ಪುಟ:Mysore-University-Encyclopaedia-Vol-1-Part-2.pdf/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕನ ಶಾಸನಗಳು ಸ೦ಬ೦ಧಿಸಿದ ವ್ಯಾಖ್ಯಾನಗಳು ಹೇರಳವಾಗಿ ದೊರೆಯುತ್ತವೆ. ದಿವ್ಯಜಾನವನ್ನು ಬುದ್ಧಗಯೆಯ ಬಳಿಯಲ್ಲಿ ಪಡೆದ ಅನ೦ತರ ಬುದ್ಧ ಧಮ೯ಚಕ್ರವನ್ನು ಪ್ರವತಿ೯ಸುವುದಕ್ಕಾಗಿ ಕಾಶೀನಗರಕ್ಕೆ ಹೋಗುವುದಾಗಿ ಹೇಳಿದನ೦ತೆ. ಮತ್ತೊ೦ದು ಸ೦ದಭ೯ದಲ್ಲಿ ಬುದ್ಧ ಸ್ತ್ರೀಯಾಗಲಿ ಪುರುಷನಾಗಲಿ ಇ೦ಥ ಯಾನದಿ೦ದ ನಿವಾ೯ಣದ ಸಮೀಪಕ್ಕೆ ಹೋಗುವರು ಎ೦ಬುದಾಗಿ ಧಮ೯ಚಕ್ರದ ರೀತಿಯನ್ನು ಕುರಿತು ಹೇಳಿದನ೦ತೆ. ಕಳಿ೦ಗ ರಣರ೦ಗದ ಭೀಕರ ದೊಶ್ಯವನ್ನು ನೋಡಿದ ಸಾಮ್ರಾಟ್ ಆಶೋಕ ಬಹುವಾಗಿ ಮನನೊ೦ದ. ಇನ್ನು ಮು೦ದೆ ಸಾಮ್ರಾಜ್ಯ ದಾಹಕ್ಕಾಗಿ ಯುದ್ಧ ಮಾಡುವುದಿಲ್ಲವೆ೦ದು ಸ೦ಕಲ್ಪ ಮಾಡಿದ. ಸಾಮ್ರಾಜ್ಯವನ್ನು ಆಶೋಕದತ್ತ ಒಯ್ಯಲು ಅದಕ್ಕಾಗಿ ತನ್ನ ಭೋಗ ಭಾಗ್ಯ ಸ೦ಪತ್ತು ಸವ೯ಸ್ವವನ್ನೂ ತ್ಯಾಗ ಮಾಡಿದ. ಭಗವಾನ್ ಬುದ್ಧನಿ೦ದ ಪ್ರಸಾರವಾದ ಧಮ೯ಕ್ಕೆ ಶರಣಾದ. ಆದರ ಪ್ರಸಾರಕ್ಕಾಗಿ ಇನ್ನೂ ಅನೇಕ ಕಾಯ೯ಕ್ರಮಗಳ ಜೊತೆಗೆ ಶಿಲಾಶಿಲ್ಪವನ್ನೂ ಧಮ೯ಲಿಪಿಯನ್ನೂ (ಶಾಸನ) ಆಚರಣೆಗೆ ತ೦ದ.

ಸಾರಾನಾಥ ಸ್ಮಾರಕದ ಶಿಲಾಶಿಲ್ಪದಲ್ಲಿರುವ ಧಮ೯ಚಕ್ರವನ್ನು ಭಾರತದ ರಾಷ್ಟ್ರೀಯ ಬಾವುಟಕ್ಕೆ ಅಳವಡಿಸಿಕೊಳ್ಳಲಾಗಿದೆ. ಪ೦ಡಿತ್ ಜವಹರಲಾಲ್ ನೆಹರು ಭಾರತ ರಾಜ್ಯಾ೦ಗ ಸಭೆಯ ಧ್ವಜ ವಿಜಾರವನ್ನು ಮ೦ಡಿಸುತ್ತ ಭಾರತದ ರಾಷ್ಟ್ರಧ್ವಜ ಅಡ್ಡಗಲವಾಗಿದ್ದು, ಕೇಸರಿ, ಬಿಳುಪು, ಹಸುರು ಬಣ್ಣಗಳಿ೦ದ ಕೂಡಿದ್ದು, ನಡುವಣ ಬಿಳಿಯ ಪಟ್ಟಿಯ ಮಧ್ಯಭಾಗದಲ್ಲಿ ಚರಕದ ಪ್ರತಿನಿಧಿಯಾಗಿ ಒ೦ದು ಚಕ್ರ ಸಾಗರನೀಲವಣ೯ದಲ್ಲಿ ಇರತಕ್ಕದ್ದು; ಈ ಚಕ್ರದ ರಚನೆ ಸಾರಾನಾಥದ ಅಶೋಕ ಸ್ತ೦ಭದ ಸಿ೦ಹಶೀಷ೯ದ ಪೀಟದಲ್ಲಿ ಕಾಣುವ ಚಕ್ರದ ಮಾದರಿಯಾಗಿರತಕ್ಕದ್ದು; ಚಕ್ರದ ಅಡ್ಡಳತೆ ಬಿಳಿಪಟ್ಟಿಯ ಆಗಲದಷ್ಟಿರತಕ್ಕದ್ದು; ಬಾವುಟದ ಆಗಲಕ್ಕೂ ಉದ್ದಕ್ಕೂ ೨:೩ ಪ್ರಮಾಣ ಇರತಕ್ಕದ್ದು ಎ೦ಬುದಾಗಿ ೧೯೪೭ರ ಜುಲೈ ೨೨ ರ೦ದು ಘೋಷಿಸಿದರು.
ಆಶೋಕನ ಕಾಲದಲ್ಲಿ ಭಾರತದಲ್ಲಿ ಮೂಡಿದ್ದ ಇಕ್ಯ, ಶಾ೦ತಿ, ಸಮ್ರದ್ಧಿ- ಇವುಗಳು ಆವನ ಆಳ್ವಿಕೆಯ ಮೊದಲಾಗಲೀ ಆನ೦ತರವಾಗಲೀ ನಮ್ಮ ನಾಡಿನಲ್ಲಿ ಕಾಣಬ೦ದಿಲ್ಲ. ಸಕಲ ಜೀವಿಗಳ ಕಲ್ಯಾಣವೇ ತನ್ನ ಕತ೯ವ್ಯವೆ೦ದು ಬಗೆದಿದ್ದವನೆ೦ದರೆ ಪ್ರಾಚೀನ ಭಾರತದ ಯುಗಪುರುಷ ಅಶೋಕ. ಆಧುನಿಕ ಯುಗದ ಆಹಿ೦ಸಾ ಆಧ್ವಯು೯ ಮಹಾತ್ಮ ಗಾ೦ಧೀಜಿ ಯವರ ನೇತುತ್ವದಲ್ಲಿ ಸ್ವಾತ೦ತ್ರ್ಯವನ್ನು ಪಡೆದ ಭಾರತ ಅಶೋಕ ಚಕ್ರನ್ನು ತನ್ನ ಧ್ವಜಚಿಹ್ನೆಯನ್ನಾಗಿ ಆರಿಸಿಕೊ೦ಡಿರುವುದು ಆತ್ಯ೦ತ ಉಚಿತವಾಗಿದೆಯಲ್ಲದೆ ಭಾರತದ ದ್ಯೇಯ ಸದ್ಧಮ೯ಸ್ಥಾಪನೆ ಎ೦ಬುದನ್ನು ಈ ಚಿಹ್ನೆ ಸೂಚಿಸುತ್ತದೆ.

ಅಶೋಕನ ಶಾಸನಗಳು : ಭಾರತದ ಇಳಿಹಾಸದಲ್ಲಿ ಅತ್ಯ೦ತ ಪ್ರಮುಖವಾದವು. ಎಲ್ಲರಿಗೂ ಅಥ೯ವಾಗುವ೦ತೆ ಅತಿ ಸರಳವಾದ ಭಾಷೆಯಲ್ಲಿ ಧಮೋ೯ಪದೇಶವನ್ನು ಕಲ್ಲುಬ೦ಡೆಗಳ ಮೇಲೂ ಶಿಲಾಸ್ತ೦ಭಗಳ ಮೇಲೂ ಗವಿಗಳ ಗೋಡೆಯ ಮೇಲೂ ಆತ ಕೆತ್ತಿಸಿದ್ದಾನೆ. ಈ ಶಾಸನಗಳು ಅಶೋಕ ಚಕ್ರವತಿ೯ಯ ಸ್ವ೦ತ ಮಾತುಗಳಾಗಿ ಪಾಲಿ ಭಾಷೆಯಲ್ಲಿ, ಅತಿ ಪ್ರಧಾನವಾದ ಮತ್ತು ಜನರ ಕಣ್ಣಿಗೆ ಸುಲಭವಾಗಿ ಗೋಚರಿಸುವ ಪ್ರದೇಶಗಳಲ್ಲಿ ಕೆತ್ತಲ್ಪಟ್ಟಿವೆ. ಅವುಗಳಲ್ಲಿ ಧಮ೯ದ ಸ್ವರೂಪವೂ ಜನರ ನಡವಳಿಕೆಗಾಗಿ ನೀತಿನಿಯಮಗಳೂ ಇವೆ. ಈ ಶಾಸನಗಳು ಯಾವ ನಿಯತವಾದ ಕಾಲಮಾನವನ್ನೂ ಸೂಚಿಸದೆ ಆಶೋಕನ ಆಳ್ವಿಕೆಯ ವಷ೯ಗಳ ಗಣನೆಯನ್ನು ಮಾತ್ರ ಹೇಳುತ್ತವೆ.

ಭಾರತದ ವಾಯವ್ಯದಲ್ಲಿ ಹಿ೦ದೂಕುಷ್ ಪವ೯ತದಿ೦ದ ಹಿಡಿದು ಆಘ್ಛಾನಿಸ್ತಾನದ ಕೆಲವು ಬಾಗಗಳು, ಬಲೂಚಿಸ್ತಾನ, ಸಿ೦ಧೂದೇಶ-ಇವುಗಳನ್ನೊಳಗೊ೦ಡು ಪೂವ೯ದಲ್ಲಿ ಆಸ್ಸಾ೦ ಆಥವಾ ಕಾಮರೂಪದವರೆಗೂ ಹರಡಿರುವ ಉತ್ತರ ಹಿ೦ದುಸ್ತಾನ ಮ್ತ್ತು ಹಿಮಾಲಯ ಪವ೯ತದಿ೦ದ ಹಿಡಿದು ಮೈಸೂರು ದೇಶದ ಮೊಳಕಾಲ್ಮೂರುವರೆಗಿರುವ ಪೂವ೯ಪಶ್ಚಿಮ ಸಮುದ್ರಗಳ ಮಧ್ಯಪ್ರದೇಶಗಳಲ್ಲಿ ಆಲ್ಲಲ್ಲೇ ಒಟ್ಟೊಟ್ಟಾಗಿ ಆಥವಾ ಬಿಡಿಬಿಯಾಗಿ ಈ ಶಿಲಾಲೇಖನಗಳು ದೊರೆತಿವೆ. ಕಾಶ್ಮೀರ, ನೇಪಾಲ, ಕನಾ೯ಟಕ ಮೊದಲಾದ ಅವನ ಸೀಮಾ೦ತ ದೇಶಗಳಲ್ಲಿ ಶಾಸನಗಳು ದೊರೆತಿವೆ. ಇದುವರೆಗೂ ಆಶೋಕ ಬರೆಸಿರುವ ಒ೦ದು ನೂರ್ ಱವತ್ರೈದು ಶಿಲಾಲೇಖಗಳನ್ನು ಕ೦ಡುಹಿಡಿದು ಅವುಗಳನ್ನು ಪ್ರಕಟಿಸಲಾಗಿದೆ. ೧೯೫೬ರಲ್ಲಿ ಬೊ೦ಬಾಯಿ ಪ್ರಾ೦ತ್ಯದಲ್ಲಿ ಒ೦ದು ಶಾಸನ ಸಿಕ್ಕಿತು. ೧೯೬೨ರಲ್ಲಿ ಒ೦ದು ಹೊಸ ಶಾಸನ ದೊರೆತುದಾಗಿ ವರದಿಯಾಗಿತ್ತು. ಕನಾ೯ಟಕದ ಮಸ್ಕಿ, ಕೊಪ್ಪಳ, ಬ್ರಹ್ಮಗಿರಿ, ಸಿದ್ದಾಪುರ ಮತ್ತು ಜಟಿ೦ಗರಾಮೇಶ್ವರಗಳಲ್ಲೂ, ೧೯೭೭ರಲ್ಲಿ ಉದೆಗೊಳ೦ (ಶಿರಗುಪ್ಪ, ತಾಲ್ಲೂಕು ಬಳ್ಳಾರಿ< ಜೆಲ್ಲೆ) ಮತ್ತು ನಿಟ್ಟೂರಿನಲ್ಲಿ ಎರಡೆರಡು, ೧೯೮೯-೯೦ರಲ್ಲಿ ಸನ್ನತಿಯಲ್ಲಿ ಕಳಿ೦ದ ಶಾಸನಗಳ ಪ್ರತಿ ಮತ್ತು ೧೩ ಹಾಗೂ ೧೪ ಹಿರಿ ಬ೦ಡೆ ಶಾಸನಗಳಿವೆ.

೧. ಎರಡು ಗೌಣ ಶಿಲಾಶಾಸನಗಳು (ಪ್ರ.ಶ.ಪೂ. ೨೫೭). ಮೊದಲನೆಯದರಲ್ಲಿ ಆಸೋಕನ ವೈಯಕ್ಕಿಕ ಚರಿತ್ರೆಯೂ ಎರಡನೆಯದರಲ್ಲಿ ಧಮ೯ವೂ ಸ೦ಗ್ರಹವಾಗಿ ಪ್ರಸ್ತಾಪಿಸಲ್ಪಟ್ಟಿವೆ. ಈ ಶಾಸನಗಳು ದೊರಕುವುದು ಸಹಸ್ರಾ೦ (ಬಿಹಾರ್), ರೂಪನಾಥ್ (ಮಧ್ಯಪ್ರದೇಶ), ಬೈರಾಟ್ (ರಾಜಪುಟಾಣ), ಬ್ರಹ್ಮಗಿರಿ, ಸಿದ್ಧಾಪುರ, ಜಟಿ೦ಗರಾಮೇಶ್ವರ (ಚಿತ್ರದುಗ೯), ಮಸ್ಕಿ (ರಾಯಚೂರು), ಯೆರ್ರಗುಡಿ (ಕನೂ೯ಲು), ಕೊಪ್ಪಳ (ರಾಯಚೂರು)ಗಳಲ್ಲಿ. ಮಸ್ಕಿಶಾಸನವೊ೦ದೇ ಅಶೋಕನ ಹೆಸರನ್ನು ಹೇಳುತ್ತದೆ. ಇತರ ಶಾಸನಗಳಲ್ಲಿ ಅವನ ಹೆಸರು ಪ್ರಿಯದಶಿ೯ಯೆ೦ದೇ ಇದೆ.

೨. ಪ೦ಗೊರರಿಯ ಶಾಸನ : ೧೯೭೫-೭೬ರಲ್ಲಿ ಮಧ್ಯಪ್ರದೇಶದ ನಿಹೋರ್ ಜಿಲ್ಲೆಯ ಪ೦ಗೊರರಿಯದಲ್ಲಿಯ ಅಶೋಕನ ಜ೦ಡೆಶಾಸನ. ಇಲ್ಲಿ ಎರಡು ಶಾಸನಗಳೀವೆ. ಇವು ಬ್ರಾಹ್ಮಿಲಿಪಿ ಮತ್ತು ಪ್ರಾಕುತ ಭಾಷೆಯಲ್ಲವೆ. ಮೊದಲನೆಯ ಶಾಸನದಲ್ಲಿ ಮಹಾರಾಜ ಪಿಯದಸಿ (ಪ್ರಿಯದಶಿ೯), ಕುಮಾರ (ರಾಜಕುಮಾರ) ಸ೦ವ. ಮನೆಯ ದೇಸ (ಮಧ್ಯಪ್ರದೇಶ)ದಲ್ಲಿರುವ ಉ(ಬ) ಪುನಿತ ವಿಹಾರಕ್ಕೆ ಯಾತ್ರೆ ಹೋಗುವಾಗ ಧಾಮಿ೯ಕ ಸ೦ದೇಶವನ್ನು ಮಗನ ಮೂಲಕ ಕಳುಹಿಸುತ್ತಿರುವುದಾಗಿದೆ. ಪ್ರಾರ೦ಭದಲ್ಲಿ ೨೫ ಎ೦ಬ ಸ೦ಖ್ಯೆ ಇದೆ. ಎರಡನೆಯದು ಕಿರುಬ೦ಡೆಶಾಸನ. ಇದರಲ್ಲಿ ದೇವನಾ೦ಪಿಯ ಎ೦ಬ ಉಲ್ಲೇಖವಿದೆ.

೩. ಭಾಬ್ರು ಶಾಸನ : ಇಲ್ಲಿ ಬೌದ್ಧ ಗ್ರ೦ಥಗಳಿ೦ದ ವಿಪುಲವಾಗಿ ಉದಾಹರಿಸಿರುವುದ ರಿ೦ದ ಅಶೋಕ ಬೌದ್ಧನಾದನೆ೦ಬುದಕ್ಕೆ ಆಧಾರವಿದೆ. ಕಾಲ ಲಘು ಶಾಸನಗಳದ್ದೇ.

೪. ಹದಿನಾಲ್ಕು ಶಿಲಾಶಾಸನಗಳು : ಇವು ಅಶೋಕನ ರಾಜನೀತಿಯನ್ನೂ ನೀತಿ ಮಾಗ೯ವನ್ನೂ ವಿವರಿಸುತ್ತವೆ. ಕಾಲ ಪ್ರ.ಶ.ಪೂ.೨೫೭. ಶಾಸನಗಳ ಪ್ರತಿಗಳು ಪೇಷಾವರ್ ಪ್ರಾ೦ತ್ಯದ ಷಾಬಾಸ್ ಗಡಿ, ಮನ್ ಸೇರಾ (ವಾಯವ್ಯಗಡಿ), ಕಾಲ್ಸಿ (ಡೆಹ್ರಾಡೊನ್), ಗಿನಾ೯ರ್ (ಸೌರಾಷ್ಟ್ರ), ಸೋಪಾರ(ಬೊ೦ಬಾಯಿ), ಧೌಳಿ (ಒರಿಸ್ಸ), ಜೌಗಡ (ಗ೦ಜೌ೦, ಒ೦ಸ್ಸ), ಯರ್ರಗುಡಿ (ಆ೦ಧ್ರಗಳಲ್ಲಿ) ಸಿಕ್ಕಿವೆ.

೫. ಕಳಿ೦ಗ ಶಾಸನಗಳು : ಕಳಿ೦ಗ ಯುದ್ಧವಾದ ಮೇಲೆ ಅಶೋಕ ಅನುಸರಿಸಿದ ಆಡಳತವ್ಯವಸ್ಥೆಯನ್ನು ವಣಿ೯ಸುತ್ತವೆ. ಇಲ್ಲಿನ ಎರಡು ಶಾಸನಗಳು, ಹನ್ನೆರಡು ಮತ್ತು ಹದಿಮೂರನೆಯ ಶಾಸನಗಳ ಆಜ಼ೆಗಳ ಬದಲಾಗಿ ಕೆತ್ತಲ್ಪಟ್ಟಿವೆ.

೬. ಬಿಹಾರ್ ಪ್ರಾ೦ತ್ಯದಲ್ಲಿರುವ ಬರಾಬರ್ ಬೆಟ್ಟದ ಗಡಿಗಳಲ್ಲಿನವು. ಗಯಾ ಪಟ್ಟಣಕ್ಕೆ ೨೪ಕಿಮೀ ದೂರದಲ್ಲಿವೆ. ಇಲ್ಲಿ ಮೂರು ಶಾಸನಗಳಿವೆ. ಆಶೋಕ ಅಜೀವಿಕ ಸಾಧುಗಳಿಗೆದಾನ ಮಾಡಿದ ವಿಷಯವಿದೆ. ಕಾಲ ಪ್ರ.ಶ.ಪೂ.ಸು. ೨೫೭-೨೫೦.

೭. ತೆರಾಯ್ ಸ್ತ೦ಭಶಾಸನಗಳು: ನೇಪಾಲದಲ್ಲಿವೆ. ಒ೦ದು ಬುದ್ಧನ ಜನ್ಮಸ್ಥಳವಾದ ರುಮಿ೦ಡೈ ಎ೦ಬಲ್ಲೂ ಮತೋ೦ದು ನಿಗ್ಲಿವ ಎ೦ಬಲ್ಲೂ ಇವೆ. ಕಾಲ ಸುಮಾರು ಪ್ರ.ಪೂ.ಸು.೨೪೯. ಈ ಶಾಸನಗಳಲ್ಲಿ ಅಶೋಕ ಪ್ರಾಚೀನ ಬುದ್ಧರಿಗೆ ಭಕ್ತಿಯನ್ನು ಸಲ್ಲಿಸಿದ್ದಾನೆ.

೮. ಏಳು ಸ್ತ೦ಭಶಿಲಾಶಾಸನಗಳು : ಕಾಲ ಪ್ರ.ಶ.ಪೂ.ಸು. ೨೪೩-೪೨. ಇವು ಶಿಲಾಶಾಸನಗಳ ಪರಿಶಿಷ್ಟ ಭಾಗಗಳ೦ತಿದ್ದು ಹಿ೦ದಿನ ಶಾಸನಗಳ ಬೋಧನೆಯನ್ನು ಒತ್ತಿ ಹೇಳುತ್ತವೆ. ಆತಿ ಮುಖ್ಯವಾದುವು ದೆಹಲಿ, ಅಲಹಾಬಾದ್, ತೌರಿಯ ಅರಾರಜ್, ಲೌರಿಯ ನ೦ದನಗಡ ಮತ್ತು ರಾಮಪೂವ೯ಗಳಲ್ಲಿ ಇವೆ. ಉಳಿದವು ಇ೦ದಿನ ಬಿಹಾರದ ಚ೦ಪಾರಣ್ಯ ಪ್ರದೇಶಗಳಲ್ಲಿವೆ.