ಪುಟ:Mysore-University-Encyclopaedia-Vol-1-Part-3.pdf/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೯೮

                                                      ಆರ್ಥಿಕ ದಕ್ಷತೆ-ಆರ್ಥಿಕ ಪದ್ಧತಿಗಳು


ಆರ್ಥಶಸ್ತ್ರನಿಪುಣರು ಇಂಥ ಸಾಹಿತ್ಯರಚನೆ ಮಾಡಿ ಅಂತಾರಾಷ್ಟ್ರೀಯ ಅರ್ಥಿಕ ಭಾವನೆ ಮತ್ತು ಸಮಸ್ಯೆಗಳ ವಿಚಾರವಾಗಿ ಅನೇಕ ಕೃತಿಗಳನ್ನು ಪ್ರಕಟಿಸಿದ್ದಾರೆ.ಇತೀಚಿಗೆ ಅರ್ಥಶಸ್ತ್ರದಲ್ಲಿ ಉದ್ಭವಿಸಿರುವ ಇಂದ್ರಿಯಗೋಚರವಾದ ವಿಷಯಗಳಲ್ಲಿ ಅತಿಮುಕ್ಯವಾದುದು ದುಡಿಮೆ.ಇದೊಂದು ದೊಡ್ಡ ಸಮಸ್ಯೆ.ಇದನ್ನು ಸಮರ್ಪಕವಾಗಿ ಬಗೆಹರಿಸದೆ ಯಾವ ಬಗೆಯ ಆರ್ಥಿಕ ಯೋಚನೆಯನ್ನು ಕಾರ್ಯಗತ ಮಾಡಲು ಸಾಧ್ಯವಿಲ್ಲ.ದುಡಿಮೆ,ಕೂಲಿ,ಕೂಲಿಗಾರರ ಸಂಘ,ಕೂಲಿಯ ದರ,ಕೆಲಸದ ಕಾಲ,ಕಾರ್ಖಾನೆಯ ಕಾನೂನು ಲಾಭದ ಹಂಚಿಕೆ,ಕೈಗಾರಿಕಾವ್ಯಾಜ್ಯ ತೀರ್ಮಾನ,ಮಧ್ಯಸ್ಥಗಾರರ ತೀರ್ಪು,ವಿಮೆ,ನಿರುದ್ಯೋಗ ಅದರ ಪರಿಹಾರ ಇತ್ಯಾದಿ ವಿಷಯಗಳೆಲ್ಲವೂ ಅರ್ಧಶಾಸ್ತ್ರದ ವ್ಯಾಪ್ತಿಗೆ ಬಂದುವ ಪರಿಶೀಲಿಸತಕ್ಕೆ ವಿಷಯಗಳಾಗಿರುವುದಲ್ಲದೆಪ್ರಾಯೋಗಿಕ ಪ್ರಶ್ನೆಗಳೂ ಆಗಿವೆ.ಇದರಿಂದ ಅರ್ಥಶಾಸ್ತ್ರದ ವೈಶಾಲ್ಯ ಎಷ್ಟು ಎಂಬುದು ಗೊತ್ತಾಗುವುದು.

ಆಧುನಿಕ ಅರ್ಥಶಾಸ್ತ್ರದಲ್ಲಿ ಸಮೀಕ್ಷಿಸಬೇಕಾದ ಮುಖ್ಯ ವಿಷಯ ಅಂಕಿಅಂಶಗಳ ಸಂಗ್ರಹ.ಇತೀಚಿಗೆ ಇದಕ್ಕೆ ವಿಶೇಷ ಪ್ರಾಶಸ್ತ್ಯ ದೊರೆತಿದೆ.ಆರ್ಥಿಕ ಚಟುವಟಿಕೆಗಳ ಘಲಿತಾಂಶವಾದ ಅಂಕಿಅಂಶಗಳನ್ನು ಪ್ರಾಮಾಣಿಕವಾಗಿ ಸಂಗ್ರಹಿಸಿ ಪ್ರಕಟಿಸಲಾಗುತ್ತಿದೆ .ಸರ್ಕಾರಗಳೂ ಖಾಸಗಿ ವಾಣಿಜ್ಯಸಂಸ್ಥೆಗಳೂ ಈ ಬಗೆಯ ಕೆಲಸ ಕೈಗೊಂಡಿವೆ.ಮುಂಚಿನ ಅರ್ಥಶಾಸ್ತ್ರ ನಿಪುಣರು ಈ ವಿಷಯವನ್ನು ಅಷ್ಟಾಗಿ ಗಮನಿಸಿರಲಿಲ್ಲ.ಈ ಅಂಕಿಅಂಶಗಳು ಆರ್ಥಿಕ ಅನುಭವದ ಕುರುಹಾಗಿ,ಆರ್ಥಿಕ ಸಮಸ್ಯೆಗಳ ವ್ಯಾಸಂಗ,ವಿಭಜನೆ ಪರಿಹಾರಕ್ಕೆ ವಿಶೇಷವಾಗಿ ಸಹಾಯ ಮಾಡುತ್ತಿವೆ.

ಹೀಗೆ ಆಧುನಿಕ ಅರ್ಥಶಾಸ್ತ್ರದ ಆಸಕ್ತಿ ವಿಶೇಷ ರೀತಿಯ ವೈವಿಧ್ಯ ವಾಸ್ತವಿಕತೆಯಿಂದ ಕೂಡಿದ್ದರೂ ಅದರ ಕಲ್ಪನೆಗಳು ಆರ್ಥಿಕ ಜೀವನದ ವಾಸ್ತವಾಂಶಗಳನ್ನು ವಿಮರ್ಶಿಸುವುದಕ್ಕೆ ಸಹಾಯ ಮಾಡಿದರೂ ಅರ್ಥಶಾಸ್ತ್ರ,ರಾಜಕೀಯ ಅಥವ ಸಾಮಾಜಿಕಶಾಸ್ತ್ರದ ಅಂಗವಾಗಿಯೇ ಉಳಿದಿದೆ.ಈ ದೃಷ್ಟಿಯಿಂದ ಇದು ತಾತ್ತ್ವಿಕದ ಮಾನಸಿಕಶಿಕ್ಷಣವಾಗಿದೆ.ನಿರ್ದಿಷ್ಟವಾದ ತೀರ್ಪುಗಳು ಅಥವಾ ಸಿದ್ಥಾಂತಗಳು ತಿರಸ್ಕೃತವಾಗಿರಬಹುದು ಅಥವಾ ಬದಲಾವಣೆ ಉಂಟಾಗಿರಬಹುದು.ಅಥವಾ ಪ್ರಧಾನವಾಗಿ ಪುನಾರಚಿತವಾಗಿರಬಹುದು.ಗಂಭೀರವಾದ ಅನುಬಂಧಗಳು ಸೇರಿಸಲ್ಪಟ್ಟಿರಬಹುದು.ಆದರೆ ಸಮಾಜದ ಆರ್ಥಿಕಜೀವನ ಕ್ರಮದ ಸಾಮಾನ್ಯಚಿತ್ರ ಯಾವಾಗಲೂ ವಿಭಜನೆ ಭವಿಷ್ಯನಿರ್ಧಾರಕ್ಕೆ ಸಹಾಯವಾಗಿಯೆ ಉಳಿದಿರುತದೆ.ಅಭಿಪ್ರಾಯಭೇದ ಮಾರ್ಗಭೇದಗಳಿದ್ದರೂ,ಅರ್ಥಶಾಸ್ತ್ರ ಸದಾ ಮುಂದುವರಿಯುತ್ತಿರುವ,ಉತ್ಕೃಷ್ಟರೀತಿಯ ವಿಸ್ತಾರವಾದ ವ್ಯಾಸಂಗ ಎಂಬುದನ್ನು ಅರ್ಥಶಾಸ್ತ್ರ ಸಮೀಕ್ಷೆಯಿಂದ ಚೆನ್ನಾಗಿ ತಿಳಿಯಬಹುದು. {ಕೆ.ಡಿ}

ಆರ್ಥಿಕ ದಕ್ಷತೆ : ಖರ್ಚು ಆದಷ್ಟು ಕಡಿಮೆಯಾಗಿ,ಕೆಲಸ ಸಮರ್ಪಕವಾಗಿ ನಡೆದು,ಲಾಭ ಹೆಚ್ಚುವಂತೆ ಮಾಡುವ ಕೆಲಸದ ಜಾಣ್ಮೆ(ಎಕನಾಮಿಕ್ ಎಫಿಷಿಯೆನ್ಸಿ).ಹೂಡುವ ಉದ್ಯಮ ಸರಿಯಾದ ಸನ್ನಿವೇಶದಲ್ಲಿರಬೇಕು.ಜನವಸತಿ,ವಾಹನಸೌಕರ್ಯ, ವಸತಿಸೌಕರ್ಯ ಬಡಾವಣೆಗೆ ಅವಕಾಶ-ಇವೆಲ್ಲ ಇರುವ ಕಡೆ ಉದ್ಯಮ ಚೆನ್ನಾಗಿ ನಡೆಯುತ್ತದೆ.ಅನಂತರ ಕೆಲಸಗಾರರ ಆಯ್ಕೆ ಕೆಲಸದ ಮೇಲ್ವಿಚಾರಣೆ ಚೆನ್ನಗಿರಬೇಕು.ಕೆಲಸದ ಅಳತೆ ಇಟ್ಟುಕೂಡುವ ಕೂಲಿಗಿಂತ ಬರುವ ಆದಾಯ ಹೆಚ್ಚಿರುವಂತೆ ನೋಡಿಕೊಳ್ಳಬೇಕು.ಉದೇಶಿತ ಸಿದ್ಧವಸ್ತುಗಳ ಯೋಗ್ಯತೆ ನಿಖರವಾಗಿದ್ದು ಅವುಗಳ ಮಾರಾಟದ ಹಂಚಿಕೆಗೆ ಸರಿಯಾದ ವ್ಯವಸ್ಥೆ ಇರಬೇಕು.ಇಲ್ಲದಿದ್ದಲ್ಲಿ ನಷ್ಟವಾಗುವ ಸಂಭವ ಹೆಚ್ಚುತ್ತದೆ.ಉದ್ದೇಶಿತ ವಸ್ತುಗಳ ಜೊತೆ ಉಪವಸ್ತುಗಳು ಸಿಗುವಂತಿದ್ದಲ್ಲಿ ಅವನ್ನೂ ಬಳಸಿ ಲಾಭ ತೆಗೆಯಬೇಕು.ಆಡಳಿತದ ಖರ್ಚು ಲಾಭದ ಪ್ರಮಾಣಕ್ಕೆ ತಕ್ಕಂತಿರಬೇಕು.ಪೈಪೋಟಿ ಇರುತ್ತದಾದ ಕಾರಣ ತಯಾರಾಗುವ ವಸ್ತುವಿನ ಗುಣ,ಯೋಗ್ಯತೆಗಳನ್ನು ಸಂಶೋಧನೆಗಳಿಂದ ಉತ್ತಮಪಡಿಸುವ ಕೆಲಸ ನಿರಂತರವಾಗಿ ನಡೆಯುತ್ತಿರಬೇಕು.ಒಳ್ಳೆಯ ಪದಾರ್ಥವನ್ನು ಸುಲಭ ಖರ್ಚಿನಲ್ಲಿ ತಯಾರಿಸಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಹುಬೇಗ ಮಾರಾಟ ಮಾಡುವುದೇ ಎಲ್ಲ ಆರ್ಥಿಕ ಉದ್ಯಮಗಳ ಮುಖ್ಯ ಧ್ಯೇಯ.

ಇದಕ್ಕೆ ಬೇಕಾದ ಪ್ರಚಾರ,ಹಂಚಿಕೆ ವ್ಯವಸ್ಥೆ ಸರಿಯಾಗಿರಬೇಕಾದುದು ಅಗತ್ಯ ಈ ಮಾತು ಖಾಸಗಿ ಉದ್ದಮಗಳಿಂತ ಸರ್ಕಾರಿ ಉದ್ಯಮಗಳಿಗೆ ಹೆಚ್ಚು ಅನ್ವಯಿಸುತ್ತದೆ.ರಾಷ್ಟ್ರೀಕರಣಗೊಂಡಿರುವ ಅನೇಕ ಉದ್ಯಮಗಳಲ್ಲಿ ಆರ್ಥಿಕ ದಕ್ಷತೆ ಕಂಡುಬರುತ್ತಿಲ್ಲ. ಅದಕ್ಕೆ ಕಾರಣಗಳು ಅನೇಕ.ಮೊದಲನೆಯದು ಆಡಳಿತ ವ್ಯವಸ್ಥೆ ಸರಿಯಿಲ್ಲದಿರುವುದು.ಎರಡನೆಯದಾಗಿ ಬಂದ ಲಾಭ ಸೋರಿಹೋಗುತಿರುವುದು.ಮೂರನೆಯದಾಗಿ ಪ್ರಚಾರ,ಹಂಚಿಕೆಗಳು ಸಮರ್ಪಕವಾಗಿಲ್ಲದಿರುವುದು. (ಎಸ್.ಎಸ್.ರ್.ಯು)

ಆರ್ಥಿಕ ನಿಯಮಗಳು : ಆರ್ಥಿಕ ಸಮಸ್ಯೆಗಳ ಕಾರಣ ಮತ್ತು ಪರಿಣಾಮಗಳನ್ನು ಅರ್ಥಮಾಡಿಕೊಳ್ಳಲು ಮಾರ್ಗದರ್ಶನ ನೀಡುವಂಥ ನಿಯಮಗಳು(ಎಕನಾಮಿಕ್ ಲಾಸ್).ಅರ್ಥವಿಜ್ನ್ಯಾನಿ ಪ್ರಥಮತಃ ಕೆಲವು ಊಹಾನಿಯಮಗಳನ್ನು ರಚಿಸಿಕೊಳ್ಳುತ್ತಾನೆ.ವಾಸ್ತವ ಪ್ರಪಂಚದ ಆಗುಹೇಗುಗಳಲ್ಲಿ ಇವುಗಳಿಗೆ ವಿರೋಧ ಕನ್ದುಬಂದಿದಲ್ಲಿ ಸಾರ್ವತ್ರಿಕ ಪ್ರಾಮುಖ್ಯಕ್ಕೆ ಹೊಂದುವ ಹಾಗೆ ತೋರಿಬಂದಲ್ಲಿ ಈ ಊಹಾನಿಯಮಗಳೇ ಸ್ಥಾಪಿತ ನಿಯಮಗಳಾಗುತ್ತವೆ.ಕಾಲಕ್ರಮದಲ್ಲಿ ಇವು ಪರೀಕ್ಷಿಸಲ್ಪಟ್ಟು ಸಿಧಾಂತಗಳಾಗುತ್ತವೆ.ಸದಾಕಾಲವೂ ಏಕಪ್ರಕಾರವಾಗಿ ಅನ್ವಯಿಸುವ ನ್ನಿಯಮ ರಚನೆಯೇ ಎಲ್ಲ ವಿಜ್ನ್ಯಾನಿಗಳ ಗುರಿ.ನಿಯಮಗಳ ನಿರ್ದಿಷ್ಟತೆ ಹೆಚ್ಚಿದಂತೆ ವಿಜ್ಯ್ನಾನ ನಿರ್ದಿಷ್ಟತೆಯೂ ಹೆಚ್ಚುತ್ತದೆ.

ವಿಜ್ನ್ಯಾನದ ನಿಯಮ ಒಂದು ಸಾಮಾನ್ಯ ಸಿದ್ಥಾಂತ ಅಥವ ಪ್ರವೃತಿಯ ನ್ಯಾಸ;ಇದು ಹೆಚ್ಚು ಕಡಿಮೆ ಸತ್ಯ ಹಾಗೂ ನಿರ್ದಿಷ್ಟ ಎಂದು ಆಲ್ ಫ್ರೆಡ್ ಮಾರ್ಷಲ್ ಹೇಳಿದ್ದಾನೆ.ಯಾವ ಅಡಚಣೆಯೂ ಇಲ್ಲದಲ್ಲಿ ಪ್ರತಿಯೊಂದು ಕಾರಣವೂ ತನ್ನದೆ ಆದ ಫಲಿತಾಂಶವನ್ನು ಹೊಂದಿರುತ್ತವೆ.ಇತರ ಸಂದರ್ಭಗಳು ವ್ಯತ್ಯಾಸವಗಿದಲ್ಲಿ,ಒಂದು ಆರ್ಥಿಕ ಬದಲಾವಣೆಯಿಂದ ಏನು ಪರಿಣಾಮ ಉಂಟಾಗುತ್ತದೆ ಎಂಬುದನ್ನು ಅರ್ಥಶಾಸ್ತ್ರದ ನಿಯಮಗಳು ತೋರಿಸುತ್ತವೆ.ಮಾರ್ಷಲ್ ಹೇಳುವಂತೆ,ಒಂದು ಸಮಾಚಶಾಸ್ತ್ರದ ನಿಯಮ ಅಥವಾ ಒಂದು ಸಾಮಾಚಿಕ ನಿಯಮ ಆ ಸಮಾಜದಲ್ಲಿ ಪ್ರವೃತಿಯ ನ್ಯಾಸ. ಅಂದರೆ,ಒಂದು ನಿರ್ದಿಷ್ಟ ಸಂದರ್ಭದಲ್ಲಿ,ಒಂದು ಸಮಾಚದ ಗುಂಪಿನಲ್ಲಿ ಒಂದು ನಿರ್ದಿಷ್ಟ ಕ್ರಿಯೆ ಉಂಟಾಗುತ್ತದೆ ಎಂದು ತೋರಿಸುವ ಹೇಳಿಕೆಯಾಗಿರುತ್ತದೆ.ಆರ್ಥಿಕ ನಿಯಮಗಳ,ಆರ್ಥಿಕ ಪ್ರವೃತ್ತಿಗಳ ಹೇಳಿಕೆಗಳು ಹಣದ ಸಹಾಯದಿಂದ ಅಳೆಯಬಹುದಾದ ಸಮಾಜ ನಿಯಮಗಳ ಒಂದು ಭಾಗ.

ಸಂಪತ್ತು ಅಥವ ಸರಕುಗಳೂಂದಿಗೆ ಮಾನವನ ವ್ಯವಹಾರಿಕ ಮತ್ತು ಸಾಮಾನ್ಯ ಸಂಬಂಧಗಳೇನು ಎಂಬುದನ್ನು ಅರ್ಥಶಾಸ್ತ್ರದ ನಿಯಮಗಳು ತೋರಿಸಿಕೊಡುತ್ತವೆ.ಅಂದರೆ ಮಾನವ ಮರುಕಟ್ಟಿಯಲ್ಲಿ ನಡೆಸುವ ವ್ಯವಹಾರಗಳನ್ನು ವಿವರಿಸುವುದೇ ಆರ್ಥಿಕ ನಿಯಮಗಳ ಮುಖ್ಯ ಉದೇಶ.ಮಾನವನ ಸಾಮಾನ್ಯ ಚಟುವಟಿಕೆಗಳು ವಿಚಾರಶೇಲತನ್ನವಲಂಬಿಸಿರುವುದರಿಂದ,ಅವು ಎಲ್ಲಾ ಸಂದರ್ಭಗಳಲ್ಲೂ ಒಂದೇ ರೀತಿ ಇರುವೆಂದು ಹೆಳಲಾಗುವುದಿಲ್ಲ.ಆರ್ಥಿಕ ನಿಯಮಗಳು ಮಾನವನ ಆರ್ಥಿಕ ಚಟುವಟಿಕೆಗಳಿಗೆ ಸಂಬಂಧಿಸಿದುವಾದುದರಿಂದ ಮತ್ತು ಆ ಚತುವಟಿಕೆಗಳು ನಿರ್ದಿಷ್ಟವಾಗಿರುವುದಿಲ್ಲವಾದ್ದರಿಂದ,ಆರ್ಥಿಕ ನಿಯಮಗಳೂ ನಿರ್ದಿಷ್ಟವಾಗಿರುವುದಿಲ್ಲ.ಅರ್ಥಶಾಸ್ತ್ರ ಮಾನವನ ಆರ್ಥಿಕ ಚಟುವಟಿಕೆಗಳನ್ನು ಸಾಮಾನ್ಯವಾಗಿ ತಿಳಿಸಬಹುದೇ ವಿನಾ ನಿರ್ದಷ್ಟವಾಗಿ ತಿಳಿಸಲಾರದು.ಆದ್ದರಿಂದಲೇ ಅರ್ಥಶಾಸ್ತ್ರದ ನಿಯಮಗಳ ಸ್ವರೊಪ,ಪ್ರಕೃತಿ ಹಾಗೂ ಭೌತವಿಜ್ನ್ಯಾನಿಗಳ ಸ್ವರೊಪದಿಂದ ಬೇರೆಯಾಗಿದೆ.ಉದಾಹರೆಣೆಗೆ,ಗುರುತ್ವಾಕರ್ಷಣ ನಿಯಮ ಒಂದು ನಿರ್ದಿಷ್ಟವಾದ ಹೇಳಿಕೆ.ಯಾವ ಊಹೆಗಳ ಮೇಲೆ ಈ ನಿಯಮ ರಚಿತವಾಗಿದೆಯೋ ಅವು ಹೆಚ್ಚು ಬದಲಾವಣೆಗೆ ಒಳಗಾಗುವುದಿಲ್ಲವಾದ್ದರಿಂದ ಇದರ ನಿರ್ದಿಷ್ಟತೆ ಹೆಚ್ಚಗಿರುತ್ತದೆ.ಆದರೆ ಆರ್ಥಿಕ ನಿಯಮಗಳಿಗೆ ಆಧಾರವಾಗಿರುವ ಊಹೆಗಳು ಹೆಚ್ಚು ಬದಲಾವಣೆ ಹೊಂದುವುದಕ್ಕೆ ಅವಕಾಶವಿರುವುದರಿಂದ ಈ ನಿಯಮಗಳ ನಿರ್ದಿಷ್ಟತೆ ಕಡಿಮೆಯಾಗುತ್ತದೆ.ಊಹೆಗಳು ಬದಲಾದಾಗ ಅದರ ಆಧಾರದ ಮೇಲೆ ರಚಿತವಾಗಿರುವ ನಿಯಮಗಳು ಭೌನಿಯಮಗಳೂ ಆಯ್ದ ಪರಿಸ್ಥಿತಿಗಳಿಗೆ ಮಾತ್ರ ಅನ್ವಯಿಸುತ್ತವೆಂದು ಹೇಲುವುದುಂಟು.ಈ ಹೀಳಿಕೆ ಪ್ರಕೃತಿ ಹಾಗೂ ಭೌತವಿಜ್ನ್ಯಾನಿಗಳ ನಿಯಮಗಳಿಂತ ಹೆಚ್ಚಾಗಿ ಅರ್ಥಶಾತ್ರದಂಥ ಸಮಾಚ ವಿಜ್ನ್ಯಾನದ ನಿಯಮಗಳಿಗೆ ಅನ್ವಯಿಸುತ್ತದೆ.ಆರ್ಥಿಕ ನಿಯಮಗಳು ಹೆಚ್ಚು ನಿರ್ದಿಷ್ಟವಾಗಿರುವುದಿಲ್ಲವೆಂಬುದನ್ನು ಬೇಡಿಕೆ ನಿಯಮದ ಮೂಲಕ ನಿದರ್ಶಿಸಬಹುದು.ಇತರ ಸಂದರ್ಭಗಳು ಏಕರೀಯಲ್ಲಿರುವಾಗ,ಬೇಡಿಕೆ ನಿಯಮ್ ಸೂಚಿಸುತ್ತದೆ.ಆದರೆ,ಕೆಲವು ಸಂದರ್ಭಗಳಲ್ಲಿ ಬೇಡಿಕೆ ಹೆಚ್ಚಿದರೂ ಬೆಲೆಗಳು ಏರದಿರಬಹುದು.ಹೀಗೆ ಸಂಭವಿಸಿದಾಗ ಈ ನಿಯಮ ಸುಳ್ಳೆಂದು ಭಾವಿಸುವುದು ಸರಿಯಲ್ಲ.ಇತರ ಸಂದರ್ಭಗಳು ಬದಲಾವಣೆ ಹೊಂದಿರುವುದರಿಂದ ಈ ನಿಯಮದಲ್ಲಿ ಪರಿಣಾಮ ಉಂಟಾಗದಿರಬಹುದು.ಹೀಗೆ ಸಂದರ್ಭಗಳು ವ್ಯತ್ಯಾಸವಾಗುವುದರಿಂದ ಆರ್ಥಿಕ ನಿಯಮಗಳು ಆಯ್ದ ಪರಿಸ್ಥಿತಿಗಳಿಗೆ ಮಾತ್ರ ಅನ್ವಯಿಸುತ್ತದೆ.

ಆರ್ಥಿಕ ನಿಯಮಗಳು ಪ್ರಕೃತಿ ಹಾಗೂ ಭೌತವಿಜ್ನ್ಯಾನಗಳ ನಿಯಮಗಳಷ್ಟು ನಿರ್ದಿಷ್ಟವಾಗಿಲ್ಲದಿದ್ದರೂ ಸಮಾಚವಿಜ್ನ್ಯಾನಗಳ ಪೈಕಿ ಹೆಚ್ಚು ನಿರ್ದಿಷ್ಟವಾದನಿಯಮಗಳನ್ನುಳ್ಳದು ಅರ್ಥಶಾಸ್ತ್ರವೇ.ಇತರ ಸಮಾಜವಿಜ್ನ್ಯಾನಿಗಳ ನಿಯಮಗಳಿಂತ ಆರ್ಥಿಕ ನಿಯಮಗಳು ಹೆಚ್ಚು ನಿರ್ದಿಷ್ಟವಾಗಿರಲು ಕೆಲವು ಕಾರಣಗಳಿವೆ.ಆರ್ಥಿಕ ಚಟುವಟಿಕೆಗಳ ಮಾಪನ ಹಣದ ಆಳತೆಗೋಲಿನಿಂದ ಸಾಧ್ಯವಾಗಿದೆ.ಅಷ್ಟೆ ಅಲ್ಲದೆ ಅರ್ಥಶಾಸ್ತ್ರದಲ್ಲಿ ಎತೀಚೆಗೆ ಗಣಿತ ಮತ್ತು ಸಂಖ್ಯಾಶಾಸ್ತ್ರಗಳ ಬಳಕೆ ಹೆಚ್ಚಿರುವುದರಿಂದ ಆರ್ಥಿಕ ನಿಯಮಗಳ ನಿರ್ದಿಷ್ಟತೆಯನ್ನು ಹೆಚ್ಚಿಸಲು ಸಾಧ್ಯವಾಗಿದೆ(ನೋಡಿ-ಆರ್ಥಿಕ ಅಧ್ಯಯನ ಕ್ರಮಗಳು;ಆರ್ಥಿಕ ಸಂಖ್ಯಾಶಾಸ್ತ್ರ).

ಆರ್ಥಿಕ ಪದ್ಧತಿಗಳು : ಆರ್ಥಿಕ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಜೀವನವನ್ನು ಸುಗಮವನ್ನಾಗಿ ಮಾಡಲು ಮನುಷ್ಯ ಕಾಲಕಾಲಕ್ಕೆ ಮಾಡಿಕೊಂಡಿರುವ ವ್ಯವಸ್ಥೆಗಳ ವಿಷಯವನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ.ಇವೇ ಆರ್ಥಿಕ ಪದ್ಧತಿಗಳು(ಎಕನಾಮಿಕ್ ಸಿಸ್ಟಮ್ಸ್).ಮನುಷ್ಯ ನಿತ್ಯಜೀವನದಲ್ಲಿ ಎದುರಿಸಬೇಕಾದ ಸಮಸ್ಯೆಗಳಲ್ಲಿ ಅತಿ ಕಠಿಣವಾದುದು ಆರ್ಥಿಕ ಸಮಸ್ಯೆ.ಆರ್ಥಿಕ ಸಮಸ್ಯೆಯೆಂದರೆ ಜೀವಣ ನಿರ್ವಹಣೆಯ ಸಮಸ್ಯೆಯೆನ್ನಬಹುದು.