ಪುಟ:Mysore-University-Encyclopaedia-Vol-1-Part-2.pdf/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಲ್ಪಸಂಖ್ಯಾತರ ಹಕ್ಕುಗಳು – ಅಲ್ಪಸಂಮರ್ದ

ಅಲ್ಪವೃಷ್ಟಿ ವ್ಯವಸಾಯದಲ್ಲಿ ನಾಲ್ಕು ಹಂತಗಳಿವೆ: ೧. ಭೂಮಿಯಲ್ಲಿ ನೀರನ್ನು ಸಂಗ್ರಹಿಸಲು ನೇಗಿಲು ಹೊಡೆಯುವುದು ೨. ಮಳೆ ನೀರನ್ನು ಭೂಮಿಯಲ್ಲಿ ಹಿಂಗಿಸಿ ಸಂಗ್ರಹಿಸುವುದು ೩. ನೆಲದ ಮೇಲೆ ಸಣ್ಣಹುಡಿಮಣ್ಣಿನ ಪದರು ರಚಿಸುವುದು ೪. ಬಿತ್ತನೆಗೆ ಮೊದಲು ಮತ್ತು ಬಿತ್ತನೆಯ ನಂತರದ ಸಾಗುವಳಿಅ ಕ್ರಮಗಳಿವೆ.

ಮೇಲಿನ ನಾಲ್ಕು ಹಂತಗಳು ಬೆಳೆಗಳಿಗೆ ಮಳೆನೀರನ್ನು ಹೆಚ್ಚು ಸಮರ್ಪಕವಾಗಿ ಉಪಯೋಗಿಸಿಕೊಳ್ಳುವುದಕ್ಕೆ ಮತ್ತು ಉತ್ಪಾದನೆ ಹೆಚ್ಚಿಸಲು ನೆರವಾಗುತ್ತವೆ. ಸೋಲಾಪುರ (ಮಹಾರಾಷ್ಟ್ರ), ರೋಹಟಕ (ಪಂಜಾಬ್), ಕರ್ನಾಟಕ ರಾಜ್ಯದ ಬಿಜಾಪುರ, ರಾಯಚೂರು, ಹಗರಿ ಈ ಸ್ಥಳದಲ್ಲಿ ಸ್ಥಾಪಿತವಾದ ಭಾರತೀಯ ಕೃಷಿಸಂಶೋಧನ ಕೇಂದ್ರದ ಅಲ್ಪವೃಷ್ಟಿವ್ಯವಸಾಯ ಕೇಂದ್ರಗಳಲ್ಲಿ ಈ ನಾಲ್ಕು ಹಂತಗಳ ಮೇಲೆ ಸಂಶೋಧನೆಗಳನ್ನು ಕೈಗೊಳ್ಳಲಾಗಿದೆ.

ಕ್ಷೇತ್ರ ಸಾಗುವಳಿ ಕ್ರಮಗಳು: ಅಲ್ಪವೃಷ್ಟಿ ವ್ಯವಸಾಯ ಪದ್ದತಿಗಳು ಭೂಮಿಯ ಗುಣಾನುಸಾರ ಭಿನ್ನವಾಗಿವೆ. ದಖನ್ನಿನ ತಪ್ಪಲಿನ ಕಪ್ಪುಭೂಮಿಯಲ್ಲಿ ಅನುಸರಿಸಲಾದ ವಿವಿಧ ಕ್ರಮಗಳು ಹೀಗಿವೆ :

೧. ಸಮಪಾತಳಿಯ, ಒಡ್ಡು ಹಾಕುವುದು ಮತ್ತು ಭೂಮಿಯನ್ನು ಸಣ್ಣ ಭಾಗಗಳನ್ನಾಗಿ ವಿಂಗಡಿಸುವುದು ೨. ಭೂಮಿಯ ೨೦ ಸೆಂ.ಮೀ ನಷ್ಟು ಮೇಲ್ಮೈಯನ್ನು ತಿರುವಿಹಾಕುವುದು ೩. ಮಳೆಗಾಲದ ತಿಂಗಳುಗಳಲ್ಲಿ ಹಿಂಗಾರು ಪೈರಿಗಾಗ್ಇ ಮೀಸಲಿಟ್ಟ ಭೂಮಿಯನ್ನು ಹರಗುವುದು. ೪. ದನದ ಗೊಬ್ಬರವನ್ನು ತೆಳುವಾಗಿ ಭೂಮಿಯ ಮೇಲೆ ಹರಡುವುದು ೫. ಬೀಜದ ಪ್ರಮಾಣ ತಗ್ಗಿಸಲು ಎರಡು ಸಾಲುಗಳ ಮಧ್ಯೆ ಸ್ವಲ್ಪ ಅಗಲವಾಗಿ ಕೊರಿಗೆಯಿಂದ ಬಿತ್ತುವುದು ೬. ಎಡೆ ಹೊಡೆಯುವುದು. ೭. ಸುಧಾರಿಸಿದ ಮತ್ತು ತಜ್ಞರು ಶಿಫಾರಸು ಮಾಡಿದ ತಳಿ ಬೀಜಗಳನ್ನು ಬಿತ್ತುವುದು ೮. ಎರಡು ವರ್ಷಕ್ಕೊಮ್ಮೆ ಭೂಮಿಯನ್ನು ಪಡ ಬೀಳಿಸುವುದು.

ಈ ಪದ್ದತಿಯನ್ನು ಅಲ್ಪ ಸ್ವಲ್ಪ ಬದಲಾಯಿಸಿ ಕೆಂಪು ಭೂಮಿಗಳಲ್ಲೂ ಉಪಯೋಗಿಸಬಹುದು. ಈ ಸಾಗುವಳಿ ಪದ್ಧತಿಗಳಿಂದ ಮಳೆಯ ನೀರಿನ ಸಮರ್ಪಕ ಉಪಯೋಗ, ಭೂಮಿಯ ಸಾರದ ರಕ್ಷಣೆ ಮತ್ತು ಲಾಭದಾಯಕ ಉತ್ಪನ್ನ ಮುಂತಾದ ಅನುಕೂಲಗಳಿವೆ.

ಇತ್ತೀಚೆಗೆ ಭೂಜಲ ಸಂರಕ್ಷಣಾ ಕ್ರಮಗಳ ಜೊತೆಗೆ ಅಲ್ಪ ಪ್ರಮಾಣದ ಕೃತಕ ಗೊಬ್ಬರಗಳ ಬಳಕೆಯಿಂದ ಬೆಳೆಗಳ ಉತ್ಪನ್ನವನ್ನು ಹೆಚ್ಚಿಸಲಾಗುತ್ತಿದೆ. ಕೃತಕ ಗೊಬ್ಬರ ಮತ್ತು ಬೀಜಗಳನ್ನು ಕ್ರಮವಾಗಿ ನಿರ್ದಿಷ್ಟ ಆಳಕ್ಕೆ ಹಾಕಲು ಉಪಯುಕ್ತ ಕೊರಿಗೆಗಳನ್ನು ರೂಪಿಸಲಾಗಿದೆ. ಕೃತಕ ಗೊಬ್ಬರವನ್ನು ಬೀಜದ ಪಕ್ಕಕ್ಕೆ ಅದೇ ಮಟ್ಟದಲ್ಲಿ ಹಾಕಿದರೆ ಸೂಕ್ಷ್ಮ ಸ್ವಭಾವದ ಹತ್ತಿ, ಶೇಂಗಾ (ಕಡಲೆಕಾಯಿ) ಮತ್ತು ಬಿರುಸು ಸ್ವಭಾವದ ಸಜ್ಜೆ, ರಾಗಿ, ನವಣೆ, ಜೋಳ ಮುಂತಾದವು ಗೊಬ್ಬರ ಮತ್ತು ಲಭ್ಯವಿರುವ ತೇವ ಸರಿಯಾಗಿ ಉಪಯೋಗಿಸಿಕೊಂಡು ಉತ್ತಮವಾಗಿ ಬೆಳೆಯುತ್ತವೆ. ಪಡಭೂಮಿಗಳಲ್ಲಿ ಮಳೆ ನೀರನ್ನು ಸಂಗ್ರಹಿಸಲು ಸ್ಕೂಪರ್ (ಭೂಮಿಯಲ್ಲಿ ಸಣ್ಣ ಸಣ್ಣ ಬಟ್ಟಲಾಕಾರದ ತಗ್ಗುಗಳನ್ನು ತೋಡುವುದು) ಯಂತ್ರ ಉಪಯುಕ್ತ. ಅಲ್ಪವೃಷ್ಟಿಯ ಪ್ರದೇಶಗಳ ಹೊಲಗಳಲ್ಲಿ ಸಮಪಾತಳಿಯ ಒಡ್ಡುಗಳನ್ನು ಹಾಕಲು ಬಂಡ್ ಫಾರ್ಮರ್ (ಒಡ್ಡು ರಚಿಸುವ ಉಪಕರಣ)ಗಳನ್ನು ಉಪಯೋಗಿಸಲಾಗಿದೆ. ಭೂಮಿಯ ಮಣ್ಣನ್ನು ಆಳಕ್ಕೆ ತಿರುವು ಮುರುವು ಮಾಡಲು ಕಬ್ಬಿಣದ ನೇಗಿಲುಗಳು ತಯಾರಾಗಿವೆ. ಇವು ರೈತರ ಮೆಚ್ಚುಗೆ ಗಳಿಸಿವೆ. ಬಿತ್ತನೆ ತರುವಾಯದ ಸಾಗುವಳಿಯ ಎಡೆಗುಂಟೆ ಉಪಕರಣಗಳಿಂದ್ ಹೊಲದ ಕಸಕಡ್ಡಿಗಳನ್ನು ತೆಗೆಯಲು ಸಾಧ್ಯವಾಗಿದೆ. (ಪಿ.ಸಿ.ಆರ್.) ಅಲ್ಪಸಂಖ್ಯಾತರ ಹಕ್ಕುಗಳು: ಯಾವುದೇ ದೇಶದ ಬಹುಜನರ ಬುಡಕಟ್ಟು, ಮತ, ಭಾಷೆ, ಆಚಾರವ್ಯವಹಾರ ಇತ್ಯಾದಿಗಳು ಒಂದು ತೆರನಾಗಿದ್ದು, ಇವುಗಳಿಂದ ಭಿನ್ನವಿರುವ ಬುಡಕಟ್ಟು, ಧರ್ಮ, ಭಾಷೆ ಇತ್ಯಾದಿಗಳನ್ನನುಸರಿಸುವ ಜನ ಸ್ವಲ್ಪವಿದ್ದರೆ ಅವರನ್ನು ಅಲ್ಪಸಂಖ್ಯಾತರು ಎನ್ನುತ್ತೇವೆ. ಜಾತಿಪದ್ಧತಿ ಇರುವ ಭಾರತ ದೇಶದಲ್ಲಿ ಪ್ರತ್ಯೇಕ ಆಚಾರ ವ್ಯವಹಾರಗಳಿಂದ ಅಲ್ಪಸಂಖ್ಯಾತರಾಗಿರುವ ಅನೇಕ ಪಂಗಡಗಳನ್ನು ಕಾಣಬಹುದು.

ಅಲ್ಪಸಂಖ್ಯಾತರ ಹಕ್ಕಿನ ಸಮಸ್ಯೆ ಎಲ್ಲ ದೇಶಗಳಲ್ಲೂ ಇರುವುದೇ ಆಗಿದೆ. ಸ್ಥೂಲವಾಗಿ ಸಮಸ್ಯೆಯ ಸ್ವರೂಪ ಹೀಗಿದೆ: ಬಹುಸಂಖ್ಯಾತರು ಅವಲಂಬಿಸಿರುವ ಧರ್ಮ, ಭಾಷೆ, ಆಚಾರವ್ಯ ವಹಾರಗಳನ್ನೇ ಅಲ್ಪಸಂಖ್ಯಾತರು ಅನುಸರಿಸಬೇಕೆ ಅಥವಾ ತಮ್ಮ ಮತ, ಭಾಷೆ ಮತ್ತು ಆಚಾರವ್ಯವಹಾರಗಳನ್ನು ಅವಲಂಬಿಸುವ ಹಕ್ಕು ಅವರಿಗಿರಬೇಕೆ? ಒಂದು ಪಕ್ಷ ಈ ಸೌಲಭ್ಯಕ್ಕೆ ಅವಕಾಶ ಕೊಡುವುದಾದರೆ ಯಾವ ಪ್ರಮಾಣದಲ್ಲಿ ಮತ್ತು ಹೇಗೆ ಅವಕಾಶಗಳನ್ನು ಕಲ್ಪಿಸಿಕೊಡಬೇಕು?

ಅಮೆರಿಕದಲ್ಲಿ ನೀಗ್ರೋಗಳ ಪ್ರಶ್ನೆ ಸಂಪೂರ್ಣವಾಗಿ ಇನ್ನೂ ಇತ್ಯರ್ಥವಾಗಿಲ್ಲ. ಪರರಾಜ್ಯಗಳಲ್ಲಿ ವಾಸಿಸುತ್ತಿದ್ದ ಜರ್ಮನ್ ಅಲ್ಪಸಂಖ್ಯಾತರ ರಕ್ಷಣೆಯಾಗಬೇಕು ಎಂಬ ಸೋಗಿನಲ್ಲಿ ಹಿಟ್ಲರ್ ನಾಜಿ ಜರ್ಮನಿಯ ವಿಸ್ತರಣೆಯನ್ನು ಕೈಗೊಂಡ. ಅಲ್ಪಸಂಖ್ಯಾತರಿಗೆ ಸಮಾನ ಸ್ಥಾನಮಾನಗಳು ಸಿಗಬೇಕೆಂಬ ಕಾರಣದಿಂದಾಗಿ ದೇಶಗಳ ವಿಭಜನೆ ಆಗಿರುವುದೂ ಉಂಟು. ಕಂಟಕಪ್ರಾಯರೆಂಬ ದೂರು ಹೊರಿಸಿ ಹಿಟ್ಲರ್ ತನ್ನ ದೇಶದಲ್ಲಿದ್ದ ಅಲ್ಪಸಂಖ್ಯಾತರಾದ ಯಹೂದಿಯರನ್ನು ನಿರ್ನಾಮ ಮಾಡಲು ಯತ್ನಿಸಿದ. ಶತಮಾನಗಳು ಕಳೆದರೂ ಅಲ್ಪಸಂಖ್ಯಾತರ ಬಹುಸಂಖ್ಯಾತರೊಡನೆ ಬೆರೆಯದೆ ತಮ್ಮ ವೈಶಿಷ್ಟ್ಯವನ್ನು ಉಳಿಸಿಕೊಳ್ಳಲು ನಿರಂತರ ಯತ್ನ ಮಾಡಿ, ರಾಷ್ಟ್ರಜೀವನದಲ್ಲಿ ಶಾಂತಿಯನ್ನು ಕಲಕಿರುವ ನಿದರ್ಶನಗಳೂ ಉಂಟು. ಹಲವು ಕಡೆ ದಮನಕ್ಕೆ ಒಳಗಾದವರು ಪ್ರತ್ಯೇಕತಾ ಚಳುವಳಿಯನ್ನು ಮುಂದಿಟ್ಟರೆ ಇನ್ನು ಕೆಲವು ಕಡೆ ಚಳ್ವಳಿ ತೀವ್ರಗಾಮಿ ಸ್ವರೂಪಕ್ಕೆ ತಿರುಗಿದೆ.

ಎಲ್ಲ ಅಲ್ಪಸಂಖ್ಯಾತರುಗಳನ್ನೂ ಸ್ಥಳಾಂತರಗೊಳಿಸುವುದು ಇಲ್ಲವೆ ಇವರಿಗಾಗಿಯೇ ಪ್ರತ್ಯೇಕ ರಾಜ್ಯವೊಂದನ್ನು ಏರ್ಪಡಿಸುವುದು ಅಷ್ಟು ಸುಲಭದ ಕೆಲಸವಲ್ಲ. ಈ ಕಾರಣದಿಂದ ಪ್ರತಿದೇಶದಲ್ಲೂ ಅಲ್ಪಸಂಖ್ಯಾತರ ರಕ್ಷಣೆಗಾಗಿ ಹಲವು ಹಕ್ಕುಗಳನ್ನು ಕಾದಿಡಲಾಗಿದೆ. ಕೆಲವು ದೇಶಗಳಲ್ಲಿ ಅಲ್ಪಸಂಖ್ಯಾತರ ರಕ್ಷಣೆಗಾಗಿ ಹಲವು ಹಕ್ಕುಗಳನ್ನು ಕಾದಿಡಲಾಗಿದೆ. ಕೆಲವು ದೇಶಗಳಲ್ಲಿ ಅಲ್ಪಸಂಖ್ಯಾತರೇ ಬಹುಸಂಖ್ಯೆಯಲ್ಲಿರುವ ಪ್ರದೇಶಗಳನ್ನು ವಿಂಗಡಿಸಿ ಸ್ವಯಮಾಡಳಿತ ಪ್ರದೇಶಗಳನ್ನಾಗಿ ಅಂಗೀಕರಿಸುವುದೂ ಉಂಟು. ಭಾರತ ಸಂವಿಧಾನದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳನ್ನು ಮೂಲಭೂತ ಹಕ್ಕುಗಳಾಗಿ ಪರಿಗಣಿಸಲಾಗಿದೆ (ವಿಧಿ ೨೫-೩೦). ರಾಷ್ಟ್ರ ಮತ್ತು ಸಮಾಜದ ಹಿತಗಳಿಗೆ ಧಕ್ಕೆ ಬಾರದಂತೆ, ಅಲ್ಪಸಂಖ್ಯಾತರು ಬಹುಸಂಖ್ಯಾತರ ಬಂಡಾಯಕ್ಕೆ ಒಳ್ಗಾಗದಂತೆ, ಬಹುಸಂಖ್ಯಾತ ರಾಷ್ಟ್ರೀಯರಂತೆ ಅಲ್ಪಸಂಖ್ಯಾತರೂ ತಮ್ಮ ಧರ್ಮ, ಭಾಷ್ ಮತ್ತು ಆಚಾರ ವ್ಯವಹಾರಗಳನ್ನು ಉಳಿಸಿಕೊಳ್ಳಲು, ಅಭಿವೃದ್ಧಿಪಡಿಸಿಕೊಳ್ಳಲು ಎಲ್ಲ ಅನುಕೂಲತೆಗಳನ್ನೂ ಕಲ್ಪಿಸಿಕೊಡಲಾಗಿದೆ. (ಎಲ್.ಎಸ್).

ಅಲ್ಪಸಂಮರ್ದ: ವಾಯುಮಂಡಲದ ಸಂಮರ್ದಕ್ಕಿಂತ ಗಮನಾರ್ಹವಾಗಿ ಕಡಿಮೆಯಿರುವ ಸಂಮರ್ದ (ಲೋಪ್ರೆಷರ್) (ನೋಡಿ-ಅಧಿಕ ಸಂಮರ್ದ). ಅತ್ಯುನ್ನತ ಪ್ರದೇಶಗಳಿಗೆ (ಹಿಮಾಲಯ ಪರ್ವತಾಗ್ರಗಳು, ಅಂತರಿಕ್ಷಯಾನ) ಹೋದಾಗ ಅಲ್ಪಸಂಮರ್ದ ಸ್ವಾಭಾವಿಕವಾಗಿ ಒದಗುವುದು. ಬೇರೆ ಪ್ರದೇಶಗಳಲ್ಲಿ ಇದನ್ನು ಕೃತಕವಾಗಿ ತಯಾರಿಸಬೇಕು. ಈ ಕ್ರಿಯೆಯಲ್ಲಿ ವಾಯುರೇಚಕ (ಏರ್ ಪಂಪ) ಬಲು ಮುಖ್ಯ ಆಟೊಫಾನ್ ಗೆರಿಕ್ ಎಂಬಾತ ವಾಯುರೇಚಕವನ್ನು (೧೬೫೦) ನಿರ್ಮಿಸಿ ಮಾಗ್ಡೆಬರ್ಗ್ ನಲ್ಲಿ ತೋರಿಸಿದ ಅರ್ಧಗೋಳಗಳ ಪ್ರಯೋಗ ವಾತಾವರಣದ ಸಂಮರ್ದವನ್ನು ವ್ಯಕ್ತಪಡಿಸಿತು (೧೬೫೪). ಇವನ ರೇಚಕದಿಂದ ವಾತಾವರಣದ ಒತ್ತಡದಲ್ಲಿ ೧/೧೦೦೦ ಪಾಲಿನಷ್ಟು (ಎಂದರೆ ಸ್ಥೂಲವಾಗಿ ೧ ಮಿ.ಮೀ ಪಾದರಸದ ಕಾಂಡದಷ್ಟು) ಅಲ್ಪಸಂಮರ್ದವನ್ನು ಉಂಟುಮಾಡಲಾಯಿತು. ೧೮೫೫ರ ವೇಳೆಗೆ ಗೈಸ್ಲರ್ ನಿರ್ವಾತ ಪಾದರಸದ ರೇಚಕಗಳನ್ನು ನಿರ್ಮಿಸಿದರು. ಇದರಿಂದಲೇ ಅಲ್ಪಸಂಮರ್ದದಲ್ಲಿ ವಿದ್ಯುತ್ತು ಹೇಗೆ ಪ್ರವಹಿಸುವುದೆಂಬುದನ್ನು ಪರಿಶೀಲಿಸಲು ಸಾಧ್ಯವಾಯಿತು. ಜೆ.ಜೆ.ಥಾಮ್ಸನ್ ಎಲೆಕ್ಟ್ರನಿನ ಅಸ್ತಿತ್ವವನ್ನು ಸ್ಥಾಪಿಸಿದುದೂ ರಾಂಟ್ಜನ್ ಎಕ್ಸ್-ಕಿರಣಗಳನ್ನು ಕಂಡುಹಿಡಿದುದೂ ಅತ್ಯಲ್ಪ ಸಂಮರ್ದವುಳ್ಳ ಗಾಜಿನ ಕೊಳವೆಗಳ ಸಹಾವಿಲ್ಲದೆ ಸಾಧ್ಯವಾಗುತ್ತಿರಲಿಲ್ಲ. ಗಾಳಿಯಲ್ಲದೆ ಬೇರೆ ಅನಿಅವನ್ನು ತುಂಬಬೇಕಾದರೂ ವಾಯುರೇಚಕಗಳು ಬೇಕು. ದ್ಯುತಿ ವಿದ್ಯುತ್ತಿನ ಬುರುಡೆ (ಫೋಟೋ ಎಲೆಕ್ ಟ್ರಿಕ್ ಟ್ಯೂಬ್), ತ್ರಿವಾಟ ಬುರುಡೆ (ಟ್ರಯೋಡ್ ವಾಲ್ವ್), ಕ್ಯಾಥೋಡ್ ಕಿರಣ ಆಂದೋಳನ ಲೇಖಕ (ಕ್ಯಾಥೋಡ್ ರೇ ಅಸಿಲೋಗ್ರಾಫ್) ಇತ್ಯಾದಿ ಉಪಕರಣಗಳಲ್ಲಿಯೂ ಅತ್ಯಲ್ಪಸಂಮರ್ದ ಅವಶ್ಯಕ. ಈ ಉಪಕರಣಗಳಿಲ್ಲದಿದ್ದರೆ ಆಧುನಿಕ ಭೌತವಿಜ್ಞಾನವೇ ಈಗಿನಂತೆ ಇರುತ್ತಿರಲಿಲ್ಲ.

ಬೀಸಣಿಗೆಯಿಂದ ಗಾಳಿ ಬೀಸಿಕೊಳ್ಳುವಾಗ ಬೀಸಣಿಗೆ ವಾಯುವನ್ನು ತಳ್ಳುವುದೆಂಬ ಅನುಭವ ನಮಗೆ ಬರುತ್ತದೆ. ಇದರಿಂದ ಕೊಳವೆಯೊಳಕ್ಕೆ ಒಂದು ಬೆಣೆಯನ್ನು ತಳ್ಳಿದಾಗ್ಲೂ ಬೆಳೆಯ ಮುಂದಿನ ಗಾಳಿಯನ್ನು ಅದುಮಲಾಗುವುದೆಂದು ಊಹಿಸಬಹುದು. ಇದರ ಜೊತೆಗೆ ಒಂದು ಕಡೆಗೆ ಮಾತ್ರ ತೆಗೆಯಲಾಗುವ ಮುಚ್ಚಳದ ಕಲ್ಪನೆಯನ್ನು ಸೇರಿಸಿದರೆ ಫಾನ್ ಗೆರಿಕೆಯ ರೇಚಕದ ಸೃಷ್ಟಿ ಅರ್ಥವಾಗುತ್ತದೆ. ಅಲ್ಲಿ R ಎಂಬ ಪಾತ್ರೆಯೊಳಗಣ ಗಾಳಿಯನ್ನು ತೆಗೆದು ಹಾಕಲು ರೇಚಕದ ಮೂತಿಯನ್ನು ಪಾತ್ರೆಯ ಕತ್ತಿಗೆ ಗಾಳಿ ತೂರಲಾಗದಂತೆ ಸೇರಿಸಿದೆ. ಈಗ್ P ಎಂಬ ಕೊಂತವನ್ನು (ಪಿಸ್ಟನ್) AB ಎಂಬ ಕೊಳವೆಯ ಒಳ್ಗಡೆಗೆ ಒತ್ತಿ ಗಾಳಿಯನ್ನು ಅದುಮಿದರ V1 ಕವಾಟ (ವಾಲ್ವ್) ಮುಚ್ಚಿ ಗಾಳಿಯ ಸಂಮರ್ದಕ್ಕಿಂತ ಹೆಚ್ಚಾದ ಕೂಡಲೆ V2 ಕವಾಟ ತೆರೆದು, P ಯನ್ನು ಅದುಮಿದಾಗ ಕೊಳವೆಯೊಳಗಣ ಗಾಳಿ V2 ಮೂಲಕ ಹೊರಕ್ಕೆ