ಪುಟ:Mysore-University-Encyclopaedia-Vol-2-Part-2.pdf/೧೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಕರೆಯಲಾಗಿದೆ. ಎಲಮೈಟ್ ಜನರ ಭಾಷೆಯಲ್ಲಿ ಹಲವಾರು ಹಂತಗಳನ್ನು ಗುರುತಿಸಲಾಗಿದೆ. ಕೊನೆಯ ಹಂತವೇ ಅಕೇಮೆನಿಡ್ ಸಾಮ್ರಾಜ್ಯದಲ್ಲಿ ಬಳಕೆಯಲ್ಲಿತ್ತು. ಪ್ರಾಯಶಃ ಇದು ಇಸ್ಲಾಂ ಧರ್ಮ ಹರಡುವವರೆಗೂ ಉಳಿದುಕೊಂಡಿರಬಹುದು. ಮಧ್ಯಕಾಲೀನ ಅರಬ್ ಇತಿಹಾಸಕಾರನಾದ ಇಬನ್-ಅಲ್-ನದಿಮ್ ಇರಾನಿನ ಫಹ್ಲವಿ (ಪಹ್ಲವಿ), ದರಿ, ಕುಜ಼ಿ, ಪರ್ಷಿಯ ಮತ್ತು ಸುರ್ಯನಿ ಮುಂತಾದವು ಇರಾನಿನ ಭಾಷೆಗಳಗಿದ್ದವು ಎಂದಿದ್ದಾನೆ. ಇಬನ್ ಮೊಕ್ಯುಫ್ಘ್ ನು ಪರ್ಷಿಯ ದೇಶದ ಅರಸರ ಖಾಸಗೀ ಭಾಷೆ ಖುಜ್ ಆಗಿತ್ತೆಂದು ಉಲ್ಲೇಖಿಸಿದ್ದಾನೆ. ಖುಜ್ ಈಳಂ ಪದದ ತಧ್ಬವ ಆಗಿದೆ.

ಈ ಸಂಸ್ಕೃತಿ ನೆಲೆಗಳ ವಿಸ್ತಾರವನ್ನು ನೋಡಿದರೆ ಇವುಗಳ ಜನಸಮುದಾಯಗಳು ಭೌಗೋಳಿಕವಾಗಿ ಇರಾನಿನ ಪ್ರಥಮ ಸಾಮ್ರಾಜ್ಯದ ಮೂಲ ಪುರುಷರೆನ್ನಬಹುದೆಂದು ಆಧುನಿಕ ಇತಿಹಾಸಕಾರರ ಅಭಿಪ್ರಾಯ. ಗ್ರೀಕ್ ಮತ್ತು ಲ್ಯಾಟಿನ್ ಗ್ರಂಥಗಳಲ್ಲಿ ಎಲಮೈಟಿನ ಉಲ್ಲೇಖವಿದೆ. ಡಾನಿಯಲ್ ಪಾಟ್ಟ್ಸ್ ಪ್ರಕಾರ ಹೊಸ ಒಡಂಬಡಿಕೆಯಲ್ಲಿ ಎಲಮೈಟ್ ಭಾಷೆ ಪೆಂಟಿಕೋಸ್ಟ್ ನಲ್ಲಿ ಮಾತನಾಡುತ್ತಿದ್ದ ಭಾಷೆಗಳಲ್ಲಿ ಒಂದಾಗಿತ್ತು ಮತ್ತು ನೆಸ್ಟೊರಿಯನ್ ಕ್ರೈಸ್ತರ ದಾಖಲೆಗಳಲ್ಲಿ ಈಳಂ ಹೆಸರು 1300ರಲ್ಲಿ ಇದ್ದುದ್ದನ್ನು ಉಲ್ಲೇಖಿಸಿದೆ.

(ಎ.ಎಸ್.;ಎನ್.ಎಲ್.)