ಪುಟ:Mysore-University-Encyclopaedia-Vol-1-Part-3.pdf/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರ್ಥಿಕ ಬೆಳೆವಣಿಗೆಯ ಮಾದರಿಯನ್ನು ಹಾಗೂ ಪ್ರಗತಿಯ ವಿಶಯದ ಅಭಿಪ್ರಾಯಗಳು ತುಂಬ ಕುತೂಹಲಕಾರಿಯಾಗಿವೆ.ಇವರ ಅಭಿಪ್ರಾಯಗಳನ್ನೇ ಸಂಗ್ರಹಿಸಿದರೆ ಒಂದು ಬೆಳವಣಿಗೆಯ ಮಾದರಿಯನ್ನು ರಚಿಸುವುದು ಸಾಧ್ಯ ಇಂಥ ಮಾದರಿಗೆ ಕ್ಲಾಸಿಕಲ್ ಮಾದರಿ ಎನ್ನುವರು ಮತ್ತು ಬಂಡವಾಳಗಾರಿಕೆಯಿಂದ ಬೆಳೆವಣಿಗೆಯ ಸಿದ್ಧಾಂತ ಎಂತಲೂ ಅನ್ನುವರು.ಇದರ ಮೂಲತತ್ತ್ವ ಬೆಳೆವಣಿಗೆ ಮತ್ತು ಜಡತೆ.ಈ ಹಿರಿಯ ಅರ್ಥಶಾಸ್ತ್ರಜ಼ರ ವಿಚಾರದಂತೆ ಬಂಡವಾಳಶಾಹಿ ಪದ್ಧತಿಯ ಅರ್ಥವ್ಯವಸ್ಥೆಯ ಬೆಳೆವಣಿಗೆ ತಾಂತ್ರಿಕ ಕೌಶಲದ ಪ್ರಗತಿ ಹಾಗೂ ಜನಸಂಖ್ಯೆಗಳ ಹೆಚ್ಚಳಗಳಲ್ಲಿನ ಸ್ಪರ್ಧೆಯನ್ನು ಸೂಚಿಸುವುದು.ಈ ಸ್ಪರ್ಧೆಯಲ್ಲಿ ಕೆಲವು ಕಾಲದವರೆಗೆ ತಾಂತ್ರಿಕ ಪ್ರಗತಿ ಮೂನ್ನಡೆಯಲ್ಲಿದ್ದು ಅನಂತರ ಅದು ತೀವ್ರವಾದ ಜಡತ್ವದಲ್ಲಿ ಕೊನೆಗೊಳ್ಳುವುದು.ತಾಂತ್ರಿಕ ಪ್ರಗತಿ ಬಂಡವಾಳ ಶೇಖರಣೆಯನ್ನು ಆವಲಂಬಿಸಿದ್ದರೆ ಬಂಡವಾಳದ ಹೆಚ್ಚಳದಿಂದ ಯಾಂತ್ರೀಕರಣ ಹಾಗೂ ಶ್ರಮ ವಿಭಜನೆ ಹೆಚ್ಚಾಗುವುದು.ಬಂಡವಾಳ ಶೇಖರಣೆಯ ಪ್ರಮಾಣ ಲಾಭದಮಟ್ಟ ಹಾಗೂ ಪ್ರವಣತೆಯನ್ನು(ಟ್ರೆಂಡ್) ಅವಲಂಬಿಸಿರುವುದು.

ಆರ್ಥಿಕ ಬೆಳೆವಣಿಗೆಯ ಮಾದರಿಯನ್ನು ಗಣಿತಶಾಸ್ತ್ರದ ಪರಿಣಾಮವಾಗಿ ತಯಾರಿಸಬಹುದು.ಮೇಲೆ ವಿವರಿಸಿದ ಅಂಶಗಳನ್ನು ಅವುಗಳ ಪರಿಣಾಮವಗಿ ಉಂಟಾಗುವ ಬದಲಾವಣೆಗಳನ್ನು ಸಮೀಕರಣ ಪದ್ಧತಿಯಿಂದ ಬರೆಯಬಹುದು.ಇಲ್ಲಿ ಎಶ್ಟು ನಿರ್ದಿಸ್ಟು ಅಂಶಗಳಿರುವುವೋ ಅಶ್ಟು ಅನಿರ್ಡಶ್ಟ ಅಂಶಗಳೂ ಇರಬೇಕು.ಈ ಹಿರಿಯ ಲೇಖಕರನ್ನನುಸರಿಸಿ ಬೆಳೆವಣಿಗೆಯ ಮಾದರಿಗಳನ್ನು ಇನ್ನೂ ಅನೇಕರು ರಚಿಸಿರಿವರು ಹಾಗೂ ರಚಿಸುತ್ತಲಿದ್ದಾರೆ.ಅದರಿಂದ ಪ್ರಾರಂಭದ ಮಾದರಿಯ ಸ್ಥೂಲವಾದ ರೂಪರೇಖೇಗಳನ್ನು ತಿಳಿಯೂವುದು ಅವಶ್ಯಕ.

ಮಾದರಿ

ಸಿದ್ಧಾಂತ ೧:ಒಟ್ಟು ಉತ್ಪಾದನೆ O.ಕಾರ್ಮಿಕವರ್ಗದ ಗಾತ್ರ I.ಬಂಡವಾಳ ಸಂಗ್ರಹ Q.ಉತ್ಪಾದನೆಗೆ ದೊರೆಯಬಹುದಾದ ಭೂಮಿ A,ತಾಂತ್ರಿಕತೆಯ ಮಟ್ಟ T.

ಇವೆಲ್ಲವನ್ನೂ ಉತ್ಪಾದನೆಯ ಕಾರ್ಯ ಅವಲಂಬಿಸಿದೆ.ಈ ಭಾವನೆಯನ್ನು ಗಣಿತದ (ಉತ್ಪನ್ನ ಫಂಕ್ನ್) ರೂಪದಲ್ಲಿ f ವನ್ನು ಸಂಕೇತ ಬಳಸಿ ಹೀಗೆ ಬರೆಯಬಹುದು.

O=f(L,K,Q,T)...(1)

ಸಿದ್ಧಾಂತ 2:ಬಂಡವಾಳ ಸಂಗ್ರಹ ತಂತ್ರಿಕ ಪ್ರಗತಿಯನ್ನುಂಟ್ಟುಮಾಡಬಲ್ಲುದು:

T=T(I)....(2)

ಈ ಸಮೀಕರಣವನ್ನು ತಾಂತ್ರಿಕ ಪ್ರಗತಿ ,ಬಂಡವಾಳದ ವಿನಿಯೋಗವನ್ನು ಅವಲಂಬಿಸಿದೆ ಎಂದು ಮಾಡಬೇಕು.ಇದಕ್ಕಾಗಿಯೇ ಈ ಅರ್ಥಶಾಸ್ತ್ರಜರು ತಾಂತ್ರಿಕ ಪ್ರಗತಿ ಪೂರ್ಣಸ್ವತಂತ್ರ ಘಟಕವೆಂದು ಬಗೆಯದೆ ಬಂಡವಾಳ ಶೇಖರಣೆಗೂ ಉಳಿತಾಯಕ್ಕೊ ಮಹತ್ವ ಕೊಟ್ಟಿರುವರು.

ಸಿದ್ದಾಂತ 3:ಬಂಡವಾಳ ವಿನಿಯೋಗ ಲಾಭವನ್ನು ಅವಲಂಬಿಸಿರುವುದು.

I=dQ=I(R)....(3)

ಈ ಶಾಸ್ತ್ರಜರು ಬಂಡವಾಳವನ್ನು ತೊಡಗಿಸುವರೆಂದು ನಿಶ್ಚಿತವಾಗಿ ತಿಳಿದಿದ್ದರು.ಅವರು ಭವಶ್ಯದಲ್ಲಿ ನಿರೀಕಿಸುವ ಲಾಭಬಹಳಮಟ್ಟಿಗೆ ಸದ್ಯದಲ್ಲಿಯ ಲಾಭದ ಪ್ರಮಾಣವನ್ನೇ ಅವಲಂಬಿಸಿರುವುದು.ಮೇಲಿನ ಸಮೀಕರಣದಲ್ಲಿ R ನಿರ್ದಿಶ್ಟಪಡಿಸಿದ ಸಾಧನಗಳಿಂದ ಸಿಗುವ ಉತ್ಪಾದನೆ ಅಥವಾ ಲಾಭ(ಅಂದರೆ -ಭೂಮಿ ಹಾಗೂ ಬಂಡವಾಳಗಳಿಂದ) I ಬಂಡವಾಳ ವಿನಿಯೋಗ :dQ ಬಂಡವಾಳದಲ್ಲಾಗಬಹುದಾದ ನಿಕ್ಕಿ ಹೆಚ್ಚಳ(ವ್ಯಾಖ್ಯೆಯ ಪ್ರಕಾರ,ನಿಕ್ಕಿ ಬಂಡವಾಳ ವಿನಿಯೋಗ) ಹೆಚ್ಚಾದ ಬಂಡವಾಳಕ್ಕೆ d ಸರಿಯಾಗಿರಬೇಕು.

ಸಿದ್ದಾಂತ 4:ಲಾಭ ಶ್ರಮಿಕರ ಪೂರೈಕೆ ಮತ್ತು ತಾಂತ್ರಿಕ ಮತ್ತು ಇವುಗಳಿಂದ ಅವಲಂಬಿಸಿರುವುದು.

R=R(T,L)....(4)

ಲಾಭದ ಮಟ್ಟ ತಾಂತ್ರಿಕ ಕುಶೆಲತೆಯ ಮಟ್ಟ ಇವುಗಳಿಂದ ನಿರ್ಣಯಿಸಲ್ಪಡುವುದು.

ಸಿದ್ಧಾಂತ 5:ಶ್ರಮಿಕರ ಸಂಖ್ಯೆ ಅವರ ವೇತನದ ಮೊತ್ತದ ಗಾತ್ರವನ್ನು ಅವಲಂಬಿಸಿದೆ.

L=L(W)...(5)

ಇದಕ್ಕೆ ಅಸ್ತಿತ್ವಮಟ್ಟದ ವೇತನ ಎನ್ನುವರು.

ಸಿದ್ಧಾಂತ 6:ವೇತನ ಮೊತ್ತದ ಗಾತ್ರ ಬಂಡವಾಳ ವಿನಿಯೋಗದ ಮಟ್ಟವನ್ನು ಅವಲಂಬಿಸಿರುವುದು.

W=W(I)....(6)

ಅಂದರೆ ಜನರು ಸಾಮಾನ್ಯವಾಗಿ ತಮ್ಮ ಅದಾಯದಲ್ಲಿ ಮಾಡುವ ಎಲ್ಲ ಉಳಿತಾಯವೂ ಬಂಡವಾಳ ವಿನಿಯೋಗದಲ್ಲಿ ಪರಿವರ್ತನೆ ಹೊಂದುವುದೆಂಬ ಸಿದ್ಧಾಂತವನ್ನು ಹಿರಿಯ ಶಾಸ್ತ್ರಜರು ಗ್ರಹಿಸಿದ್ದರು.


ಈಗ ಈ ಮಾದರಿಯನ್ನು ಪೂರ್ಣಗೊಳಿಸುವುದು ಮಹತ್ವದ್ದಾಗಿದೆ.ಇಲ್ಲಿಗೆ ಕ್ಲಾಸಿಕಲ್ ಮಾದರಿಯ ಎಲ್ಲ ಕಾರ್ಯಕಾರಿ ಸಮೀಕರಣಗಳು ಸಿಕ್ಕಂತಾದುವು.ಅಂದರೆ ಈ ಆರು ಸಮೀಕರಣಗಳು ಅರ್ಥಿಕ ಬೆಳವಣಿಗೆಯಲ್ಲಿಯ ಕಾರ್ಯಕಾರಣ ಸಂಬಂಧಗಳನ್ನು ಕಲ್ಪಿಸುವುವು.ಅದರೆ ಈ ಮಾದರಿಯಲ್ಲಿ 7 ಬದಲಾಗುವ ಅಂಶಗಳು ಪಟ್ಟಿ ಮಾಡಲಾಗಿದೆ.ಮಾದರಿ ರಚನೆ ಪೂರ್ಣವಾಗಬೇಕಾದರೆ ನಾವು ಇನ್ನೊಂದು ಸಾರೂಪ ಸಮೀಕರಣವನ್ನು ಸೆರಿಸಬೇಕು.

O=R+W....(7)

ಈ ಸಮೀಕರಣವನ್ನು ಎರಡು ಪ್ರಕಾರವಾಗಿ ಅರ್ಥಮಾಡಬಹುದು.ಲಾಭವನ್ನು ಮೇಲೆ ವಿವರಿಸಿದಂತೆ ಸ್ಥಿರ ಉತ್ಪಾದಕ ಸಾಧನೆ ಹಾಗೂ ಬಂಡವಾಳದ ಮೇಲಿನ ಉತ್ಪನ್ನ ಎಂದು ನಾವು ಭಾವಿಸಿದರೆ ಅದು ವ್ಯಾಖ್ಯೆಯ ಪ್ರಕಾರವೇ ಸಾರೂಪ್ಯ ಸಮೀಕರಣವಾಗಬಲ್ಲದು.ಇನ್ನೊಂದು ಅರ್ಥದಲ್ಲಿ ಒಟ್ಟು ರಾಶ್ಟೀಯ ಅದಾಯ ಒಟ್ಟು ಉತ್ಪಾದನೆಯ ವೆಚ್ಚ ಅಥವಾ ಎಲ್ಲ ಉತ್ಪಾದಿಕ ವಸ್ತುಗಳ ಹಾಗೂ ಸೇವೆಗಳ ಬೆಲೆ ಮತ್ತು ಈ ಮೊತ್ತ ಕಾರ್ಮಿಕರಲ್ಲಿ ಹಾಗೂ ಉಳಿದವರಲ್ಲಿ ಹಂಚಿಹೋಗುವುದೆಂದು ಅರ್ಥಮಾಡಬೇಕು.

ಈಗ ಒಂದು ನಿರ್ಧಾರಿತ ರಚನೆಯಾಯಿತು.ಇದರಲ್ಲಿ ಏಳು ಗೊತ್ತಿಲ್ಲದ ಬದಲಾಗುವ ಅಂಶಗಳೂ ಇರುವುವು.ಇನ್ನು ದೀಘರ್ಕಾಲೀನ ಬೆಳೆವಣಿಗೆಯನ್ನು ಸೂಚಿಸುವ ಸಲುವಾಗಿ ಕೆಳಗಿನ ಸಮೀಕರಿಣವನ್ನು ಕೂಡಿಸಿಕೊಳ್ಳಬೇಕು.

W=WL

ಅಂದರೆ W ಕನಿಷ್ಥವೇತನವನ್ನು ತೋರಿಸುವುದು.ಇದೊಂದು ಸ್ಥರ ಅಂಶ.ಮೇಲೆ ವಿವರಿಸಿದ ಎಲ್ಲ ಸಮೀಕರಣಗಳನ್ನು ಒಂದುಗೂಡಿಸಿದರೆ ಮಾದರಿಯ ಸಿದ್ಧಾಂತವಾಗುವುದು.

O=f(L,K,Q,T)...(1) T=T(1)...(2) I=dQ=I(R)...(3) R=R=(T,L)...(4) L=L(W)...(5) O=R+W...(6) ಹಾಗೂ ದೀರ್ಘಕಾಲದ ಪರಿಸ್ಥಿಯಲ್ಲಿ W=WL

ಈ ಮಾದರಿಯನ್ನು ನಮಗೆ ಅರ್ಥಿಕ ಬೆಳವಣಿಗೆಯಲ್ಲಿನ ವರ್ತುಲಾಕಾರದ ಚಲನೆಯ ಸ್ಪಷ್ಟ ಕಲ್ಪಯಾಗುವುದು.ಈ ವರ್ತುಲಾಕಾರದ ರಚನೆಯನ್ನು ಮಧ್ಯದಲ್ಲಿ ಒಡೆದು ಬೇರೆಬೇರೆ ಅಂಶಗಲ್ಲಿನ ಸಂಬಂಧವನ್ನು ತಿಳಿದುಕೊಳ್ಳುವುದು ಸಾಧ್ಯ ಬಂಡವಾಳ ಗಾರಿಕೆಯ ಪದ್ಧತಿಯಲ್ಲಿ,ಲಾಭ ಮುಖ್ಯ ಅಂಶವಾಗಿದ್ದು ಅಲ್ಲಿಂದ ಪ್ರಾರಂಭಿಸಿದರೆ ಹೀಗೆ ಅಡಕವಾಗಿ ಬರೆಯಬಹುದು:

dQ-dI-dQ-dT-dW-dL-dR ಅಂದರೆ ಲಾಭ ಹೆಚ್ಚಿದಹಾಗೆಲ್ಲ ಬಂಡವಾಳ ವಿನಿಯೋಗ ಹೆಚ್ಚಾಗುವುದು.ಇದ್ದರಿಂದ ಬಂಡವಾಳಗಾರರಿಗೆ ಏಕಪ್ರಕಾರವಾಗಿ ಸುಧಾರಿಸುತ್ತಲಿರುವ ತಾಂತ್ರಿಕತೆಯ ಲಾಭ ಪಡೆಯುವುದಕ್ಕೆ ಅವಾಕಶ ಕಲ್ಪಿಸುವುದು.ಇದರಿಂದ ವೇತನೆ ಮೊತ್ತದಲ್ಲಿ ಹೆಚ್ಚಳವಾಗುವುದು .ವೇತನೆದಲ್ಲಿಯ ಈ ಹೆಚ್ಚಳ ಜನ ಸಂಖ್ಯೆಯ ಬೆಲ್ವಣಿಗೆಯನ್ನು ಹೆಚ್ಚುಸುವುದು.ಇದರಿಂದ ಭೂಮಿಯ ಫಲ ಕೊಡುವಶಕ್ತಿ ಕುಗ್ಗುವುದು.ಅಂದರೆ ಭೂಮಿಯಲ್ಲಿ ದುಡಿಯುವ ಕಾರ್ಮಿಕರ ಶ್ರಮಕ್ಕೆ ಪ್ರತಿಫಲದ ಪ್ರಮಾಣ ಕುಗ್ಗುವುದು.ಇದರಿಂದ ಶ್ರಮದ ಬೆಲೆ ಹೆಚ್ಚಾಗಿ ಲಾಭದ ಪ್ರಾಮಣ ಕಡಿಮೆಯಾಗುವುದು.ಹೀಗೆಯೇ ನಾವು ಕಡಿಮೆಯಾದ ಲಾಭದ ಪ್ರಮಾಣಾಮವನ್ನು ಊಹಿಸಭುದ.ಈ ವಿಶ್ಲೇಷಣೆಯಿಂದ ಕ್ಲಾಸಿಕಲ್ ಲೇಖಕರ ದೃಷ್ಟಿಯಲ್ಲಿ ಬಂಡವಾಳವಿನಿಯೋಗ ಲಾಭದಲ್ಲಿ ಅಗುವ ಬದಲಾವಣೆಯ ಪರಿಣಮವೇ ಹೊರೆತು ಅದರ ಮಟ್ಟವನ್ನು ಅವಲಂಬಿಸಿರುವುದಿಲ್ಲ.ಬಂಡವಾಳದ ಶೇಖರಣೆ ಹೆಚ್ಚುಲು ಲಾಭ ಹೆಚ್ಚಾಗಬೇಕು.ಬಂಡವಾಳದ ಹ್ರಾಸ,ಲಾಭದ ಇಳಿತದಿಂದ ಉಂಟಾಗುವುದು.

ಮಾರ್ಕ್ಸ್ ಹೇಳಿರುವ ಬೆಳವಣಿಗ ಮಾದರಿ ಕ್ಲಾಸಿಕಲ್ ಮಾದರಿಗಿಂತ ಭಿನ್ನವಾಗಿದೆ.ಅತ ತನ್ನ ರಚೆನೆಯಲ್ಲಿ ಬಂಡವಾಳಗಾರಿಕೆಯ ಬೆಲೆವಣಿಗೆ ಮುಂದುವರಿದಂತೆ ಯಾವ ರೀತಿಯಿಂದ ತನ್ನ ನಾಶವನ್ನು ತಾನೇ ತಂದುಕೊಳ್ಳಬಹುದೆಂಬುದನ್ನೊ ವಿವರಿಸಿದ್ಧಾನೆ.ಅವನ ಮಾದರಿಗೆ ಬೆಳೆವಣಿಗೆ ಹಾಗೂ ಕುಸಿದುಬೀಳುವಿಕೆಯ ತತ್ವ ಎನ್ನುವರುಬ್.ತನ್ನ ಶ್ರೇಷ್ಟಕೃತಿಯಾದ ಕ್ಯಾಪಿಟಲ್ ಎಂಬ ಪುಸ್ತಕದಲ್ಲಿ ಅತ ಮೂರು ತತ್ತ್ವಗಳನ್ನೂ ಪ್ರತಿಪಾದಿಸಿದ್ದಾನೆ:1.ಬಂಡವಾಳ್ಗಾರರ ಅದಾಯ ಅಥವಾ ಲಾಭ ಶ್ರಮಿಕರ ಅನುಭೋಗಕ್ಕೆ ಸಿಗುವ ಅದಾಯವನ್ನು ಕಡಿಮೆಮಾಡುವುದರಿಂದಲೇ ಹೆಚ್ಚಬಲ್ಲುದು.2.ಈ ರೀತಿಯಲ್ಲಿ ‍