ಪುಟ:Mysore-University-Encyclopaedia-Vol-1-Part-3.pdf/೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆರಿಸ್ಟಾಕಸ್ - ಆರೆಂಜ್ ಮನೆತನ ಕಥೆ ಇದು. ಆದರೆ ಅವಳು ಈ ಕಾವ್ಯದಲ್ಲಿ ಕೇವಲ ಗೌಣ ಪಾತ್ರ ರುಜಿರೋ ಎಂಬವನಲ್ಲಿ ಅನುರಕ್ತಳಾಗಿರುವ ಬ್ರಾಗಮಾಂತೆ ಎಂಬ ಯೋಧಸ್ತ್ರೀಯೇ ಈ ಕಥೆಯ ಪ್ರಧಾನಪಾತ್ರ, ಇವರ ಸಂತತಿಯವರೇ ಎಸ್ತಿ ಮನೆತನದ ಮೂಲಪುರುಷರು. ಸ್ತ್ರೀಸಹಜವಾದ ಲಜ್ಞೆ, ಮಾಧ‍ವ, ಕರುಣೆ ಮುಂತಾದ ಸದ್ಗುಣಗಳನ್ನೂ ಪುರುಷ ಸಹಜವಾದ ಧೈಯ‍ ಸ್ತೈಯ‍ಗಳನ್ನೂ ಹೊಂದಿರುವ ಬ್ರಾದಮಾಂತೆಯರ ಪ್ರಣಯಾಂಕುರ, ಅದರ ವಿವಿಧ ಅವಸ್ಥೆಗಳು, ಪಯ‌ಸಾನ ಇವೇ ಕಥೆಯ ಸುಂದರವಾದ ಭಾಗಗಳು. ಕಥನಕಲೆಯಲ್ಲಿ ಕವಿಯದು ಸಿದ್ಧಹಸ್ತ ಘಟನೆಗಳಲ್ಲಿ, ಕಥೆಯ ವಿವಿಧ ಹಂತಗಳಲ್ಲಿ, ಗಾಂಭೀಯ‍ವನ್ನೂ, ಕಟಕಿಯನ್ನೂ ಜಾಣ್ಮೆಯಿಂದ ಬೆರೆಸುತ್ತಾನೆ. ಸೊಗಸಾದ, ನವಿರಾದ ಹಾಸ್ಯದ ಸನ್ನಿವೇಶಗಳನ್ನು ಕಲ್ಪಿಸುತ್ತಾನೆ. ಅನಂತರ ಬಂದ ಸ್ಟೇನಿನ ಕಥೆಗಾರ ಸರ್ವಾವಾಂಟಿಸ್ ಈ ಬಗೆಯ ಹಾಸ್ಯವನ್ನು ಅಸ್ಯಾದೃಶವಾಗಿ ಸೃಷ್ಟಿಸಿದ್ದಾನೆ. ಅಲ್ಲಾ‌ಂಡೊವಿನ ಕಳೆದುಹೋದ ಬುದ್ದಿಯನ್ನು ಹುಡುಕುವುದಕ್ಕಾಗಿ ಅಸ್ಪೊಲ್ಪೊ ಚಂದ್ರನೊಳಕ್ಕೆ ಪ್ರಯಾಣಮಾಡುವುದು, ರಾಣಿ ಎಂಜಲಿಕ ಮಿಡೋರೋ ಎಂಬ ಸಾಮಾನ್ಯ ಸೈನಿಕರಿಗೆ ಮನಸೋಲುವುದು ಇತ್ಯಾದಿ ಸನ್ನಿವೇಶಗಳಲ್ಲಿ ಈ ಭಾವ ಬೆಳೆದಿದೆ. ಭಾವಾವೇಶದ ಪ್ರಸಂಗಗಳನ್ನು ಚಿತ್ತಾಕಷ‌ಕವಾಗಿ ಚಿತ್ರಿಸಬಲ್ಲನಾದರೂ, ಕಥನಶೈಲಿಯಲ್ಲಿ ವಸ್ತುನಿಷ್ಠೆಯನ್ನು ಈತ ಅನುಸರಿಸುತ್ತಾನೆ. ಘಟನೆಗಳ, ದೃಶ್ಯಗಳ ವಣ‍ನೆಯಲ್ಲಿ ಜೀವಂತ ಶಕ್ತಿಯನ್ನೂ ಮೂತ‍ತೆಯನ್ನೂ ಮೂಡಿಸಬಲ್ಲ. ಕಥೆಯ ಅಖ್ಯಾನಕ್ಕೆ ಮೆರಗು ಕೊಡಲು ರೂಪಕ, ಪ್ರತಿಮೆಗಳಿಗಿಂತಲೂ ಉಪಮೆಯನ್ನೇ ಹೆಚ್ಚು ಬಳಸುತ್ತಾನೆ. ನವಿರಾದ ವಿಡಂಬನೆ, ತಿಳಿಹಾಸ್ಯ ಈ ಕಾವ್ಯದ ಮುಖ್ಯ ಲಕ್ಷಣಗಳು. ಈ ಕಾವ್ಯವಲ್ಲದೆ ಈಗ ಹಲವಾರು ಪ್ರೇಮಗೀತೆಗಳನ್ನೂ, ಪ್ರಹಸನ, ವಿಡಂಬನೆ ಕವನಗಳನ್ನೂ ಬರೆದಿದ್ದಾನೆ.

ಕವಿಯದು ಸೌಂದಯ‍ಕ್ಕೆ ಮೀಸಲಾದ ದೃಷ್ಟಿ. ವಿಸ್ತಾರಪ್ರಕೃತಿ ಮತ್ತು ಮಾನವಲೋಕದಲ್ಲಿ ಹುದುಗಿರುವ, ಹಬ್ಬಿರುವ ಸೌಂದರ್ಯ ಸೃಷ್ಟಿಯನ್ನು ಕಾಮನಬಿಲ್ಲಿನಂಥ ಶೈಲಿಯಲ್ಲಿ ಕಣ್ಣಿಗೆ ಕಟ್ಟುವಂತೆ ಬಣ್ಣಿಸುತ್ತಾನೆ. ಕಾವ್ಯದುದ್ದಕ್ಕೂ ಅಲ್ಲಲ್ಲಿ ಮಿಂಚಿ ಹೊಲೆಯುವ, ಯುದ್ಧ, ಉಳ್ಗಿಚ್ಚು ಮಹಾಪೂರ, ಚಂಡಮಾರುತಗಳ ರೌದ್ರವಣ‍ನೆಯನ್ನು ಒದುವಾಗ ನಮಗೆ ಅವನ ಕಾಲದಲ್ಲಿ ಪ್ರಸಿದ್ಧವಾಗಿ ಮೆರೆದ ಟಿಷಿಯನ್ ಮುಂತಾದ ಚಿತ್ರಕಾರರ ನೆನಪಾಗುತ್ತದೆ. ಈ ಕಥನಕಾವ್ಯ ಅನಂತರ ಬಂದ ನಾನಾ ಭಾಷೆಯ ಕವಿಗಳಿಗೆ, ನಾಟಕಕಾರರಿಗೆ, ಕಾದಂಬರಿಕಾರರಿಗೆ ಸಮೃದ್ಧಭಂಡಾರವಾಗಿದೆ. ಷೇಕ್ಸ್ ಪಿಯರ್, ಸಿಡ್ನಿ, ಗ್ರೀನ್, ಸ್ಪೆನ್ಸ್ರರ್, ಮಿಲ್ಟನ್ ಮತ್ತು ೧೯ನೆಯ ಶತಮನಾದ ಇಂಗ್ಲಿಷ್ ಕವಿಗಳೂ ಆರಿಯೋಸ್ಫೊಗೆ ಋಣಿಯಾಗಿದ್ದಾರೆ. ಅರಿಸ್ಟಾಕ‍ಸ್ : ಪ್ರ.ಶ.ಪೂ.ಸು.೩೧೦-೨೫೦. ಗ್ರೀಸ್ ದೇಶದ (ಸೇಮೋಸ್ನನ್) ಖಗೋಳಶಾಸ್ತ್ಜ್ಜ ಜ್ಞ್ ಅಧ‍ಗೋಳಾಕಾರದ ನೆರಳುಗಡಿಯಾರವನ್ನು (ಸನ್ ಡಯಲ್) ರೂಪಿಸಿದ ಸೂಯ‍ನ ಸುತ್ತಲೂ ಭೂಮಿ ಪರಿಭ್ರಮಿಸುತ್ತಿದೆ ಎಂಬುದನ್ನು ಸ್ವೀಕರಿಸಿದವರಲ್ಲಿ ಮೊದಲಿಗ. ಸೂಯ‍ ಮತ್ತು ಚಂದ್ರ ಇವುಗಳ ದೂರ ಮತ್ತು ಗಾತ್ರಗಳನ್ನು ಅಳೆದ. ಒಂದು ವಷ‍ದ ಅವಧಿ ೩೬೫೧/೪ ದಿವಸಗಳೆಂಬುದು ಕೇವಲ ಸರಿಸುಮಾರಾದ ಅವಧಿಯೆಂಬುದಾಗಿ ತಿಳಿಸಿ, ಇದಕ್ಕೆ ಒಂದು ದಿವಸದ ೧/೧೬೨೩ ರಷ್ಟನ್ನು ಸೇರಿಸಬೇಕೆಂಬುದಾಗಿಯೂ ತಿಳಿಸಿಕೊಟ್ಟ ಖಗೋಳವಿಜ್ಜಾನದಲ್ಲಿ ಗಮನಾಹ‍ ಲೆಕ್ಕಾಚಾರಗಳನ್ನು ಮಾಡಿದ. ತನ್ನ ಜೀವಿತಾವಧಿಯಲ್ಲಿ ಸಾಕಷ್ಟು ಅವಹೇಳನಕ್ಕೆ ಗಮನಾಹ‍ ಲೆಕ್ಕಚಾರಗಳನ್ನು ಮಾಡಿದ. ತನ್ನ ಜೀವಿತಾವಧಿಯಲ್ಲಿ ಸಾಕಷ್ಟು ಅವಹೇಳನಕ್ಕೆ ಒಳಗಾದ. ಅನೇಕ ಶತಮಾನಗಳ ತರುವಾಯ ಆತನ ಪರಿಕಲ್ಪನೆಗಳಿಗೆ ಸೂಕ್ತ ಗೌರವ ಸಿಕ್ಕಿತು. ಆರಿಸ್ಟಿಪಸ್ : ಪ್ರ.ಶ.ಪೂ. ೪೩೦-೩೦೦.. ಸಿರೀನಿನ ಪ್ರಾಚೀನ ಗ್ರೀಕ್ ದಾ‌ಶ‍ನಿಕ. ಆದ್ದರಿಂದಲೇ ಇವನ ದಶ‍ನಕ್ಕೆ ಸಿರಿನೇಯಿಕ್ ದಶ‍ನ ಎಂದು ಹೆಸರಾಯಿತು. ಸಾಕ್ರಟೀಸನ ಶಿಷ್ಯ ಸಿಸಿಲಿಯ ದೊರೆ ಡಯೋನಿಯಸ್ ನ ಆಸ್ಥಾನದಲ್ಲಿ ಸ್ವಲ್ಪಕಾಲ ಇದ್ದು, ತನ್ನ ವೃದ್ಧಾಪ್ಯದಲ್ಲಿ ಸಿರೀನಿಗೆ ಹಿಂದಿರುಗಿದ. ಸಾಕ್ರಟೀಸನ ಸಂತುಷ್ಟಿವಾದವನ್ನು ವಿಷಯಸುಖವಾದವನ್ನಾಗಿ ಪರಿವತಿ‍ಸಿದ. ಪ್ರಾಪಂಚಿಕ ಸುಖವನ್ನು ಗಳಿಸುವುದೇ ಜೀವನದ ಗುರಿ. ಕ್ಷಣಿಕವಾದರೂ ಸುಖವೇ ನಮ್ಮ ವ್ಯವಹಾರಗಳೆಲ್ಲದರ ಉದ್ದೇಶ. ಇಷ್ಟಪ್ರಾಪ್ತಿ, ಅನಿಷ್ಟ ನಿವೃತ್ತಿ-ಇವೇ ಜೀವನವೆಲ್ಲದರ ವ್ಯಾಪಕಧಮ‍. ನಿಜವಾದ ಜ್ಞಾನವೆಲ್ಲ ಇಂದ್ರಿಯಜನ್ಯ. ಸತ್ಯವೆಂಬುದೆಲ್ಲ ವೈಯಕ್ತಿಕ, ನಿರಪೇಕ್ಷ, ಸತ್ಯ ಅಸಾಧ್ಯ - ಇದು ಅವನ ತತ್ತ್ವ, ಫ್ಲೇಟೊ ಮತ್ತು ಸೆನಫನ್ ಇವನನ್ನು ಖಂಡಿಸಿದ್ದಾರೆ. ಆರುಣಿ : ಆರುಣ ಋಷಿಯ ಮಗ, ಉದ್ದಾಲಕನೆಂದೂ ಹೆಸರು, ಆಪೋದಧೌಮ್ಯನೆಂಬ ಮಹಷಿ‍ಯ ಶಿಷ್ಯನಾಗಿದ್ದಾಗ, ಗದ್ದೆಗೆ ಹರಿಯುತ್ತಿದ್ದ ನೀರನ್ನು ಅಡ್ಡಗಟ್ಟಲು ತಾನೇ ಮಲಗಿ ನೀರನ್ನು ಕಟ್ಟಿ, ಗುರು ಹುಡುಕಿಕೊಂಡು ಬಂದು ಕರೆದಾಗ ನೀರಿನಿಂದ ಎದ್ದನಾಗಿ ಇವರನಿಗೆ ಉದ್ದಾಲಕನೆಂದು ಹೆಸರು. ಕುಶಿಕಪುತ್ರಿ ಇವನ ಹೆಂಡತಿ. ನಚಿಕೇತನೂ ಶ್ವೇತಕೇತುವೂ ಇವನ ಮಕ್ಕಳು ಕಪೋಳಮುನಿಯ ಹೆಂಡತಿ ಸುಜಾತಾ ಮಗಳು. ಬ್ರಹ್ಮಜ್ಞಾನಿಯಾದ ಅಷ್ಟಾವಕ್ರನೆಂಬ ನೆಂಟ, ಛಾಂದೋಗ್ಯ ಉಪನಿಷತ್ತಿನಲ್ಲಿ ಈ ಉದ್ದಾಲಕ ಅರುಣಿಯೇ ಆಚಾಯ‍ವಾಗಿ ಕಾಣಿಸಿಕೊಳ್ಳುತ್ತಾನೆ. ಆರನೆಯ ಅಧ್ಯಾಯದಲ್ಲಿ ಇವನ ಉಪದೇಶ ಬರುತ್ತದೆ. ಗುರುವಿನ ಬಳಿ ಓದಿ ಗವ‍ದಿಂದ ಹಿಂದಿರುಗಿಇದ ತನ್ನ ಮಗ ಶ್ವೇತಕೇತುವಿಗೆ ಆತ್ಮಾ ತತ್ತ್ವಮಸಿ ಎನ್ನುವ ಬೋಧೆಯನ್ನು ಮಾಡಿ ಅವನನ್ನು ದಾರಿಗೆ ತರುತ್ತಾನೆ. ಉದ್ದಾಲಕ ವಿವರಿಸಿದ ಆತ್ಮತತ್ತ್ವೇ ವೇದಾಂತದ ಮುಖ್ಯ ಪ್ರಕ್ರಿಯೆಯಾಗಿ ಪರಿಣಮಿಸಿದೆ (ನೋಡಿ -- ಉದ್ದಾಲಕ). ಆರೆಂಜ್ ಫ್ರೀಸ್ಟೇಟ್ : ದಕ್ಷಿಣ ಆಪ್ರಿಕದ ಮಧ್ಯಭಾಘದದಲ್ಲಿರುವ ಒಂದು ಪ್ರಾಂತ್ಯ. ದಕ್ಷಿಣಕ್ಕೆ ಆರೆಂಜ್ ನದಿ, ಉತ್ತರಕ್ಕೆ ಅದರ ಉಪನದಿಯಾದ ವಾಲ್ ನದಿ, ಪ್ರಾಂತ್ಯದ ಎಲ್ಲೆಗಳು ೧೮೪೮೦೫೪ರವರೆಗೆ ಬ್ರಿಟಿಷ್ ಆಡಳಿತಕ್ಕೊಳಪಟ್ಟಿತ್ತು. ೧೮೫೪ರಲ್ಲಿ ಅರೆಂಜ್ ಫ್ರೀಸ್ಟೇಟ್ ಆಗಿ ಅಸ್ತಿತ್ವಕ್ಕೆ ಬಂತು. ೧೯೯೫ರಲ್ಲಿ ಇದನ್ನು ಫ್ರೀಸ್ಟೇಟ್ ಎಂದು ಕರೆಯಲಾಯಿತು. ವಿಸ್ತ್ರೀಣ: ೧೨೯, ೧೫೨ ಚ.ಕಿ.ಮೀ. ರಾಜಧಾನಿ ಬ್ಲೋಯೇಂಫಾಂಟೀನ್ : ಜನಸಂಖ್ಯೆ : ೩೩೩, ೭೬೯ (೧೯೯೬) ಫ್ರೀಸ್ಟೇಟ್ ನ ಜನರಲ್ಲಿ ಬಹುಪಾಲು ನಗರವಾಸಿಗಳು. ++