ಪುಟ:Mysore-University-Encyclopaedia-Vol-1-Part-3.pdf/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಡೆಸುತ್ತಿದ್ದರು.ಆದರೆ ಈ ತೆರನಾದ ಬಾವಿಗಳ ವಿಸ್ತೀರ್ಣ ಅಷ್ಟಾಗಿರುವುದಿಲ್ಲ.ದ್ರವ ಕಡಿಮೆಯಿರುವ ಆರ್ಟೇಸಿಯನ್ ಬಾವಿಗಳನ್ನು ಕಡಿಮೆ ಒತ್ತಡದ ಆರ್ಟೇಸಿಯನ್ ಬಾವಿಗಳೆಂದು ಕರೆಯುತ್ತಾರೆ.ಇವುಗಳ ನೀರು ಎತ್ತರಕ್ಕೆ ಚಿಮ್ಮಲಾರದು.ಆದರೆ ವಿಸ್ತಾರವಾದ ಪ್ರದೇಶಗಳನ್ನು ಆಕ್ರಮಿಸುತ್ತದೆ.ಇವು ಹೆಚ್ಚು ನೀರನ್ನು ಆಕ್ರಮಿಸುತ್ತದೆ.ಇವು ಹೆಚ್ಚು ನೀರನ್ನೂ ಒದಗಿಸುತ್ತದೆ.ಅಮೇರಿಕದ ನ್ಯೂ ಮೆಕ್ಸಿಕೋ ಪ್ರಾಂತ್ಯದ ಈ ಬಗೆಯ ಆರ್ಟೀಸಿಯನ್ ಬಾವಿಗಳಲ್ಲಿ ತಿಂಗಳಿಗೆ ೬೦೦೦ ಗ್ಯಾಲನ್ಗಳಷ್ಟು ಹೆಚ್ಚಿನ ಪ್ರಮಾಣದಲ್ಲಿ ನೀರು ದೊರೆತ ದಾಖಲೆಗಳಿವೆ.