ಪುಟ:Mysore-University-Encyclopaedia-Vol-1-Part-3.pdf/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೮೮ ಆಟೀ೯ಸಿಯನ್ ಬಾವಿ

ಡುಬ್ಬವುಳ್ಳ,ಕ್ಯಾಮೆಲಸ್ ಬ್ಯಾಕ್ಟ್ರಿಯಾನಸ್, ದಕ್ಷಿಣ ಅಮೆರಿಕಕ್ಕೆ ಸೀಮಿತವಾಗಿರುವ ಲಾಮ ಕ್ಯಾಮಿಲಿಡೀ ಬಳಗಕ್ಕೆ ಸೇರಿದ ಇನ್ನೊಂದು ಜೀವಿ. ಲಾಮ ಒಂಟಿಗಿಂತ ಗಾತ್ರದಲ್ಲಿ ಚಿಕ್ಕದು. ಒಂಟೆಗಿರುವಂತೆ ಡುಬ್ಬವಿಲ್ಲ. ತುಪ್ಪಟವನ್ನು ಹೊಂದಿರುವ ಈ ಲಾಮ ದಕ್ಷಿಣ ಅಮೆರಿಕದ ಹೊರುವ ಪ್ರಾಣಿಯಾಗಿದೆ.

   ಯುರೋಪಿನ ಇಯೋಸೀನ್ ನ ನಡುಗಾಲ ಹಾಗೂ ಅಲಿಗೋಸೀನ್ ಗಳಲ್ಲಿದ್ದ, ಪ್ರಾಚೀನ ಚಂದ್ರ-ದಂತ (ಸೆಲಿನೊಡಾಂಟ್) ಸ್ತನಿಗಳು ಸಿಘೊಡಾಂಟೀಡೀ ಕುಟುಂಬಕ್ಕೆ ಸೇರಿವೆ. ಒಂಟೆಗಳಿಗೆ ಬಹು ಸಮೀಪವಾಗಿ ಕಂಡರೂ ಇವಯ ಒಂಟೆಗಳ ಪೂವಿ೯ಕರಲ್ಲ. ಟೈಲೊಪೋಡಹಳಿಗೆ ಕೊಂಬಿಲ್ಲದಿರುವುದೇ ವೈಶಿಷ್ಷ್ಯ.
 ರೂಮಿನೆನ್ಷಿಯ : ಮೆಲಕು ಹಾಕುವ ಈ ಪ್ರಾಣಿಸಮೂಹ ಬಹು ವಿಸ್ತಾರವಾಗಿ ಪಸರಿಸಿ, ಬಹಳವಾಗಿ ಮಾಪ೯ಟ್ಟು  ಅತ್ಯಧಿಕ ಸಂಖ್ಯೆಯಲ್ಲಿರುವ ಗೊರಸುಳ್ಳ ಪ್ರಾಣಿಗಳೆನಿಸಿವೆ. ಇವು ಪ್ರಪಂಚದ ಸಸ್ಯಾಹಾರಿ ಪ್ರಾಣಿಗಳಲ್ಲೇ ಮುಖ್ಯವಾದವು. ಸುಮಾರು 30,000,000 ವಷ೯ಗಳಿಗಿಂತಲೂ ಹಿಂದಿನ ಇತಿಹಾಸ ಹೊಂದಿವೆ. ಇವುಗಳ ಮೆಲಕು ಹಾಕುವ ಸ್ವಭಾವದಿಂದಾಗಿ ರೂಮಿನೆನ್ಷಿಯ ಎಂಬ ಹೆಸರು ಇವಕ್ಕೆ ಅನ್ವಯಿಸುತ್ತದೆ. ಇವುಗಳ ಜಠರ ಪರಸ್ಪರ ಸಂಬಂಧವಿರುವ ನಾಲ್ಕು ಕೋಣೆಗಳಾಗಿದ್ದು, ಮೆಲುಕಾಡುವುದಕ್ಕೆ ಸಹಾಯಕವಾಗಿದೆ. ಅವಸರದಲ್ಲಿ ತಂದ ಆಹಾರವನ್ನು, ಆನಂತರ ಪುನಃ ಹೊಟ್ಟೆಯಿಂದ ಬಾಯಿಗೆ ತೆಗೆದುಕೊಂಡು ಹಲ್ಲುಗಳಿಂದ ಅರೆದು ತಿನ್ನುವುದೇ ಮೆಲುಕು ಹಾಕುವುದು. ಆಹಾರವನ್ನು ನುಂಗಿದಾಗ, ಮೊದಲು ರೂಮನ್ ಎಂಬ ಮೊದಲಿನ ಕೋಣಿಗೆ ಬರುತ್ತದೆ. ಆಹಾರ ಇಲ್ಲಿ ಕಿಣ್ವನದಿಂದ (ಫಮೆ೯ಂಟೇಷನ್)ಮೃದುವಾಗುತ್ತದೆ. ಈ ರೀತಿ ಮೃದುವಾದ ಅಹಾರ ಅನಂತರ ಜೇನುಗೂಡಿನೋತಿರುವ ರೆಟಿಕ್ಯುಲಮ್ ಎಂಬ ಎರಡನೆಯ ಕೋಣೆಯನ್ನು ಪ್ರವೇಶಿಸುತ್ತದೆ. ಇಲ್ಲಿ ಆಹಾರ ಮತ್ತಷ್ಟು ಹುಳಿಯುತ್ತದೆ. ಇಲ್ಲಿಂದ ಆಹಾರ ಉಂಡೆಗಳ ರೂಪದಲ್ಲಿ ಬಾಯಿಗೆ ಬರುತ್ತದೆ. ಪ್ರತಿಯೊಂದು ಉಂಡೆಯನ್ನೂ ಅದು ಪೂಣ೯ವಾಗಿ ಜಗಿದು, ಪುನಃ ನುಂಗುತ್ತದೆ. ಸ್ರಾವ ದ್ರವ ರೂಪದ ಆಹಾರ ರೆಟಿಕ್ಯುಲಮ್ ಒರಟು ಭಾಗಗಳ ಮೂಲಕ ಸೋಸಲ್ಪಟ್ಟು, ಮೂರು ಹಾಗೂ ನಾಲ್ಕನೆಯ ಕೋಣೆಗಳಿಗೆ ಬರುತ್ತದೆ. ಸಾಲ್ಜೇರಿಯಮ್ ಎಂಬ ಮೂರನೆಯ ಹಾಗೂ ಅಬೋಮೇಸಮ್ ಎಂಬ ನಾಲ್ಕನೆಯ ಕೋಣೆಗಳಲ್ಲಿ ಆಹಾರ ಜೀಣ೯ಕ್ರಿಯೆ ಮುಂದುವರಿಯುತ್ತದೆ.
  ಮೇಲುಕುಕಾಕುವ ಪ್ರಾಣಿಗಳನ್ನು ಮುಖ್ಯವಾಗಿ ಐದು ಬಗೆಯಾಗಿ ಗುರುತಿಸಬಹುದು. ಅತ್ಯಂತ ಪ್ರಾಚೀನವಾದವುಗಳೇ ಟ್ರಾಗುಲಿಡೀ ಬಳಗದ ಷೆವ್ರೋಟೈನ್ ಗಳು. ಇವಯಗಳ ಪಳೆಯುಳಿಕೆಗಳನ್ನು ಮಯೋಸೀನ್ ಕಾಲದವರೆಗೆ ಗುರುತಿಸಬಹುದು. ಇನ್ನೂ ಪ್ರಾಚೀನವೆನ್ನ ಬಹುದಾದ 40,000,000 ವಷ೯ಗಳ ಹಿಂದೆ ಇಯೋಸೀನ್ ನ ಪ್ರಾರಂಭದಲ್ಲಿದ್ದ ಜಿಲೋಸಿಡೀ ಎಂಬ ಗುಂಪಿನಿಂದ ಇದು ವಿಕಾಸಗೊಂಡಿರುವಂತೆ ಕಂಡುಬರುತ್ತದೆ.
 ಸೆರ್ ವಿಡೀ ಕುಟುಂಬ ಜಿಂಕೆಗಳನ್ನೊಳಗೊಂಡಿದೆ. ಈ ಕುಟುಂಬ ಸು. 30,000,000-40,000,000 ವಷ೯ಗಳ ಹಿಂದೆ ಆಲಿಗೋಸೀನ್ ನಡುಗಾಲದಲ್ಲಿದ್ದ ಮುಂಚಿನ ಟ್ರಾಗುಲಾಯಸಿಗಳಿಂದ ವಿಕಾಸ ಹೊಂದಿರಬೇಕು. ಜೊಕೆಗಳಿಗೆ ಕಾಲಕಾಲಕ್ಕೆ ಉದುರಿ ಪುನಃ ಬೆಳೆಯುವಂಥ ಗಟ್ಟಿಯಾದ ಕೊಂಬುಗಳಿರುತ್ತವೆ. ಸಾಮಾನ್ಯವಾಗಿ ಗಂಡು ಜಿಂಕೆಗಳಿಗೆ ಮಾತ್ರ ಕೊಂಬುಗಳಿರುತ್ತವೆ. ಹೆಣ್ಣು ಜಿಂಕೆಗಳಿಗೆ ಸಾಧಾರಣವಾಗಿ ಕೊಂಬುಗಳಿರುವಯದಿಲ್ಲ. ಈ ಕುಟುಂಬಕ್ಕೆ ಚುಕ್ಕೆಜಿಂಕ್ಕೆ ಚುಕ್ಕೆಜಿಂಕೆ (ಸ್ಟಾಟೆಡ್ ಡೀರ್), ಸಾಂಬಾರ್ (ಕಡವೆ ಹಿಮ ಸಾರಂಗ (ರೇನ್ ಡೀರ್), ಮೂಸ್, ಕ್ಯಾರಿಬೂ ಮತ್ತು ಎಲ್ಕ್ ಗಳನ್ನು ಸೇರಿಸಲಾಗಿದೆ.