ಪುಟ:Mysore-University-Encyclopaedia-Vol-1-Part-2.pdf/೩೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಫ್ರಿಕ ಖಂಡ

ಬಹು ಎತ್ತರದ ಶಿಖರಗಳೆಂದರೆ,ಮೌಂಟ್ ಕಿಲಿಮಂಜೀರೋ ೫,೮೦೧ ಮೀ ಮೌಂಟ್ ಕೆನ್ಯ ೫,೧೧೭ ಮೀ ಮೌಂಟ್ ಎಲ್ಗಿನ್ ೪,೨೪೫ ಮೀ. ಸಾಮಾನ್ಯವಾಗಿ ಭೂಮಿಯ ಎತ್ತರ ದಕ್ಷಿಣದಲ್ಲಿ ಹೆಚ್ಚಾಗಿದೆ(೩೦೫-೧೨೧೯ ಮೀ.)ಉತ್ತರದ ಕಡೆ ಹೋದಂತೆ ಭೂಮಿಯ ಎತ್ತರ ಕಡಿಮೆಯಾಗುತ್ತ ಹೋಗುವುದು(೧೫೨೪-೩೦೫)ಅತ್ಯಂತ ಉನ್ನತವಾದ ಪ್ರದೇಶವೆಂದರೆ ಇಥಿಯೋಪಿಯದ ಪ್ರಸ್ಥಭೂಮಿ.ಆಲ್ಲಿಯ ಎತ್ತರ ೪,೫೭೫ ಮೀ ಗಿಂತಲೂ ಹೆಚ್ಚು.ದಕ್ಷಿಣದ ಕಡೆ ಪೂರ್ವ ಆಫ್ರಿಕದ ಪ್ರಸ್ಥಭೂಮಿ ಸು.೨,೪೩೮ ಮೀ ಎತ್ತರ.

ಆಫ್ರಿಕದ ತಗ್ಗುಪ್ರದೇಶಗಳು ಅಪಾರ ವಿಸ್ತಾರವನ್ನಾಕ್ರಮಿಸಿವೆ.ಅವುಗಳಲ್ಲೊಂದಾದ ಖಂಡದ ಪೂರ್ವಭಾಗದಲ್ಲಿರುವ ಸೀಳುಕಣಿವೆ ಗಮನಾರ್ಹವಾದ ಮತ್ತು ವೈಶಿಷ್ಟ್ಯಪೂರ್ಣವಾದ ಪ್ರಾಕೃತಿಕ ಲಕ್ಷಣವನ್ನು ಹೊಂದಿದೆ.ಇದು ಸು.೪೮ ಕಿ.ಮೀ ಅಗಲವಾಗಿಯೂ ೪೮೦೦ ಕಿ.ಮೀ ಉದ್ದವಾಗಿಯೂ ಇದೆ.ಕಣಿವೆಯ ತಗ್ಗುಪ್ರದೇಶಗಳಲ್ಲಿ ಖಂಡದ ಮುಖ್ಯ ಸರೋವರಗಳಿವೆ.ಆಲ್ಬರ್ಟ್,ತಾಂಗನೀಕ,ನಯಾಸ ಮತ್ತು ರುಡಾಲ್ಫ್-ಇವು ಇಲ್ಲಿನ ಮುಖ್ಯ ಸರೋವರಗಳು.ಎರಡೆನೆಯ ಎತ್ತರವಾದ ಭೂಭಾಗವೇ ಸಹರ ಮರುಭೂಮಿ.ಇದು ದಕ್ಷಿಣ ಆಲ್ಜೀರಿಯ,ಲಿಬಿಯ,ಪಶ್ಚಿಮ ಆಫ್ರಿಕ ಉಷ್ಣವಲಯದ ಭಾಗಗಳನ್ನೊಳಗೊಂಡು ಈಜಿಪ್ಟ್ ಮತ್ತು ಸೂಡಾನ್ ಗಳನ್ನು ಮುಟ್ಟಿದೆ.ಸಹರ ಮರುಭೂಮಿಯ ದಕ್ಷಿಣದಲ್ಲಿ ಚಾಡ್ ಎಂಬ ಮತ್ತೊಂದು ಸರೋವರವಿದೆ.ವಿಕ್ಟೋರಿಯ ಸಹ ಸೀಳು ಕಣಿವೆಯಲ್ಲಿರುವ ಅತ್ಯಂತ ದೊಡ್ಡ ಸರೋವರ.ಇದು ಪ್ರಪಂಚದ ದೊಡ್ಡ ಸರೋವರಗಳಲ್ಲಿ ಮೂರನೆಯದು.ವಿಸ್ತೀರ್ಣ ೬೯,೪೬೪ ಚ.ಕಿಮೀ ಮೂರನೆಯ ಉನ್ನತ ಭೂಭಾಗವೆಂದರೆ ಕ್ವಟ್ಟಾರ ಪ್ರದೇಶ.ಸಮುದ್ರಮಟ್ಟಕ್ಕೆ ೧೩೪ ಮೀ ತಗ್ಗಿನಲ್ಲಿದೆ.ಕಲಹರಿ ಮತ್ತು ದಕ್ಷಿಣದ ಇತರ ಮರುಭೂಮಿಗಳೂ ಸೇರಿದರೆ ದೇಶದ ಶೇ.೨೫ ಭಾಗವು ಒಣ ಹವಾಮಾನದಿಂದ ಕೂಡಿದೆ.

ಆಫ್ರಿಕದ ನದಿಗಳು:ಅಲ್ಲಿಯ ವಾಯುಗುಣ ಮತ್ತು ಮೇಲ್ಮೈಲಕ್ಷಣವನ್ನು ಅವಲಂಬಿಸಿವೆ.ಮರುಭೂಮಿ ಪ್ರದೇಶದಲ್ಲಿ ನದಿಗಳೇ ಇಲ್ಲದಿರುವುದು,ಹೆಚ್ಚು ಮಳೆ ಬೀಳುವ ಸಮಭಾಜಕ ವೃತ್ತ ಪ್ರದೇಶದಲ್ಲಿ ಅನೇಕ ನದಿಗಳು ಹರಿಯುವುದು ಈ ಖಂಡದ ಒಂದು ವೈಶಿಷ್ಟ್ಯ.ನದಿಗಳೆಲ್ಲ ಪ್ರಸ್ಥಭೂಮಿಯ ನಡುವಣ ಜೌಗು ಪ್ರದೇಶ ಮತ್ತು ಸರೋವರ ಪ್ರದೇಶಗಳಲ್ಲಿ ಹುಟ್ಟಿ ಅಟ್ಲಾಂಟಿಕ್ ಮತ್ತು ಮೆಡಿಟರೇನಿಯನ್ ಸಮುದ್ರಗಳನ್ನು ಸೇರುತ್ತದೆ.ಜ಼ಾಂಬೆಜ಼ಿ ಮಾತ್ರ ಹಿಂದೂ ಮಹಾಸಾಗರಕ್ಕೆ ಸೇರುತ್ತದೆ.

ಆಫ್ರಿಕದ ಅತಿಮುಖ್ಯ ನದಿಯಾದ ನೈಲ್ ನದಿಯು ವಿಕ್ಟೋರಿಯ ಸರೋವರ ಬಳಿ ಹುಟ್ಟಿ ಉತ್ತರಾಭಿ ಮುಖವಾಗಿ ಹರಿದು,ಉಪನದಿಯಾದ ನೀಲಿನೈಟ್ ಜೊತೆಗೂಡಿ ಮೆಡಿಟರೀನಿಯನ್ ಸಮುದ್ರಕ್ಕೆ ಬೀಳುವುದು.ಜಗತ್ತಿನ ಅತಿ ಉದ್ದವಾದ ನದಿಗಳ ಗುಂಪಿನಲ್ಲಿ ನೈಲ್ ಪ್ರಥಮ ಸ್ಥಾನವನ್ನೂ(೬೪೫೯ ಕಿಮೀ)ಕಾಂಗೊ ಆರನೆಯ ಸ್ಥಾನವನ್ನು(೪೮೦೦ ಕಿಮೀ)ನೈಜರ್ ಹತ್ತನೆಯ ಸ್ಥಾನವನ್ನು(೪೧೬೦ ಕಿಮೀ)ಪಡೆದಿವೆ.

ನೈಲ್ ನದಿ ಬ್ರಿಟಿಷ್ ಉಗಾಂಡ,ಸೂಡಾನ್ ಗಣರಾಜ್ಯ ಮತ್ತು ಈಜಿಪ್ಟ್ ಗಳ ಮೂಲಕ ಹರಿಯುತ್ತದೆ.ನೈಜರ್ ತನ್ನದೇ ಆದ ಮೆಕ್ಕಲು ಮಣ್ಣಿನ ಮೈದಾನವನ್ನೂ ಮುಖಭೂಮಿಯನ್ನೂ ಸೃಷ್ಟಿಸಿದೆ.ಕಾಂಗೊ ನದಿಯ ಅಳಿವೆಯನ್ನು ನೋಡಿದರೆ ದೇಶದ ಅಂತರಾಳದಲ್ಲಿ ಒಂದು ಒಳ ಸಮುದ್ರವಿತ್ತೆಂಬ ಊಹೆಗೆ ಅವಕಾಶವಾಗುತ್ತದೆ.ಜ಼ಾಂಬೆಜ಼ಿ ವಿಕ್ಟೋರಿಯ ಜಲಪಾತಕ್ಕೂ ಆರೆಂಜ್ ನದಿ ತುಗೇಲ್ ಜಲಪಾತಕ್ಕೂ ಪ್ರಸಿದ್ಧವಾಗಿವೆ.ಜಲಪಾತಗಳಿಂದ ವಿದ್ಯುಚ್ಛಕ್ತಿ ನಿರ್ಮಾಣದ ಯೋಜನೆಗಳಿಗೆ ಒಳ್ಳೆಯ ಭವಿಶ್ಯವಿದೆ.

ವಾಯುಗುಣ:೩೫ ದಕ್ಷಿಣ ಆಕ್ಷಾಂಶದಿಂದ ೩೭ ಉತ್ತರ ಅಕ್ಷಾಂಶದವರೆಗೆ ಆಫ್ರಿಕ ಆವರಿಸಿರುವುದುರಿಂದ ಮುಖ್ಯವಾಗಿ ಉಷ್ಣವಲಯದ ಹವಾಗುಣವನ್ನು ಹೊಂದಿದೆ.ವಿಶಾಲವಾದ ಈ ಖಂಡದ ವಾಯುಗುಣದಲ್ಲಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೆಚ್ಚಿನ ವ್ಯತ್ಯಾಸವಿದೆ.ಉತ್ತರ ಮತ್ತು ದಕ್ಷಿಣದ ತುದಿಗಳಲ್ಲಿ ಮೆಡಿಟರೀನಿಯನ್ ಹವಾಗುಣವಿದೆ.ಮಧ್ಯ ಆಫ್ರಿಕದಲ್ಲಿ ಸಾಮನ್ಯವಾಗಿ ತೇವದಿಂದ ಕೂಡಿದ ಉಷ್ಣ ವಾಯುಗುಣವಿದೆ.ಸವನ್ನ ಹಲ್ಲುಗಾವಲುಗಳಲ್ಲಿ ಅಷ್ಟು ಉಷ್ಣತೆ ಇಲ್ಲ.ಸ್ಥಳ ಎತ್ತರವಾಗಿರುವುದರಿಂದ ಪೂರ್ವ ಭಾಗದಲ್ಲಿ ವಾಯುಗುಣ ಹಿತಕರವಾಗಿದೆ.

ಸಹರ ಮರುಭೂಮಿಯಲ್ಲಿ ಸರಾಸರಿ ವಾರ್ಷಿಕ ಮಳೆ ಕೇವಲ ೧೫ ಸೆಂಮೀಗಳಿ ಗಿಂತಲೂ ಕಡಿಮೆಯಾಗಿ ಕೆಲವು ವರ್ಷಗಳಲ್ಲಿ ಅನಾವೃಷ್ಟಿಯುಂಟಾಗುವುದು.ಬೇಸಿಗೆಯಲ್ಲಿ ಉಷ್ಣತೆ ಸುಮಾರು ೪೯ ಸೆಂ. ಹೆಚ್ಚಾಗಿರುತ್ತದೆ.ಕಾಂಗೊ ನದಿಯ ಬಯಲುಗಳಲ್ಲಿ,ಪಶ್ಚಿಮ ಆಫ್ರಿಕದ ಕೆಲವು ಭಾಗಗಳಲ್ಲಿ ಸರಾಸರಿ ೨೦೦ ಸೆಂಮೀ ಮಳೆ ಬೀಳುವುದು.ಕ್ಯಾಮರೂನ್ ಪ್ರದೇಶದಲ್ಲಿ ೧೦೦೦ ಸೆಂಮೀ ಮಳೆ ಬೀಳುತ್ತದೆ.ಉನ್ನತವಾದ ಪ್ರಸ್ಥಭೂಮಿಗಳಲ್ಲಿ ಸಮಶೀತೋಷ್ಣ ಮಾದರಿಯ ವಾಯುಗುಣವನ್ನು ಕಾಣಬಹುದು.ಹಾಗೆಯೇ ಅಗ್ನಿಪರ್ವತದ ಶಿಲಾರಸದಿಂದ ಉಂಟಾದ ಕಿಲಿಮಂಜಾರೋ,ಕೆನ್ಯ ಮತ್ತು ಎಲ್ಗಿನ್ ಶಿಖರಗಳು ವರ್ಷದ ಎಲ್ಲ ಋತುಗಳಲ್ಲೂ ಮಂಜಿನಿಂದ ಮುಚ್ಚಿರುತ್ತವೆ.

ಆಫ್ರಿಕದ ವಾಯುಗುಣದಲ್ಲಿ ಒಂದು ರೀತಿಯ ವೈಶಿಷ್ಟ್ಯವಿದೆ.ಉತ್ತರಾರ್ಧಗೋಳದಲ್ಲಿರುವಂಥ ವಾಯುಗುಣ ವಲಯಗಳೇ ದಕ್ಷಿಣಾರ್ಧಾಗೋಳದಲ್ಲಿವೆ.ಸಮಭಾಜಕವೃತ್ತ ಖಂಡದ ನಡುವೆ ಹಾದುಹೋಗುವುದರಿಂದ ಉತ್ತರಾರ್ಧಾಗೋಳದಲ್ಲಿ ಬೇಸಿಗೆ ಕಾಲವಾಗಿದ್ದರೆ ದಕ್ಷಿಣಾರ್ಧಾಗೋಳದಲ್ಲಿ ಚಳಿಗಾಲ.

ಸಮಭಾಜಕವವೃತ್ತದ ಎರಡು ಕಡೆಗಳಲ್ಲೂ ಉತ್ತರ ಮತ್ತು ದಕ್ಷಿಣದ ೫ ಅಕ್ಷಾಂಶಗಳ ಮಧ್ಯೆ ಅಧಿಕ ಶಾಖ,ಅಧಿಕ ಮಳೆಯಿಂದ ಕೂಡಿದ ಸಮಭಾಜಕವೃತ್ತ ಮಾದರಿಯ ವಾಯುಗುಣವಿದೆ.೫-೧೫ ಅಕ್ಷಾಂಶಗಳ ಮಧ್ಯೆ ಬೆಚ್ಚನೆಯ ವಾಯುಗುಣುವಿದ್ದರೂ ಬೇಸಿಗೆಯಲ್ಲಿ ಮಳೆ ಬೀಳುತ್ತದೆ.ಇದು ಉಷ್ಣವಲಯದ ವಾಯುಗುಣ.ಈ ವಲಯದಿಂದ