳು:ಅನುಭವವನ್ನು ಅರ್ಥಮಾಡಿಕೊಳ್ಳಲು ಬೇಕಾದ ಆಧಾರ 

ನಂಬಿಕೆಗಳು(ಪಾಸ್ ಚುಲೇಟ್ಸ್). ಇವನ್ನು ಅನುಭವದಿಂದ ಸ್ಥಾಪಿಸಲು ಆಗುವುದಿಲ್ಲ.ಇವು

ಸ್ವತಸ್ಸಿದ್ಧವೂ ( ಅಕ್ಸಿಯಮ್ಸ್) ಅಲ್ಲ.ವಿಜಾನಿಗಳು ಮೊದಮೊದಲು ಪ್ರಕೃತಿಯಲ್ಲಿ ಹೊಂದಿಕೆ (ಯೂನಿಟಿ) ಇದೆ ಎಂದು ನಂಬಿ ಆನ್ವೇಷಣೆಗಳಲ್ಲಿ ತೊಡಗಿದ್ದರು.ಹೊಂದಿಕೆ ಎಂದರೆ ಅದರಲ್ಲಿ ಉದ್ದೇಶವಿದೆ ಎಂಬ ಅರ್ಥ ಬರುವುದರಿಂದ ಆಂಥ ಉದ್ದೇಶವನ್ನು ಪ್ರಕೃತಿಗೆ ಆರೋಪಿಸುವುದು ಅಸಂಗತ ಎಂದು ಆ ಆಧಾರತತ್ತ್ವವನ್ನು ಬಿಟ್ಟು ಪ್ರಕೃತಿ ಏಕರೂಪವಾಗಿರುತ್ತದೆ ಎಂಬ ಏಕರೂಪ ನಿಯಮವನ್ನು (ಲಾ ಆಫ್ ಯೂನಿಫಾರ್ಮಿಟಿ) ವಿಜ್ನಾನಕ್ಕೆ ಆಧಾರವಾಗಿ ಇಟ್ಟುಕೊಂಡರು. ಪ್ರಕೃತಿಯಲ್ಲೂ ಏಕರೂಪವಾಗಿದೆ ಎಂದರೆ ಭಿನ್ನತೆ ಇಲ್ಲ ಎಂಬ ಭಾವನೆಗೆ ಅವಕಾಶವಿದೆ,ಯಾವ ರೀತಿಯ ಭಿನ್ನತೆಯೂ ಇಲ್ಲದೆ ಎಲ್ಲವೂ ಏಕರೂಪ ಪಡೆದುದಾದರೆ ಎಲ್ಲಕ್ಕೂ ಒಂದೇ ರೀತಿಯಾದ ಕಾರಣವಿರಬೇಕಾಗುತ್ತದೆ.ಕರ್ಯವೂ ಕಾರಣವೂ ಒಂದೇ