ಪುಟ:Mysore-University-Encyclopaedia-Vol-1-Part-2.pdf/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೩೪

ಮಾನವನಿಗೂ ದೇವತೆಗಳಿಗೂ ಸಂಬಂಧ ಕಲ್ಪಿಸುವ ದಿವ್ಯ ಸಾಧನವಾಗಿದ್ದು, ಆತ್ಮವನ್ನು ಸ್ವರ್ಗಕ್ಕೆ ಕರೆದುಯ್ಯುವುದೆಂಬ ವಿಶಿಷ್ಠ ನಂಬಿಕೆಯೂ ಇದೆ. ವಿವಾಹಾದಿ ಮಂಗಳ ಕಾರ್ಯಗಳಲ್ಲೂ ಸಾವು ಮೊದಲಾದ ದುಃಖಸಮಯಗಳಲ್ಲೂ ಹಿಮಸಾರಂಗವನ್ನು ಆಹುತಿ ಕೊಟ್ಟು, ಅದರ ಮಾಂಸಭಕ್ಷಣೆ ಮಾದುತ್ತಾರೆ.

ತುಂಗು ಜನರಲ್ಲಿ ಜನಾಂಗದ ಮುಖ್ಯಸ್ಥನಿಲ್ಲ. ಆದರೆ ಬಣಗಳಿಗೆ ಮುಖ್ಯಸ್ಥನಿದ್ದಾನೆ. ಆರ್ಥಿಕ ಸ್ಥಿತಿಯ ಆಧಾರದ ಮೇಲೆ ಬಡವ ಬಲ್ಲಿದರೆಂಬ ವರ್ಗಗಳಿಲ್ಲ. ಜನಂಗದ ಪ್ರತಿಯೊಬ್ಬನೂ ಸಮಾನಾಧಿಕಾರವುಳ್ಳವನಾಗಿರುತ್ತಾನೆ. ಬೇಟೆ ಮತ್ತು ಪಶುಪಾಲನೆಗಳಿಂದ ಜೀವಿಸುತ್ತಾರೆ. ಗಂಡಸು ಬೇಟೆಯಾಡಿ ಆಹಾರ ಸಂಪಾದನೆ ಮಾಡುತ್ತಾನೆ. ಪ್ರಾಣಿಗಳನ್ನು ಮೇಯಿಸಲು ಮೊದಲೇ ನಿರ್ಧರಿಸಲ್ಪಟ್ಟ ಪ್ರದೇಶಕ್ಕೆ ಬಿಡಾರವನ್ನು ಸಾಗಿಸುವ ಕಾರ್ಯವನ್ನು ಹೆಂಗಸು ಮಾದುತ್ತಾಳೆ. ಗಂದಸು ಬೇಟೆಯನ್ನು ಮುಗಿಸಿಕೊಂಡು ಬದಲಾಯಿಸಿದ ಹೊಸ ಬಿಡಾರಕ್ಕೆ ಬಂದು ಸೇರುತ್ತಾನೆ.

ತಂಡ್ರ ಪ್ರದೀಶದಲ್ಲಿರುವ ಸಮೋಯದ್ ಚೊಕ್ ಚಿ ಮತ್ತು ಕಾರ್ ಯಾಕ್ ಜನಾಂಗಗಳ ಮುಖ್ಯ ಕಸುಬು ಬೇಟೆಯಾಡುವುದು, ಜಿಂಕೆ ಹಿಮಸಾರಂಗಗಳನ್ನು ಸಾಕುವುದು. ಯಕುಚ್ ಮತ್ತು ಯುಕಾಫಿರ್ ಜನಾಂಗದವರು ಸ್ಕ್ಯಾಂಡಿನೇವಿಯದ ಲ್ಯಾಪ್ ಜನರಂತೆ ಹಾಲಿಗಾಗಿ ಹಿಮಸಾರಂಗಗಳನ್ನು ಸಾಕುತ್ತಾರೆ. ಪಶುಪಾಲನೆ ಮಾಡಿಕೊಂಡು ನೆಲೆಯಿಲ್ಲದೆ ಅಲೆಯುವುದೇ ಈ ಜನಾಂಗಗಳ ವೈಶಿಷ್ಟ್ಯ.

ಆಫ್ರಿಕದ ಎಲ್ಲ ಭಾಗಗಳಲ್ಲೂ ಪಶುಪಾಲನೆಗಾಗಿ ಅಲೆಮಾರಿ ಜೀವನ ನದೆಸುವ ಜನಾಂಗಗಳಿವೆ. ಪ್ರಸ್ಥಭೂಮಿಯ ಮೇಲಿರುವ ಟೊಂಗ, ಜ಼ೂಲು, ಲೊಜ಼ಿ ಮುಂತಾದವರು ಪಶುಪಾಲನೆ, ತೋಟಗಾರಿಕೆ, ವ್ಯವಸಾಯ ಮಾಡಿಕೊಂಡು ಹಳ್ಳಿಗಳನ್ನು ಕಟ್ಟಿಕೊಂಡು ಸ್ಥಿರಜೀವನ ನಡೆಸುತ್ತಾರೆ. ಇನ್ನು ಕೆಲವರು ಮುಖ್ಯವಾಗಿ ಪಶುಪಾಲನೆಯಿಂದಲೇ ಜೀವನ ಮಾಡುತ್ತಾರೆ. ಅವರಲ್ಲಿ ಬೇಜ, ಅಫರ್, ಸೋಮಾಲಿ, ನ್ಯೂಅರ್, ಡಿಂಕ, ನೈಜೀರಿಯದ ಫುಲಾನಿ, ಪೂರ್ವ ಅಫ಼್ರಿಕಾದ ಮಸೈ ಮತ್ತು ಉಗಾಂಡದ ಬಹಿಮ ಮುಖ್ಯರಾದವರು. ಉಗಾಂಡದಲ್ಲಿ ಸಾಗುವಳಿ ಮಾಡುವ ಬೈರು ಜನಾಂಗದವರು ಬಹಿಮರಿಗೆ ಅಡಿಯಾಳಾಗಿ ನಿಕೃಷ್ಟಜೀವನ ನಡೆಸುತ್ತಾರೆ.

ಪುಲಾನಿಗಳ ಮುಖ್ಯ ಸಮ್ಪತ್ತು ದನ. ಸ್ವಲ್ಪ ಮಟ್ಟಿಗೆ ಕುರಿ ಮೇಕೆಗಳನ್ನು ಸಾಕುತ್ತಾರೆ. ಭೌಗೋಳಿಕ ವಾತಾವರಣದಲ್ಲುಂಟಾಗುವ ಬದಲಾವಣೆಗಳು ವಸಾಹತುಗಳ ಬದಲಾವಣೆಗೆ ಪ್ರೇರಕಶಕ್ತಿಗಳಾಗುತ್ತವೆ.ಜನರ ಮತ್ತು ಪ್ರಾನಿಗಳ ಸಂಖ್ಯೆ, ಮೇವು ನೀರಿನ ಸೌಕರ್ಯ, ವ್ಯಾಪಾರದ ಅನುಕೂಲತೆ - ಇವು ಅಲೆಮಾರಿ ಜೀವನಕ್ಕೆ ಮುಖ್ಯವಾದ ಅಂಶಗಳು.

ಇವರು ಬೇಸಿಗೆ ಮತ್ತು ಚೆಳಿಗಾಲಕ್ಕೆ ಬೇರೆ ಬೆರೆ ವಸತಿಗಳನ್ನು ಕಲ್ಪಿಸಿಕೊಳ್ಳುತ್ತಾರೆ. ಸನ್ನಿವೇಶ ಮತ್ತು ಆಯಾ ಜನರ ಪದ್ಧತಿಯ ಅನುಕೂಲಕ್ಕೆ ಅನುಗುಣವಾಗಿ ಈ ವಸತಿಗಳ ಅಂತರವಿರುತ್ತದೆ. ಉದಾಹರಣೆಗೆ, ೧೯೫೧-೫೨ರಲ್ಲಿ ಕೆಲವರು ೪೦ ಕಿ.ಮೀ. ಮತ್ತು ಕೆಲವರು ನೂರಾರು ಕಿ.ಮೀ. ಅಂತರದಲ್ಲಿದ್ದರು. ಹಿಂದೆ ೧೯೪೪ರಲ್ಲಿ ರಾಜಕೀಯ ಕಾರಣಗಳಿಂದ ಫುಲಾನಿ ಗುಂಪೊಂದು ೭೭೦ ಕಿ.ಮೀ. ದನಗಳ ಹಿಂಡಿನೊಡನೆ ಮೀವು ನೀರಿಗಾಗಿ ಅಲೆದಿದ್ದುಂಟು. ಈ ಜನ ಬೇಸಿಗೆಯಲ್ಲಿ ಸಣ್ಣ ಸಣ್ಣ ಗುಂಪುಗಳಲ್ಲಿ ವಾಸಿಸುತ್ತಾರೆ. ಇದೇ ರೀತಿಯಾಗಿ, ಕರ್ನಾಟಕವ್ ಕಾಡುಗೊಲ್ಲರು ಕೂಡ ತಮ್ಮ ದನಕರುಗಯ ಮೇವು ನೀರಿಗಾಗಿ ಅಲೆದಾಡುವುದುಂತು. ಮಲೆಗಾಲದಲ್ಲಿ ಒಟ್ಟಿಗೆ ಸೇರುತ್ತಾರೆ. ಮದುವೆ ಮುಂಜಿ ಮುಂತಾದ ವಿಶೇಷ ಕರ್ಯಗಳೆಲ್ಲಾ ಮಲೆಗಾಲದಲ್ಲಿಯೇ ನಡೆಯುವುದು.

ಇವರಲ್ಲಿ ಸ್ತ್ರೀ ಪುರುಷರ ನದುವೆ ಕೆಲಸದ ಹಂಚಿಕೆಯಿದೆ. ಮನೆಯ ಯಜಮಾನ ದನಗಳ ಮಾಲೀಕ; ಅವನ ಮಕ್ಕಳ್ಯ್ ದನ ಮೇಯಿಸುತ್ತಾರೆ.ಸ್ತ್ರೀಯರು ಹಾಲು ಹೈನನ್ನು ತಯಾರಿಸಿ, ಮನೆಯ ಉಪಯೋತಕ್ಕಾಗಿ ಮಿಕ್ಕಿದ್ದನ್ನು ಸಂತೆಯಲ್ಲಿ ಮಾರಿ ಧಾನ್ಯ ಮುಂತಾದವುಗಲನ್ನು ಕೊಳ್ಳುತ್ತಾರೆ. ಹಣದ ಅವಶ್ಯಕತೆಯಿದ್ದಾಗ ಮಾತ್ರ ದನಗಳನ್ನು ಮಾರುವುದುಂಟು. ಇವರು ಇಸ್ಲಾಂ ಧರ್ಮಾನುಯಾಯಿಗಳು. ವಿಶೇಷ ಸಮಾರಂಭದಲ್ಲಿ ಮಾತ್ರ ಮಾಂಸ ತಿನ್ನುತ್ತಾರೆ.

ಪೂರ್ವ ಆಫ್ರಿಕದ ಮಸೈ ಜನಾಂಗದವರೂ ಪಶುಪಾಲನೆಯಿಂದಲೆ ಜೀವನ ಸಾಗಿಸುತ್ತಾರೆ. ಕುರಿ, ಕತ್ತೆ ಮತ್ತು ಒಂಟೆಗಳನ್ನು ಸಾಕುತ್ತಾರೆ. ಬೇಸಿಗೆಯಲ್ಲಿ ದನಗಳ ಮೇವಿಗಾಗಿ ಅಲೆಯುತ್ತಾರೆ. ಒಂದೊ ಜಿಲ್ಲೆಯ ತರುಣ ಯೋಧರು ದನ ಕಾಯುವುದಲ್ಲದೆ ಬೇರೆ ನಾಡಿನ ದನಗಳನ್ನು ಕದಿಯುವುದರಲ್ಲೂ ತೊದತುತ್ತಾರೆ.

ಮಸೈ ಜನರು ಪಶುಪಾಲನೆಯೊಮ್ದಿಗೆ ಬೇಟೆಯನ್ನೂ ಭೂಮಿ ಉಳುವುದನ್ನೂ ಕದೆಗನಿಸಿದ್ದಾರೆ.ಎಷ್ಟೋ ಜನ ವ್ಯವಸಾಯಗಾರರನ್ನು ದನಗಳ ಮೇವಿಗಾಗಿ ಜಮೀನು ಬಿಡಿಸಿ ಓಡಿಸಿದ್ದಾರೆ. ಇವರು ಸವಾರಿ ಮಾದಲು ಅಥವಾ ಸಾಮಾನು ಸಾಗಿಸಲು ದನಗಳನ್ನು ಉಪಯೋಗಿಸುವುದಿಲ್ಲ. ಹಾಲು, ಬೆಣ್ಣೆ ಚರ್ಮಕ್ಕಾಗಿ ಸಾಕುತ್ತಾರೆ; ಬಳಸಿ ಮಿಕ್ಕಿದ್ದನ್ನು ನೆರೆಯವರಿಗೆ ಧಾನ್ಯಕ್ಕಾಅಗಿ ಮಾರುತ್ತಾರೆ. ಸಮಾರಂಭಗಲಲ್ಲಿ ಮತಾಚರನೆಗಳಲ್ಲಿ ಮಾತ್ರ ದನಗಳನ್ನು ಕೊಂದು ಮಾಂಸವನ್ನು ತಿನ್ನುತ್ತಾರೆ. ಮಾಂಸ ಮತ್ತು ಹಾಲನ್ನು ಒಂದೇ ದಿನ ಸೇವಿಸುವುದಿಲ್ಲ. ಅಲ್ಲದೆ ಮಾಂಸದಡಿಗೆಯನ್ನು ವಸತಿಯಲ್ಲಿ ತಯಾರಿಸುವುದಿಲ್ಲ. ಪ್ರಾಣಿಗಳನ್ನು ಕೊಲ್ಲದೆಯೇ ಅವುಗಳ ರಕ್ತನಾಳಗಳಿಂದ ರಕ್ತ ಶೇಖರಿಸುವ ವಿಶೇಷ ವಿಧಾನಗಳಿಂದ, ದನ ಮತ್ತು ಕುರಿಗಳ ರಕ್ತವನ್ನು ವಿಶೇಷವಾಗಿ ಉಪಯೋಗಿಸುತ್ತಾರೆ.

ಆಫ್ರಿಕದಲ್ಲಿ ಪಶುಪಾಲನೆಯೊಂದ ಜೀವಿಸುವ ಎಲ್ಲ ಜನಾಂಗಗಳ ಸಾಮಾಜಿಕ ಜೀವನದಲ್ಲೂ ದನಗಲ ಪಾತ್ರ ಬಹು ಮುಖ್ಯವಾದುದ್ದು. ದನಗಳನ್ನು ಮದುವೆಯ ಕಾಲದಲ್ಲಿ ಕನ್ಯಾಶುಲ್ಕವಾಗಿ ಹೆಣ್ಣಿನ ಕಡೆಯವರಿಗೂ ಮತ್ತು ಉಳಿದ ಸಂದರ್ಭಗಲಲ್ಲಿ ಉಡುಗೊರೆಯಾಗಿಯೂ ಕೊಡುತ್ತಾರೆ.

ಪಶುಪಾಲನ ವೃತ್ತಿಯಿಮ್ದ ಜೀವಿಸುವವರ ಸಂಪತ್ತೆಂದರೆ ದನದ ಹಿಂಡು, ಕುರೊಯ ಮಂದೆ ಮುಂತಾದುವು. ಹಾಲು ಹೈನುತಲ ಆಧಾರದಿಂದ ಸಾಗಿಸುವ ಅವರ ಜೀವನ ಬೇಟೆಯಾಡುವವರ ಜೀವಾಕ್ಕಿಂತ ಭದ್ರವಾಗಿರುತ್ತದೆ. ಸ್ಥಿರ ವ್ಯವಸಾಯ ಜೀವನಕ್ಕಿಂತ ಪಶುಪಾಲನೆಯ ಜೀವನ ಯಾವಾಗಲೂ ಕೀಲಾಗಿ ಕುಂದು ಕೊರತೆಗಳಿಂದಲೇ ಕೂಡಿರುವುದಿಲ್ಲ.

ಪಶುಪಾಲಕರ ಜೀವನ ವೈವಿಧ್ಯಪೂರ್ಣವಾದುದ್ದು. ಅವರು ವಿವಿಧ ಧರ್ಮಾವಲಂಬಿಗಳು. ಆರ್ಥಿಕ ಜೀವನದಷ್ಟೇ ರಾಜಕೀಯ ಜೀವನವೂ ವೈವಿಧ್ಯದಿಂದ ಕೂಡಿದೆ. ತಂದೆಯೀ ಸ್ಂಪೂರ್ನ ಸರ್ವಾಧಿಕಾರಿಕಾರಿಯಾಗಿರುವ ಜನಾಂಗವಾಗಲೀ ಸ್ತ್ರೀಗೆ ಏನೇನೊ ಸ್ಥಾನಮಾನಗಲನ್ನು ಕೊದದಿರುವ ಜನಾಂಗವಾಗಲೀ ಅತಿ ಏರಳು. ಹಾಗೆಯೇ ಬಹುಪತ್ನಿತ್ವಕ್ಕೆ ಪಶುಪಾಲನೆಯೇ ಕಾರಣವೆಂದು ಹೆಲಲಸಾಧ್ಯ,ಅಲೆದಾದಿ, ಪಶುಪಾಲನೆಯಿಂದ ಜೀವಿಸಿದರೂ ಪ್ರಪಂಚದ ಯಾವ ಮಾನವವರ್ಗವೂ ನಿರಂತರವೂ ಒಂಟಿಯಾಗಿ ಬೇರೆಯವರೊಂದಿಗೆ ಯಾವಾಗಲೂ ಬೇರೆಯದಂತೆ ಇಲ್ಲ.

ಹಲವಾರು ಜೀವನ ನಿರ್ವಹಣ ಮಾರ್ಗಗಳು ಪರಸ್ಪರ ವಿರೋಧಾಭಾಸದಿಂದ ಘರ್ಷಣೆಗೊಳಗಾಗಿ ನಾಶವಾಗದೆ, ಒಮ್ದೆರಡುನೊಂದು ಸಮರಸವಾಗಿ ಹೊಂದಿಕೊಂಡು. ಸಹಬಾಳ್ವಿಕೆಗೆ ಬುನಾದಿ ಹಾಕಿಕೊಟ್ಟಿರುವುದು, ಮಾನವನ ಅಲೆಮಾರೊ ಜೀವನವನ್ನು ಪರಿಶೀಲಿಸಿದಾಗೆ ಗೋಚರವಾಗದಿರದು. ಅಲೆಮಾರಿಗಲನ್ನು ಅನಾಗರಿಕ, ಅಸಂಸ್ಕೃತ ಜನಾಂಗವೆನ್ನಲು ಬರುವುದಿಲ್ಲ. ನಾಗರಿಕ ಜೀವನದಲ್ಲಿ ಕಾಣೆಯಾಗಿರುವ ಅನೇಕ ಗುಣ್ಗಳು ಅವರಲ್ಲಿವೆ. ನಾಗರಿಕರಿಗಿಂತ ಹೆಚ್ಚಾಗಿ ಅವರು ಪ್ರಕೃತಿಗೆ ಹೊಂದಿ ನಡೆಯುವವರಾಗಿದ್ದಾರೆ. ಅವರ ದೇಹದಾರ್ಢ್ಯ, ಸಾಮಾನ್ಯಜೀವನಕ್ರಮ, ಶ್ರಮಜೀವನ, ವಿಶ್ವಾಸ, ಅನುಭವದಿಂದ ಬಂದಿರುವ ಅವರ ಅನೇಕ ಸಾಮಾಜಿಕ ಹಾಗು ನೈತಿಕ ಕಟ್ಟಳೆಗಳು ಇತರರಿಗೆಬೇಕು. ಈ ದೃಷ್ಟಿಯಿಂದ ಅವರನ್ನು, ಅವರ ಜೀವನವನ್ನು ಅಭ್ಯಸಿಸುವುದು ಅಗತ್ಯ.

ಅಲೈಟಿಸ್ : ನೆಲಗಪ್ಪೆ (ಟೋಡ್), ಸುಲಗಿತ್ತಿ ಕಪ್ಪೆ (ಮಿಡ್ ವೈಫ್ ಟೋಡ್) ಎಂದೂ ಹೆಸರಿದೆ. ದೀಮಾರ್ಸ್ ಎಂಬ ವಿಜ್ಞಾನಿ (೧೭೨೪) ಈ ಕಪ್ಪೆಯ ವಿವರ ನೀದಿದ್ದಾನೆ. ತಮ್ಮ ತತ್ತಿಯನ್ನು ರಕ್ಷಿಸುವುದರಲ್ಲಿ ಅಧಿಕ ಆಸಕ್ತಿ ವಹಿಸುವ ಈ ಉಭಯಜೀವಿಗೆ ಸೂಲಗಿತ್ತಿ ಕಪ್ಪೆ ಎಂಬ ಹೆಸರು ಉಸಚಿತವಾಗಿದೆ. ಇದರ ಉದ್ದ ಸುಮಾರು ೨". ದೇಹಾಕೃತಿ ಸ್ವಲ್ಪಮಟ್ಟಿಗೆ ಗುಂಡು. ಮೈಮೇಲಿನ ಮಾಸಲು ಬೂದುಬಣ್ಣದ ಚರ್ಮ ತೇವಯುತ. ಅಗಲವಾದ ಕಣ್ಣುಗಳು, ನೆಟ್ಟತಗೆ ನಿಂತಿರುವ ಕಣುಪಾಪೆ. ಬಾಯಿಯ ಮೇಲುದವಡೆ ಮತ್ತು ಮೆಲಂಗುಳಲ್ಲಿ ಹಲ್ಲುಗಳು ಇವೆ. ಗುಂಡಾದ ಅಂಟುಳ್ಳ ನಾಲಿಗೆ. ಈ ಕಪ್ಪೆ ಮಂದಗಮನದ ನಿಶಾಚರ ಪ್ರಾಣಿ. ಕೆಲವು ಸ್ತನಿಗಳು ನೆಲದಲ್ಲಿ ರಚಿಸಿದ ಬಿಲಗಳನ್ನು ಈ ಕಪ್ಪೆ ಹಗಲಲ್ಲಿ ತನ್ನ ಏಕಾಂತವಾಸಕ್ಕೆ ಆರಿಸುತ್ತದೆ. ಸಂಜೆಯ ಹೊತ್ತಿಗೆ ಸಿಳ್ಳು ಹಾಕುವ ಧ್ವನಿ ಮಾಡಿಕೊಂಡು ಹೊರಬರುತ್ತದೆ. ಗಂಡು ಹೆಣ್ಣು ಕಪ್ಪೆಗಳು ಖೂಡಿದ ಮೇಲೆ ಹೆಣ್ಣು ಕಪ್ಪೆ ಗರ್ಭಕಟ್ಟಿದ ತತ್ತಿಗಳನ್ನು ನೆಲದ ಮೇಲೆ ಇಡುತ್ತದೆ. ಇದರ ಸಂತಾನೋತ್ಪತ್ತಿಯ ಕಾಲ ವಸಂತ ಮತ್ತು ಗ್ರೀಷ್ಮಋತುಗಳು. ಹಳದಿ ಬಣ್ಣದ ದೊಡ್ಡ ತತ್ತಿಗಳ್ಯ್ ಮಣಿಗಳಂತೆ ಎರಡು ಮೂಲೆಗಳಲ್ಲಿ ಕೂದಿರುತ್ತವೆ. ತತ್ತಿಗಳ ರಕ್ಷಣೆಗೆ ಅವುಗಲ ಸುತ್ತ ಒಂದು ಲೋಳೆ ಆವರಿಸುತ್ತದೆ. ಗರ್ಭಕಟ್ಟಿದ ನಂತರ ಗಂಡು ಕಪ್ಪೆ ತತ್ತಿಗಳ ಮಾಲೆಯನ್ನು ತನ ಹಿಂದಿನ ಕಾಲುಗಳ ಮಧ್ಯೆ ಹೆಣೆದುಕೊಳ್ಳುತ್ತದೆ. ತತ್ತಿಗಲಲ್ಲಿ ಭ್ರೂಣ ಮೂರು ವಾರಗಳಲ್ಲಿ ಬೆಳೆಯುತ್ತದೆ. ಲೋಳೆಯಿಂದ ಆವೃತವಾದ ಕೋಶಗಳಿಂದ ಕಪ್ಪೆಯ ಮರಿಗಳು ಹೊರಬರುವ ವೀಲೆಗೆ ಗಂಡುಕಪ್ಪೆ ನೀರನ್ನು ಪ್ರವೇಶಿಸುತ್ತದೆ. ಅನಂತರ ಗೋದಮೊಟ್ಟೆಗಳು ಅಥವ ಮರಿಗಳು (ಟ್ಯಾಡ್ ಪೋಲ್ ಲಾರ್ವ) ನೀರಿನಲ್ಲೇ ಜೀವಿಸುತ್ತ ರೂಪಾಂತರ ಹೊಂದಿ ಪ್ರೌಢ ಜೀವಿಗಳಾಗುತ್ತವೆ.

ಅಲೋ : ದಕ್ಷಿಣ ಆಫ್ರಿಕ, ಅರೇಬಿಯ ಮತ್ತು ಮೆಡಿಟರೇನಿಯನ್ ದೇಶದ ಮೂಲವಾಸಿ ಸಸ್ಯಗಳು. ಕೆಲವು ಬಾಹ್ಯಲಕ್ಷಣಗಳಲ್ಲಿ ಅಗೆವೆ ಸಸ್ಯಗಲನ್ನು ಹೋಲುವುದರಿಂದ ಇವನ್ನು ಅಗೆವೆ ಸಸ್ಯಗಳೆಂದು ತಪ್ಪು ತಿಲಿವ ಸಾಧ್ಯತೆ ಇದೆ. ಕಾಂದವಿಲ್ಲದ ಅಥವಾ ಚಿಕ್ಕ ಕಾಂಡವಿರುವ ಅಲೋ ಸಸ್ಯಗಳು ಪೊದೆಯಾಗಿ ಬೆಲೆಯುತ್ತವೆ. ಎಲೆಗಳು ಗುಂಪಾಗಿರುತ್ತವೆ. ಕೆಲವು ಸಸ್ಯಗಲು ಎಲೆಗಲ ಸಾಲಾಗಿ ಅಥವಾ ಹರಡಿಕೊಂಡು ಜೋಡಿಸಿಕೊಂಡಿರುತ್ತವೆ. ನೀಲವಾದ ಈ ಎಲೆಗಳ ಅಂಚು ನಯವಾಗಿದೆ. ಹಸಿರು ಬೂದು