ಪುಟ:Mysore-University-Encyclopaedia-Vol-1-Part-2.pdf/೩೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

854 ಆಯುಧಗಳು ವೇಳೆ ಕೆಲಸವನೇ ಬದಲಾಯಿಸಿದರೆ ಆರಾಮವಾದಷ್ಟೇ ಬೇಗನೆ ಆಯಾಸ ಕಳೆವುದು. ಕೆಲವೇಳೆ, ಮಾಡುವ ಕೆಲಸಕ್ಕಿಂತಲೂ ಅದನ್ನು ಮಾಡುವ ರೀತಿ ಮುಖ್ಯ. ಇದಕ್ಕಾಗಿ, ಕೆಲಸಕ್ಕೆ ಹಿಡಿವ ಹೊತ್ತು, ಚಲನೆಗಳನ್ನು ಲೆಕ್ಕಹಾಕಿ, ಕಡಿಮೆ ಶ್ರಮ, ದುಡಿತಗಳಿಂದ ಇನ್ನೂ ಬೇಗನೆ ಅದೇಕೆಲಸವನ್ನು ಚೆನ್ನಾಗಿ ಮಾಡುವ ವಿಧಾನಗಳನ್ನು ಕಂಡುಹಿಡಿಯುವ ಪದ್ಧತಿಗಳು ಈಗ ಜಾರಿಗೆ ಬಂದಿವೆ. ದಿನವೆಲ್ಲ ಮಾಡಿದ್ದನ್ನೇ ಮಾಡುತ್ತಲೇ ಇದ್ದರೆ ಬೇಜಾರು ಬಂದು ಆಯಾಸ ಬೇಗನೆ ಹಟ್ಟುವುದು. ಅದರಲ್ಲೂ ತಂತಾನಾಗಿ ನಡೆವ ಯಂತ್ರಗಳು ಬಂದ ಮೇಲಂತೂ ಇದು ಇನ್ನೂ ಮುಖ್ಯವಾಯಿತು. ಏಕೆಂದರೆ, ಯಂತ್ರದ ಮೇಲ್ವಿಚಾರಕ ಯಾವಾಗಲೂ ಬಲುಚುರುಕಾಗಿ ಇರಬೇಕಾಗುತ್ತದೆ. ಇಲ್ಲಿ ಬೇಜಾರು ತಲೆಹಾಕಿದರೆ, ಗಮನ ಎತ್ತಲೋ ಹರಿವುದು, ಕೆಲಸವೂ ಕೆಡುವುದು. ಆಯಾಸವನ್ನು ಬೇಗನೆ ಹುಟ್ಟಿಸುವ ಕೆಲಸದ ಸ್ಥಿತಿಗಳು ಹಲವಾರಿವೆ. ಸರಿಯಾಗಿ ಗಾಳಿಯಾಡುತ್ತಿರದಿದ್ದಲ್ಲಿ ಬೇಸಿಗೆ ಕಾಲದಲ್ಲಿ ಯಾವಾಗಲೂ ಉತ್ಪತ್ತಿ ತಗ್ಗುವುದು. ಹಲವಾರು ವೃತ್ತಿಗಳಲ್ಲಿ ಕೃತಕ ದೀಪಗಳ ಬೆಳಕುಗಳಲ್ಲಿ ಕೆಲಸ ಮಾಡುವ ಹೊತ್ತಿನಲ್ಲೂ ತಗ್ಗುತ್ತದೆ. ಹಾಗೇ ಕಾರ್ಖಾನೆಯಲ್ಲಿ ಆಕಸ್ಮಿಕಗಳು ಮೇಲಿಂದ ಮೇಲೆ ಆಗುತ್ತಿದ್ದರೆ, ಅದರ ಅಂಜಿಕೆಯಿಂದ ಚಿಂತೆಯಾಗಿ ಉತ್ಪತ್ತಿ ತಗ್ಗುವುದು. ಹಲವಾರು ವೃತ್ತಿಗಳಲ್ಲಿ ಕೃತಕ ದೀಪಗಳ ಬೆಳಕುಗಳಲ್ಲಿ ಕೆಲಸ ಮಾಡುವ ಹೊತ್ತಿನಲ್ಲೂ ತಗ್ಗುತ್ತದೆ. ಹಾಗೇ ಕಾರ್ಖಾನೆಯಲ್ಲಿ ಆಕಸ್ಮಿಕಗಳು ಮೇಲಿಂದ ಮೇಲೆ ಆಗತ್ತಿದ್ದರೆ, ಅದರ ಅಂಜಿಕೆಯಿಂದ ಚಿಂತೆಯಾಗಿ ಉತ್ಪತ್ತಿ ತಗ್ಗುವುದು.ಮೇಲ್ವಿಚಾರಕನ, ಒಂದಿಗನಮೇಲಿನ ಮನಸ್ತಾಪ ಕೋಪಗಳಿಂದಲೂ ಬೇಗನೆ ಆಯಾಸವಾಗಬಹುದು. ಆವರಣ: ಕೆಲಸ ಮಾಡುವ ಆವರಣದಲ್ಲಿ ಬೇಗನೆ ಆಯಾಸ ಹುಟ್ಟಿಸುವ ಕಾರಕಗಳು ಹಲವಾರಿವೆ: ಕಣ್ಣಿಗೆ ಕುಕ್ಕುವ, ನೆರಳು ಮೇಲೆ ಬೀಳುವ, ಸಾಲದಷ್ಟು ಬೆಳಕು; ತಲೆಚಿಟ್ಟು ಹಿಡಿಸುವಷ್ಟು ಜೋರಿನ ಸದ್ದು, ಗಲಾಟೆ; ಕಾವು, ತೇವ, ಗಾಳಿಯ ಚಲನ ಇವು ಚೆನ್ನಾಗಿರದ, ತಡೆಯಲಾರದ ಹವಾಗುಣ, ತೆವ ಅಷ್ಟಾಗಿಲ್ಲದಿದ್ದರೆ ಕೆಲಸಗಾರರು ಹೆಚ್ಚಿನ ಕಾವನ್ನು ತಡೆಯಬಲ್ಲರು. ಗಾಳಿ ಚೆನ್ನಾಗಿ ಬೀಸುತ್ತಿದ್ದರೆ, ತೇವ ವಿಪರೀತವಾಗಿದ್ದರೂ ತಡೆದುಕೊಳ್ಳಬಹುದು. ನಿಂತಲ್ಲಿ ನಿಂತಿರುವ ಗಾಳಿಯಲ್ಲಿ ಮನಗುಂದುವುದು. ಆದರೆ, ತೇವ ಅಷ್ಟೇ ಇದ್ದು ಕಾವು ಬಹಳವಾಗಿ ಏರಿದರೂ ಆಯಾಸ ಬೇಗನೆ ತೋರುತ್ತದೆ. ಬಲು ಕಾವೇರಿದರೆ, ನಾಡಿ ಜೋರಾಗಿ ಬಡಿಯುವುದು. ರಕ್ತಹರಿವು ಸಾಲದಾಗಿ ಕೈಕಾಲುಗಳು ಚಳುಕು ಹಿಡಿಯುತ್ತವೆ. ಬಿಸಿಲಿನ ಧಕ್ಕೆ, ಸುಸ್ತ ಆಗುವುವು. ಉಪ್ಪನ್ನು ಹೆಚ್ಚಾಗಿ ಸೇವಿಸಿದರೆ ತುಸು ಶಮನ, ಕೆಲವು ಕಾರ್ಖಾನೆಗಳಲ್ಲಿ ಏಳುವ ಹೊಗೆ, ವಿಷದ ಧೂಳು, ವಾಸನೆಗಳಿಂದಲೂ ಕೆಲಸಗಾರನ ಆರೋಗ್ಯ ಕೆಡುವುದಲ್ಲದೆ ಆಕಸ್ಮಿಕಗಳೂ ಹೆಚ್ಚಾಗುತ್ತವೆ. ಕೆಲಸಗಾರರಲ್ಲಿ ಆಯಾಸ, ಸುಸ್ತು, ಬೇಸರಗಳಿಗೆ ಬಹುಮಟ್ಟಿಗೆ ಮೆಲ್ವಿಚಾರಕರಿಂದ ಬರುವ ಕಿರುಕುಳ, ಮೇಸ್ತ್ರಿಗಳ, ಒಂದಿಗರ ಬದ್ಗಳ, ಹೊರಗ ಸಿಗುವ ಮರ್ಯಾದೆ, ತಮ್ಮವೆ ಬೇರೆ ತಾಪತ್ರಯಗಳೂ ಕಾರಣವಾಗುತ್ತವೆ. ಚಿಂತೆ, ತಾಪತ್ರಯಗಳು ತಲೆಗೆ ಹೊಕ್ಕರೆ ಕೆಲಸಗಾರನಲ್ಲಿ ಆಯಾಸ ತೋರುವುದು. ಮಾಡುವ ಕೆಲಸ ಆಸಕ್ತಿ ಹುಮ್ಮಸ್ಸು ಹುಟ್ಟಿಸುವಂತಿದ್ದರೆ, ಎಷ್ಟು ಕಷ್ಟವಾಗಿದ್ದರೂ ಆಯಾಸಗೊಳಿಸದು. ಕೊನೆಯಾಗಿ, ಕೆಲಸಗಾರನ ಆರೋಗ್ಯ ಕಾಪಾಡುವುದು ಬಲು ಮುಖ್ಯ. ಆರೋಗ್ಯವಾಗಿರುವ ಹೆಂಗಸಾಗಲಿ ಎಂದಿಗೂ ಆಯಾಸವನ್ನು ಚೆನ್ನಾಗಿ ಮುಂದೂಡ ಬಲ್ಲರು. ಆವರಣದಲ್ಲಿ ಕೆಡುಕಾಗಿಸುವ ಕಾರಕಗಳನ್ನು ಹೋಗಲಾಡಿಸಿದರೆ ಕೆಲಸವೂ ಚೆನ್ನಾಗುವುದು. ಇದರಿಂದಲೇ ಆಗಿಂದಾಗ್ಗೆ ಕೆಲಸಗಾರರ ವೈದ್ಯಪರೀಕ್ಷೆಗಳನ್ನು ಮಾಡುತ್ತಿದ್ದರ್ರೆ, ಹೆಚ್ಚಿನ ಮಟ್ಟದಲ್ಲಿ ಲವಲವಿಕೆಯಿಂದ ಇರುವರು. ಇದರೊಂದಿಗೆ ವಿರಾಮಕಾಲ ಕಳೆಯಲು, ಆಟದ ಬಯಲು, ಒಳಾಂಗಣ ಆಟಗಳು, ಹವ್ಯಾಸಿಗಳಿಗೆ ಅನುಕೂಲ ಮಾಡಿಕೊಡಬೇಕು (ಡಿ.ಇ.) ಆಯುಧಗಳು:ಆತ್ಮರಕ್ಷಣೆ, ಹೋರಾಟಕ್ಕೆ ಬಳಸುವ ಸಾಧನಗಳು ಮಾನವಜೀವನ ಸಂಕೀರ್ಣವಾದಂತೆಲ್ಲ ಆತ್ಮರಕ್ಷಣೆಯ ಮತ್ತು ಹೋರಾಟದ ಅಂಶಗಳೂ ಜಟಿಲವಾಗಿ ಅದಕ್ಕೆ ತಕ್ಕಂತೆ ಆಯುಧಗಳೂ ಮಾರ್ಪಡುತ್ತ ಬಂದಿವೆ. ಇಲ್ಲಿ ಆದಿಮಾನವನ ಮತ್ತು ಜನಪದದ ಆಯುಧಗಳ ಉಲ್ಲೇಖವಿದೆ. ಪ್ರಾಸಂಗಿಕವಾಗಿ ಕಾವ್ಯಗಳಲ್ಲಿನ ಆಯುಧಗಳ ಪ್ರಸ್ತಾಪವೂ ಬಂದಿದೆ. ಆಧುನಿಕ ಆಯುಧಗಳಿಗೆ ನೋಡಿ-ಶಸ್ತ್ರಾಸ್ತ್ರಗಳು; ಮದ್ದುಗುಂಡುಗಳು; ಫಿರಂಗಿ; ಕ್ಷಿಪಣಿ; ರಾಕೆಟ್ಟು. ಮಾನವಜೀವನದ ಆವಶ್ಯಕತೆಗಳಲ್ಲಿ ಆಯುಧಗಳ ಪಾತ್ರ ಬಹು ದೊಡ್ದದು. ಆದಿಮಾನವನಿಂದ ಆಧುನಿಕ ಮಾನವನವರೆಗೆ ಅವನ ಜೊತೆಯಲ್ಲಿ ಉಳಿದುಬಂದಿರುವ ಅಗತ್ಯ ವಸ್ತುಗಳಲ್ಲಿ ಇವಕ್ಕೇ ಅಗ್ರಪ್ರಾಶ್ತಸ್ಯ ಏಕೆಂದರೆ ಇವನಿಗೆ ಆಹಾರವನ್ನೊದಗಿಸುವ, ಶತ್ರುಬಾಧೆಯನ್ನು ನಿವಾರಿಸುವ, ಆತ್ಮರಕ್ಷಣೆಯನ್ನು ಮಾಡುವ ಸಾಧನಗಳಿವು. ಬದುಕಿನೊಡನೆ ನಿಕಟ ಸಂಬಂಧವನ್ನು ಹೊಂದಿರುವ ಆಯುಧಗಳು ಮಾನವ ಮಾತು ಕಲಿಯುವ ಪೂರ್ವದಿಂದಲೂ ಅವನ ಕೈಯಲ್ಲಿ ಉಳಿದಿವೆ. ನಾಗರಿಕತೆ ಬೆಲೆದಂತೆ, ಬದುಕು ವಿಕಾಸವಾದಂತೆ ಆಯುಧಗಳಲ್ಲಿಯೂ ಬೆಳೆವಣಿಗೆಯಾಗಿದೆ. ಆಧುನಿಕ ಮಾರಕಾಸ್ತ್ರಗಳು ಮಾನವನ ಬಹು ದೊಡ್ಡ ಸಾಧನೆಗಳಿಗೆ ಮುಖ್ಯವಾದುವು. ಆದಿಮಾನವನಿಂದ ಅಣುಯುಗದ ಮಾನವನವರೆಗೆ ಆಯುಧಗಳ ಅಭ್ಯಾಸವೆಮ್ದರೆ ಮಾನವ ನಾಗರಿಕತೆಯ ಅಭ್ಯಾಸವೇ ಆಗುತ್ತದೆ. ಪ್ರಾನಿವರ್ಗದಿಂದ ಮಾನವನನ್ನು ಬೇರ್ಪಡಿಸಿ, ಸಮಸ್ತ ಜೀವಿಗಳ ಮೇಲೆ ಅವನ ಸ್ವಾಮ್ಯವನ್ನು ಇವು ಸಾಧಿಸಿ ಕೊಟ್ಟಿವೆ. ಅವನ ಪರಾಕ್ರಮ ಪ್ರದರ್ಷನಕ್ಕೆ, ಸುಖಸಂತೋಷಗಳನ್ನು ದೊರಕಿಸಿ ಕೊಡುವುದಕ್ಕೆ ಇವು ನೆರವಾಗಿವೆ.ಮೆಚ್ಚಿದ ಮಧುವನ್ನು ವರಿಸಲು, ಸ್ವಯಂವರಗಳಲ್ಲಿ ಜಯಿಸಬೇಕಾಗಿದ್ದುದು ಆಯುಧವಿಶೇಷಗಳನ್ನೇ. ಮೃಗಯಾವಿಹಾರದ ಉತ್ಸಾಹವನ್ನೂ ಆನಂದವನ್ನೂ ಆಯುಧಗಳು ತಂದೊಡ್ಡುತ್ತಿದ್ದವು. ರಾಜ್ಯ, ಸಮ್ರಾಜ್ಯಗಳ ಸ್ಥಾಪನೆಗೆ, ಪತನಕ್ಕೆ ಕಾರಣವಾದ ಸಾಧನಗಳೂ ಇವೆ. ವೀರರ ಬಲಾಬಲಗಳನ್ನು ನಿರ್ಧರಿಸುವ ಮುಖ್ಯ ವಸ್ತುಗಳೂ ಆಯುಧಗಳೇ.

ಹೀಗೆ ಕ್ಷತ್ರಿಯರ ಕ್ಷಾತ್ರ ವಿಜೃಂಬಿಸಲು ಪೂರಕವಾಗುತ್ತಿದ್ದ ಆಯುಧಗಳು ಸಾಮಾನ್ಯ ಜನರ ನಿತ್ಯಬಳಕೆಯ ವಸ್ತುಗಳೂ ಆಗಿ ಉಳಿದುಬಂದುವು. ರೈತನ ಆಯುಧಗಳಲ್ಲಿ ಬಹುಪಾಲು ವ್ಯವಸಾಯ ಸಾಥನಗಳೂ ಹೌದು. ಬೇಡರ, ಕಾಡುಜನರ, ಮೂಲನಿವಾಸಿಗಳ ನಿತ್ಯದ