ಪುಟ:Mysore-University-Encyclopaedia-Vol-1-Part-2.pdf/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೊಟ್ಟೆಯೊಳಗಿನ ಬಿಳಿ ಎನ್ನುತ್ತಾರೆ. ಗರ್ಭ ಧರಿಸಿದ ಮೊಟ್ಟೆ ಅಂಡಾಶಯದಿಂದ ಹೊರಹೊರಟ ಅನಂತರ ಅಂಡಾಶಯ ನಾಳದಲ್ಲಿ ಉರುಳುತ್ತ ಬರುವ ಈ ಮೊಟ್ಟೆಯ ಸುತ್ತಲೂ ಆಲ್ಬುಮಿನ್ ಶೇಖರಗೊಳ್ಳತೊಡಗುತ್ತದೆ. ಅಂಡಾಶಯ ನಾಳದ ಗೋಡೆ ಈ ರಸವನ್ನು ಉತ್ಪಾದಿಸುತ್ತದೆ. ಮೊಟ್ಟೆಯೊಳಗೆ ಬೆಳೆಯುವ ಭವಿಷ್ಯಜೀವಿಗೆ ಇದು ಉತ್ತಮ ಆಹಾರ. ರಾಸಾಯನಿಕವಾಗಿ ಇದೊಂದು ಪ್ರೊಟೀನು (ಸಸಾರಜನಕಾದಿವಸ್ತು). ಇದರಲ್ಲಿ ಓವಾಲ್ಬುಮಿನ್, ಎನಲ್ಬುಮಿನ್, ಓವೋಮ್ಯೂಕಾಯ್ಡ್ ಮತ್ತು ಓವೋಮ್ಯೂಸಿನ್ ಎಂಬ ನಾಲ್ಕು ಬಗೆಯ ಪ್ರೋಟೀನುಗಳಿವೆ. ಆಲ್ಬುಮಿನ್ ನಲ್ಲಿ ಓವಾಲ್ಬುಮಿನ್ ಶೇ.೭೭ ಭಾಗವೂ ಎನಾಲ್ಬುಮೆನ್ ಶೇ.೩ ಭಾಗವೂ ಓವೊಮ್ಯುಕಾಯ್ಡ್ ಶೇ.೧೩ ಭಾಗವೂ ಓವೊಮ್ಯೂಸಿನ್ ಶೇ.೭ ಭಾಗವು ಓವೊಗ್ಲೊಬುಲಿನ್ ಅತ್ಯಲ್ಪ ಭಾಗವೂ ಇರುತ್ತವೆ. ಮೇಲಿನ ವಸ್ತುಗಳ ಮಿಶ್ರಣದಿಂದಾಗಿ ಈ ’ಬಿಳಿ’ ಲೋಳೆಯಾಗಿರುತ್ತದೆ. [ಎಲ್.ಎಸ್.ಜಿ] ಅಲ್ಯೂಮಿನಿಯಂ: ಈ ಮೂಲವಸ್ತುವಿನ ಸಂಕೇತ Al. ಅಮೆರಿಕ ದೇಶದಲ್ಲಿ ಅಲ್ಯೂಮಿನಂ ಎಂದು ಕರೆಯುತ್ತಾರೆ. ಇದರ ಪರಮಾಣು ಸಂಖ್ಯೆ ೧೩. ಪರಮಾಣುತೂಕ ೨೬.೯೮೧೫. ಎಲೆಕ್ಟ್ರಾನ್ ಜೋಡಣೆ ೨, ೮, ೩ ಅಥವಾ [Ne]3S2.3P1. ಮೂಲವಸ್ತುಗಳ ಆವರ್ತಕೋಷ್ಟಕದಲ್ಲಿ ೩ನೆಯ ಗುಂಪಿಗೆ ಸೇರಿರುವ ಮೂಲವಸ್ತು. ಒಂದು ಲೋಹ. ಇದು ಪ್ರಕೃತಿಯಲ್ಲಿ ಹೇರಳವಾಗಿ ದೊರೆಯುವುದು. ಅಧಿಕ್ಯ ಪ್ರಮಾಣದ ಮೂಲವಸ್ತುಗಳ ಪೈಕಿ ಆಕ್ಸಿಜನ್, ಸಿಲಿಕಾನ್ ಆದ ಮೇಲೆ ಮೂರನೆಯದು. ಲೋಹಗಳಲ್ಲಿ ಇದೇ ಮೊದಲನೆಯದು. ಆದರೆ ಕಬ್ಬಿಣಕ್ಕಿಂತಲೂ ಹೇರಳವಾದುದು. ಭೂಮಿಯ ಮೇಲ್ಮೈನಲ್ಲಿನ ಪದರದಲ್ಲಿ ಸುಮರ್ರು ಶೇ.೮ ಇದೆ. ಭೂಮಿಯ ಮೇಲಿನ ಕಲ್ಲು, ಮಣ್ಣು, ಜೇಡಿಮಣ್ಣುಗಳಲ್ಲೆಲ್ಲಾ ಹೊಕ್ಕಿದೆ. ಆದರೆ ಈ ಲೋಹದ ಶುದ್ಧಮೂಲವಸ್ತುವಿನ ರೂಪದಲ್ಲಿ ದೊರೆಯುವುದಿಲ್ಲ. ತನ್ನ ರಾಸಾಯನಿಕ ಚಟುವಟಿಕೆಯಿಂದಾಗಿ, ಅದರಲ್ಲೂ ಆಕ್ಸಿಜನ್ನಿನೊಡನೆ ತೋರುವ ವಿಶೇಷ ಒಲವಿನಿಂದಾಗಿ ಪ್ರಕೃತಿಯಲ್ಲಿ ಅಲ್ಯೂಮಿನಿಯಂ ಆಕ್ಸಿಜನಿನೊಡನೆ ಸಂಯೋಗ ಹೊಂದಿರುತ್ತದೆ. ಮತ್ತು ಇದೇ ಕಾರಣದಿಂದ ಲೋಹವನ್ನು ಅದುರುಗಳಿಂದ ಬೇರ್ಪಡಿಸುವುದೂ ಕಷ್ಟ. ಅಲ್ಯೂಮಿನಿಯಂ ಅದುರುಗಳಲ್ಲಿ ಮುಖ್ಯವಾದುದು ಬಾಕ್ಸೈಟ್. ರಾಸಾಯನಿಕವಾಗಿ ಬ್ರಾಕ್ಸೈಟ್ ಎಂಬುದು ಮುಖ್ಯವಾಗಿ ಅಲ್ಯೂಮಿನಿಯಂ ಆಕ್ಸೈಡ್ (Al2O3) ಆದರೆ ಅದರಲ್ಲಿ ನೀರಿನ ಅಂಶವೂ ಜೊತೆಗೆ ಕಲ್ಮಷಪ್ರಾಯವಾಗಿ ಕಬ್ಬಿಣ, ಸಿಲಿಕಾನ್ ಮತ್ತು ಟೈಟೀನಿಯಂ ಮತ್ತಿತರ ಲೋಹಗಳ ಆಕ್ಸೈಡ್ ಗಳೂ ಬೆರೆತಿರುತ್ತವೆ. ಬಾಕ್ಸೈಟ್ ವಿವಿಧ ರಚನಾವಿನ್ಯಾಸ ಮತ್ತು ಬಣ್ಣಗಳನ್ನು ಪ್ರದರ್ಶಿಸುವ ಸಾಮರ್ಥ್ಯ ಹೊಂದಿರುವ ಖನಿಜ. ಕಬ್ಬಿಣದ ಅಂಶ ಕಡಿಮೆ ಇದ್ದರೆ ಬಿಳಿಯ ಅಥವಾ ಮಾಸಿದ ಬಿಳಿಯ ಬಣ್ಣವನ್ನು, ಕಬ್ಬಿಣದ ಅಂಶ ಹೆಚ್ಚಾದರೆ ಬೂದಿ ಅಥವಾ ಕಪ್ಪುಬಣ್ಣವನ್ನು ಹೊಂದಿರುವುದು. ಮೆದುವಾದ ಮುದ್ದೆಯಿಂದ ಹಿಡಿದು ಗಟ್ಟಿಯಾದ ಕಲ್ಲಿನ ಸ್ವರೂಪದವರೆಗೂ ವಿವಿಧ ಗಡಸುತನದ ಖನಿಜ. ಗ್ರೀನ್ ಲ್ಯಾಂಡ್ ದೇಶದಲ್ಲಿ ರಾಸಾಯನಿಕವಾಗಿ ಸೋಡಿಯಂ ಅಲ್ಯೂಮಿನಿಯಂ ಪ್ಲೋರ್ಯ್ಡ್ ಸಂಯುಕ್ತವಾದ (Na3AlF6) ಕ್ರಯೋಲೈಟ್ ಎಂಬ ಖನಿಜ ನೋಡುವುದಕ್ಕೆ ಹಿಮಗಡ್ಡೆಯನ್ನು ಹೋಲುತ್ತಾ ಭಾರ್ಪ್ರಮಾಣದಲ್ಲಿ ದೊರಕುತ್ತದೆ. ಅಲ್ಯೂಮಿನಿಯಂ ಲೋಹ ಸಸ್ಯ, ಪ್ರಾಣಿವರ್ಗಗಳಲ್ಲೂ ಇರುವುದು ತಿಳಿದಿದೆ. ಅಲ್ಯೂಮಿನಿಯಂ ಲೋಹ ತಯಾರಿಕೆಯ ಕೈಗಾರಿಕೆಯಲ್ಲಿ ಪ್ರಧಾನವಾಗಿ ಉಪಯೋಗಿಸುವ ಅದುರು ಬಾಕ್ಸೈಟ್. ಸು.೪ ಕಿ.ಗ್ರಾಂ ಬಾಕ್ಸೈಟ್ ಅದುರಿನಿಂದ ೨ ಕಿ.ಗ್ರಾಂ ಶುದ್ಧ ಅಲ್ಯೂಮಿನಿಯಂ ಆಕ್ಸೈಟ್ ಸಂಯುಕ್ತವೂ ಮುಂದೆ ಅದರಿಂದ ೧ ಕಿ.ಗ್ರಾಂ ಅಲ್ಯೂಮಿನಿಯಂ ಲೋಹವೂ ದೊರೆಯುತ್ತದೆ. ಇದಲ್ಲದೆ ಇತ್ತೀಚೆಗೆ ಜೇಡಿಮಣ್ಣಿನಿಂದ ಅಲ್ಯೂಮಿನಿಯಂ ಲೋಹವನ್ನು ಕೈಗಾರಿಕಾ ಪ್ರಮಾಣದಲ್ಲಿ ಪಡೆಯುವುದಕ್ಕೆ ಯಶಸ್ವಿ ಪ್ರಯತ್ನಗಳು ನಡೆದಿವೆ. ಈ ಪ್ರಯತ್ನಗಳು ತಾಂತ್ರಿಕವಾಗಿ ಸಾಧ್ಯವಾಗಿ ಕಂಡುಬಂದರೂ ಲೋಹದ ಉತ್ಪಾದನ ವೆಚ್ಚ ಹೆಚ್ಚು ಉತ್ತಮ ದರ್ಜೆಯ ಬಾಕ್ಸೈಟ್ ನಿಕ್ಷೇಪಗಳು ದೊರಕುವವರೆಗೂ ಜೇಡಿಮಣ್ಣಿನಿಂದ ಕೈಗಾರಿಕಾಪ್ರಮಾಣದಲ್ಲಿ ಅಲ್ಯೂಮಿನಿಯಂ ಲೋಹ ತಯಾರಿಸುವುದು ಲಾಭದಾಯಗ ಉದ್ಯಮವಾಗಲಾರದು. ಘನರೂಪದಲ್ಲಿ ವಿಶಿಷ್ಟ ರಚನೆ ಹೊಂದಿರುವ ಮತ್ತು ಗುಣಸಂಪನ್ನ ಹರಳುಗಳೆಂದು ಪ್ರಸಿದ್ಧಿಯಾಗಿರುವ ಹಸುರು, ಕೆಂಪು, ನೀಲಿ ಹರಳುಗಳೂ ಕೂಡ ರಾಸಾಯನಿಕವಾಗಿ ಅಲ್ಯೂಮಿನಿಯಂ ಆಕ್ಸೈಡ್. ಉತ್ತಮ ಪಾರದರ್ಶಕತೆ, ಕಾಂತಿಯುತ ಹೊಳಪು ಮತ್ತು ಗಡುಸಿಗೆ ಹೆಸರುವಾಸಿಯಾಗಿದೆ. ಭಾರತದಲ್ಲಲ್ಲದೆ ಬರ್ಮಾ, ಥೈಲೆಂಡ್, ಶ್ರೀಲಂಕ, ಆಸ್ಟ್ರೇಲಿಯಾ ಮುಂತಾದ ಪೌರಸ್ತ್ಯ ದೇಶಗಳಲ್ಲಿ ಇವು ದೊರೆಯುವುವು. ಅಧಿಕ ಕಬ್ಬಿಣಾಂಶವಿರುವ ಬೂದು ಅಥವಾ ಕಪ್ಪು ಬಣ್ಣದ ಜಾತಿಯ ಅಲ್ಯೂಮಿನಿಯಂ ಆಕ್ಸೈಡ್ ನೆ ಹೆಸರು ಕೊರಂಡಂ. ಅದು ವಜ್ರದಷ್ಟೆ ಗಡುಸು. ಅದನ್ನು ಇತರ ಗಡಸು ವಸ್ತುಗಳನ್ನು ತೇಯುವ ಅಥವಾ ಸಾಣೆ ಹಿಡಿಯುವ ಕೆಲಸಕ್ಕೆ ಉಪಯೋಗಿಸುತ್ತಾರೆ. ಕಬ್ಬಿಣದ ಆಕ್ಸೈಡ್ ಮಿಶ್ರಿತ ಕೊರಂಡಂ, ಎಮರಿ ಕಲ್ಲು ಎಂಬ ಹೆಸರಿನಿಂದ ಲೋಕಪ್ರಸಿದ್ಧವಾಗಿದೆ. ಇದಲ್ಲದೆ ಪ್ರಕೃತಿಯಲ್ಲಿ ಅಲ್ಯುಮಿನಿಯಂ ಸಿಲಿಕೇಟ್ ಮತ್ತು ಸಲ್ಫೇಟ್ ಸಂಯುಕ್ತ ಸ್ವರೂಪದಲ್ಲಿಯೂ ದೊರೆಯುತ್ತದೆ.

ಪ್ರಕೃತಿಮೂಲ ಅಲ್ಯೂಮಿನಿಯಂ ಸಲ್ಫೇಟ್ ಮುಂತಾದ ಸಂಯುಕ್ತಗಳನ್ನು ಕಾಸಿ, ರಾಸಾಯನಿಕ ವಿಭಜನೆ ಹೊಂದುವಂತೆ ಮಾಡಿದರೆ ಅಲ್ಯೂಮಿನಿಯಂ ಆಕ್ಸೈಡ್ ಉತ್ಪತ್ತಿಯಾಗುವುದು. ಉಷ್ಣತೆಯ ಸೂಕ್ತ ನಿಯಂತ್ರಣ ಮತ್ತು ಕಬ್ಬಿಣದ ನಿಯಂತ್ರಿತ ಮಿಶ್ರಣದಿಂದ ಕೃತಕ ಎಮರಿ, ಕೊರಂಡಂ, ಕೆಂಪು ಹರಳುಗಳು ಮುಂತಾದವುಗಳನ್ನು ತ್ಯಾರಿಸುವರು.

ಅಲ್ಯೂಮಿನಿಯಂ ಲೋಹದ ಪ್ರಥಮ ಬೇರ್ಪಡಿಕೆ ಆದದ್ದು ೧೮೨೫ರಲ್ಲಿ, ೧೮೫೫ ರಲ್ಲಿ ಮೊದಲಬಾರಿಗೆ ಮಾರುಕಟ್ಟೆಗೆ (ಪ್ಯಾರಿಸ್) ಬಂದಾಗ ಜನರಿಗೆ ಇದರ ಪರಿಚಯವಾಯಿತು. ೧೮೬೬ರಲ್ಲಿ ಕೈಗಾರಿಕೆಯ ಲೋಹವಾಗಿ ಬಳಸಿದರು. ಪ್ರಕೃತಿಯಲ್ಲಿ ದೊರೆಯುವ ಅಲ್ಯೂಮಿನಿಯಂ ಸಲ್ಫೇಟ್ ಸಂಬಂಧಿತ ವಸ್ತುಗಳನ್ನು ಪುರಾತನ ಕಾಲದಿಂದಲೂ (ಪ್ರ.ಶ.ಪೂ.೫ನೆಯ ಶತಮಾನ) ಗಾಯಗಳಿಂದ ಸೋರುವ ರಕ್ತವನ್ನು ತಡೆಯುವುದಕ್ಕೆ, ಬಟ್ಟೆಗಳಿಗೆ ಬಣ್ಣ ಕಚ್ಚಿಸುವುದೇ ಮುಂತಾದ ಕೈಗಾರಿಕೆಗಳಲ್ಲಿಯೂ ಉಪಯೋಗಿಸುತಲಿದ್ದರು. ಆ ಜಾತಿಯ ಕೆಲ ವಸ್ತುಗಳಿಗೆ ಲ್ಯಾಟಿನ್ ಭಾಷೆಯಲ್ಲಿ ಅಲ್ಯೂಮಿನ ಎಂದು ಹೆಸರಿದ್ದು, ಅಲ್ಯೂಮಿನಿಯಂ ಎಂಬ ಹೆಸರಿಗೆ ಅದೇ ಮೂಲ.

ಉತ್ತಮ ಬಾಕ್ಸೈಟ್ ನಿಕ್ಷೇಪಗಳನ್ನು ಪಡೆದಿರುವ ಮತ್ತು ಲೋಹೋತ್ಪಾದನೆಯಲ್ಲಿ ಅಗ್ರಸ್ಥಾನಗಳಿಸಿರುವ ರಾಷ್ಟ್ರವೆಂದರೆ ಫ್ರಾನ್ಸ್, ಕೆನಡ, ಅಮೆರಿಕ ಸಂಯುಕ್ತ ಸಂಸ್ಥಾನ, ರಷ್ಯ. ಮೊದಮೊದಲು ಬಾಕ್ಸೈಟ್ ನಿಕ್ಷೇಪಗಳೂ ಕೇವಲ್ ದಕ್ಷಿಣ ಪ್ರಾನ್ಸ್ ಮತ್ತು ಕೆಲ ದಕ್ಷಿಣ ಯೂರೋಪಿನ ರಾಷ್ಟ್ರಗಳಲ್ಲಿ ಮಾತ್ರ ದೊರೆಯಬಲ್ಲವೆಂದು ತಿಳಿಯಲಾಗಿತ್ತು. ಇಂಥ ಸಮಶೀತೋಷ್ಣವಲಯದಲ್ಲಲ್ಲದೆ, ಭೂ ಮಧ್ಯರೇಖೆಯ ಸಮೀಪದ ಉಷ್ಣವಲಯದಲ್ಲೂ ಬಾಕ್ಸೈಟ್ ನಿಕ್ಷೇಪಗಳು ಹೇರಳವಾಗಿ ಹುದುಗಿರುವುದು ಈಗ ಖಚಿತವಾಗಿ ತಿಳಿದುಬಂದಿರುವ ವಿಷಯವಾಗಿದೆ. ಈ ಕಾರಣದಿಂದ ಅನೇಕ ಆಫ್ರಿಕನ್ ದೇಶಗಳು-ಉದಾಹರಣೆಗೆ, ಕ್ಯಾಮರೂನ್, ಗಿನಿ, ಘಾನ, ಕಾಂಗೋಗಳು ಅಲ್ಯೂಮಿನಿಯಂ ಕೈಗಾರಿಕೆಯಲ್ಲಿ ವಿಶಿಷ್ಟ ಸ್ಥಾನ ಗಳಿಸಿವೆ. ಅಲ್ಲೆಲ್ಲ ಭಾರಿ ಪ್ರಮಾಣದ ಅಲ್ಯೂಮಿನಿಯಂ ಲೋಹೋತ್ಪಾದನೆಯಲ್ಲಿ ಕೈಗಾರಿಕೆಗಳು ನೆಲೆಗೊಂಡಿವೆ. ಆಸ್ಟ್ರೇಲಿಯ ದೇಶದಲ್ಲೂ ಹೇರಳವಾಗಿ ಬಾಕ್ಸೈಟ್ ನಿಕ್ಷೇಪಗಳು ಇವೆ.

ಭಾರತದಲ್ಲಿ ಸು.೧೬.೫ ಕೋಟಿ ಟನ್ ಗಳಷ್ಟು ಬಾಕ್ಸೈಟ್ ಅದಿರಿನ ನಿಕ್ಷೇಪಗಳಿರುವುದೆಂದು ಅಂದಾಜು ಮಾಡಲಾಗಿದೆ. ಅದರಲ್ಲಿ ಉನ್ನತ ದರ್ಜೆಯ ನಿಕ್ಷೇಪಗಳು ಸುಮಾರು ೯.೪ ಕೋಟಿ ಟನ್ ಗಳು. ಬಿಹಾರಿನ ರಾಂಚಿ, ಮಧ್ಯಪ್ರದೇಶದ ಜಬಲ್ಪುರ-ಕಟ್ನಿ ವಿಭಾಗ, ಮಹಾರಾಷ್ಟ್ರದ ಥಾನ ಜಿಲ್ಲೆ, ಕರ್ನಾಟಕ ರಾಜ್ಯದ ಬೆಳಗಾಂ ಜಿಲ್ಲೆ, ಜಮ್ಮು ಮಾತು ಕಾಶ್ಮೀರ, ತಮಿಳುನಾಡಿನ (ಮದರಾಸು) ಸೇಲಂ ವಿಭಾಗ, ಒರಿಸ್ಸ, ಗುಜರಾತ್ ನಲ್ಲಿ ಬಾಕ್ಸೈಟ್ ನಿಕ್ಷೇಪಗಳಿವೆ. ಬಾಕ್ಸೈಟ್ ಅದಿರು ಕರ್ನಾಟಕ ರಾಜ್ಯದ ಬಾಬಾಬುಡನ್ ಗಿರಿ ವಲಯದಲ್ಲಿ ಸ್ವಲ್ಪ ಮಟ್ಟಿಗೂ, ಸಿಲಿಕಾನ್ ಮಿಶ್ರಿತ ರೂಪದಲ್ಲಿ ಚಿತ್ರದುರ್ಗ ಜಿಲ್ಲೆಯ್ ಹೊಳಲ್ಕೆರೆ ತಾಲ್ಲೂಕಿನಲ್ಲೂ ಇರುವುದು ತಿಳಿದಿದೆ.

ಭಾರತದಲ್ಲಿ ಪ್ರಥಮವಾಗಿ ಬಾಕ್ಸೈಟ್ ನಿಕ್ಷೇಪಗಳ ಪ್ರಯೋಜನ ಪಡೆಯುವ ಕಾರ್ಯ ಬಿಹಾರಿನಲ್ಲಿ ಆರಂಭವಾಯಿತು (೧೯೪೮). ೧೯೩೭ಕ್ಕೆ ಮುಂಚೆ ಭಾರತದಲ್ಲಿ ಅಲ್ಯೂಮಿನಿಯಂ ಲೋಹ ತಯಾರಿಕೆ ಇರಲಿಲ್ಲ. ಆ ವರ್ಷದಲ್ಲಿ ಎರಡು ಕಂಪನಿಗಳು ಅಲ್ಯೂಮಿನಿಯಂ ಕೈಗಾರಿಕಾರಂಗಕ್ಕಿಳಿದು ಮೊದಲು ಆಮದು ಮಾಡಿಕೊಂಡು ಅಲ್ಯೂಮಿನಿಯಂ ಕೈಗಾರಿಕಾ ರಂಗಕ್ಕಿಳಿದು ಮೊದಲು ಆಮದು ಮಾಡಿಕೊಂಡು ಅಲ್ಯೂಮಿನಿಯಂ ಮತ್ತು ಬಾಕ್ಸೈಟ್ ಗಳನ್ನು ಆಧರಿಸಿದ ಕೈಗಾರಿಕೆಗಳನ್ನು ಆರಂಭಿಸಿದುವು. ಕೇರಳದ ಆಲ್ವೆಯಲ್ಲಿ ಮೊದಲು ಲೋಹ ತಯಾರಿಕಾ ಕುಲುಮೆ ಕಾರ್ಯಾರಂಭಿಸಿತು. ಸ್ವಾತಂತ್ರ್ಯಾನಂತರ ಹಿರಾಕುಡ್ ವಿವಿಧೋದ್ದೇಶ ಜಲಾಶಯದ ವಲಯದಲ್ಲಿ ಪ್ರಥಮ ಭಾರಿ ಪ್ರಮಾಣದ ಅಂದರೆ ಸುಮಾರು ೧೦,೦೦೦ ಟನ್ ಲೋಹೋತ್ಪಾದನ ಸಾಮರ್ಥ್ಯವುಳ್ಳ ಕೈಗಾರಿಕೆಯೊಂದು ಸ್ಥಾಪಿತವಾಯಿತು. ಅಲ್ಲಿಂದೀಚೆಗೆ ಅಲ್ಯೂಮಿನಿಯಂ ಲೋಹಕ್ಕೆ ಬೇಡಿಕೆ ಹೆಚ್ಚಾಗಿ, ಸರ್ಕಾರ