ಪುಟ:Mysore-University-Encyclopaedia-Vol-2-Part-2.pdf/೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಚ್ಚಿಪ್ಪು ಮೀನು ೩೦೩

ಸಾಮಾನ್ಯ ಮತ್ತೂ ಹಾಗೇ ಉಳಿದು ಬಿಡುತ್ತವೆ. ವಾಸನೆ, ರುಚಿ, ನೋಟಗಳ ಭ್ರಮೆಗಳೂ ಸಾಮಾನ್ಯವೇ. ಕೆಲವೇಳೆ ತಾನು ಯೋಚಿಸಿದ್ದನ್ನೇ ಹೇಳುವುತ್ತಿರುವನೋ ಕಿವಿಗೆ ಕೇಳಿದ್ದನ್ನೇ ಹೇಳುತ್ತಿರುವನೋ ಗೊತ್ತೇ ಆಗದು. ಕೋಣೆಯಲ್ಲಿ ತಾನೊಬ್ಬನೇ ಇದ್ದರೂ ತನ್ನನ್ನು ಎಲ್ಲರೂ ಅಣಕಿಸುತ್ತಿರುವಂತೆ ಭಾವಿಸುತ್ತಾನೆ. ಮನಸ್ಸಿನಲ್ಲಿ ಇರುವುದೆಲ್ಲ ಕಿವಿಯಲ್ಲಿ ಕೇಳಿದಂತಾಗಿ, ಕೊಲ್ಲು, ಹೋಡೆ, ಚಚ್ಚು ಎಂದು ಕೇಳಿದಾಗ ಹಾಗೆ ಮಾಡಿಬಿಡಬಹುದು. ತಾನೊಬ್ಬನೇ ಹಾಗೆಲ್ಲ ಮಾತಾಡಿಕೊಳ್ಳುತ್ತಿರಬಹುದು. ಮೈಯಲ್ಲಿ ಏನೇನೋ ಆಗುತ್ತಿದೆ. ಏನೋ ಬೆಳೆಯುತ್ತಿದೆ ಎನ್ನಬಹುದು. ಮುಖ ದೊಡ್ಡದಾಗಿ ಹಿಗ್ಗಿದಂತೆ, ಕೈಯಲ್ಲಿ ಮಾತ್ರ ರಕ್ತದ ಹರಿವು ನಿಂತಹಾಗೆ. ಹೊಟ್ಟೆಯಲ್ಲಿ ದಪ್ಪ ಗಡ್ಡೆ ಎದ್ದಂತೆ, ಮೈ ಬಣ್ಣವೆಲ್ಲ ಬದಲಾದಂತೆ, ಮಿದುಳಿಗೆ ಮಾತ್ರ ರಕ್ತ ಹರಿದಂತೆ ರೋಗಿಗೆ ಭ್ರಮೆ ಆಗಬಹುದು. ತನ್ನ ತಲೆಯಲ್ಲಿ ಬಂದು ಹೋಗುವುದನ್ನೆಲ್ಲ ಬಾಯಲ್ಲಿ ಆಡುತ್ತಿರಬಹುದು.

ನಡೆವಳಿಕೆ, ನಡತೆ: ದಡುಕುತನ, ಅಡ್ಡಾದಿಡ್ಡಿ ಓಡಾಟಗಳು ಇಚ್ಚಿತ್ತ ರೋಗಿಯಲ್ಲಿ ಬೇಗನೆ ತೋರುತ್ತವೆ. ಕನ್ನಡಿ ನೋಡಿಕೊಂಡು ಕಪಿಮುಖ ಮಾಡಿಕೊಂಡು ಅಣಕಿಸುತ್ತ ಆಮೇಲೂ ಹಾಗೇ ಇದ್ದುಬಿಡಬಹುದು. ಅಲ್ಲದೆ, ಕೈ, ಕಾಲು, ಮೋರೆ, ಕೆನ್ನೆ, ಮೂತಿ, ಕಣ್ಣು, ಮೈ ಹುಚ್ಚುಚ್ಚಾಗಿ ಆಡಿಸುತ್ತಿರಬಹುದು. ಬರುಬರುತ್ತ ಇವು ತಗ್ಗುತ್ತವೆ. ಮೇಣತೆರನ ಅಂಗದಿರವಿನ್ನಲ್ಲಿ (ಪ್ಲೆಕ್ಸಿಬಿಲಿಟಾಸ್ ಸೀರಿಯ) ಅಲುಗಾಡದೆ ಬೊಂಬೆಯಂತೆ, ಹೇಗಿರಿಸಿದ್ದರೆ ಅದೇ ಭಂಗಿಯಲ್ಲಿ ಎಷ್ಟೋ ಹೊತ್ತು ಉಳಿದಿದ್ದು, ಇದ್ದಕ್ಕಿದ್ದ ಹಾಗೇ ಚೂಟಿಯಾಗಿ ಕುಣಿದು ಕುಪ್ಪಳಿಸಬಹುದು. ಕೊಳಕು, ಹೇಸಿಗೆ ಗೊತ್ತಾಗದಿರಬಹುದು. ಬಹುಮಟ್ಟಿಗೆ ರೋಗಿಯನ್ನು ಹೇಗಿರಿಸಿದ್ದರೆ ಹಾಗೇ ಬಿದ್ದಿರುತ್ತಾನೆ. ಇಚ್ಚಿತ್ತ ರೋಗಿಯ ನಡೆವಳಿಕೆ ಕೇಂದ್ರದ ನರ ಮಂಡಲದ ಅನೇಕ ರೋಗಗಳನ್ನು ಹೋಲುತ್ತದೆ. ಇವನ್ನು ಬಿಡಿಸಿ ತಿಳಿಯುವುದು ಪರಿಣತ ವೈದ್ಯನಿಗೆ ಮಾತ್ರ ಸಾಧ್ಯ.

ವ್ಯಕ್ತಿತ್ವ: ಕೆಲವು ವರ್ಷಗಳು ಕಳೆದ ಮೇಲೆ, ಇಚ್ಚಿತ್ತದ ಯಾವ ಖಚಿತ ಲಕ್ಷಣಗಳೂ ಹೊರಗಾಣದಿರುವಾಗ, ರೋಗಿಯ ವ್ಯಕ್ತಿತ್ವ ಬದಲಾಗದಿರುವುದನ್ನು ರೋಗಿಯ ಹತ್ತಿರದವರಿಂದ ತಿಳಿಯಬೇಕು. ವಿಚಿತ್ರವಾಗಿ ಏನು ಮಾಡುವನೆಂಬುದೇ ಗೊತ್ತಾಗದೆಂದೂ ಯಾರಲ್ಲೂ ಸೇರದೆ ತನ್ನಷ್ಟಕ್ಕೆ ತಾನು ಇರುವನೆಂದೂ ಹೇಳುವರು. ತಮ್ಮಲ್ಲಿ ಆಗುತ್ತಿರುವ ಬದಲಾವಣೆಗಳು ಕೆಲವು ರೋಗಿಗಳಿಗೆ ಗೊತ್ತಾಗುತ್ತಿದ್ದರೆ, ಇನ್ನು ಹಲವರಿಗೆ ಅವುಗಳ ಅರಿವೇ ಅಷ್ಟಾಗಿರದು. ಒಂದೇ ಬಾರಿ ವಿರುದ್ಧ ವಿಚಾರಗಳು, ಭಾವನೆಗಳು, ಯೋಚನೆಗಳು ಮನದಲ್ಲಿ ಏಳುವುದರಿಂದ ಇಬ್ಬಂದಿಯಾಗಿ ವರ್ತಿಸುತ್ತಾನೆ. ಇದರಿಂದ ಕೆಲಸ ಅಡ್ಡಾದಿಡ್ಡಿ ಆಗುತ್ತದೆ.

ಮೈ ಲಕ್ಷಣಗಳು: ಮೈಯಲ್ಲಿ ಏನೇನೋ ಆಗುವುದೆಂದು ಹೇಳುವುದರ ಜೊತೆಗೆ, ಎಳೆಯರಲ್ಲಿ ಕೈಕಾಲು ನೀಲಿಗಟ್ಟಿ ತಣ್ಣಗಿರುವುದು, ಮೈಮೇಲೆ ಅರಳು ದದ್ದುಗಳು (ಎಗ್ಜಾಂತೆಂಸ್) ಊತ ಕಾಣಬಹುದು. ಮೈಜಿಡ್ಡುಸುರಿತ (ಸೆಬೋರಿಯ) ಸಾಮಾನ್ಯ. ಕೆಲವೇಳೆ ಹೆಂಗಸರಲ್ಲಿ ಅಸಹಜವಾಗಿ ಕೂದಲು ಬೆಳೆಯಬಹುದು. ಮೊದಮೊದಲು ಮೈತೂಕ ಇಳಿದು ಆಮೇಲೆ ಬೊಜ್ಜಾಗಬಹುದು. ಮುಟ್ಟು ಕ್ರಮಗೆಡಬಹುದು. ಮೈಕಾವೂ ಏರುಪೇರಾಗಬಹುದು. ಸೊಕ್ಕು (ಸ್ಟೂಪರ್) ಬಲು ಸಾಮಾನ್ಯ.

ಬಗೆಗಳು ಮುಖ್ಯವಾಗಿ ಮೂರು ತೆರನಿವೆ: 1. ಇದ್ದಕ್ಕಿದ್ದಂತೆ ಏಳುವ ಬಿಗುವೇರಿಳಿತದ (ಕೆಟಟೋನಿಕ್) ರೂಪ; 2.ಎಳೆತನದಲ್ಲೆ ಬಂದು ಬೇರೂರುವ ಸರಳ ಹರಯಮನದ (ಹೆಬಿಫ್ರೆನಿಕ್) ರೂಪ; 3. ನಿಧಾನವಾಗಿ ಬಂದು ಭ್ರಮೆಗಳಿರುವ ಪರಚಿತ್ತ ಈ (ಪ್ಯಾರನೋಯಿಕ್) ರೂಪ; ಇವೆಲ್ಲ ಬೇರೆ ಬೇರೆಯಾಗಿ ಕಾಣವು. ಆದ್ದರಿಂದಲೇ, ಯಾವೊಬ್ಬ ರೋಗಿಯ ರೋಗದ ಬಗೆಯ ನಿರ್ಧರಕ್ಕಾಗಿ ಯತ್ನಿಸಬೇಕಿಲ್ಲ. ಚಿಕಿತ್ಸೆಯ ಪರಿಣಾಮಕ್ಕೂ ರೋಗದ ಮುನ್‍ತಿಳಿವಿಗೂ ಈ ಬಗೆಗಳಿಗೂ ಸಂಬಂಧವಿಲ್ಲ.

ಚಿಕಿತ್ಸೆ: ರೋಗಕಾರಣ ಗೊತ್ತಿಲ್ಲದ್ದರಿಂದ ಯಾವೊಂದು ಚಿಕಿತ್ಸೆಯೂ ಖಚಿತವಲ್ಲ. ಪರಿಣತರಿಂದಾದ ತಕ್ಕ ಮನೋರೋಗ ಚಿಕಿತ್ಸೆ, ಒಪ್ಪುವ ವೃತ್ತಿ, ಬಾಳಿನಲ್ಲಿ ಆಸಕ್ತಿ ಹುಟ್ಟಿಸುವುದೇ ಮುಂತಾದವಿಂದ ರೋಗಿಯ ಭಾವನೆ, ನಡೆವಳಿಕೆಗಳನ್ನು ಒಲಿಸಿಕೊಳ್ಳುವಂತೆ ಇರಿಸಲು ನಿಜವಾಗಿ ಯತ್ನಿಸುವುದು ಮುಖ್ಯ. ರೋಗಿಯೂ ಮನಸಾರೆ ಒಪ್ಪಿಕೊಂಡು ನೆರವಾಗಬೇಕು. ರೋಗಿಯ ಮನೋಭಾವಕ್ಕೆ ತಕ್ಕನಾಗಿ ಅವನ ಪರಿಸರದ ಏರ್ಪಾಡು, ಬದಲಾವಣೆಗಳಿಗೂ ಮನವೊಪ್ಪುವ ಕೆಲಸದಲ್ಲಿ ಇರಿಸಲೂ ಅವನ ಒಂದಿಗರು ಅವನನ್ನು ಸರಿಯಾಗಿ ನೋಡಿಕೊಳ್ಳುವಂತೆ ತಿಳಿಸಿಕೊಡಲೂ ಸಮಾಜ ಕಾರ್ಯಕರ್ತನ (ಸೋಷಿಯಲ್ ವರ್ಕರ್) ನೆರವೂ ಬೇಕಾಗಬಹುದು.ಇದ್ದಕ್ಕಿದ್ದಂತೆ ಕೆರಳಿರುವ ರೋಗಿಗೆ ಇವನು ನೆರವಾಗದಿದ್ದರೂ ಬೇರೂರಿದ (ಕ್ರಾನಿಕ್) ರೋಗಿಯನ್ನೂ ಆಸ್ಪತ್ರೆಯಿಂದ ಹಿಂದಿರುಗಿದವನನ್ನೂ ನೋಡಿಕೊಳ್ಳುವಾಗ ನೆರವಾಗುವನು. ಅದಕ್ಕಾಗೇ ಇಚ್ಚಿತ್ತ ರೋಗಿಯನ್ನು ಪೂರ್ತಿ ವಾಸಿಯಾಗಲೆಂದು ಆಸ್ಪತ್ರೆಯಲ್ಲೇ ಹೆಚ್ಚು ಕಾಲ ಇರಿಸಿಕೊಳ್ಳದೆ ಸಾಧ್ಯವಾದಷ್ಟು ಬೇಗನೇ ಕಳುಹಿಸುವುದು ಒಳ್ಳೆಯದು. ಆದರೆ ಮನೆಯಲ್ಲಿನ ಸ್ಥಿತಿ ಚೆನ್ನಾಗಿರಬೇಕು.

ಬೇನೆಯ ತೀವ್ರತೆ, ಸಾಮಾಜಿಕ ತೊಂದರೆಗಳ ಸಂಭವಕ್ಕೆ ತಕ್ಕಂತೆ, ಅಂತೂ ಒಂದು ಮಾನಸಿಕ ಆಸ್ಪತ್ರೆಗೋ ಚಿಕಿತ್ಸಾಲಯಕ್ಕೋ ರೋಗಿಯನ್ನು ಯವುದಾದರೂ ಒಂದು ಹಂತದಲ್ಲಿ ಸೇರಿಸಲೇಬೇಕಾಗುತ್ತದೆ. ಆಸ್ಪತ್ರೆಯಲ್ಲಿ ಬಹುಕಾಲ ಇರಬೇಕಿರುವವರ ಆರೋಗ್ಯವನ್ನು ಜೋಪಾನಿಸಲು ಈಗ ಉದ್ಯೋಗದ ರೋಗಚಿಕಿತ್ಸೆ (ಆಕ್ಯುಷೇಷನಲ್ ತೆರಪಿ), ಆರಾಮ-ಇವಿವೆ. ಇದರಿಂದ ಜನರೊಂದಿಗೆ ರೋಗಿ ಹೊಂದಿಕೊಳ್ಳಲು ನೆರವಾಗಬಹುದು.

ಒಬ್ಬನ ಮನಸ್ಸನ್ನು ಬದಲಿಸಲು ಯೋಚಿಸಬಹುದಾದ ಎಲ್ಲ ವಿಧಾನಗಳನ್ನೂ ಈ ರೋಗದ ಚಿಕಿತ್ಸೆಯಲ್ಲಿ ಮಾಡಿನೋಡಿದ್ದಾಗಿದೆ. ಕೆಲವಂತೂ ಬೇರೆ ಮನೋರೋಗಗಳಲ್ಲಿ ಕೈಗೂಡಿದಂಥವು. ಹೆಚ್ಚು ಪ್ರಾಮಾಣಗಳಲ್ಲಿ ಗುರಾಣಿಕ (ತೈರಾಯ್ಡ್) ಮತ್ತಿತರ ಒಳಸುರಿಕ ಮದ್ದು ತಯಾರಿಕೆಗಳು, ಜನನಾಂಗಗಳ ನಾಟಿಹಾಕಣೆ, ಮೈಯಲ್ಲಿ ಎಲ್ಲಾದರೂ ಕೀವಿನ ನೆಲೆಗಳನ್ನು ಕಿತ್ತುಹಾಕುವಿಕೆ, ಮಲೇರಿಯ ಅಂಟಿಸಿ ಜ್ವರವೇರಿಕೆ, ಮಾನವ ರಸಿಕೆ (ಸೀರಂ), ಮ್ಯಾಂಗನೀಸ್ ಲವಣಗಳು, ಮೈತಣ್ಣಗಾಗಿಸಿಕೆ (ಹೈಪೊತರ್ಮಿಯ), ಎಡಬಿಡದೆ ಮಂಪರಗೊಳಿಕೆ (ನಾರ್ಕೋಸಿಸ್) - ಇವನ್ನೆಲ್ಲ ಕೊಟ್ಟು ಮಾಡಿನೋಡಿದೆ. ಕೆಲವರಿಗಂತೂ ದಿಢೀರನೆ ಸೊಕ್ಕೆ ಬರಿಸಿ ನೋಡಿದೆ. ಇಂಥ ಸೊಕ್ಕೆಗೊಳಿಕ ವಿಧಾನಗಳು ಹಿಂದಿನ ಕಾಲದಲ್ಲಿ ಬೇಕಾದಷ್ಟಿದ್ದವು: ಗಿರ್ರನೆ ಸುತ್ತಿ ತಿರುಗುವ ಕುರ್ಚಿಯಲ್ಲಿ ಕೂರಿಸುವುದು, ಎತ್ತರದಿಂದ ಸರಕ್ಕನೆ ತಳ್ಳುವಿಕೆ, ತಣ್ಣಗೆ ಕೊರೆವ ನೀರಿನಲ್ಲಿ ಅದ್ದುವುದು - ಇತ್ಯಾದಿ. ಇನ್ಸುಲಿನ್ ಇಲ್ಲವೇ ಒಂದು ಸೆಳವು ಬರಿಸುವ ಮದ್ದನ್ನು ಚುಚ್ಚುವುದೇ ಇವಕ್ಕೂ ಹೆಚ್ಚಿಗೆ ಮೈಯಲೆಲ್ಲ ಪರಿಣಾಮಕರವಾಗುವ ಈಚಿನ ವಿಧಾನ. ಕೆಲವು ಕೂರಾದ (ಅಕ್ಯೂಟ್) ಸೊಕ್ಕುಗಳಲ್ಲೂ (ಸ್ಟೂಪರ್ಸ್), ಒಂದಿಷ್ಟು ಮನೋದ್ವೇಗ ಇರುವ ರೋಗಗಳಿಗೆ ಇದರಿಂದ ಒಳ್ಳೆಯದು. ವಿದ್ಯುತ್‍ಸೆಳವಿನ ರೋಗಚಿಕಿತ್ಸೆ (ಎಲೆಕ್ಟ್ರೋಕನ್ವಲ್ಸಿವ್ ತೆರಪಿ) ಇಚ್ಚಿತ್ತ ರೋಗಿಯ ಚಿಕಿತ್ಸೆಯಾಗಿ ಜಾರಿಗೆ ಬಂದರೂ ಈಗ ಸೊಕ್ಕು ಬಿದ್ದಿರುವ, ಕುಂದಿದ ಮನದ ರೋಗಿಗೆ ಮಾತ್ರ ಹಿಡಿಸುತ್ತದೆ.

ಈಚೀಚಿಗೆ ಬಹುಮಟ್ಟಿಗೆ ರೂಢಿ ತಪ್ಪುತ್ತಿರುವ, ಇನ್ಸುಲಿನ್ ಚಿಕಿತ್ಸೆಯನ್ನು ಮನೋವಿಜ್ಞಾನಿಗಳು ಬಹಳ ಒಳ್ಳೆಯ ಚಿಕಿತ್ಸೆ ಎಂದೂ ಇಚ್ಚಿತ್ತ ಬೇನೆಯನ್ನು ತಡೆದು ಎಷ್ಟೋ ಮಂದಿಗೆ ಗುಣ ತೋರಿದೆಯೆಂದೂ ನಂಬಿದ್ದರು. ಇಷ್ಟೇ ಹುಮ್ಮಸ್ಸು ಆಸಕ್ತಿಗಳಿಂದ ಇತರ ಚಿಕಿತ್ಸೆಗಳನ್ನು ಮಾಡಿದರೂ ಇದರಷ್ಟೇ ಗುಣ ತೋರುವುದೆಂದೂ ಇತರರ ಅಭಿಪ್ರಾಯ. ಎಷ್ಟೋ ಬಾರಿ ಎಳೆಯದರಲ್ಲಿ ಈ ರೋಗವನ್ನು ಕಂಡುಹಿಡಿವ ಕಷ್ಟ, ಇದರೊಂದಿಗೆ ಅಷ್ಟೇನೂ ಕೆಡಕುಮಾಡದ ಮನೋರೋಗ ಅನೇಕವೇಳೆ ಜೊತೆಗಿರುವುದೂ ಇಚ್ಚಿತ್ತರೋಗ ಎಲ್ಲರಲ್ಲೂ ಒಂದೇ ತೆರನಾಗಿ ಹೆಚ್ಚದಿರುವುದೂ ಚಿಕಿತ್ಸೆಯ ಫಲದ ವಿಚಾರವಾಗಿ ಹಾಗೆ ಬೇರೆಬೇರೆ ಅಭಿಪ್ರಾಯಗಳು ಬರಲು ಕಾರಣಗಳು. ಇದೂ ಅಲ್ಲದೆ, ಇನ್ಸುಲಿನ್ ಚಿಕಿತ್ಸೆ ಬರುವ ಮುಂಚೆ, ವೈದ್ಯರು ಇನ್ನೇನೂ ಮಾಡದೆ ಇದನ್ನು ವಾಸಿಯಾಗದ ಕಾಯಿಲೆಯೆಂದು ಕೈಬಿಟ್ಟಿದ್ದರೂ.

ಹತೋಟಿಗೆ ಬರದ ಮೊದಮೊದಲ ಹಂತಗಳಲ್ಲಿ ಕೆಲವುವೇಳೆ ಕೆಲವು ನೆಮ್ಮದಿಕಾರಕ (ಟ್ರಾನ್‍ಕ್ವಿಲೈಸರ್) ಮದ್ದುಗಳನ್ನು ಹೆಚ್ಚುಕಾಲ ಕೊಡಬೇಕಾಗುವುದಾದರೂ ಕೇವಲ ಮದ್ದುಗಳಿಂದಲೇ ವಾಸಿಯಾಗುವಂತಿಲ್ಲ. ಆದರೆ ಚಿಕಿತ್ಸೆಗಾಗಿ ಈ ರೋಗಿಗಳನ್ನು ಇನ್ನೂ ಚೆನ್ನಾಗಿ ನೋಡಿಕೊಳ್ಳಲು ಅನುವಾಗುತ್ತವೆ ಅಷ್ಟೆ.

ಯಾವಾಗಲೂ ಹತೋಟಿಗೆ ಬರದಷ್ಟು ಕೆರಳಿರುವ ರೋಗಿಗಳಿಗೆ ನೊಸಲ ಮುಂದಿನ ಬೆಳ್ಮಿದುಳ ಕೊಯ್ಸೀಳಿಕೆ (ಪ್ರಿಫ್ರಾಂಟಲ್ ಲೂಕಾಟಮಿ) ಶಸ್ತ್ರಕ್ರಿಯೆಯಾದರೆ ತೆಪ್ಪಗಾಗುವರು. ಇದು ತೀರ ಕೊನೆಯ ಉಗ್ರಕ್ರಮ. ಇದರಲ್ಲಿ ಮಿದುಳಿನ ಕೆಲವು ನರಸಂಬಂಧಗಳನ್ನು ಕೊಯ್ದುಹಾಕುವರು.

ಹೊರಗಣ ಪರಿಸರಕ್ಕೆ ಹೊಂದಿಕೊಳ್ಳದೆ ತನ್ನೊಳಗೆ ತಾನೇ ಮಗ್ನನಾಗಿರಲು ಬಿಟ್ಟರೆ, ರೋಗಿ ಇನ್ನಷ್ಟು ಬೀಳಾಗುವನು. ಜನರಲ್ಲಿ ಚೆನ್ನಾಗಿ ಬೆರೆತು ಹೊಂದಿಕೊಳ್ಳಲು ರೋಗಿಗೆ ಆಸ್ಪತ್ರೆ ವೈದ್ಯರೂ ದಾದಿಯರೂ ನೆರವಾಗಬೇಕು. ಉದ್ಯೋಗದ ರೋಗಚಿಕಿತ್ಸೆ ಈ ದಿಸೆಯಲ್ಲಿ ಹೆಚ್ಚಿನ ಸಹಾಯ ನೀಡುತ್ತದೆ. ರೋಗಿ ನಂಬುವ ಯಾರಾದರೂ ಒಬ್ಬರ ಉಸ್ತುವಾರಿ ಇದ್ದಷ್ಟೂ ಒಳ್ಳೆಯದು.

ರೋಗಿಯ ಮಾನಸಿಕ ರೋಗಚಿಕಿತ್ಸೆಗೆ ಅವನು ಹೇಳಿದ್ದನ್ನು ಸಾವಧಾನವಾಗಿ ಕೇಳುವವರು ಬೇಕು. ರೋಗಿಯ ಕಷ್ಟ ಕಾರ್ಪಣ್ಯಗಳ ಕಡೆಗೆ ಗಮನ ಕೊಟ್ಟಷ್ಟೂ ಹಿತಕರ.

ಮುನ್‍ತಿಳಿವು: ಇಚ್ಚಿತ್ತ ಎಂದೆಂದಿಗೂ ತೀವ್ರತರ ಕಾಯಿಲೆ. ಕೆಲವರಿಗೆ ಗುಣವಾಗುವುದಾದರು ರೋಗಿಯ ಮನಸ್ಸೇ ತೀರ ಕೆಟ್ಟುಹೋಗುತ್ತದೆ. ಆದರೆ ಮೊದಮೊದಲಲ್ಲೇ ಗುಣವಾಗದೆಂದು ಹೇಳಬರದು. ಇದ್ದಕಿದ್ದಂತೆ ದಿಢೀರನೆ ಈ ರೋಗ ಬಂದಷ್ಟೂ ವಾಸಿಯಾಗುವ ಸಂಭವವೇ ಹೆಚ್ಚು. ಬೇಗನೆ ಚಿಕಿತ್ಸೆ ದೊರೆತಷ್ಟೂ ಅನಾಹುತ ಆಗುವುದನ್ನು ತಪ್ಪಿಸಬಹುದು. (ಇ.ಎಸ್.ಜಿ.)

ಇಚ್ಚಿಪ್ಪು ಮೀನು: ಇಚ್ಚಿಪ್ಪು (ಲ್ಯಾಮೆಲ್ಲಿ ಬ್ರಾಂಕಿಯ) ಗುಂಪಿನ ಒಂದು ಬಗೆಯ ಕಡಲ ಮೃದ್ವಂಗಿ (ಸ್ಕ್ಯಾಲಪ್). ಇದು ಪೆಕ್ಟಿನ್ ಜಾತಿಗೆ ಸೇರಿದೆ. ಇದರಲ್ಲಿ ಜೀವಂತವಾಗಿರುವ ಪ್ರಭೇದಗಳು ಸು.300. ಎಲ್ಲ ಸಾಗರಗಳಲ್ಲೂ ಇವೆ. ಇವುಗಳಲ್ಲ್ಲಿ ಕೆಲವು ಮಾನವನ ಆಹಾರ. ಮಧ್ಯ ಯುಗದ ಯಾತ್ರಿಕರು ಇವುಗಳ ಕವಡೆಗಳನ್ನು ಸಂಕೇತಮುದ್ರೆಗಳಿಗಾಗಿ ಧರಿಸುತ್ತಿದ್ದರು. ಪೆಕ್ಟಿನ್ ಜಾತಿಯ ಲ್ಯಾಮೆಲ್ಲಿಬ್ರಾಂಕಿಯದ ಉಪವರ್ಗವಾದ ಫಿಲಿಬ್ರಾಂಕಿಯಕ್ಕೆ ಸೇರಿದೆ. ಈ ಗುಂಪಿನ ಪ್ರಾಣಿಗಳ ಪ್ರಮುಖ ಲಕ್ಷಣಗಳು-ಕಿವಿರುಗಳಿಗೆ ದ್ವಂದ್ವ ತಂತುಗಳಿದ್ದು ಅವುಗಳ ಮೇಲೆ ಹೊಳೆಯುವ ಪದರಗಳಿವೆ; ಕಿವಿರುಗಳು ಲೋಮನಾಳಗಳ ತಟ್ಟೆಗಳಿಂದಲೂ