ಪುಟ:Mysore-University-Encyclopaedia-Vol-2-Part-1.pdf/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಆಳ್ವಾರ್

ಅಂದಿನ ಆಳುಪರ ಶಾಸನಗಳಲ್ಲಿ ಕಂಡುಬರುವುದನ್ನು ಇಲ್ಲಿ ಪ್ರಸ್ತಾಪಿಸಬಹುದಾಗಿದೆ. 10ರಿಂದ 14ನೆಯ ಶತಮಾನಗಳವರೆಗಿನ ಮಧ್ಯಯುಗೀನ ಆಳುಪರ ಶಾಸನಗಳೆಲ್ಲ ಶಿಲಾಶಾಸನಗಳು. ಅವುಗಳ ಭಾಷೆ ಸಂಸ್ಕೃತ ಅಥವ ಕನ್ನಡ. ಲಿಪಿ ಕನ್ನಡ ಅಥವ ಮಲಯಾಳಂ. ಅವ್ಗಳಲ್ಲಿ ಹೆಚ್ಚಿನವು ತೇದಿಯ ವಿವರಗಳನ್ನೊಳಗೊಂಡಿರುವ ಕಾರಣ ಆ ಕಾಲದ ತುಳು ನಾಡಿನ ಇತಿಹಾಸವನ್ನು ಅರಿತುಕೊಳ್ಳುವಲ್ಲಿ ಸಂಶಯಗಳಿಗು ಊಹಾಪೋಹಗಳಿಗೂ ಅವಕಾಶ ತೀರ ಕಡಿಮೆ. ಆಳುಪ ಅರಸರು ಕುಂದ ವರ್ಮನ ಆಳ್ವಿಕೆಯಲ್ಲಿ ಬರೆಯಲಾದ ಕದಿರಿನ ಲೋಕೇಶ್ವರ ಪ್ರತಿಮಾಶಾಸನ 968 ತೇದಿಯ ವಿವರಗಳನ್ನೊಳಗೊಂಡಿರುವ ಆಳುಪ ಶಾಸನಗಳಲ್ಲಿ ಪ್ರಾಚೀನತಮದ್ದು. ಮಧ್ಯಯುಗೀನ ಆಳುಪರ ಶಾಸನಗಳಲ್ಲಿ ತಿಂಗಳು, ತಿಥಿಗಳನ್ನು ನೀಡುವಲ್ಲಿ ಹೆಚ್ಚಾಗಿ ಸೌರಮಾನ ಪದ್ಧತಿಯನ್ನು ಬಳಸಲಾಗಿದೆ. ಹಲವು ಶಾಸನಗಳ ಪಾಠಗಳು ಸುದೀರ್ಗವಿದ್ದು ಆ ಕಾಲದ ತುಳುನಾಡಿನ ರಾಜಕೀಯ, ಸಾಮಾಜಿಕ, ಧಾರ್ಮಿಕ ಮತ್ತು ಆರ್ಥಿಕ ಇತಿಹಾಸದ ಮೇಲೆ ಸಾಕಷ್ಟು ಬೆಳಕು ಬೀರುತ್ತದೆ. ಇಲ್ಲಿಯವರೆಗೆ ದೊರೆತಿರುವಂತೆ 1932ರಲ್ಲಿ ಬರೆಯಲಾದ 2ನೆಯ ವೀರಪಾಂಡ್ಯದೇವನ ಮೂಡಬಿದಿರೆ ಶಾಸನವೆ ಆಳುಪರ ಕೊನೆಯ ಶಾಸನ. ಈ ಕಾಲದಲ್ಲಿ ಆಳೂಪರು ಹೊರದಡಿಸಿದ ಕೆಲವು ನಾಣ್ಯ ಗಳೂ ದೊರೆಕಿವೆ. ಇವು ವೃತ್ತಾಕಾರದ ತಾಮ್ರನಾಣ್ಯಗಳು.ಮೀನಮಿಯಥುನದ ಚಿತ್ರ ಮತ್ತು ಶ್ರೀ ಪಾಂಡ್ಯ ಧನಂಜಯ ಎಂಬ ಬರಹ ಕನ್ನಡ ಜಿಲ್ಲೆಯ ಆಸುಪಾಸಿನಲ್ಲಿವೆ ಸಿಂಹಳದಲ್ಲಿ ಸಹ ದೊರಕಿದೆ .

                                                                                                                                                                                    ವಾಸ್ತುಶಿಲ್ಪ:ಆಳುಪರ ಆಳ್ವಿಕೆಯಲ್ಲಿಯೇ ಕಟ್ಟಲಾದುವೆಂದು ಶಾಸನಾಧರಗಳ ಸಹಿತವಾಗಿ ಹೇಳಬಹುದಾದ ಕಟಡಗಳು ಬೆಳಕಿಗೆ ಬಂದಿಲ್ಲ . ಆದರೆ ಈ ಕಾಲದಲ್ಲಿ ಕಣಶಿಲೆಯ ಮತ್ತು ಜಂಬುಕಲ್ಲಿನ ಹಲವು ದೇವಾಲಯಗಳು ರಚಿತವಾಗಿರಬೇಕೆಂದು ಸಾಂದರ್ಭಿಕ ಸಾಕ್ಶ್ಯಗಳಿಂದ ಊಹಿಸಬಹುದಾಗಿದೆ .  ಇವುಗಳ ಬಗ್ಗೆಯೂ ಪ್ರಕಟವಾಗೈರುವ ವಿವರಗಳು ಕಡಿಮೆ .ಬಾರಖಕೂರಿನ ಪಂಚಲಿಂಗೇಶ್ವರ (ಮಾರ್ಕಂಡೇಶ್ವರ) ದೇವಾಲಯ 8ನೆಯ ಶತಮಾನದ್ದು ಎನ್ನಲಾಗಿದೆ. ಇದು ಗಜಪೃಷಾವಿಕಾರದ ತಳವಿನ್ಯಾಸವಿರುವ ಕಟ್ಟಡ. ಬ್ರಹ್ಮಾವರದ ಮಹಾಲಿಂಗೇಶ್ವರ ಸು. 9ನೆಯ ಶತಮಾನ, ಕೋಟೇಶ್ವರದ ಕೋಟೆನಾಥ (ಸು. 9-10ನೆಯ ಶತಮಾನ), ಕಡಂದಲೆಯ ಸುಬ್ರಮಣ್ಯ (ಸು 9-10ನೆಯ ಶತಮಾನ). ಸುರತ್ಕಲ್ಲಿನ ಸದಾಶಿವ (ಸು. 9-10ನೆಯ ಶತಮಾನ) ಈ  ದೇವಾಲಯಗಳು ಗಜಪೃಶಾವಿಕರದವೆ. ಈ ಕಾಲದ ದೇವಾಲಯಗಳು ಸಾಮಾನ್ಯವಾಗಿ ಅಡ್ಡಪಟ್ಟಿಕೆಗಳ ಅಧಿಶಾವಿನ, ಅದರ ಮೇಲೆ ಅರೆಕಂಬಗಳು ಮತ್ತು ಕೋಶಗಳಿಂದ ಅಲಂಕೃತವಾದ ಭಿತ್ತಿ ಇರುತ್ತವೆ. ಆ ಕಾಲದ ಛಾವಣಿಗಳು ಉಳಿದುಬಂದಂತಿಲ್ಲ. ದೇವಾಲಯಗಳಲ್ಲಿ ಗೋಪುರಗಳಾಗಲಿ ಶಿಖರಗಳಾಗಲಿ ಇದ್ದ ಸೂಚನೆಗಳು ದೊರಕುವುದಿಲ್ಲ. ದೇವಾಲಯಗಳ ಭಿತ್ತಿ ಅಲಂಕರಣ, ಚೂಳ ಮತ್ತು ಗಂಗ ರೀತಿಯವುಗಳಿಗೆ ಹೊಂದಿಕೊಳ್ಳುತ್ತದೆ. 11ನೆಯ ಶತಮಾನದ ಸೇನೇಶ್ವರದ ಗುಡಿಯಲ್ಲಿ ಮಾತ್ರ ಅಲಂಕರಣ ಸರಳವಾಗಿದ್ದರೂ ಕದಂಬ ನಾಗರ ರೀತಿಯ ಶಿಖರಗಳಿವವೆ. ಆಳುಪರ ಕಾಲದ ಶಿಲ್ಪ ಶಿಲಿಯನ್ನು ಪರಿಶೀಲಿಸಿದರೆ ಹೆಚ್ಚಿನ ಅಂಶಗಳಲ್ಲಿ ಆ ಶೈಲಿಯನ್ನೆ ಹೋಲುತ್ತದೆ. ಕೆಲವೊಮ್ಮೆ ಪಲ್ಲವ ,ಚೊಳ ಶಿಲ್ಪಶೈಲಿಯೂ ಕಂಡುಬರುತ್ತದೆ .ಇದಕ್ಕೆ ಕಾರಣ  ಪಲ್ಲವ,ಚೊಳ ರಜ್ಯಗಳೊಡನಿದ್ದ ಸಾಂಸ್ಕೃತಿಕ ಸಂಪರ್ಕ . ಆದುದರಿಂದ ಆಳುಪರ ಶೀಲ್ಪಶೈಲಿಯನ್ನು ಪ್ರತ್ಯೇಕವದ ಒಂದು ವಾರ್ಗಕ್ಕೆ ಅನ್ವಯಿಸುವುದು ಕಷ್ಟ  .ಆಳುಪ ಕಾಲದ ಬಾದಾಮಿ ಕಲ್ಯಾಣ ಚಾಳುಕ್ಯ ಮತ್ತು ಹೊಯ್ಸಳ ಶೈಲಿಗಳಿಗೆ ಈ ಕೆಳಗಿನ ದುಷ್ಟಾಂತಗಳನ್ನೀಯಬಹುದು. ಬಾದಾಮಿ ಚಾಲುಕ್ಯ ಶೈಲಿ: ಶ್ರೀವಳ್ಳಿಯ ಕಡಿಯಾಳಿ ಮಹಿಷಮರ್ಧಿನಿ, ಬೆಳ್ಮಣ್ಣಿನ ಮಹಿಷಮರ್ಧಿನಿ, ಮುಂಡಿಕೂರಿನ ಮಹಿಷಮರ್ಧಿನಿ, ಮೂಡುಬಿದ್ರೆಯ ಮಹಿಷಮರ್ಧಿನಿ. ಕಲ್ಯಾಣ ಚಾಳುಕ್ಯಶೈಲಿ; ಬೈಂದೂರು ಸೇನೇಶ್ವರ ದೇವಾಲಯದ ಅಪ್ರತಿಮ ಮೂರ್ತಿಗಳು, ನೀಳಾವಾರದ ದುರ್ಗಾಭಗವತಿ, ಬಾರಕೂರಿನ ಕೋಟೆಕೇರಿ ವೇಣುಗೋಪಾಲಕೃಷ್ಣ ಕುಂಭಾಶಿಯ ಕೇಶವ. ಹೊಯ್ಸಳ ಶೈಲಿ: ಕಾರ್ಕಳದ ಅನಂತಶಯನ, ಮಂಗಳೂರಿನ ಅತ್ತವರದ ಚಕ್ರಪಾಣಿ ಗೋಪಾಲಕೃಷ್ಣ, ತೊದ್ದಳ್ಳಿ ವಾಸುದೇವ. ಚೂಳರ ಶೈಲಿ ಉಡುಪಿ ಚಂದ್ರೇಶ್ವರ ದೇವಾಲಯದ ಪಂಚಲೋಹದ ಸದಾಶಿವ, ಪೇರಂಪಳ್ಳಿಯ ಪಂಚಲೋಹದ ಸದಾಶಿವ, ಉಡುಪಿ ಶೀಕೃಷ್ಣಮಠದ ನಾರಾಯಣ, ಕದ್ರಿ ಲೋಕೇಶ್ವರ.

ಶಿಲಾಶಿಲ್ಪಗಳಲ್ಲಿ ಹೆಚ್ಚಿನವೆಲ್ಲ ಕಗ್ಗಲ್ಲಿನಂದ ಮಾಡಾಲ್ಪಟ್ಟವು. ಬಳಪದ ಕಲ್ಲನ್ನೂ ಉಪಯೋಗಿಸಿದೆ. ಕೆಲವೊಮ್ಮೆ ನಸು ಕೆಂಪುಶಿಲೆಯನ್ನು ಬಳಸಿಕೊಂಡಿದೆ. ಈ ಶಿಲ್ಪವನ್ನು ಕೊರೆಯುವಲ್ಲಿ ಇತರ ಭಾಗಗಳಿಂದ ಸ್ಥಪತಿಗಳನ್ನು ಕರೆಸಿಕೊಂಡಿರಬಹುದು. ಸ್ಥಳೀಯ ಸ್ಥಪತಿಗಳು ಇತರ ಕಡೆ ಹೋಗಿ ತರಬೇತಿಯನ್ನು ಪಡೆದಿರಬಹುದು.

ಆಳ್ವಾರ್: ರಾಜಸ್ತಾನದಲ್ಲಿನ ಒಂದು ಪಟ್ಟಣ. ದೆಹಲಿ ಮತ್ತು ಜಯಪುರಗಳ ನಡುವೆ ಇದೆ. ದೆಹಲಿಯಿಂದ 164ಕಿಮೀ. ಜಯಪುರದಿಂದ 143ಕಿಮೀ. ಇಲ್ಲಿಯ ಅರಮನೆ, ವಸ್ತುಸಂಗ್ರಹಾಲಯ ಪ್ರಸಿದ್ಧಿ ಪಡೆದಿವೆ. ಶಿಕಾರಿಗಳಿಗೆ ಹೆಸರಾಗಿತ್ತು. ವಿವಿಧ ಪದ್ಧಗಳಲ್ಲಿ ನಿರ್ಮಿಸಿರುವ, ಕಟ್ಟಡಗಳ ಸಮೂಹವಾಗಿರುವ ನಗರದ ಅರಮನೆಯನ್ನು ಸಾಗರ ಎಂಬ ಕೆರೆಯೊಂದು ಬೆಟ್ಟದ ಬುಡದಿಂದ ಪ್ರತ್ಯೇಕಿಸುತ್ತದೆ. ಅರಮನೆಯ ಒಂದು ಭಾಗವಾಗಿರುವ ವಸ್ತುಸಂಗ್ರಹಾಲ್ಯದಲ್ಲಿ ಹಸ್ತಪ್ರತಿಗಳು, ವರ್ಣಚಿತ್ರಗಳು ತುಂಬಿವೆ. ಹಿಂದಿ, ಸಂಸ್ಕೃತ ಮತ್ತು ಪರ್ಷಿಯನ್ ಭಾಶೆಯ 7,000 ಹಸ್ತಪ್ರತಿಗಳಲ್ಲಿ 24 ಮೀ. ಉದ್ದವಾಗಿರುವ ಸಚಿತ್ರ ಭಾಗವತದ ಸುರಳಿ ಎದ್ದು ಕಾಣುವ ಕೃತಿ. ಅರಬ್ಬಿ ಭಾಷೆಯ ಕುರಾನಿನ ಹಳೆಯ ಒಂದು ಪ್ರತಿಯಿದೆ. ಅದರ ಪರ್ಸಿ ಅನುವಾದವನ್ನು ಕೆಂಪು ಅಕ್ಷರ್ರಗಳಲ್ಲಿ ಬರೆಯಲಾಗಿದೆ. ಷೇಕ್ ಸಾದಿ ಬರೆದ ಗುಲಿಸ್ತಾನ ಕಾವ್ಯದ ಸಚಿತ್ರ ಪ್ರತಿಯಿದೆ.

ಶಸ್ತ್ರಾಲಯದಲ್ಲಿ ಅಕ್ಬರ್, ಶಹಜಹಾನ್, ದಾರಾ ಶಿಕೋ, ನದಿರ್ ಷಾ ಮತ್ತು ಔರಂಗಾಜೇಬ್ ಮೊದಲಾದವರು ಉಪಯೋಗಿಸುತ್ತಿದ್ದ ಶಸ್ತ್ರಗಳಿವೆ. ಇಲ್ಲಿಗೆ 13 ಕಿಮೀ ದೂರದಲ್ಲಿ ನೈರುತ್ಯದ ಕಡೆ ನಿಸರ್ಗ ರಮಣೀಯವಾದ ಶಿಲಿಶೇಢ ಸರೋವರದ ಸುತ್ತ ವಿಪುಲವಾದ ಕಾಡುಗಳು ಅಲ್ಲಲ್ಲಿ ನೆರಳಿರುವ ತಂಗುದಾಣಗಳು ಇವೆ. ಅಣೆಕಟ್ಟೊಂದರಿಂದ ನಿರ್ಮಾಣವಾದ ಈ ಸರೋವರದ ವಿಸ್ತೀರ್ಣ 10 ಚಕಿಮೀ. ಸರೋವರದ ಮೇಲಿರುವ ಸುಂದರವಾದ ಅರಮನೆ ಪ್ರಶಾಂತ ಸ್ಥಳದಲ್ಲಿದ್ದು ರಜಾದಿನಗಳನ್ನು