ಪುಟ:Mysore-University-Encyclopaedia-Vol-2-Part-2.pdf/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆರ್ಥಿಕ ವ್ಯವಸ್ಥೆ: ಇಸ್ರಾಲಿನ ಆರ್ಥಿಕ ಚಟುವಟಿಕೆ ಪ್ರಾರಂಭಗಿಂದಲೂ ಎರಡು ಸಮಸ್ಯೆಗಳನ್ನು ಎದುರಿಸುತ್ತ ಬಂದಿದೆ. ಮೊದಲನೆಯದು ಸತತವಾದ ಯುದ್ದಭಯ. ಎರಡನೆಯದು ಹೆಚ್ಚುತ್ತಿರುವ ವಲಸೆಗಾರರು. ಇಂತಹ ಕಠೀಣ ಪರಿಸ್ಥಿತಿಯಲ್ಲೂ ಈ ಸಣ್ಣ ರಾಶ್ಟ್ರ ಸಾಧಿಸುತ್ತಿರುವ ಆರ್ಥಿಕ ಪ್ರಗತಿ ಗಮನಾರ್ಹ. ಕೃಶಿ, ಗಣಿಗಾರಿಕೆ ಹಾಗೂ ಕೈಗಾರಿಕೆಗಳು. ದೇಶದ ವಿಸ್ತೀರ್ಣದ ಶೇ.೨೦ ಭಾಗ ಭೂಮಿಯಲ್ಲಿ ಬೇಸಾಯ ಕಂದುಬರುತ್ತಿದೆ. ಇಲ್ಲಿನ ಮುಖ್ಯ ಬೆಳೆಗಳೆಂದರೆ ಗೊದಿ, ಬಾರ್ಲಿ, ಹತ್ತಿ, ಹೊಗೆಸೊಪ್ಪು, ಬಿಟ್ ರೂಟ್, ನೆಲಗಡಲೆ ಮತ್ತು ಕಿತ್ತಳೆ ವಿವಿಧ ತರಕಾರಿ ಮತ್ತು ಹೂವು. ಜಫ್ಟ್ ಕಿತ್ತಳೆ ಮತ್ತು ತರಕಾರಿಗಳು ಇಲ್ಲಿನ ರಫ್ತಾಗುವ ಪ್ರಮುಖ ಸರಕಾಗಿದೆ. ಕಬ್ಬಿಣ, ಪೊಟಾಶ್, ಬ್ರೊಮೈನ್, ಅಭ್ರಕ, ಗಂಧಕ, ಕಾಸ್ಟಿಕ್ ಸೊಡಾ, ತಾಮ್ರಾ, ಜಿಪ್ಸಮ್ ಮತ್ತು ಪೆಟ್ರೊಲ್ ಇಲ್ಲಿನ ಮುಖ್ಯ ಖನಿಜಗಳು. ಇಲ್ಲಿ ದೊರೆಯುವ ಪೆಟ್ರೊಲ್ ಸ್ಥಳಿಯ ಬಳಕೆಗೆ ಸಾಲದೆ ಅಮದು ಮಾಡಿಕೊಳ್ಳಲಾಗುವುದು.ಇಸ್ರೇಲ್ ನ್ಯೆಖತ್ಯ ಏಶ್ಯದಲ್ಲಿ ಕೈಗಾರಿಯಲ್ಲಿ ಅಭಿವೃಧ್ದಿ ಹೊಂದಿರುವ ಒಂದು ರಾಶ್ಟ್ರವಾಗಿದೆ. ಟೆಲ್ ಅವಿವ್ ಮತ್ತು ಹ್ಯೆಫ ಇಸ್ರೇಲ್ ಪ್ರಮುಖ ಕ್ಯೆಗಾರಿಕೆ ಕೇಂದ್ರಗಳು. ಪ್ರಮುಖ ಕೈಗಾರಿಕೆಗಳೆಂದರೆ ಜವಳಿ, ಆಹಾರ ಸಂಸ್ಕರಣೆ, ರಾಸಾಯನಿಕ, ರಸಗೊಬ್ಬರ, ಯಂತ್ರೋಪಕರಣಗಲಳು. ವಿದ್ಯುತ್ ಉಪಕರಣಗಳು, ಆಭರಣಗಳು ಮತ್ತು ವಜ್ರದ ಕತ್ತರಿ ಸಾಣಿ.

  ಉತ್ತಮ ಸಾರಿಗೆ ವ್ಯವಸ್ಥೆ ಹೊಂದಿದೆ. ರೈಲು ಮತ್ತು ರಸ್ತೆ ಸಾರಿಗೆ ಸಾಕಶ್ಟು ಕಂಡುಬರುತ್ತದೆ. ರೈಲು ಮಾರ್ಗಗಳು ಕರಾವಳಿ ಪ್ರದೇಶವನ್ನು ಒಳನಾಡು ಪ್ರದೇಶಗಳ ಜೊತೆಗೆ ಸಂಪರ್ಕಿಸುತ್ತವೆ. ಪ್ರಮುಖ ರೈಲು ನಿಲ್ದಾಣಗಳೆಂದರೆ ಜೆರುಸಲೆಮ್, ಹೈಫ ಮತ್ತು ಟೆಲ್ ಅವಿವ್. ಜಿರುಸಲೆಂ ರಸ್ತೆ ಮಾರ್ಗದ ಕೇಂದ್ರ ಇಸ್ರೇಲ್ ನಲ್ಲಿ ಒಳನಾಡು ಜಲ ಸಾರಿಗೆ ಕಂಡುಬರುವುದಿಲ್ಲ. ಆದರೆ ವಿದೇಶಿ ಜಲಮಾರ್ಗದ ಸಂಪರ್ಕ ಹೊಂದಿದೆ. ಮುಖ್ಯಬಂದರುಗಳೆಂದರೆ ಹೈಫ, ಟೆಲ್ ಅವಿವ್, ಜಾಫ಼ಾ ಮತ್ತು ಯಾಲೆಟ್. ಟೆಲ್ ಅವಿವ್ ನ ಸಮೀಪದ ಬೆನ್-ಗುರಿಯನ್ ರಶ್ಟ್ರದ ಪರಮುಖ ಅಂತಾರಾಶ್ಟ್ರಿಯ ವಿಮಾನ ನಿಲ್ದಾಣ.

ಇಸ್ರೇಲ್ ನಲ್ಲಿ ರಫ಼್ತಿಗಿಂತ ಆಮದು ಮೊತ್ತ ಹೆಚ್ಚು ಇರುತ್ತದೆ. ಇದು ರಫ಼್ತು ಮಾಡುವ ಪ್ರಮುಖ ಸರಕುಗಳೆಂದರೆ ಕತ್ತರಿಸಿದ ವಜ್ರ, ಯಂತ್ರಪಕರಣಗಳು, ಹುಳಿ ಹಣ್ಣುಗಳು ಮತ್ತು ಜವಳಿ. ಇದರ ಪ್ರಮುಖ ಆಮದುಗಳೆಂದರೆ ಕಚ್ಚವಜ್ರ, ಕಬ್ಬಿಣ, ಸಿಮೆಂಟ್, ಉಕ್ಕು, ಚ್ಚರ್ಮ, ಪೆಟ್ರೊಲಿಯಂ ಉತ್ಪನ್ನಗಳು ಮತ್ತು ಸೈನಿಕ ಸಾಮಾಗ್ರಿಗಳು. ಇದು ಹೆಚ್ಚು ಐರೋಪ್ಯ ಆರ್ಥಿಕ ಸಮುದಾಯ ಮತ್ತು ಅಮೇರಿಕ ಸಂಯುಕ್ತ ಸಂಸ್ತಾನಗಳೊಡನೆ ವಿಶೆಶ ವ್ಯಾಪಾರ ಸಂಪರ್ಕ ಹೊಂದಿದೆ. ಇಲ್ಲಿ ಜನಸಂಖ್ಯೆ ಅಸಮವಾಗಿದೆ. ಶೇ. ೯೦ ಜನರು ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ ಮೆಡಿಟರೇನಿಯನ್ ತೀರ ಪ್ರದೇಶದಲ್ಲಿ ಹೆಚ್ಚು ಜನಸಂಖ್ಯೆ ಹೊಂದಿದೆ. ಇಲ್ಲಿನ ಜನಸಂಖ್ಯೆಯ ೮೩ ಭಾಗ ಯಹೂದಿ ಜನಾಂಗದವರು

 ಇಸ್ರೇಲ್ ನ ಇತಿಹಾಸ: ಈ ದೇಶದ ಪ್ರಾಕ್ತನಶಾಸ್ತ್ರದ ಶಾಸ್ತ್ರೀಯವಾದ ಅಭ್ಯಾಸ ಆರಂಭವಾದದ್ದು ೧೯ನೇಯ ಶತಮಾನದ ಮಧ್ಯಭಾಗದಲ್ಲಿ. ಆಗಿನಿಂದ ಈಗಿನ ವರೆಗೂ ಅನೇಕ ಪ್ರಾಕ್ತನಸಂಶೂಧನ ಸಂಸ್ಥೆಗಳೂ ಪ್ರಾಕ್ತನ ಶಾಸ್ತ್ರಗ್ನರೂ ತೂರಿದ ವಿಶೆಶ ಆಸ್ಥೆಯ ಫಲವಾಗಿ ಹಲವಾರು ಉತ್ಖನನಗಳೂ ಸಂಶೊಧನೆಗಳೂ ನಡೆದು ಈಗ ಇಲ್ಲಿನ ಪ್ರಾಚೀನ ಚರಿತ್ರೆಯ ಅನೇಕ ವಿವರಗಳು ತಿಳಿದು ಬಂದಿವೆ.

ಹಳೆಯ ಶಿಲಾಯುಗಕ್ಕೆ ಸೇರಿದ ಅಬೆವಿಲಿಯನ್ ಮತ್ತು ಅಶೂಲಿಅನ್ ಹಂತದ ಕೈಗೊದಲಿಗಳು ಇಲ್ಲಿ ದೊರಕಿರುವ ಅವಶೆಶಗಳು ಅತ್ಯಂತ ಪ್ರಾಚೀನ. ಇವು ಸು.೨೫೦೦೦೦ವರ್ಶಗಳಿಂದಲೂ ಮೊದಲಿನವೆಂಬುದು ಅಭಿಪ್ರಾಯ. ಚಕ್ಕೆ ಕಲ್ಲಿನಾಯುಧಗಳ ತಯೆಶಿಯನ್ ಮತ್ತು ಮುಸ್ಟೀರಿಯನ್ ಸಂಸ್ಕೃತಿಗಳ ಅವಶೆಶಗಳನ್ನು ಮೌಂಟ್ ಕಾರ್ಮೆಲ್ ಪರ್ವತದ ಗುಹೆಗಳು ಡರೋಥಿ ಗ್ಯಾರಡ್ ಎಂಬ ವಿದೂಶಿ ಕಂಡು ಹಿಡಿದಳು. ಪಶ್ಚಾದುಶೋ ಮಾದರಿಯ ಮತ್ತು ಅಧುನಿಕ ಮಾನವ ವರ್ಗದ ಮಿಶ್ರಸಂತತಿಯ ಜನ ಈ ಸಂಸ್ಕೃತಿಯ ಕರ್ತೃಗಳಾಗಿದ್ದರೆಂಬುದು ಅವರ ಆಸ್ತಿಗಳ ಅವಶೇಶಗಳಿಂದ ಗೊತ್ತಾಗಿದೆ. ಹಳೆಯ ಶ್ಲಾಯುಗದ ಅಂತ್ಯಶಿಲಾಯುಗಕ್ಕೆ ಸು. ೫೦೦೦೦ ವರ್ಶಗಳ ಆರಿಗ್ನೇಶಿಯನ್ ಸಂಸ್ಕೃತಿಯ ಅವಶೆಶಗಳೂ ಆನಂತರ ಸುಮಾರು ೨೦೦೦೦ ವರ್ಶಗಳ ಆಟ್ಲಿಟಿಯನ್ ಸಂಸ್ಕೃತಿಯ ಅವಶೆಶಗಳು ಇಲ್ಲಿ ದೊರಕಿವೆ.