ಪುಟ:Mysore-University-Encyclopaedia-Vol-1-Part-3.pdf/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೇಲೆ ಈತ ಬರೆದ ಸಾಹಿತ್ಯ ಆಗಲೇ ಚರ್ಚಾಸ್ಪದವಾಗಿದ್ದು ಇವನ ಅನಂತರ ತಮ್ಮ ಪ್ರಾಶಸ್ತ್ಯ ಕಳೆದುಕೊಂಡವು. ಆದರೆ ಇವನ ಸಾಹಿತ್ಯ ವಿಮರ್ಶೆ ಮತ್ತು ಕೆಲವು ಕವನಗಳು ಇಂದೂ ಕೂಡ ಪುರಸ್ಕಾರಯೋಗ್ಯವಾಗಿವೆ. ಮ್ಯಾಥ್ಯೂ ಅರ್ನಲ್ಡ ಸಾಹಿತ್ಯಕ್ಕೆ ಸಲ್ಲಿಸದ ಸೇವೆಗಾಗಿ ಗ್ಲಾಡ್ ಸ್ಟನ್ ಮಂತ್ರಿಮಂಡಲದಿಂದ ವರ್ಷಕ್ಕೆ 250 ಪೌಂಡುಗಳಂತೆ ವಿಶ್ರಾಂತಿ ವೇತನ ಪಡೆದ(1883).1886 ರಲ್ಲಿ ಉದ್ಯೋಗದಿಂದ ನಿವೃತನಾಗಿ 1888ರಲ್ಲಿ ಹೃದಯರೋಗದಿಂದ ನಿಧನ ಹೊಂದಿದ. ಅರ್ನಲ್ಡನ ಮೆರಪಿ ನಾಟಕದ ಬಗ್ಗೆ ಒಂದು ಮಾತು. ಮೆರಪಿಯ ಗಂಡನಾದ ಮೆಸಿನಿಯಾ ಅರಸನನ್ನು ಕೊಂದು ಅವಳನ್ನು ರಾಜಕೀಯ ಕಾರಣಗಳಿಗಾಗಿ ಮದುವೆಯಾಗಲು ಪ್ರಯತ್ನಿಸಿದ ಫಾಲಿಫಾನ್ ಟೀಸ್ ನ ಮೇಲೆ ಮೆರಪಿಯ ಮಗ ಮುಯ್ಯಿ ತೀರಿಸಿದುದು ನಾಟಕದ ವಸ್ತು.ನಾಟಕದಲ್ಲಿ ಸತ್ತ್ವವಿಲ್ಲ. ಇಲ್ಲಿಅರ್ನಲ್ಡ ಮೇಳಗೀತೆಗಳಿಗೆ ಪ್ರಾಸರಹಿತ ಪದ್ಯವನ್ನು ಬಳಸಿದ್ದಾನೆ. ಈ ಗೀತೆಗಳನ್ನು ಅರ್ನಲ್ಡ ಬಹು ಎಚ್ಚರಿಕೆಯಿಂದ ರಚಿಸಿದ. ಇವು ಗ್ರೀಕ್ ಮೇಳಗೀತದಲಯದ ಪರಿಣಾಮವನ್ನೇ ಉಂಟು ಮಾಡುವುದೆಂದು ಅರ್ನಲ್ಡ ಹೇಳಿದ್ದರೂ ಇವು ನೀರಸವಾಗಿಯೇ ಉಳಿದಿವೆ. ಈ ಕೃತಿಗೆ ಅರ್ನಲ್ಡ ಸೇರಿಸಿದ ಮುನ್ನುಡಿಯಲ್ಲಿ ಗ್ರೀಕ್ ದರುಂತನಾಟಕದ ಕಲೆಯ ಸ್ಪಷ್ಟಸುಂದರ ನಿರೂಪಣೆ ಇದೆ. ನಾಟಕ ಕಲೆ ಅರ್ನಲ್ಡನಿಗೆ ಸಿದ್ಧಿಸಲಿಲ್ಲ. ಮ್ಯಾಥ್ಯೂ ಅರ್ನಲ್ಡ ಯುಗವು ವಿಜ್ಞಾನವು ಗೆದ್ದುಕೊಂಡ ಹೊಸ ತಿಳಿವಳಿಕೆಯಿಂದ ಜನರ ಧಾರ್ಮಿಕ ನಂಬಿಕೆಗಳು ಅಲ್ಲಾಡಿ, ಮನಸ್ಸುಗಳು ತತ್ತರಿಸಿದ ಕಾಲ. ಟೆನಿಸನ್, ಬ್ರೌನಿಂಗ್ ಮತ್ತು ಅರ್ನಲ್ಡರು ಈ ಅನುಭವಕ್ಕೆ ವಿಭಿನ್ನ ರೀತಿಗಳಲ್ಲಿ ಸ್ಪಂದಿಸಿದರು.ಅರ್ನಲ್ಡ ಆಜ್ಞೇಯುತಾವಾದಿ(ಅಗ್ನಾಸ್ಟಿಕ್) ಆದ; ದೇವರಿದ್ದಾನೆಯೋ ಇಲ್ಲವೋ ಮನುಷ್ಯನು ನಿರ್ಧರಿಸಲಾರ ಎನ್ನುವುದು ಇವನ ನಿಲುವು.ಈ ಆಧ್ಯಾತ್ಮಿಕ ತುಮುಲದಿಂದಾಗಿ ಇವನ ಕಾವ್ಯದಲ್ಲಿ ವಿಷಾದವಿದೆ. ಇವನು ನೆಮ್ಮದಿಯನ್ನು ಕಂಡುಕೊಂಡದ್ದು ಪ್ರೇಮದಲ್ಲಿ,ಸ್ನೇಹದಲ್ಲಿ. ಇಂದಿಗೂ ಜನಪ್ರಿಯವಾಗಿರುವ ಇವನ ಡೊವರ್ ಬಂಕ್ ಕವನದಲ್ಲಿ ಇದನ್ನು ಕಾಣಬಹುದು. ಥರ್ಸಿಸ್ ಮತ್ತು ದಿ ಸ್ಕಾಲರ್ ಜಿಪ್ಸಿ ಇವನ ಸ್ನೇಹಿತ ಆರ್ಥರ್ ಹ್ಯೂಕ್ಲಫ್ ತೀರಿಕೊಂಡಾಗ ಬರೆದ ಕವನಗಳು ಇವನ ಶ್ರೇಷ್ಠ ಕವನಗಳಲ್ಲಿ ಸೇರಿವೆ. ಥರ್ಸಿಸ್ ಒಂದು ಪ್ಯಾಸ್ಟರಲ್ ಕವನ. ಇವನ ರಗ್ ಬಿ ಚ್ಯಾಪೆಲ್ ತಂದೆಯ ನೆನಪಿಗಾಗಿ ಬರೆದದ್ದು, ಮತ್ತೊಂದು ಶ್ರೇಷ್ಠ ಕವನ. ಇವನ ಸಾಧನೆ ಮಿತವಾದರೂ ಹುಟ್ಟುಕವಿ ಎನ್ನುವುದರಲ್ಲಿ ಅನುಮಾನವಿಲ್ಲ. ಸೊಹ್ರಾಬ್ ಅಂಡ್ ರುಸ್ತುಂ ಕವನ ಇವನ ಕಥೆ ಹೇಳುವ ಕೌಶಲಕ್ಕೆ ಸಾಕ್ಷಿ. ವಿ.ಸೀ. ಅರು ಕನ್ನಡದಲ್ಲಿ ಬರೆದ ಇದೇ ಹೆಸರಿನ ನಾಟಕದಿಂದ ಇವರ ಕಥೆ ಕನ್ನಡಿಗರಿಗೆ ಪರಿಚಿತ ಇವನ ಕಾವ್ಯದಲ್ಲಿ ವಿಷಾದ ಸ್ಥಾಯಿಯಾದರೂ ಇದು ನಿರಾಶೆಯ ಕಾವ್ಯವಲ್ಲ. ಇಂಗ್ಲಿಷ್ ಸಾಹಿತ್ಯ ವಿಮರ್ಶೆಯ ಕ್ಷೇತ್ರದಲ್ಲಿ ಮ್ಯಾಥ್ಯೂ ಅರ್ನಲ್ಡ ಬಹುದೊಡ್ಡ ಹೆಸರು.17 ನೆಯ ಶತಮಾನದ ಡ್ರೈಡನ್ ನಂತೆ ಇವನೂ ಕವಿ ಮತ್ತು ವಿಮರ್ಶಕ .ಇವನ ಕಾಲಕ್ಕೆ ಇಂಗ್ಲಿಷ್ ಸಾಹಿತ್ಯ ವಿಮರ್ಶೆ ಬಹಳ ನೀರಸವಾಗಿ ಪ್ರಾಂತೀಯತೆಯಿಂದ ಕೂಡಿತ್ತು. ಅದಕ್ಕೆ ಸಾರ್ವತ್ರಿಕ ಹಾಗೂ ಸಾರ್ವಸಾಹಿತ್ಯ ರೂಪವನ್ನು ಕೊಟ್ಟವನು ಇವನೇ. ಒಂದು ಸಾಹಿತ್ಯವನ್ನು ಕುರಿತು ವಿಮರ್ಶಿಸಬೇಕಾದರೆ ಪ್ರಪಂಚದ ಇನ್ನಿತರ ಸಾಹಿತ್ಯಗಳನ್ನೂ ಅಭ್ಯಸಿಸಿರಬೇಕು ಎಂದು ಇವನ ಪ್ರತಿಪಾದನೆ. ಆಧುನಿಕ ವಿಮರ್ಶೆ ಹುಟ್ಟಿದ್ದೇ ಅರ್ನಲ್ಡನನಿಂದ ಎಂದು ಹೇಳಬಹುದು. ಆಗಿನ ಕಾಲಕ್ಕೆ ಅರ್ನಲ್ಡ ತನ್ನ ಕವನ ಸಂಕಲನಗಳಿಗೆ ಬರೆದಿರುವ ಪೀಠಿಕಾರೂಪವಾದ ಬರೆಹಗಳು ಇಂಗ್ಲಿಷ್ ಸಾಹಿತ್ಯ ವಿಮರ್ಶೆಯ ಅತ್ಯುತ್ತಮ ಬರೆವಣಿಗೆಗಳಲ್ಲಿ ಶ್ರೇಷ್ಠವೆಂದು ಪರಿಗಣಿತವಾಗಿವೆ. ಕಾವ್ಯ ವಸ್ತುವನ್ನು ಅವಲಂಬಿಸಿದೆಯೇ ವಿನಾ ಆಕಾರ ಅಲಂಕಾರಗಳನ್ನಲ್ಲ ಎಂಬುದನ್ನು ಅರ್ನಲ್ಡ ತನ್ನ ಈ ಬರೆಹಗಳಲ್ಲಿ ಸಾಧಿಸಿದ್ದಾನೆ. ಕಾವ್ಯದಲ್ಲಿ ಮಹೋನ್ನತಿಯಿಂದ ಕೂಡಿದ ಮಹಾಶೈಲಿ ಇರಬೇಕೆಂದು ಹೇಳಿದ್ದಾನೆ. ಈ ಎರಡು ವಿಷಯಗಳಲ್ಲೂ ಗ್ರೀಕರು ಇಂಗ್ಲಿಷಿನವರಂತೆ ಮುಂದುವರೆದಿದ್ದಾರೆಂದು ಇವನ ಅಭಿಪ್ರಾಯ. ಅರ್ನಲ್ಡನ ವಿಮರ್ಶೆಗೆ, ನಿಷ್ಕೃಷ್ಟತೆ, ಸಂಯಮ, ವಾಕ್ ಶಕ್ತಿ ಇವುಗಳ ಕೊರತೆ ಇದ್ದುದರಿಂದ ಅದು ಇವನ ವಿಮರ್ಶಾಸಿದ್ಧಿ ಹಾಗೂ ಕಾವ್ಯರಚನೆಗೆ ಮಿತಿಯನ್ನುಂಟುಮಾಡಿತು. 1857ರಲ್ಲಿ ಅರ್ನಲ್ಡನ ಆಕ್ಸಪರ್ಡ್ ವಿಶ್ವವಿದ್ಯಾಲಯದಲ್ಲಿ ಕಾವ್ಯಭಾಗಕ್ಕೆ ಪ್ರಾಧ್ಯಾಪಕನಾಗಿ ಚುನಾಯಿಸಲ್ಪಟ್ಟ ಮೇಲೆ ಹತ್ತುವರ್ಷಗಳ ಕಾಲ ತನ್ನ ಹಿಂದಿನ ಸ್ಕೂಲ್ ಇನ್ಸಪೆಕ್ಟರ್ ಕೆಲಸದ ಜೊತೆಗೆ ಪ್ರಾಧ್ಯಾಪಕನಾಗಿಯೂ ಸೇವೆ ಸಲ್ಲಿಸಿದ.ಈತ ವಿಶ್ವವಿದ್ಯಾಲಯದ ತನ್ನ ಭಾಷಣಗಳಲ್ಲಿ ಇಂಗ್ಲಿಷ್ ಸಾಹಿತ್ಯ ವಿಮರ್ಶೆಯ ಕುಂದುಕೊರತೆಗಳನ್ನು ಹೋಗಲಾಡಿಸಲು ಫ್ರಾನ್ಸ ದೇಶದ ವಿಮರ್ಶಕ ರೀತಿ ನೀತಿಗಳ ಜೊತೆಗೆ ತನ್ನದೇ ಆದ ವೈಶಿಷ್ಟ್ಯಗಳನ್ನು ಹೊಂದಿಸಿದ್ದಾನೆ. ಈ ಭಾಷಣಗಳಲ್ಲಿ ಕೆಲವು ಇವನ ಈ ಎರಡು ಪುಸ್ತಕಗಳಲ್ಲಿ ಕಂಡುಬರುತ್ತವೆ. 1 ಆನ್ ಟ್ರಾನ್ಸಲೇಂಟಿಂಗ್ ಹೋಮರ್(1861);2. ಆನ್ ದಿ ಸ್ಟಡಿ ಆಫ್ ಕೆಲ್ಟಿಕ್ ಲಿಟರೇಚರ್(1867).ಇಂಗ್ಲಿಷ್ ಸಾಹಿತ್ಯದಲ್ಲೇ ಮೊಟ್ಟ ಮೊದಲ ಬಾರಿಗೆ ಪುರಾತನ ಹಾಗೂ ಆರ್ವಾಚೀನ ಸಾಹಿತ್ಯಕ್ಕೆ ತೀರ ಹತ್ತಿರದ ಸಂಬಂಧವನ್ನು ಈ ಪುಸ್ತಕಗಳಲ್ಲಿ ತರಲಾಯಿತು.ಕಾವ್ಯದಲ್ಲಿ ಅತ್ಯಗತ್ಯವಾದುದೂ ಅನಿವಾರ್ಯವಾದುದೂ ಏನು, ಕಾವ್ಯದ ಹಿರಿಮೆ ಏತರಲ್ಲಿದೆ ಎಂಬ ಸಮಸ್ಯೆಗಳಿಗೆ ಈ ಬರೆಹಗಳಲ್ಲಿ ವಿವರಣೆಯನ್ನು ನೀಡಿದ್ದಾನೆ. ವಿಮರ್ಶೆಯ ಧ್ಯೇಯವನ್ನು ಕುರಿತು ಹೇಳುತ್ತಾ ವಿಶ್ವದಲ್ಲೇ ನಿರ್ಲಿಪ್ತವಾದ ಯತ್ನದಿಂದ ಕೂಡಿದ ಅತ್ಯುತ್ತಮವಾದ ಆಲೋಚನೆಗಳೂ ಉಕ್ತಿಗಳೂ ಶ್ರೇಷ್ಠ ವಿಮರ್ಶೆಯ ಅಡಿಗಲ್ಲುಗಳೆಂದು ಅರ್ನಲ್ಡ ಪರಿಗಣಿಸಿದ್ದಾನೆ. ಜಗತ್ತಿನಲ್ಲಿ ಚಿಂತನೆ ಮತ್ತು ಅಭಿವ್ಯಕ್ತಿಯಲ್ಲಿ ಅತಿ ಶ್ರೇಷ್ಠವಾದುದರ ಅನ್ವೇಷಣೆಯೇ ಸಾಹಿತ್ಯ ವಿಮರ್ಶೆ ಎಂದ.ಅರ್ನಲ್ಡ ಪಾಶ್ಚಾತ್ಯ ಪ್ರಪಂಚದ ಎಲ್ಲ ಅತ್ಯುತ್ತಮ ಕಾವ್ಯಗಳನ್ನೂ ನಿಷ್ಪಕ್ಷಪಾತವಾಗಿ ಅವಲೋಕಿಸಿ, ಆಲೋಚಿಸಿ ಆ ಮೂಲಕ ಶ್ರೇಷ್ಠ ಕಾವ್ಯಗಳ ಮೂಲತ್ತತ್ವಗಳನ್ನು ಗುರುತಿಸಿದ್ದಾನಲ್ಲದೆ ಕಾವ್ಯದ ಅಭಿವ್ಯಕ್ತಿ ಅಥವಾ ಶೈಲಿಯ ವಿವಿಧ ವಿಧಾನಗಳನ್ನು ಸಾಹಿತ್ಯ ಚಿಂತಕರಿಗೆ ತೋರಿಸಿಕೊಟ್ಟಿದ್ದಾನೆ. 1865ರಲ್ಲಿ ತನ್ನ ವಿಮರ್ಶಾತ್ಮಕ ಕೃತಿಗಳಲ್ಲೆಲ್ಲ ಮುಖ್ಯವಾದ ಪ್ರಬಂಧಗಳನ್ನು ಪುಸ್ತಕರೂಪವಾಗಿ ಪ್ರಕಟಿಸಿದ ಇವುಗಳಲ್ಲಿ ಕೆಲವು ಪ್ರಬಂಧಗಳು ಆಕ್ಸ ಫರ್ಡಿನಲ್ಲಿ ಪ್ರಾಧ್ಯಾಪಕನಾಗಿ ಮಾಡಿದ ಭಾಷಣಗಳ ಆಧಾರದ ಮೇಲೆ ರಚಿತವಾದವು.1867ರಿಂದ 1877ರವರೆಗೆ ಇವನ ಮನಸ್ಸು ಧಾರ್ಮಿಕ,ರಾಜಕೀಯ ಮತ್ತು ಸಾಮಾಜಿಕ ನ್ಯೂನತೆಗಳನ್ನು ತೊಡೆದುಹಾಕುವ ಪ್ರಯತ್ನಕ್ಕೆ ತಿರುಗಿತ್ತು. ಈ ಸಮಯದಲ್ಲಿ ಹೊರಬಂದ ಕೃತಿಗಳೆಂದರೆ ಕಲ್ಚರ್ ಅಂಡ್ ಅನರ್ಕಿ, ಸೇಂಟ್ ಪಾಲ್ ಅಂಡ್ ಪ್ರಾಟೆಸ್ಟಾಂಟಿಸಮ್,ಲಿಟರೇಚರ್ ಅಂಡ್ ಡಾಗ್ಮ, ಗಾಡ್ ಅಂಡ್ ದಿ ಬೈಬಲ್, ಲಾಸ್ಟ ಎಸ್ಸೇಸ್ ಆನ್ ಚರ್ಚ್ ಅಂಡ್ ರಿಲಿಜನ್, ಫ್ರೆಂಡ್ ಷಿಪ್ಸ ಗಾರ್ಲೆಂಡ್ಸ ಅಂಡ್ ಐರಿಷ್ ಎಸ್ಸೇಸ್. ಕೊನೆಯದಾಗಿ ಎರಡನೆಯ ವಿಮರ್ಶೆಯ ಪ್ರಬಂಧಗಳ ಸಂಕಲನ ಪ್ರಕಟವಾಯಿತು(ಎಸ್ಸೇಸ್ ಇನ್ ಕ್ರಿಟಿಸಿಸಮ್-ಸೆಕೆಂಡ್ ಸೀರೀಸ್). ಈ ಸಂಕಲನದಲ್ಲಿ ಅಮೆರಿಕಕ್ಕೆ ಪ್ರವಾಸ ಕೈಗೊಂಡು ಅಲ್ಲಿ 1883-84ರಲ್ಲಿ ಮಾಡಿದ ಭಾಷಣಗಳು ಸೇರಿವೆ. ಮ್ಯಾಥ್ಯೂ ಅರ್ನಲ್ಡ ವಿಮರ್ಶೆ ದೋಷರಹಿತವೇನಲ್ಲ. ರೊಮ್ಯಾಂಟಿಕ್ ಕವಿಗಳ ಬಗ್ಗೆ ಪೂರ್ವಗ್ರಹದಿಂದ ದುರಭಿಮಾನವುಳ್ಳವನಾಗಿ ,ಷೆಲ್ಲಿಯ ವಿಷಯದಲ್ಲಿ ಬರೆಯುತ್ತ ಷೆಲ್ಲಿಗೆ ತುಂಬ ಅನ್ಯಾಯ ಮಾಡಿದ್ದಾನೆ. ಷೆಲ್ಲಿ ತನ್ನ ಕವಿತೆಯಲ್ಲೂ ಮತ್ತು ಜೀವನದಲ್ಲೂ ನಿಷ್ಟರಿಣಾಮಕಾರಿಯಾದ ಗಂಧರ್ವ,ಶೂನ್ಯದಲ್ಲಿ ವೃಥಾ ತನ್ನ ರೆಕ್ಕೆಗಳನ್ನು ಬಡಿಯುತ್ತ ಹಾರುತ್ತಿದ್ದಾನೆ ಎಂದು ಖಂಡಿಸಿದದಾನೆ. ಈ ವಿಮರ್ಶೆ ಅಸಮರ್ಪಕವೆಂದು ಅನೇಕರು ಮನಗಂಡಿದ್ದಾರ.ಅರ್ನಲ್ಡನ ವಿಮರ್ಶೆ ತನ್ನ ತತ್ತ್ವದಲ್ಲಿ ಹಾಗೂ ಬೆಲೆಗಟ್ಟುವ ಕೆಲಸದಲ್ಲಿರಚನಾತ್ಮಕವಾಗಿಯೇ ಇದೆ. ಇವನಿಗೆ ಧಾರ್ಮಿಕ ದೃಷ್ಠಿ ಅಧಿಕವಾಗಿ ಇದ್ದುದರಿಂದ ಕಾವ್ಯದ ಬೆಲೆ ನಿರ್ಣಯಿಸುವ ಕೆಲಸದಲ್ಲಿ ಇವನದೇ ಆದ ವಿಶಿಷ್ಟತೆಯನ್ನು ಕಾಣಬಹುದು.ಉದಾಹರಣೆಗಾಗಿ ಕಾವ್ಯಕ್ಕೆ ತನ್ನದೇ ಆದ ಲಕ್ಷಣವನ್ನು ಹೇಗೆ ನಿರೂಪಿಸಿದ್ದಾನೆ. ಕಾವ್ಯಸತ್ಯ ಮತ್ತು ಕಾವ್ಯಸೌಂದರ್ಯದ ನಿಯಮಾನುಸಾರವಾಗಿ ರೂಪುಗೊಳ್ಳುವ ಜೀವನವಿಮರ್ಶೆ ಕಾವ್ಯ. ಈ ಸಾರೋಕ್ತಿ ಸಾಧಾರಣವಾಗಿ ಸಾಹಿತ್ಯ ಜೀವನವಿಮರ್ಶೆಯಾಗಿದೆ ಎಂಬ ಉಕ್ತಿಯನ್ನು ಇನ್ನೂ ಬೆಳಗಿಸಿದೆ. ಕಾವ್ಯದ ಗುಣಗಳಲ್ಲಿ ಗಾಢಗಾಂಛೀರ್ಯ( ಹೈ ಸೀರಿಯಸ್ ನೆಸ್) ಇರಬೇಕೆಂದು ಅರ್ನಲ್ಡ ಹೇಳಿದ್ದಾನೆ. ಅದಲ್ಲದೆ ಸ್ಟಡಿ ಆಫ್ ಪೊಯಟ್ರಿ ಎಂಬ ತನ್ನ ಪ್ರಬಂಧದಲ್ಲಿ ಚಾರಿತ್ರಿಕ ವಿಮರ್ಶೆಗೆ ಪ್ರಾಧಾನ್ಯ ಕೊಟ್ಟಿಲ್ಲ. ಒಬ್ಬ ಕವಿಯ ಕೃತಿಯನ್ನು ಕುರಿತು ವಿಮರ್ಶಿಸುವಾಗ ಅಂಥವೇ ಕಾವ್ಯಗಳು ಇರುವುದಾದರೆ ಅವುಗಳೊಡನೆ ಹೋಲಿಸಿ ವಿಸ್ತೃತವಾಗಿಯೂ ಗಂಭೀರವಾಗಿಯೂ ವಿಮರ್ಶಿಸುವುದು ಚಾರಿತ್ರಿಕ ವಿಮರ್ಶೆ ಎನಿಸಿಕೊಳ್ಳವುದು.ಹೀಗೆ ಚಾರಿತ್ರಿಕವಾಗಿ ವಿಮರ್ಶೆ ಮಾಡುವುದರಿಂದ ಕಾವ್ಯದ ವಿಷಯವನ್ನೇ ಮರೆತು ಅನಾವಶ್ಯಕವಾದ ಇತರ ವಿಷಯಗಳಿಗೆ ಪ್ರಾಧಾನ್ಯ ಕೊಡುತ್ತೇವೆ. ಎಂಬುದು ಅವನ ವಾದ . ಇದು ವಿವಾದಾಸ್ಪದವಾದ ಸಂಗತಿ. ಅರ್ನಲ್ಡ ಕಾವ್ಯಕ್ಕೆ ಬಹು ಎತ್ತರದ ಸ್ಥಾನವನ್ನು ನೀಡಿದ.ವಿಜ್ಞಾನವು ಮುಂದುವರೆದು ಧರ್ಮದ ಪ್ರಭಾವ ದುರ್ಬಲವಾದಂತೆ ಕಾವ್ಯವು ಅದರ ಸ್ಥಾನವನ್ನು ಪಡೆಯುತ್ತದೆ ಎನ್ನು ಅಭಿಪ್ರಾಯವನ್ನು ಪ್ರತಿಪಾದಿಸಿದ.'ಬೇರಾವುದೂ ಮಾಡದ ರೀತಿಯಲ್ಲಿ ಶ್ರೇಷ್ಠ